ದೇವರು ತನ್ನ ಮಕ್ಕಳು ತಾವು ಧರಿಸುವ ಉಡುಪುಗಳ ಬಗ್ಗೆ ಅತಿಯಾದ ಶ್ರದ್ಧೆ ತೋರಿಸುವ ವಿಷಯದಲ್ಲಿ ಎಚ್ಚರಿಸಿರುವುದು ಮಾತ್ರವಲ್ಲ, ಅದರ ಬಗ್ಗೆ ಹೆಚ್ಚಾಗಿ ಚಿಂತಿಸಬಾರದೆಂದು ಈ ರೀತಿ ಆಜ್ಞಾಪಿಸಿದ್ದಾನೆ. “ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆ ಮಾಡುವುದೇಕೆ? ಅಡವಿಯ ಹೂಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ. ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರ ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ” (ಮತ್ತಾಯ 6:28, 29). ಉಡುಪಿನ ವಿಷಯದಲ್ಲಿ ಅಹಂಕಾರ ತೋರುವುದು ಮತ್ತು ದುಂದುವೆಚ್ಚ ಮಾಡುವುದು ಪಾಪವಾಗಿದೆ, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ಇದಕ್ಕೆ ಹೆಚ್ಚು ಗುರಿಯಾಗುವ ಸಂಭವವಿದೆ ಎಂದು ಶ್ರೀಮತಿ ವೈಟಮ್ಮನವರು ಎಚ್ಚರಿಕೆ ನೀಡುತ್ತಾರೆ. ಆದುದರಿಂದ ಈ ಆದೇಶವು ಅವರಿಗೆ ನೇರವಾಗಿ ಸಂಬಂಧಪಟ್ಟಿದೆ. ಕ್ರಿಸ್ತನ ಸಾತ್ವಿಕತೆ, ನಮ್ರತೆ, ಮನಮೋಹಕತೆಗೆ ಹೋಲಿಸಿದಾಗ, ಚಿನ್ನವಾಗಲಿ, ಮುತ್ತು ರತ್ನವಾಗಲಿ ಇಲ್ಲವೆ ಬೆಲೆಬಾಳುವ ಉಡುಪಾಗಲಿ ಎಷ್ಟೊಂದು ಅತ್ಯಲ್ಪ ಬೆಲೆಯುಳ್ಳದಲ್ಲವೇ! KanCCh 213.4
ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ಉಡುಪಿನ ವಿಷಯವಾಗಿ ದೇವದೂತನು 1 ತಿಮೊಥೆ 2:9,10ನೇ ವಚನಗಳ ಕಡೆಗೆ ಗಮನ ಹರಿಸುವಂತೆಯೂ ಹಾಗೂ ಸಲಹೆ ನೀಡುವಂತೆ ತಿಳಿಸಿದನು : “ಸ್ತ್ರೀಯರು ಮಾನ ಸೈಯರಾಗಿಯೂ, ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ, ಚಿನ್ನ, ಮುತ್ತು, ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ, ದೇವಭಕ್ತಿಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ತಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು” ಅಪೊಸ್ತಲನಾದ ಪೇತ್ರನು ಈ ವಿಷಯದಲ್ಲಿ ಮುಂದುವರೆದು “ಜಡೆ ಹೆಣೆದುಕೊಳ್ಳುವುದು, ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವುದು, ವಸ್ತ್ರಗಳನ್ನು ಧರಿಸಿಕೊಳ್ಳುವುದು ಈ ಮೊದಲಾದ ಹೊರಗಣ. ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ, ದೇವರದೃಷ್ಟಿಗೆ ಬಹುಬೆಲೆಯುಳ್ಳದ್ದೂ ಆಗಿದೆ. ಪೂರ್ವ ಕಾಲದಲ್ಲಿ ದೇವರಮೇಲೆ ನಿರೀಕ್ಷೆಯಿಟ್ಟ ಭಕ್ತಿಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು” (1 ಪೇತ್ರನು 3:4-5). KanCCh 214.1
ಅನೇಕರು ದೇವರ ಈ ಆದೇಶವನ್ನು ಕೆಲಸಕ್ಕೆ ಬಾರದ ಹಳೆಯ ಕಾಲಕ್ಕೆ ಸೇರಿದ್ದೆಂದು ಎಣಿಸುತ್ತಾರೆ. ಆದರೆ ತನ್ನ ಶಿಷ್ಯರಿಗೆ ಎಚ್ಚರಿಕೆ ಕೊಟ್ಟ ಯೇಸುಸ್ವಾಮಿಯು, ನಮ್ಮ ಕಾಲದಲ್ಲಿ ಉಡುಪಿನ ಬಗ್ಗೆ ವ್ಯಾಮೋಹ ಹೊಂದಿರುವ ಬಗ್ಗೆ ಉಂಟಾಗುವ ಅಪಾಯಗಳನ್ನು ತಿಳಿದುಕೊಂಡು ಇದನ್ನು ನಮಗೂ ಸಹ ಕೊಟ್ಟಿದ್ದಾನೆ. ದೇವರ ಈ ಎಚ್ಚರಿಕೆಗೆ ಗಮನಕೊಟ್ಟು ಬುದ್ಧಿವಂತರಾಗೋಣವೇ? ಕ್ರಿಸ್ತನನ್ನು ಯಥಾರ್ಥವಾಗಿ ಅನುಸರಿಸಬೇಕೆಂದು ಪ್ರಯತ್ನಿಸುವವರು ತಾವು ಹಾಕುವ ಉಡುಪಿನ ವಿಷಯದಲ್ಲಿ ಆತ್ಮಸಾಕ್ಷಿಯಂತೆ ನಡೆದು ಅತಿಯಾಗಿ ಜಾಗರೂಕರಾಗಿರುತ್ತಾರೆ. ದೇವರು ಸ್ಪಷ್ಟವಾಗಿ ಕೊಟ್ಟಿರುವ ಈ ಆದೇಶವನ್ನು ಪಾಲಿಸಲು ಅವರು ಪ್ರಯತ್ನಪಡುತ್ತಾರೆ. KanCCh 214.2
ಸರಳವಾಗಿ ಬಟ್ಟೆ ಹಾಕಿಕೊಳ್ಳುವುದು ಕ್ರೈಸ್ತರ ಕರ್ತವ್ಯಗಳಲ್ಲಿ ಒಂದಾಗಿದೆ. ಆಭರಣಗಳ ಪ್ರದರ್ಶನ ಅತಿಬೆಲೆಬಾಳುವ ವಸ್ತ್ರಗಳಿಂದ ಅಲಂಕರಿಸಿಕೊಳ್ಳುವುದರಿಂದ ದೂರವಿರುವುದು ಕ್ರೈಸ್ತ ನಂಬಿಕೆಯ ಒಂದು ಭಾಗವಾಗಿದೆ. ಸಬ್ಬತ್‌ದಿನದಲ್ಲಿ ದೇವರಾಧನೆಗೆ ಬರುವಾಗ ಯಾವ ರೀತಿ ಉಡುಪು ಧರಿಸಬೇಕೆಂಬ ವಿಷಯದಲ್ಲಿ ಶ್ರೀಮತಿ ವೈಟಮ್ಮನವರು ಸಲಹೆ ನೀಡುತ್ತಾರೆ. ವಾರದ ದಿನಗಳಲ್ಲಿ ಹಾಕುವ ಸಾಧಾರಣ ಬಟ್ಟೆಗಳನ್ನು ಸಬ್ಬತ್ತಿನಲ್ಲಿ ಹಾಕಿಕೊಂಡು ದೇವಾಲಯಕ್ಕೆ ಬರಬಾರದು. ದೇವರ ಆಲಯಕ್ಕೆ ಬರುವಾಗ ಎಲ್ಲರೂ ಸಹ ಸಬ್ಬತ್ತಿಗೆಂದೇ ಮೀಸಲಾಗಿಟ್ಟ ಬಟ್ಟೆಗಳನ್ನು ಧರಿಸಬೇಕು. ಲೋಕದಲ್ಲಿ ಅನ್ಯರು ಅನುಸರಿಸುವ ವಿವಿಧರೀತಿಯ ಫ್ಯಾಷನ್‌ಗಳನ್ನು ನಾವು ಅನುಸರಿಸಬಾರದು. ಆದರೆ ಅದೇ ಸಮಯದಲ್ಲಿ ನಮ್ಮ ವೇಷಭೂಷಣಗಳ ವಿಷಯದಲ್ಲಿ ಉದಾಸೀನತೆಯನ್ನೂ ತೋರಬಾರದು. ಯಾವುದೇ ಅಲಂಕಾರವಿಲ್ಲದಿದ್ದರೂ ಧರಿಸುವ ಉಡುಪು ಒಪ್ಪವಾಗಿಯೂ ಮತ್ತು ಅಚ್ಚುಕಟ್ಟಾಗಿಯೂ ಇರಬೇಕು. ದೇವರಮಕ್ಕಳು ಒಳಭಾಗದಲ್ಲಿಯೂ ಮತ್ತು ಹೊರಗೂ ನಿರ್ಮಲರೂ, ಶುದ್ಧರೂ ಆಗಿರಬೇಕು. KanCCh 214.3
ಸಭಾಪಾಲಕರ ಪತ್ನಿಯರು ವಿಶೇಷವಾಗಿ ಉಡುಪಿನ ವಿಷಯದಲ್ಲಿ ಸತ್ಯವೇದವು ತಿಳಿಸಿರುವ ಸ್ಪಷ್ಟವಾದ ಬೋಧನೆಗೆ ಅನುಗುಣವಾಗಿ ನಡೆದುಕೊಳ್ಳಬೇಕು. ದೇವರ ವಾಕ್ಯವು ಈ ವಿಷಯದಲ್ಲಿ ನೀಡುವ ಎಚ್ಚರಿಕೆಗಳು ಹಳೆಯಕಾಲದ್ದಲ್ಲ. ಈ ಕಾಲದಲ್ಲಿ ಬಟ್ಟೆಗೆ ಖರೀದಿಸಲು ಮಾಡುವ ದುಂದುವೆಚ್ಚವು ನಿರಂತರವಾಗಿ ಹೆಚ್ಚುತ್ತಲೇಇದೆ. ಅದಕ್ಕೆ ಅಂತ್ಯವು ಇನ್ನೂ ಕಾಣಿಸುತ್ತಿಲ್ಲ. ಫ್ಯಾಷನ್ ಸಹ ಇಂದಿನ ಆಧುನಿಕಯುಗದಲ್ಲಿ ದಿನದಿಂದದಿನಕ್ಕೆ ಬದಲಾಗುತ್ತಲೇ ಇದೆ. ನಮ್ಮ ಕ್ರೈಸ್ತ ಸಹೋದರಿಯರು ಸಮಯ ಅಥವಾ ಖರ್ಚನ್ನು ನೋಡದೆ ಆಧುನಿಕಶೈಲಿಯನ್ನು ಅನುಸರಿಸುತ್ತಿದ್ದಾರೆ. ದೇವರಿಗೆ ಹಿಂದಿರುಗಿಸಬೇಕಾದ ಹಣವನ್ನು, ಉಡುಪಿಗಾಗಿ ದುಂದುವೆಚ್ಚ ಮಾಡಲಾಗುತ್ತಿದೆ. KanCCh 215.1