Go to full page →

ಸ್ಥಳೀಯ ಪರಿಸ್ಥಿತಿಯನ್ನು ಪರಿಗಣಿಸಬೇಕು KanCCh 295

ಹೊಟ್ಟೆಬಾಕತನ ಹಾಗೂ ಮಿತಸಂಯಮವಿಲ್ಲದಿರುವುದು ಆರೋಗ್ಯಕ್ಕೆ ಹಾನಿಕರವೆಂದುನಾವು ಪ್ರತಿಪಾದಿಸುವಾಗಲೂ, ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಡಬೇಕು. ಜಗತ್ತಿನವಿವಿಧ ದೇಶಗಳಲ್ಲಿ ವಾಸಿಸುತ್ತಿರುವವರಿಗೆ ದೇವರು ವ್ಯವಸ್ಥೆ ಮಾಡಿದ್ದಾನೆ. ದೇವರೊಂದಿಗೆಜೊತೆ ಕೆಲಸಗಾರರಾಗಬೇಕೆಂದು ಬಯಸುವವರು ಯಾವ ಆಹಾರ ತಿನ್ನಬೇಕು ಅಥವಾತಿನ್ನಬಾರದೆಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಮೊದಲು ಸ್ಥಳೀಯ ಪರಿಸ್ಥಿತಿಯನ್ನುಎಚ್ಚರಿಕೆಯಿಂದ ಪರಿಗಣಿಸಬೇಕು. ಅಲ್ಲಿನ ಜನರೊಂದಿಗೆ ಮೊದಲು ನಿಕಟ ಸಂಪರ್ಕಹೊಂದಬೇಕು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಲ್ಲದ ಆರೋಗ್ಯ ಸುಧಾರಣಾನಿಯಮಗಳನ್ನು ಅತಿರೇಕದಿಂದ ಅವರು ಅನುಸರಿಸಬೇಕೆಂದು ತಿಳಿಸಿದಲ್ಲಿ, ಹೆಚ್ಚಿನಹಾನಿಯುಂಟಾಗುವುದೇ ಹೊರತು, ಒಳ್ಳೆಯದಾಗುವುದಿಲ್ಲ. ಬಡವರಿಗೆ ಸುವಾರ್ತೆಸಾರುವಾಗಹೆಚ್ಚು ಪೋಷಕಾಂಶವುಳ್ಳ ಆಹಾರ ಸೇವಿಸಬೇಕೆಂದು ಶ್ರೀಮತಿವೈಟಮ್ಮನವರು ಹೇಳಿದ್ದಾರೆ.ಅಲ್ಲದೆ ಆ ಬಡವರಿಗೆ ನೀವು ಹಾಲು, ಹಾಲಿನ ಕೆನೆ, ಬೆಣ್ಣೆ ಅಥವಾ ಮೊಟ್ಟೆಗಳನ್ನುತಿನ್ನಬಾರದೆಂದು ಹೇಳಬಾರದು” ಎಂದು ಶ್ರೀಮತಿವೈಟಮ್ಮನವರಿಗೆ ದೇವರು ತಿಳಿಸಿದ್ದಾನೆ.ಬಡವರಿಗೆ ಸುವಾರ್ತೆ ಸಾರಬೇಕು. ಆದರೆ ಆಹಾರಸೇವನೆಯ ವಿಷಯದಲ್ಲಿ ಕಟ್ಟುನಿಟ್ಟಾದಪಥ್ಯ ಅನುಸರಿಸಬೇಕೆಂದು ಅವರಿಗೆ ಹೇಳುವ ಸಮಯ ಇನ್ನೂ ಬಂದಿಲ್ಲವೆಂದುಶ್ರೀಮತಿ ವೈಟಮ್ಮನವರು ಹೇಳಿದ್ದಾರೆ (ಇದನ್ನು ತಿಳಿಸಿ ಹೆಚ್ಚುಕಡಿಮೆ 150ವರ್ಷಗಳಾಯಿತೆಂದು ಗಮನದಲ್ಲಿಡಿ). KanCCh 295.2