ಯೌವನಸ್ಥರು ಇತರರೊಂದಿಗೆ ಒಡನಾಟ ಹೊಂದಿದಾಗ, ಅದು ಅವರಿಗೆ ಆಶೀರ್ವಾದವೂ ಆಗಬಹುದು ಅಥವಾ ಶಾಪವೂ ಆಗಬಹುದು. ಅವರು ಒಬ್ಬರಿಗೊಬ್ಬರು ಸಹಾಯಕರಾಗಿದ್ದು ಜ್ಞಾನ, ತಿಳುವಳಿಕೆ ಹೊಂದಿ ನಮ್ಮ ನಡವಳಿಕೆ ಉತ್ತಮಪಡಿಸಿಕೊಳ್ಳಬಹುದು ಅಥವಾ ನಿರ್ಲಕ್ಷ್ಯದಿಂದ ಅಪನಂಬಿಗಸ್ತರಾಗಿ ತಮ್ಮ ಶೀಲ ಹಾಳುಮಾಡಿಕೊಳ್ಳಬಹುದು. KanCCh 188.2
ಕ್ರಿಸ್ತನಲ್ಲಿ ಭರವಸವಿಡುವವವರೆಲ್ಲರಿಗೂ ಆತನು ಸಹಾಯಕನಾಗಿದ್ದಾನೆ. ಆತನೊಂದಿಗೆ ನಿಕಟ ಸಂಬಂಧ ಹೊಂದಿರುವವರು ಯಾವಾಗಲೂ ಸಂತೋಷವಾಗಿರುತ್ತಾರೆ. ಅವರು ರಕ್ಷಕನು ತೋರಿದ ದಾರಿಯಲ್ಲಿ ನಡೆದು ತಮ್ಮೆಲ್ಲಾ ದೈಹಿಕ ಭೋಗಾಪೇಕ್ಷೆಗಳನ್ನು ನಿಯಂತ್ರಿಸಿಕೊಳ್ಳುತ್ತಾರೆ. ಇಂತವರು ಕ್ರಿಸ್ತನೆಂಬ ಬಂಡೆಯ ಮೇಲೆ ತಮ್ಮ ನಿರೀಕ್ಷೆ ಇಟ್ಟುಕೊಂಡಿರುವುದರಿಂದ, ಈ ಲೋಕದ ಆಶಾಪಾಶಗಳೆಂಬ ಯಾವ ಬಿರುಗಾಳಿಯೂ ಅವರ ಬಲವಾದ ಅಸ್ತಿವಾರವನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. KanCCh 188.3
ಯುವಕ ಯುವತಿಯರೇ, ನೀವು ವಿಶ್ವಾಸಾರ್ಹರೂ, ಪ್ರಾಮಾಣಿಕರೂ ಮತ್ತು ಉಪಯುಕ್ತವಾದ ವ್ಯಕ್ತಿಗಳಾಗುವುದು ನಿಮ್ಮ ಕೈಯಲ್ಲಿದೆ. ಎಂತಹ ಸಂದರ್ಭಗಳೇ ಆಗಿರಲಿ, ಸತ್ಯಕ್ಕಾಗಿ ಧೈರ್ಯದಿಂದ ದೃಢವಾಗಿ ನಿಲ್ಲಬೇಕು. ನಮ್ಮ ಕೆಟ್ಟ ಅಭ್ಯಾಸಗಳನ್ನು ನಿಮ್ಮೊಂದಿಗೆ ಪರಲೋಕಕ್ಕೆ ತೆಗೆದುಕೊಂಡು ಹೋಗಲಾಗದು. ಅವುಗಳನ್ನು ಇಲ್ಲಿಯೇ ಬಿಡಬೇಕು. ಇಲ್ಲದಿದ್ದಲ್ಲಿ ಅವು ನಮ್ಮನ್ನು ಪರಲೋಕಕ್ಕೆ ಹೋಗದಂತೆ ತಡೆಯುತ್ತವೆ. ಕೆಟ್ಟ ಅಭ್ಯಾಸಗಳ ವಿರುದ್ಧ ನಾವು ಪವಿತ್ರಾತ್ಮನ ಸಹಾಯದಿಂದ ಹೋರಾಡಿ ಗೆಲ್ಲಬಹುದು.ನಾವು ಉತ್ತಮ ಅಭ್ಯಾಸ ಬೆಳೆಸಿಕೊಳ್ಳಬೇಕಾದಲ್ಲಿ, ಉತ್ತಮ ನೈತಿಕತೆ ಮತ್ತು ಧಾರ್ಮಿಕ ಶ್ರದ್ಧೆಯುಳ್ಳವರ ಸಹವಾಸ ಮಾಡಬೇಕು. KanCCh 188.4
ದೇವರಲ್ಲಿ ಭಯಭಕ್ತಿಯುಳ್ಳವರ ಸಹವಾಸ ಮಾಡಿದರೆ, ಅವರ ಪ್ರಭಾವ ನಮ್ಮನ್ನು ಸತ್ಯ, ಕರ್ತವ್ಯಪಾಲನೆ ಮತ್ತು ಪರಿಶುದ್ಧತೆಗೆ ನಡೆಸುವುದು. ಯಥಾರ್ಥವಾದ ಕ್ರೈಸ್ತೀಯ ಜೀವನವು ಒಳ್ಳೆಯದಕ್ಕಾಗಿ ಒಂದು ಶಕ್ತಿಯಾಗಿದೆ. ಆದರೆ ಅನೈತಿಕವಾಗಿ ನಡೆಯುವವರು ಮತ್ತು ಕೆಟ್ಟ ಅಭ್ಯಾಸವುಳ್ಳವರ ಸಹವಾಸ ಮಾಡಿದಲ್ಲಿ, ನಾವೂ ಸಹ ಅವರ ದಾರಿಯಲ್ಲೇ ನಡೆಯುತ್ತೇವೆ. ಸಂದೇಹವಾದಿಗಳ ಒಡನಾಟ ಮಾಡಿದವರು ಅವರಂತೆಯೇ ಸಂದೇಹವಾದಿಗಳಾಗುತ್ತಾರೆ. ದುಷ್ಟರ ಸಹವಾಸ ಮಾಡುವವರು ಖಂಡಿತವಾಗಿಯೂ ದುಷ್ಟರಾಗುತ್ತಾರೆ. ದೇವಭಕ್ತಿಯಿಲ್ಲದ ದುಷ್ಟರ ಆಲೋಚನೆಯಂತೆ ನಡೆಯುವುದು ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳುವುದಕ್ಕೂ ಹಾಗೂ ಧರ್ಮನಿಂದಕರೊಡನೆ ಕೂತುಕೊಳ್ಳುವುದಕ್ಕೂ ಮೊದಲ ಹೆಜ್ಜೆಯಾಗಿದೆ (ಕೀರ್ತನೆ 1:1). KanCCh 189.1
ಉತ್ತಮವಾದ ಗುಣಸ್ವಭಾವ ಬೆಳೆಸಿಕೊಳ್ಳಬೇಕೆಂದು ಬಯಸುವವರು ಸಮಚಿತ್ತವುಳ್ಳ ದೈವಭಕ್ತರ ಸಹವಾಸ ಮಾಡಬೇಕು. ನಿತ್ಯಜೀವಕ್ಕಾಗಿ ಬಂಡೆಯ ಮೇಲೆ ಮನೆ ಕಟ್ಟುವವರು ಕಟ್ಟಡಕ್ಕೆ ಉತ್ತಮವಾದ ಸಾಮಗ್ರಿಗಳನ್ನು ಉಪಯೋಗಿಸಬೇಕು. ಕಳಪೆ ಸಾಮಗ್ರಿಗಳನ್ನು ಉಪಯೋಗಿಸಿದಲ್ಲಿ, ಕಟ್ಟಡವು ಶೀಘ್ರವಾಗಿ ಬಿದ್ದು ಹೋಗುವುದು. ಯಾವ ರೀತಿ ಕಟ್ಟಡ ಕಟ್ಟಬೇಕೆಂದು ಅವರು ಎಚ್ಚರಿಕೆ ವಹಿಸಲಿ. ಶೋಧನೆ ಎಂಬ ಬಿರುಗಾಳಿಯು ಕಟ್ಟಡದ ಮೇಲೆ ಬೀಸಿದಾಗ, ಅದು ಕ್ರಿಸ್ತನೆಂಬ ಬಂಡೆಯ ಮೇಲೆ ಕಟ್ಟಲ್ಪಟ್ಟಿದ್ದಲ್ಲಿ ಪರೀಕ್ಷೆ ಎದುರಿಸಿ ದೃಢವಾಗಿ ನಿಲ್ಲುವುದು. KanCCh 189.2
ಒಳ್ಳೆಯ ಹೆಸರು ಬಂಗಾರಕ್ಕಿಂತಲೂ ಅಮೂಲ್ಯವಾದದ್ದು. ನೈತಿಕವಾಗಿ ಕೆಳಮಟ್ಟದಲ್ಲಿರುವವರೊಂದಿಗೆ ಒಡನಾಟ ಮಾಡಲು ಯುವಕರು ಬಯಸಬಹುದು. ಆದರೆ ಕೀಳುಮಟ್ಟದ ಆಲೋಚನೆ, ಭಾವನೆಗಳು ಹಾಗೂ ನಡವಳಿಕೆ ಉಳ್ಳವರಿಂದ ಯೌವನಸ್ಥರು ಎಂತಹ ರೀತಿಯ ಸಂತೋಷ ನಿರೀಕ್ಷಿಸಬಹುದು? ದುರಭ್ಯಾಸವುಳ್ಳವರ ಸಹವಾಸ ಮಾಡುವವರು, ಅವರ ಉದಾಹರಣೆ ಅನುಸರಿಸುವ ಸಾಧ್ಯತೆ ಹೆಚ್ಚಾಗಿದೆ. KanCCh 189.3
ಹುಡುಗಾಟಿಕೆಗಾಗಿ ಲೌಕಿಕವಾದ ಸಂತೋಷ ಹುಡುಕುವುದಕ್ಕಾಗಿ ಮೊದಲ ಬಾರಿ ಪ್ರಯತ್ನಿಸುವುದರಿಂದ ಯಾವುದೇ ಅಪಾಯವಿಲ್ಲವೆಂದು ನೀವು ನೆನೆಸಬಹುದು. ಅಲ್ಲದೆ ಬೇಕೆನಿಸಿದಾಗ ಇದನ್ನು ಬಿಡುವುದು ಅಷ್ಟೇ ಸುಲಭ ಸಾಧ್ಯವೆಂದು ನೀವು ಎಣಿಸಬಹುದು. ಆದರೆ ಇದು ತಪ್ಪು ಅಭಿಪ್ರಾಯ. ಆದರೆ ಕೆಟ್ಟವರ ಸಹವಾಸ ಮಾಡಿದ ಅನೇಕರು ಹಂತಹಂತವಾಗಿ ಕ್ರಮೇಣ ದುರಭ್ಯಾಸಗಳಿಂದಾಗುವ ತಾತ್ಕಾಲಿಕ ಸಂತೋಷದ ದಾಸರಾಗುವ ಸಾಧ್ಯತೆ ಹೆಚ್ಚು. ನಿಮ್ಮ ಸಂತೋಷಕ್ಕಾಗಿರುವ ಎಲ್ಲವನ್ನೂ ತ್ಯಜಿಸಬೇಕೆಂದು ದೇವರು ಬಯಸುತ್ತಾನೆಂದು ತಿಳಿಯಬಾರದು. ಆದರೆ ನನಗೆ ಒಳ್ಳೆಯದಲ್ಲ ದ್ದನ್ನು ಮಾತ್ರ ಬಿಡಬೇಕೆಂದು ಆತನು ಅಪೇಕ್ಷಿಸುತ್ತಾನೆ. KanCCh 189.4