Go to full page →

ಅಗತ್ಯಗಳನ್ನು ನಿರ್ಲಕ್ಷಿಸುವುದು ಮಿತವ್ಯಯವಲ್ಲ KanCCh 181

ಶರೀರವನ್ನು ಅಲಕ್ಷಿಸಿ ಅಥವಾ ದುರುಪಯೋಗ ಪಡಿಸಿಕೊಂಡು ದೇವರ ಸೇವೆಗೆ ಅನರ್ಹವನ್ನಾಗಿ ಮಾಡುವುದರಿಂದ ದೇವರಿಗೆ ಗೌರವವುಂಟಾಗುವುದಿಲ್ಲ. ರುಚಿಕರವಾದ ಹಾಗೂ ಪೋಷಣೆ, ಬಲ ನೀಡುವ ಆಹಾರ ಒದಗಿಸಿ ದೇಹಕ್ಕೆ ಆರೈಕೆ ಮಾಡುವುದು ಮನೆಯ ಯಜಮಾನನ ಮೊದಲ ಕರ್ತವ್ಯಗಳಲ್ಲಿ ಒಂದಾಗಿದೆ. ತಿನ್ನುವ ಆಹಾರದ ವಿಷಯದಲ್ಲಿ ಜಿಪುಣತನಕ್ಕಿಂತ ಕಡಿಮೆ ಬೆಲೆಯ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಹೊಂದಿರುವುದು ಬಹಳ ಒಳ್ಳೆಯದು. ಕೆಲವು ಮನೆಗಳಲ್ಲಿ ಔತಣ ಮಾಡಿಸಿ ಸಂತೃಪ್ತಿಗೊಳಿಸುವುದಕ್ಕಾಗಿ ತಮ್ಮ ಮನೆಯ ಆಹಾರದಲ್ಲಿ ಹಿಡಿತ ಮಾಡಿ ಜಿಪುಣತನ ತೋರಿಸುತ್ತಾರೆ. ಇದು ಅವಿವೇಕತನ, ಅತಿಥಿ ಸತ್ಕಾರ ಸರಳವಾಗಿರಲಿ. ಕುಟುಂಬದ ಅಗತ್ಯಗಳಿಗೆ ಮೊದಲು ಗಮನ ಕೊಡಬೇಕು. ಅಗತ್ಯವಾದಾಗ ಅತಿಥಿ ಸತ್ಕಾರ ಮಾಡುವುದರಲ್ಲಿ ಕೆಲವರು ಅವಿವೇಕತನದಿಂದ ಜಿಪುಣತನ ತೋರಿಸುತ್ತಾರೆ. ಇದರಿಂದ ಅವರು ದೇವರ ಆಶೀರ್ವಾದ ಕಳೆದುಕೊಳ್ಳುತ್ತಾರೆ. ಅನಿರೀಕ್ಷಿತವಾಗಿ ಅತಿಥಿಗಳು, ನೆಂಟರು ಬಂದರೂ ಸಹ, ತಿರುಗಿ ಅಡುಗೆ ಮಾಡುವ ಸಂದರ್ಭ ಬರದಂತೆ ಆಹಾರವನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಬೇಕು. ಮಿತವ್ಯಯ ಎಂದರೆ ಜಿಪುಣತನವಲ್ಲ. ಆದರೆ ದೊಡ್ಡ ಕಾರ್ಯ ಮಾಡಬೇಕಾಗಿರುವುದರಿಂದ, ಆದಾಯವನ್ನು ದೂರದೃಷ್ಟಿ ಹೊಂದಿ ವಿವೇಕತನದಿಂದ ಬಳಸುವುದೇ ಮಿತವ್ಯಯವಾಗಿದೆ. ತನ್ನ ಜನರು ಅವರ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕೆ ಅತ್ಯವಶ್ಯಕವಾಗಿ ಬೇಕಾದದ್ದನ್ನು ತ್ಯಜಿಸಬೇಕೆಂದು ದೇವರು ಬಯಸುವುದಿಲ್ಲ. ಆದರೆ ಆತನು ಸ್ವೇಚ್ಚಾಚಾರ, ದುಂದುಗಾರಿಕೆ ಹಾಗೂ ಆಡಂಬರವನ್ನು ಖಂಡಿತವಾಗಿಯೂ ಇಷ್ಟಪಡುವುದಿಲ್ಲ. KanCCh 181.1