Go to full page →

ರೋಮಾಂಚನಗೊಳಿಸುವಕತೆಗಳನ್ನುಓದುವುದರಅಪಾಯಗಳು KanCCh 198

ನಿಮ್ಮ ಮಕ್ಕಳು ಯಾವ ಪುಸ್ತಕಗಳನ್ನು ಓದಬೇಕು? ಇದೊಂದು ಗಂಭೀರವಾದ ಪ್ರಶ್ನೆ ಆದ್ದರಿಂದ ಗಂಭೀರವಾದ ಉತ್ತರವನ್ನೇ ಕೊಡಬೇಕು. ಸಬ್ಬತ್ತನ್ನು ಕೈಕೊಂಡು ನಡೆಯುವ ಅಡ್ವೆಂಟಿಸ್ಪರ ಕುಟುಂಬಗಳಲ್ಲಿ ಯಾವುದೇ ಒಳ್ಳೆಯ ಪ್ರಭಾವಬೀರದಂತ ವಾರಪತ್ರಿಕೆ, ಮಾಸಪತ್ರಿಕೆಗಳಿರುವುದು ನನಗೆ ತುಂಬಾ ಸಂಕಟ ಉಂಟುಮಾಡುತ್ತದೆಂದು ಶ್ರೀಮತಿ ವೈಟಮ್ಮನವರು ದುಃಖದಿಂದ ಹೇಳುತ್ತಾರೆ. ಇದರಿಂದ ಕಾಲ್ಪನಿಕ ಕಥೆಗಳ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಉಂಟಾಗುತ್ತದೆ. ಈ ಕಾರಣದಿಂದ ಅವರು ಮುಂದೆ ಬೆಳೆದಂತೆ ದೈವಭಕ್ತಿಯಿಲ್ಲದೆ ಸತ್ಯಮಾರ್ಗದಿಂದ ದೂರಹೋಗುವರು. KanCCh 198.3

ಯಾವ ಕೆಲಸಕ್ಕೂ ಬಾರದ, ತುಚ್ಛವಾದ ರೋಮಾಂಚನಗೊಳಿಸುವ ಕಾಲ್ಪನಿಕ ಕಥೆಗಳನ್ನು ಓದುವವರು ನಿಜಜೀವನದ ಕರ್ತವ್ಯಗಳಿಗೆ ಅನರ್ಹರಾಗುವರು. ಅವರು ಅವಾಸ್ತವಿಕ ಪ್ರಪಂಚದಲ್ಲಿ ಜೀವಿಸುತ್ತಾರೆ. ಇಂತಹ ಕಥೆಗಳನ್ನು ಓದುವ ಮಕ್ಕಳು ಎಲ್ಲಿಯೇ ಇರಲಿ ಅಶಾಂತ ಪ್ರವೃತ್ತಿ ಹೊಂದಿ, ಹಗಲುಗನಸು ಕಾಣುತ್ತಾ ಸಾಮಾನ್ಯ ವಿಷಯಗಳನ್ನು ಬಿಟ್ಟು ಆತ್ಮೀಕ ವಿಷಯಗಳ ಬಗ್ಗೆ ಮಾತಾಡುವುದಿಲ್ಲ. ಧಾರ್ಮಿಕ ಆಲೋಚನೆ ಹಾಗೂ ಸಂಭಾಷಣೆಗಳು ಅವರಿಗೆ ಅಪರಿಚಿತವಾಗಿರುತ್ತವೆ. ಇಂದ್ರಿಯಗಳನ್ನು ಪ್ರಚೋದನೆಗೊಳಿಸುವಂತ ಕಥೆಗಳ ಬಗ್ಗೆ ಒಲವು ಹೊಂದಿರುವ ಅವರ ಮಾನಸಿಕ ಅಭಿರುಚಿ ಮಲಿನಗೊಂಡು, ಅಶ್ಲೀಲವಾದವುಗಳನ್ನು ಓದಿದ ಹೊರತು ಅವರ ಮನಸ್ಸು ಬೇರೆ ಯಾವುದರಿಂದಲೂ ತೃಪ್ತಿ ಹೊಂದುವುದಿಲ್ಲ. ಇಂತಹ ಪುಸ್ತಕಗಳನ್ನು ಓದುವವರಿಗೆ ಮಾನಸಿಕವಾಗಿ ಅಮಲೇರಿದವರು ಎಂಬುದೇ ಸೂಕ್ತ ಹೆಸರು. ಕುಡಿತ ಮತ್ತು ಮಿತಿಮೀರಿ ತಿನ್ನುವಂತ ಅತಿಭೋಗದ ಅಭ್ಯಾಸವು ಶರೀರದ ಮೇಲೆ ಹೇಗೆ ಹಾನಿಕರ ಪರಿಣಾಮ ಬೀರುವುದೋ, ಅದರಂತೆಯೇ ಅಶ್ಲೀಲವಾದ ಹಾಗೂ ಕ್ಷಣಿಕವಾಗಿ ರೋಮಾಂಚನಗೊಳಿಸುವ ಕಾಲ್ಪನಿಕ ರಮ್ಯಕಥೆಗಳನ್ನು ಓದುವ ಅಭ್ಯಾಸವು ಮೆದುಳಿನ ಮೇಲೆಯೂ ಅದು ರೀತಿಯಾದ ಹಾನಿಕಾರಕ ಪರಿಣಾಮ ಉಂಟುಮಾಡುತ್ತದೆ. KanCCh 199.1

ಕ್ರೈಸ್ತರಾಗುವುದಕ್ಕೆ ಮೊದಲು ಕೆಲವರು ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿರಬಹುದು. ಸಭೆಯಲ್ಲಿ ಸೇರಿದ ಮೇಲೆ ಈ ಅಭ್ಯಾಸ ಬಿಡಲು ಅವರು ಪ್ರಯತ್ನ ಮಾಡಿದ್ದಾರೆ. ಹಳೆಯ ಅಭ್ಯಾಸ ತ್ಯಜಿಸಿದ ಇಂತವರಿಗೆ ತಿರುಗಿ ಅದೇ ರೀತಿಯ ಪುಸ್ತಕಗಳನ್ನು ಕೊಡುವುದು ಆಗಲೇ ಕುಡಿತದಿಂದ ಅಮಲೇರಿದವರಿಗೆ ಮದ್ಯಪಾನ ಕೊಟ್ಟಂತಾಗುವುದು. ಅವರು ಯಾವಾಗಲೂ ಇಂತಹ ಶೋಧನೆಗೆ ಒಳಗಾದಲ್ಲಿ, ಶೀಘ್ರದಲ್ಲಿಯೇ, ಅವರು ದೇವರ ವಾಕ್ಯದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಅವರ ನೈತಿಕ ಸಾಮರ್ಥ್ಯವು ದುರ್ಬಲಗೊಳ್ಳುವುದು. ಪಾಪವು ಅವರಿಗೆ ಅಷ್ಟೇನೂ ಹೇಸಿಕೆ ಹುಟ್ಟಿಸುವುದಿಲ್ಲ. ಅಂತವರಲ್ಲಿ ಆಗ ಅಪ್ರಮಾಣಿಕತೆ ಹೆಚ್ಚಾಗಿ, ತಮ್ಮ ಕರ್ತವ್ಯಗಳ ಬಗ್ಗೆ ಅವರಿಗೆ ಆಸಕ್ತಿ ಕುಂದುವುದು. ಅವರ ಮನಸ್ಸು ಕಲುಷಿತಗೊಳ್ಳುವುದರಿಂದ, ಯಾವುದೇ ರೀತಿಯ ಅಶ್ಲೀಲ ಹಾಗೂ ಪ್ರಚೋದನಕಾರಿ ಪುಸ್ತಕ ಓದಿ ಗ್ರಹಿಸಿಕೊಳ್ಳಲು ಸಿದ್ಧವಾಗಿರುತ್ತಾರೆ. KanCCh 199.2