Go to full page →

ಆಹಾರ ತಯಾರಿಕಾ ವಿಧಾನ KanCCh 274

ಆಹಾರ ತಯಾರಿಕೆಯು ಸಾಮಾನ್ಯ ಕೆಲಸವಲ್ಲ. ಇದೊಂದು ಕೌಶಲವುಳ್ಳ ಕೆಲಸವಾಗಿದ್ದು,ನಿಜ ಜೀವನದಲ್ಲಿ ಅತ್ಯಂತ ಅಗತ್ಯವಾಗಿದೆ. ಸರಳವಾದ ಮತ್ತು ಪೋಷಕಾಂಶಭರಿತವಾದ ಆಹಾರ ತಯಾರಿಕೆಯು ಒಂದು ಕೌಶಲವಾಗಿದೆ. ಆರೋಗ್ಯಕರವೂ, ಪರಿಪೂರ್ಣವೂಹಾಗೂ ರುಚಿಕರವೂ ಆದ ಸರಳ ಆಹಾರ ತಯಾರಿಸುವುದನ್ನು ಅಡುಗೆ ಮಾಡುವವರುತಿಳಿದಿರಬೇಕು. ಇದು ನಮ್ಮ ಶರೀರಕ್ಕೆ ಉತ್ತಮ ಆರೋಗ್ಯ ಮತ್ತು ಪೋಷಣೆ ಒದಗಿಸಬೇಕು. KanCCh 274.4

ಗೃಹಿಣಿಯರಲ್ಲಿ ಅನೇಕರು ಅಡುಗೆ ಮಾಡುವುದು ದಿನನಿತ್ಯವೂ ಮಾಡಬೇಕಾದಒಂದು ಕರ್ಮವಾಗಿದೆ ಎಂದು ತಿಳಿದು, ಏನೋ ಒಂದು ಬೇಯಿಸಿದರಾಯಿತು ಎಂಬಮನೋಭಾವ ಹೊಂದಿರುತ್ತಾರೆ. ಆದರೆ ಸರಳವಾಗಿಯೂ, ಆರೋಗ್ಯಕರವಾಗಿಯೂಮತ್ತು ರುಚಿಕರವಾಗಿರುವ ಆಹಾರವನ್ನು ಬೆಣ್ಣೆ, ತುಪ್ಪ ಅಥವಾ ಮಾಂಸ ಉಪಯೋಗಿಸದೆಜಾಣ್ಣೆ ಉಪಯೋಗಿಸಿ ತಯಾರಿಸಬಹುದು. ಕೊಬ್ಬು, ಮಸಾಲೆಪದಾರ್ಥ ಉಪಯೋಗಿಸದೆದವಸಧಾನ್ಯಗಳಿಂದ ಹಣ್ಣು, ತರಕಾರಿಗಳಿಂದ ಸರಳವಾಗಿ ತಯಾರಿಸಿದ ಆಹಾರವುಅತ್ಯುತ್ತಮ ಆರೋಗ್ಯಕರ ಆಹಾರವಾಗಿದೆ. ಮರಣವನ್ನು ಕಾಣದೆ ಕ್ರಿಸ್ತನಎರಡನೇಬರೋಣದಲ್ಲಿ ಆತನೊಂದಿಗೆ ಒಯ್ಯಲ್ಪಡುವವರು ಇಂತಹ ಆಹಾರವನ್ನುಸೇವಿಸುವವರಾಗಿರುತ್ತಾರೆ. KanCCh 275.1

ಸಕ್ಕರೆ ಉಪಯೋಗಿಸಿ ಮಾಡಿದ ಕೇಕ್, ಬೇಕರಿಪದಾರ್ಥಗಳು, ಜಾಮ್ ಮುಂತಾದವುಅಜೀರ್ಣತೆಗೆ ಪ್ರಮುಖ ಕಾರಣಗಳಾಗಿವೆ. ಹಾಲು, ಮೊಟ್ಟೆ ಮತ್ತು ಸಕ್ಕರೆ ಉಪಯೋಗಿಸಿಮಾಡುವ ಕಸ್ಟರ್ಡ್ ಮತ್ತುಪುಡ್ಡಿಂಗ್ ಎಂಬ ಖಾದ್ಯಗಳು ಬಹಳ ಹಾನಿಕರ. ಹಾಲುಹಾಗೂ ಸಕ್ಕರೆ ಹಾಕಿ ಮಾಡಿದ ಪದಾರ್ಥಗಳನ್ನು ಸಾಧ್ಯವಾದಷ್ಟು ಮಟ್ಟಿಗೆತೆಗೆದುಕೊಳ್ಳಬಾರದು. ಉಷ್ಣ ವಾತಾವರಣದಲ್ಲಿ ವಾಸಿಸುವವರು ಸಕ್ಕರೆಯ ಪ್ರಮಾಣವನ್ನುಕಡಿಮೆ ಮಾಡಿದಷ್ಟು ಆರೋಗ್ಯಕ್ಕೆ ಒಳ್ಳೆಯದು. ಕ್ರಿಮಿಶುದ್ಧಿಮಾಡಿದ ಹಾಲನ್ನು ಮಾತ್ರಉಪಯೋಗಿಸಬೇಕು. ಆದರೆ ಆರೋಗ್ಯಕರ ಹಸುವಿನಹಾಲನ್ನು ಚೆನ್ನಾಗಿ ಕುದಿಸಿಉಪಯೋಗಿಸುವುದು ಸುರಕ್ಷಿತವಾಗಿದೆ. KanCCh 275.2