ಇತರರ ತಪ್ಪುಗಳನ್ನು ಹುಡುಕುವ ಬದಲಿಗೆ, ತಮ್ಮಲ್ಲಿರುವ ಕೆಟ್ಟತನವನ್ನು ಕ್ರೈಸ್ತರೆನಿಸಿಕೊಂಡವರು ತಿಳಿದುಕೊಂಡಲ್ಲಿ, ಕ್ರೈಸ್ತ ಸಭೆಗಳಲ್ಲಿ ಇಂದು ಉತ್ತಮವಾದ ಆರೋಗ್ಯಕರ ಪರಿಸ್ಥಿತಿ ಕಂಡುಬರುತ್ತಿತ್ತು. ಕೆಲವರು ತಮಗೆ ಅನುಕೂಲವಾಗುವ ಸಂದರ್ಭದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಆದರೆ ವ್ಯವಹಾರತಂತ್ರ ಅನುಸರಿಸ ಬೇಕಾದಾಗ ಪ್ರಾಮಾಣಿಕತೆಯನ್ನು ಮರೆಯುತ್ತಾರೆ. ವ್ಯವಹಾರತಂತ್ರ ಮತ್ತು ಪ್ರಾಮಾಣಿಕತೆ ಒಂದೇ ಸ್ಥಳದಲ್ಲಿರಲಾಗದು. ವ್ಯವಹಾರಚಾತುರ್ಯ ಬಿಟ್ಟಾಗ, ಸತ್ಯ ಹಾಗೂ ಪ್ರಾಮಾಣಿಕತೆ ಜಯಹೊಂದುತ್ತದೆ. ಆದರೆ ವ್ಯವಹಾರತಂತ್ರ ಬಳಸಿದಾಗ ಪ್ರಾಮಾಣಿಕತೆ ಮರೆಯಾಗುತ್ತದೆ. ಅವುಗಳಲ್ಲಿ ಎಂದಿಗೂ ಸಾಮರಸ್ಯವಿಲ್ಲ ಹಾಗೂ ಪರಸ್ಪರ ಒಪ್ಪಿಕೊಳ್ಳುವುದಿಲ್ಲ. ವ್ಯವಹಾರ ತಂತ್ರವು ಬಾಳದೇವತೆಯ ಪ್ರವಾದಿಯಂತಿದ್ದಲ್ಲಿ, ಪ್ರಾಮಾಣಿಕತೆಯು ಸತ್ಯದೇವರ ನಿಜ ಪ್ರವಾದಿಯಂತೆ. ದೇವರು ತನ್ನ ಜನರನ್ನು ಕೂಡಿಸುವಾಗ, ಯಥಾರ್ಥರೂ, ಮುಗ್ಧರಾದ ಪ್ರಾಮಾಣಿಕರೂ ಹಾಗೂ ಸರಳ ಸ್ವಭಾವದವರನ್ನು ಅಭಿಮಾನದಿಂದ ಕಾಣಲಾಗುವುದು. ಅಂತವರಿಗೆ ದೇವರು ವಿವಿಧವಾದ ರತ್ನಗಳಿಂದ ಕೂಡಿದ ಕಿರೀಟ ಕೊಡುವನು. ಈ ಕಿರೀಟಗಳು ದೇವಸಿಂಹಾಸನದಿಂದ ಬರುವ ವೈಭವಯುಕ್ತ ಪ್ರಕಾಶ ಹಾಗೂ ಕಾಂತಿಯಿಂದ ಹೊಳೆಯುತ್ತವೆ. KanCCh 210.5
ದೇವರು ತನ್ನಮಕ್ಕಳನ್ನು ಪರೀಕ್ಷಿಸಿ ಅವರ ಪ್ರಾಮಾಣಿಕತೆಯನ್ನು ರುಜುವಾತಾಗಿ ಸಮರ್ಥಿಸುತ್ತಾನೆ. ನಿಮ್ಮಲ್ಲಿರುವ ದೋಷಗಳ ಬಗ್ಗೆ ನಿಮ್ಮನ್ನು ಯಾವುದೇ ರೀತಿಯಲ್ಲಿ ನಿಂದಿಸಿಕೊಳ್ಳಿ, ಆದರೆ ಇತರರ ಬಗ್ಗೆ ಕರುಣೆ, ಕನಿಕರವುಳ್ಳವರೂ ಆಗಿದ್ದು ಸೌಜನ್ಯತೆ ತೋರಿಸಿ. ಪ್ರತಿದಿನ ನನ್ನಲ್ಲಿ ಸುಳ್ಳು ಹೃದಯವಿದೆಯೋ ಎಂದು ಪ್ರಶ್ನಿಸಿಕೊಳ್ಳಿ, ಎಲ್ಲಾ ರೀತಿಯ ವಂಚನೆಗಳಿಂದ ತಪ್ಪಿಸಬೇಕೆಂದು ದೇವರಲ್ಲಿ ಬೇಡಿಕೊಳ್ಳಿ, ನಿಮ್ಮ ನಿತ್ಯಜೀವವೇ “ಇಲ್ಲಿ ಒಳಗೊಂಡಿದೆ. ಲೌಕಿಕವಾದ ಜನರು ಗೌರವ, ದುರಾಶೆಯಿಂದ ಸಂಪಾದಿಸುವ ಹಣದ ಹಿಂದೆ ಬಿದ್ದಿರುವಾಗ ಕ್ರೈಸ್ತರಾದ ನಾವು ದೇವರಪ್ರೀತಿಯ ಭರವಸೆಗಾಗಿ ಕಣ್ಣೀರಿಟ್ಟು ಪ್ರಾರ್ಥಿಸಬೇಕಾಗಿದೆ. KanCCh 211.1
ಸೈತಾನನು ಜನರ ಸಹಜವಾದ ಪಾಪಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ, ಅನಂತರ ಅವುಗಳ ಮೂಲಕ ಅವರನ್ನು ತನ್ನ ಬಲೆಯಲ್ಲಿ ಬೀಳಿಸುವ ಕಾರ್ಯ ಆರಂಭಿಸುತ್ತಾನೆ. ಶೋಧನೆಗಳ ಮಧ್ಯದಲ್ಲಿ ನಾವಿದ್ದೇವೆ. ಆದರೆ ಪವಿತ್ರಾತ್ಮನ ಸಹಾಯದಿಂದ ಧೈರ್ಯವಾಗಿ ಅವುಗಳನ್ನು ಎದುರಿಸಿದಾಗ, ನಿಶ್ಚಯವಾಗಿ ಜಯಹೊಂದಬಹುದು. ಎಲ್ಲರೂ ಸೈತಾನನ ಶೋಧನೆಗೆ ಒಳಗಾಗುವ ಅಪಾಯದಲ್ಲಿದ್ದಾರೆ. ಆದರೆ ನಾವು ನಮ್ರತೆ ಹಾಗೂ ಪ್ರಾರ್ಥನಾ ಪೂರ್ವಕವಾಗಿ ಆ ಶೋಧನೆಗಳನ್ನು ಜಯಿಸಿ ಚೊಕ್ಕಬಂಗಾರವಾಗಿ ಕಂಡುಬರುತ್ತೇವೆ. ಓಫಿರ್‌ದೇಶದ ಶ್ರೇಷ್ಟಬಂಗಾರಕ್ಕಿಂತಲೂ ಅಮೂಲ್ಯವಾಗುತ್ತೇವೆ. ಆದರೆ ನಾವು ಈ ವಿಷಯದಲ್ಲಿ “ಗಣಗಣಿಸುವ ಕಂಚೂ, ನಾದಕೊಡುವ ತಾಳವೂ....” ಆಗಿರುತ್ತೇವೆ (1 ಕೊರಿಂಥ 13:1). KanCCh 211.2
*****