Go to full page →

ಹೆಚ್ಚಿನ ರೋಗರುಜಿನಗಳಿಗೆ ಕಾರಣಗಳು KanCCh 283

ಮಾಂಸಾಹಾರವು ಎಂದಿಗೂ ಸಹ ಉತ್ತಮ ಆಹಾರವಾಗಿರಲಿಲ್ಲ. ಇಂದು ಪ್ರಾಣಿಗಳಲ್ಲಿರೋಗವು ಎಷ್ಟೊಂದು ವೇಗವಾಗಿ ಹೆಚ್ಚಾಗುತ್ತಿರುವುದರಿಂದ, ಅವುಗಳ ಸೇವನೆ ಇನ್ನೂಹೆಚ್ಚಾಗಿ ದೂರವಾಗಿರಬೇಕು. ತಾವು ಏನು ತಿನ್ನುತ್ತಿದ್ದೇವೆಂದು ಮಾಂಸಾಹಾರಿಗಳಿಗೆತಿಳಿದಿರುವುದಿಲ್ಲ. ಪ್ರಾಣಿಗಳು ಎಲ್ಲಿ ವಾಸಿಸುತ್ತವೆ ಹಾಗೂ ಅವುಗಳ ಮಾಂಸದ ಗುಣಮಟ್ಟಎಂತದ್ದೆಂದು ಅವರು ತಿಳಿದರೆ, ಅದು ಅವರಿಗೆ ಅಸಹ್ಯವಾಗುತ್ತದೆ. ಕ್ಯಾನ್ಸರ್ ಮತ್ತುಕ್ಷಯ ಉಂಟುಮಾಡುವ ರೋಗಾಣುಗಳಿಂದ ತುಂಬಿರುವ ಮಾಂಸವನ್ನು ಜನರುತಿನ್ನುತ್ತಲೇ ಇದ್ದಾರೆ. ಈ ಕಾರಣದಿಂದ ಅಂತವರಲ್ಲಿ ಕ್ಷಯ, ಕ್ಯಾನ್ಸರ್ ಮುಂತಾದಮಾರಕ ರೋಗಗಳು ಉಂಟಾಗುತ್ತವೆ. ಮಾಂಸಾಹಾರಿಗಳಲ್ಲಿ ಮಾರಕರೋಗಗಳು ಹರಡುವಪ್ರಮಾಣ ಸಸ್ಯಾಹಾರಿಗಳಿಗಿಂತ ಹತ್ತುಪಟ್ಟು ಹೆಚ್ಚಾಗಿದೆ. ಕ್ಯಾನ್ಸರ್ ಮತ್ತು ದುರ್ಮಾಂಸದಗೆಡ್ಡೆಗಳು (Tumours) ಬೆಳೆಯುವುದಕ್ಕೆ ಸತ್ತ ಪ್ರಾಣಿಗಳ ಮಾಂಸ ತಿನ್ನುವುದು ಮುಖ್ಯಕಾರಣವೆಂದು ಶ್ರೀಮತಿ ವೈಟಮ್ಮನವರಿಗೆ ದೇವರು ದರ್ಶನದಲ್ಲಿ ತಿಳಿಸಿದ್ದಾನೆ. KanCCh 283.4

ಕೊಳಕಾದ ಪದಾರ್ಥ ಸೇವಿಸುವುದರಿಂದ ಅನೇಕ ಸ್ಥಳಗಳಲ್ಲಿ ಮೀನು ಬಹಳಕಲುಷಿತಗೊಂಡಿರುತ್ತದೆ.ಇಂತವುಗಳನ್ನು ಸೇವಿಸುವುದು ರೋಗಕ್ಕೆ ಕಾರಣವಾಗುತ್ತದೆ.ಅದರಲ್ಲಿಯೂ ವಿಶೇಷವಾಗಿ ದೊಡ್ಡದೊಡ್ಡ ನಗರಗಳ ಮಲ, ಮೂತ್ರ ಮೊದಲಾದಕಲ್ಮಶಗಳು ಸೇರುವ ನದಿಕೆರೆಗಳಲ್ಲಿರುವ ಮೀನು ಸೇವಿಸುವುದು ರೋಗಕ್ಕೆ ಖಂಡಿತಕಾರಣವಾಗುತ್ತದೆ. KanCCh 284.1

ಮಾಂಸಾಹಾರ ಸೇವನೆಯ ಪರಿಣಾಮಗಳು ತಕ್ಷಣದಲ್ಲಿಯೇ ಕಂಡು ಬರದಿರಬಹುದು.ಆದರೆ ಇದು ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿಕರ. ತಾವು ತೆಗೆದುಕೊಂಡಮಾಂಸಾಹಾರವು ರಕ್ತದಲ್ಲಿ ವಿಷವಾಗಿ ಸೇರಿ, ಅನಾರೋಗ್ಯಕ್ಕೆ ಕಾರಣವಾಗಿದೆ ಎಂದುಹೆಚ್ಚಿನವರು ತಿಳಿದುಕೊಳ್ಳುವುದಿಲ್ಲ. ಮಾಂಸಾಹಾರವೇ ಪ್ರಮುಖವಾದ ಕಾರಣದಿಂದಅನೇಕರು ರೋಗಗಳಿಂದ ಸಾಯುತ್ತಾರೆ. ಆದರೆ ರೋಗಕ್ಕೆ ನಿಜವಾದ ಕಾರಣವೇನೆಂದುಅವರಿಗಾಗಲಿ ಅಥವಾ ಮನೆಯವರಿಗಾಗಲಿ ತಿಳಿದಿರುವುದಿಲ್ಲ. KanCCh 284.2