Go to full page →

ತುಂಬಾ ಚಿಕ್ಕ ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದಾಗುವ ಅಪಾಯಗಳು KanCCh 255

ಆದಿ ತಂದೆತಾಯಿಯರಾದ ಆದಾಮಹವ್ವಳು ಏದೆನ್‌ತೋಟದಲ್ಲಿ ನಿಸರ್ಗದಿಂದಶಿಕ್ಷಣಪಡೆದುಕೊಂಡಂತೆ, ಮೋಶೆಯು ಅರೇಬಿಯಾದ ಬೆಟ್ಟ ಗುಡ್ಡಗಳಲ್ಲಿ ಹಾಗೂಬಯಲು ಪ್ರದೇಶದಲ್ಲಿ ಮತ್ತು ಬಾಲಕ ಯೇಸುವು ನಜರೇತಿನ ಪರ್ವತದಲ್ಲಿ ಪಡೆದುಕೊಂಡಶಿಕ್ಷಣವನ್ನು ಇಂದಿನಮಕ್ಕಳೂ ಸಹ ಗಳಿಸಿಕೊಳ್ಳಬಹುದು. ಸಾಧ್ಯವಾದಷ್ಟು ಮಟ್ಟಿಗೆಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ, ಪ್ರಕೃತಿಯೆಂಬ ಅದ್ಭುತವಾದ ಪಠ್ಯಪುಸ್ತಕವನ್ನುಪರಿಚಯಿಸಬೇಕು. KanCCh 255.3

ಮಕ್ಕಳನ್ನು ಬಹಳ ಚಿಕ್ಕವಯಸ್ಸಿನಲ್ಲಿಯೇ ಶಾಲೆಗೆ ಸೇರಿಸಬಾರದು. ಮಕ್ಕಳಿಗೆ 8-10ವರ್ಷಗಳಾಗುವ ತನಕ ತಂದೆತಾಯಿಗಳು ಅವರ ಅತ್ಯುತ್ತಮ ಶಿಕ್ಷಕರಾಗಿರಬೇಕು. ಹೂ,ಗಿಡಮರ ಬಳ್ಳಿಗಳು, ಪಕ್ಷಿಗಳು, ಮುಕ್ತವಾದ ಬಯಲು ಮಕ್ಕಳ ಶಾಲೆಯಾಗಿರಬೇಕುಹಾಗೂ ಪ್ರಕೃತಿಯ ಅಪೂರ್ವವಾದ ಸಂಗತಿಗಳು ಪಠ್ಯಪುಸ್ತಕವಾಗಿರಬೇಕು.ಮನಸ್ಸು ಇವುಗಳನ್ನು ಎಷ್ಟು ವೇಗವಾಗಿ ಮನದಟ್ಟು ಮಾಡಿಕೊಳ್ಳುತ್ತದೋ, ಆಗತಂದೆತಾಯಿಯರು ಅವರಿಗೆ ದೇವರ ಮಹಾಪುಸ್ತಕವಾದ ಪ್ರಕೃತಿಯ ಬಗ್ಗೆ ತಿಳಿಸಬೇಕು. ಇಂತಹ ದೃಶ್ಯಗಳ ಮೂಲಕ ಕೊಡಲ್ಪಟ್ಟ ಪಾಠಗಳನ್ನು ಮಕ್ಕಳು ಅಷ್ಟು ಸುಲಭವಾಗಿಮರೆಯುವುದಿಲ್ಲ. KanCCh 255.4

ಮಕ್ಕಳನ್ನು ಬಹಳ ಚಿಕ್ಕವಯಸ್ಸಿನಲ್ಲಿಯೇ ಶಾಲೆಗೆ ಸೇರಿಸುವುದರಿಂದ ಶಾರೀರಿಕಮತ್ತು ಮಾನಸಿಕ ಆರೋಗ್ಯ ಮಾತ್ರವಲ್ಲದೆ, ಅವರು ನೈತಿಕ ದೃಷ್ಟಿಯಿಂದಲೂಅಪಾಯಕ್ಕೊಳಗಾಗುತ್ತಾರೆ. ಶಾಲೆಯಲ್ಲಿ ಸುಸಂಸ್ಕೃತ ಸ್ವಭಾವ ಹಾಗೂ ಸನ್ನಡತೆಯಿಲ್ಲದಮಕ್ಕಳ ಸಂಪರ್ಕಕ್ಕೆ ಬರುವ ಸಾಧ್ಯತೆಗಳಿವೆ. ಸುಳ್ಳು ಹೇಳುವ, ಕದಿಯುವ, ಒರಟು ಸ್ವಭಾವವುಳ್ಳಮೋಸಮಾಡುವ ಅಲ್ಲದೆ ಇಂತಹ ಕೆಟ್ಟ ಗುಣಗಳನ್ನು ಇತರರಿಗೆ ಕಲಿಸುವುದರಲ್ಲಿಸಂತೋಷ ಪಡುವಂತ ಮಕ್ಕಳ ಸಹವಾಸವನ್ನು ನಮ್ಮ ಮಕ್ಕಳು ಮಾಡಬೇಕಾಗುತ್ತದೆ.ಚಿಕ್ಕಮಕ್ಕಳನ್ನು ಆರಂಭದಲ್ಲಿಯೇ ಸರಿಪಡಿಸದಿದ್ದಲ್ಲಿ, ಅವರು ಒಳ್ಳೆಯದಕ್ಕಿಂತ ಕೆಟ್ಟದ್ದನ್ನುಬೇಗನೆ ಕಲಿಯುತ್ತಾರೆ. ಕೆಟ್ಟ ಅಭ್ಯಾಸಗಳು ಹೃದಯಕ್ಕೆ ಬೇಗನೆ ನಾಟುತ್ತವೆ. ಅಲ್ಲದೆಬಾಲ್ಯದಲ್ಲಿಯೇ ಅವರು ನೋಡಿದ ಹಾಗೂ ಕೇಳಿದ ವಿಷಯಗಳು ಮಕ್ಕಳಎಳೆಯಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತವೆ. ಎಳೆಯಮನಸ್ಸಿನಲ್ಲಿ ಬಿತ್ತಲ್ಪಟ್ಟ ಕೆಟ್ಟಬೀಜಗಳುಬೇರುಬಿಟ್ಟು ತಂದೆತಾಯಿಯರ ಹೃದಯಗಳಿಗೆ ನೋವು ಮಾಡುವಂತ ಚೂಪಾದಮುಳ್ಳುಗಳಾಗಿ ಬೆಳೆಯುತ್ತವೆ. KanCCh 256.1