Go to full page →

ಕೋಪದಲ್ಲಿರುವಾಗ ಎಂದೂ ಸಹ ಮಕ್ಕಳನ್ನು ತಿದ್ದಲು ಪ್ರಯತ್ನಿಸಬಾರದು KanCCh 238

ಮಕ್ಕಳು ಅವಿಧೇಯರಾಗಿದ್ದಲ್ಲಿ, ಅವರನ್ನು ತಿದ್ದಬೇಕು. ಅದಕ್ಕೆ ಮೊದಲು ಅವರ ಮನಸ್ಸನ್ನು ಮೆದುಗೊಳಿಸುವಂತೆಯೂ ಮತ್ತು ಅವರೊಂದಿಗೆ ವ್ಯವಹರಿಸಲು ಬೇಕಾದ ಜ್ಞಾನ ವಿವೇಕಕ್ಕಾಗಿ ದೇವರಲ್ಲಿ ಪ್ರಾರ್ಥಿಸಬೇಕು. ಇಂತಹ ವಿಧಾನವು ಎಂದೂ ಸಹ ವಿಫಲಗೊಳ್ಳುವುದಿಲ್ಲ ತಂದೆತಾಯಿಯರಾದ ನಿಮ್ಮ ಹೃದಯದಲ್ಲಿ ದುಗುಡ, ಕೋಪ ತುಂಬಿರುವಾಗ, ನಿಮ್ಮ ಮಕ್ಕಳು ಆತ್ಮೀಕ ವಿಷಯಗಳನ್ನು ಮನವರಿಕೆ ಮಾಡಿಕೊಳ್ಳುವಂತೆ ನೀವು ಮಾಡಲಾಗದು. KanCCh 238.3

ಮಕ್ಕಳ ತಪ್ಪುಗಳನ್ನು ಪ್ರೀತಿಯಿಂದಲೇ ತಿದ್ದಿ ಸರಿಪಡಿಸಬೇಕು. ಅವರ ಮನಸ್ಸಿನಂತೆ ನಡೆದುಕೊಳ್ಳಲು ಸ್ವತಂತ್ರ ಕೊಟ್ಟು, ಅನಂತರ ಅದರಿಂದ ಕೋಪಗೊಂಡು ಶಿಕ್ಷಿಸಬಾರದು. ಇಂತಹ ಶಿಕ್ಷೆಯು ಅವರಲ್ಲಿ ಸುಧಾರಣೆ ತರುವುದಕ್ಕೆ ಬದಲಾಗಿ, ಅವರು ಕಠಿಣರಾಗುವಂತೆ ಮಾಡುತ್ತದೆ. ಆದುದರಿಂದ ಆರಂಭದಲ್ಲಿಯೇ ಮಕ್ಕಳ ತಪ್ಪುಗಳನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳು ತಪ್ಪು ಮಾಡಿದಾಗ ತಂದೆ-ತಾಯಿಯರು ಕೋಪ ತೋರಿಸುವುದರಿಂದ ಕೆಟ್ಟತನವು ಇನ್ನೂ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಅವರಲ್ಲಿ ನೀವು ಅವರ ಬಗ್ಗೆ ಕಾಳಜಿ, ಪ್ರೀತಿ ತೋರಿಸುವುದಿಲ್ಲವೆಂಬ ಭಾವನೆ ಉಂಟಾಗುತ್ತದೆ. ತನ್ನ ಬಗ್ಗೆ ತಂದೆ-ತಾಯಿಯರು ಪ್ರೀತಿ ತೋರಿಸಿ ಕಾಳಜಿ ಹೊಂದಿದ್ದಲ್ಲಿ ಈ ರೀತಿ ತಮ್ಮೊಂದಿಗೆ ವರ್ತಿಸುತ್ತಿರಲಿಲ್ಲವೆಂಬ ಭಾವನೆ ಮಕ್ಕಳಲ್ಲಿ ಬರುತ್ತದೆ. KanCCh 239.1

ಈ ಮಕ್ಕಳಿಗೆ ನೀವು ಯಾವ ರೀತಿ ಶಿಕ್ಷಿಸಿ ತಿದ್ದುವಿರೆಂಬುದನ್ನು ದೇವರು ತನ್ನ ಗಮನದಲ್ಲಿ ಇಟ್ಟುಕೊಳ್ಳುತ್ತಾನೆಂದು ಯಾವಾಗಲಾದರೂ ಯೋಚಿಸಿರುವಿರಾ? ಮಕ್ಕಳನ್ನು ದೂಷಿಸಿ, ಬಯ್ಯುವುದಕ್ಕೆ ಬದಲಾಗಿ, ಅವರ ಮನಸ್ಸನ್ನು ಗೆಲ್ಲುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷೆ ನೀಡಿ ಅವರ ತಪ್ಪುಗಳನ್ನು ತಿದ್ದುವುದರಿಂದ ಎಂತಹ ಆಶೀರ್ವಾದ ಉಂಟಾಗುತ್ತದೆಂದು ದೇವರು ತಿಳಿದಿದ್ದಾನೆ. KanCCh 239.2