Go to full page →

ಅಧ್ಯಾಯ-29 — ಮನಸ್ಸಿನ ಎಲ್ಲಾ ಮಾರ್ಗಗಳ ರಕ್ಷಣೆ KanCCh 193

ನಿಮ್ಮ ಶರೀರದ ಎಲ್ಲಾ ಇಂದ್ರಿಯಗಳು ಪ್ರಾಣಕ್ಕೆ ಮಾರ್ಗಗಳಾಗಿವೆ. ಆದುದರಿಂದ ಸೈತಾನನು ನಿಮ್ಮ ಮೇಲೆ ಜಯಸಾಧಿಸದಂತೆ ಅವುಗಳನ್ನು ಎಚ್ಚರಿಕೆಯಿಂದ ಹತೋಟಿಯಲ್ಲಿಟ್ಟು ಕೊಳ್ಳಬೇಕು. ನೀವು ನಿಮ್ಮ ಶರೀರವನ್ನು ಕೆಟ್ಟ ಹಾಗೂ ವ್ಯರ್ಥವಾದ ಆಲೋಚನೆಗಳಿಂದ ಮಲಿನಗೊಳಿಸದಂತೆ ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಆಗ ನೀವು ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ಚರ್ಮ - ಈ ಐದು ಇಂದ್ರಿಯಗಳನ್ನು ನಂಬಿಗಸ್ತ ಕಾವಲುಗಾರನಂತೆ ಕಾಪಾಡುವಿರಿ. ಅತ್ಯಂತ ಅಪೇಕ್ಷಣೀಯವಾದ ಈ ಕಾರ್ಯವನ್ನು ಸಾಧಿಸಲು ದೇವರ ಕೃಪೆಯಿಂದ ಮಾತ್ರ ಸಾಧ್ಯ. KanCCh 193.1

ಎಚ್ಚರಿಕೆಗಳು, ಅಪಾಯದ ಸಂದೇಶಗಳು ಮತ್ತು ತಿದ್ದುಪಾಟು ಶಿಕ್ಷೆ, ಗದರಿಕೆಗಳನ್ನು ನಾವು ಕೇಳದಂತೆಯೂ, ಒಂದು ವೇಳೆ ಕೇಳಿದರೂ ಅವುಗಳು ಹೃದಯದ ಮೇಲೆ ಪರಿಣಾಮ ಬೀರಿ ನಮ್ಮ ಜೀವನದಲ್ಲಿ ನಾವು ಸುಧಾರಣೆ ಮಾಡಿಕೊಳ್ಳಬಾರದೆಂಬ ಉದ್ದೇಶ ಸೈತಾನನಿಗೆ. ಆದುದರಿಂದ ಅವನು ಹಾಗೂ ಅವರ ದೂತರು ನಮ್ಮ ಇಂದ್ರಿಯಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ಬಲಹೀನಗೊಳಿಸಲು ಕಾರ್ಯನಿರತರಾಗಿದ್ದಾರೆ. KanCCh 193.2