ಕ್ರಿಸ್ತನು ತನ್ನ ಹನ್ನೆರಡುಮಂದಿ ಶಿಷ್ಯರೊಂದಿಗೆ ಊಟಕ್ಕೆ ಕೂತುಕೊಂಡು ದುಃಖಭರಿತ“ನಾನು ಶ್ರಮೆ ಅನುಭವಿಸುವುದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಕ್ಕದಊಟವನ್ನು ಮಾಡುವುದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ. ನಾನು ನಿಮಗೆ ಹೇಳುತ್ತೇನೆ,ಇದು ದೇವರರಾಜ್ಯದಲ್ಲಿ ನೆರವೇರುವ ತನಕ ನಾನು ಇನ್ನುಮೇಲೆ ಪಕ್ಕದ ಊಟವನ್ನುಮಾಡುವುದೇ ಇಲ್ಲ.... ಆ ಮೇಲೆ ಆತನು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡುದೇವರ ಸ್ತೋತ್ರಮಾಡಿ- ಇದನ್ನು ತಕ್ಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ. ಇಂದಿನಿಂದದೇವರರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದುನಿಮಗೆ ಹೇಳುತ್ತೇನೆ” ಅಂದನು (ಲೂಕ 22:15-18). KanCCh 375.3
ಕರ್ತನ ಭೋಜನಸಂಸ್ಕಾರವು ದುಃಖಪಡುವ ಸಮಯವಲ್ಲ. ದುಃಖಪಡುವುದುಇದರ ಉದ್ದೇಶವಲ್ಲ. ದೇವರಮಕ್ಕಳು ಅದರಲ್ಲಿ ಭಾಗವಹಿಸುವಾಗ ತಮ್ಮ ತಪ್ಪದೋಷಗಳನ್ನುನೆನಪಿಸಿಕೊಂಡು ದುಃಖಿಸಬಾರದು. ಅವರು ತಮ್ಮ ಹಿಂದಿನ ಮನಗುಂದಿಸಿದ ಅಥವಾಉತ್ತಮಗೊಳಿಸಿದ ಧಾರ್ಮಿಕ ಅನುಭವದ ಕಡೆಗೆ ಗಮನಹರಿಸಬಾರದು. ಕ್ರೈಸ್ತಸಹೋದರರನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ನೆನಪಿಗೆ ತಂದುಕೊಳ್ಳಬಾರದು. ಕರ್ತನ ಪವಿತ್ರಭೋಜನ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವಾಗ ಇವನ್ನೆಲ್ಲಾ ಮಾಡಬೇಕು. ತಮ್ಮನ್ನುತಾವೇ ಪರೀಕ್ಷಿಸಿಕೊಳ್ಳುವುದು, ಪಾಪವನ್ನು ಒಪ್ಪಿ ಅರಿಕೆ ಮಾಡುವುದು, ಸಹೋದರರೊಂದಿಗೆಇರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವುದು- ಇವೆಲ್ಲಾ ಈ ಪವಿತ್ರ ಸಂಸ್ಕಾರದಲ್ಲಿಭಾಗವಹಿಸುವ ಮೊದಲು ಮಾಡಿಕೊಳ್ಳುವ ಸಿದ್ಧತೆಯಲ್ಲಿಯೇ ಒಳಗೊಂಡಿರಬೇಕು. KanCCh 375.4
ಈಗ ದೇವರ ಮಕ್ಕಳು ಕ್ರಿಸ್ತನನ್ನು ಸಂಧಿಸಲು ಬಂದಿದ್ದಾರೆ. ಅವರು ಶಿಲುಬೆಯನೆರಳಿನಲ್ಲಲ್ಲ. ಬದಲಾಗಿ ಅದರ ರಕ್ಷಿಸುವ ಬೆಳಕಿನಲ್ಲಿ ನಿಲ್ಲಬೇಕಾಗಿದೆ. ಅವರು ತಮ್ಮಹೃದಯಗಳನ್ನು ನೀತಿಯಸೂರ್ಯನಾದ ಕ್ರಿಸ್ತನ ಹೊಳೆಯುವ ಕಿರಣಗಳಿಗೆ ತೆರೆಯಬೇಕು.ಕ್ರಿಸ್ತನ ಅತ್ಯಮೂಲ್ಯ ರಕ್ತದಿಂದ ತೊಳೆಯಲ್ಪಟ್ಟ ದೇವರ ಮಕ್ಕಳು, ಸ್ವಾಮಿಯು ಕಣ್ಣಿಗೆಕಾಣಿಸದಿದ್ದರೂ, ಆತನ ಪ್ರಸನ್ನತೆ ಅಲ್ಲಿದೆ ಎಂಬ ಪೂರ್ಣಪ್ರಜ್ಞೆಯೊಂದಿಗೆ ‘ಶಾಂತಿಯನ್ನುನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂತ ಶಾಂತಿಯನ್ನು ನಿಮಗೆ ಕೊಡುತ್ತೇನೆ.ಲೋಕವು ಕೊಡುವ ರೀತಿಯಿಂದ ನಾನುನಿಮಗೆ ಕೊಡುವುದಿಲ್ಲ....” ಎಂಬ ಆತನಮಾತನ್ನು ಕೇಳಬೇಕು (ಯೋಹಾನ 14:27). KanCCh 376.1
ಕ್ರಿಸ್ತನ ಜಜ್ಜಲ್ಪಟ್ಟ ಶರೀರ ಹಾಗೂ ಸುರಿಸಲ್ಪಟ್ಟ ರಕ್ತದ ಸಂಕೇತವಾಗಿರುವ ರೊಟ್ಟಿಹಾಗೂ ದ್ರಾಕ್ಷಾರಸವನ್ನು ನಾವು ತೆಗೆದುಕೊಳ್ಳುವಾಗ, ಮೇಲುಪ್ಪರಿಗೆಯಲ್ಲಿ ಆತನು ತನ್ನಶಿಷ್ಯರೊಂದಿಗೆ ಮಾಡಿದ ಪಕ್ಕದಭೋಜನದ ದೃಶ್ಯವನ್ನು ಊಹಿಸಿಕೊಳ್ಳುತ್ತೇವೆ. ಸಮಸ್ತಲೋಕದಪಾಪಗಳನ್ನು ಹೊತ್ತುಕೊಂಡು ಶ್ರಮೆ, ಸಂಕಟ, ನೋವು ಅನುಭವಿಸಿದ ಗೆಡ್ಡೆಮನೆತೋಟವುನಮ್ಮ ಕಣ್ಣೆದುರು ಬರುತ್ತದೆ. ಪಾಪಿಗಳಾದ ನಮ್ಮನ್ನು ತಂದೆಯಾದ ದೇವರೊಂದಿಗೆರಾಜಿ ಮಾಡಿದ ಹೋರಾಟವನ್ನು ನಾವು ನೋಡುತ್ತೇವೆ. ಕ್ರಿಸ್ತನು ನಮ್ಮನಡುವೆ ಶಿಲುಬೆಗೆಹಾಕಲ್ಪಟ್ಟಿದ್ದಾನೆ. KanCCh 376.2
ಶಿಲುಬೆಗೆಹಾಕಲ್ಪಟ್ಟ ವಿಮೋಚಕನನ್ನು ನೋಡುವಾಗ, ಪರಲೋಕದ ಮಹಿಮೆಯರಾಜಾಧಿರಾಜನು ಮಾಡಿದತ್ಯಾಗದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ನಾವುಇನ್ನೂ ಹೆಚ್ಚಾಗಿಮನವರಿಕೆಮಾಡಿಕೊಳ್ಳುತ್ತೇವೆ. ರಕ್ಷಣಾ ಯೋಜನೆಯು ನಮ್ಮ ಮುಂದೆಮಹಿಮೆಗೊಳ್ಳುವುದು ಮತ್ತೂ ಕಲ್ನಾರಿ ಶಿಲುಬೆಯ ಆಲೋಚನೆಯು ನಮ್ಮ ಹೃದಯದಲ್ಲಿಯಥಾರ್ಥವಾದ ಹಾಗೂ ಪವಿತ್ರ ಭಾವೋದ್ವೇಗಗಳನ್ನು ಬಡಿದೆಬ್ಬಿಸುತ್ತದೆ. ದೇವರಹಾಗೂ ಯಜ್ಞದ ಕುರಿಯ ಸ್ತೋತ್ರವು ನಮ್ಮ ಹೃದಯಗಳಲ್ಲಿಯೂ, ತುಟಿಗಳಲ್ಲಿಯೂಇರುವವು. ಕ್ರಿಸ್ತನ ಕಲ್ಯಾರಿಯ ಶ್ರಮೆ, ಸಂಕಟ, ವೇದನೆಯ ದೃಶ್ಯವನ್ನುನೆನಪಿನಲ್ಲಿಟ್ಟುಕೊಂಡಾಗ, ಅಹಂಕಾರ ಮತ್ತು ಆತ್ಮಾರಾಧನೆ (Self worship) ಅಂದರೆತಾನೇ ದೇವರು ಎಂಬ ಸೊಕ್ಕಿನ ನಡವಳಿಕೆ ಇರುವುದಿಲ್ಲ. KanCCh 376.3
ನಮ್ಮ ಕರ್ತನ ಮಹಾತ್ಯಾಗ ಬಲಿದಾನವನ್ನು ನಂಬಿಕೆಯಿಂದ ಧ್ಯಾನಿಸುವಾಗ,ಹೃದಯವು ಕ್ರಿಸ್ತನ ಆತ್ಮೀಕ ಜೀವನದೊಂದಿಗೆ ಮಿಳಿತವಾಗುತ್ತದೆ. ಅಂತಹ ಹೃದಯವುಕರ್ತನ ಪವಿತ್ರಭೋಜನದಲ್ಲಿ ಭಾಗವಹಿಸುವಾಗಲೆಲ್ಲಾ ದೈವೀಕ ಶಕ್ತಿಯನ್ನುಹೊಂದಿಕೊಳ್ಳುತ್ತದೆ. ಇದು ವಿಶ್ವಾಸಿಯು ಕ್ರಿಸ್ತನ ಮೂಲಕ ತಂದೆಯೊಂದಿಗೆ ಒಂದಾಗುವಂತೆಮಾಡುತ್ತದೆ. ವಿಶೇಷವಾಗಿ ಹೇಳುವುದಾದರೆ, ದೇವರಿಗೂ ಮತ್ತು ಆತನ ಮೇಲೆಆತುಕೊಂಡಿರುವ ಮನುಷ್ಯರಿಗೂ ನಡುವೆ ಒಂದು ಸಂಬಂಧವನ್ನು ರೂಪಿಸುತ್ತದೆ. KanCCh 376.4
ಕರ್ತನ ಪವಿತ್ರಭೋಜನ ಸಂಸ್ಕಾರವು ಕ್ರಿಸ್ತನ ಎರಡನೇಬರೋಣವನ್ನು ಸೂಚಿಸುತ್ತದೆ.ಈ ನಿರೀಕ್ಷೆಯನ್ನು ಶಿಷ್ಯರ ಮನಸ್ಸಿನಲ್ಲಿ ಕಣ್ಣಿಗೆ ಕಟ್ಟುವಂತಿರ ಬೇಕೆಂಬ ಉದ್ದೇಶದಿಂದಕೊಡಲಾಗಿತ್ತು. ಶಿಷ್ಯರು ಕ್ರಿಸ್ತನ ಮರಣವನ್ನು ಆಚರಿಸುವುದಕ್ಕೆ ಸೇರಿದಾಗೆಲ್ಲಾ, ಅವರುಹೇಗೆ ಕ್ರಿಸ್ತನು “ಪಾತ್ರೆಯನ್ನು ತೆಗೆದುಕೊಂಡು ಈ ಪಾತ್ರೆಯು ನನ್ನರಕ್ತದಿಂದ ಸ್ಥಾಪಿತವಾಗುವಹೊಸ ಒಡಂಬಡಿಕೆಯ ರಕ್ತ: ಇದು ಪಾಪಗಳಕ್ಷಮೆಗಾಗಿ ಬಹುಜನರಿಗೋಸ್ಕರ ಸುರಿಸಲ್ಪಡುವರಕ್ತ, ನಾನು ನನ್ನತಂದೆಯ ರಾಜ್ಯದಲ್ಲಿ ದ್ರಾಕ್ಷಾರಸವನ್ನು ನಿಮ್ಮ ಸಂಗಡ ಹೊಸದಾಗಿಕುಡಿಯುವ ದಿನದವರೆಗೂ ಇನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ“ಎಂಬ ಮಾತುಗಳನ್ನು ವಿವರಿಸಿ ಹೇಳಿ ನೆನಪಿಸಿಕೊಳ್ಳುತ್ತಿದ್ದರು. ಶಿಷ್ಯರು ತಮ್ಮ ಕಷ್ಟಸಂಕಟಗಳಲ್ಲಿಕ್ರಿಸ್ತನ ಎರಡನೇಬರೋಣದ ನಿರೀಕ್ಷೆಯಿಂದ ಆದರಣೆ ಹೊಂದಿದರು. “ನೀವು ಈರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನುಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ” ಎಂಬ ಆಲೋಚನೆಯು ಅವರಿಗೆ ಬಹುಅಮೂಲ್ಯವಾಗಿತ್ತು (ಮತ್ತಾಯ 26:28,29, 1 ಕೊರಿಂಥ 11:26). KanCCh 377.1
ಈ ವಿಷಯಗಳನ್ನು ನಾವು ಎಂದಿಗೂ ಮರೆಯಬಾರದು. ಕ್ರಿಸ್ತನ ಪ್ರೀತಿಯು ನಮ್ಮನೆನಪಿನಲ್ಲಿ ಯಾವಾಗಲೂ ಹಸಿರಾಗಿರಬೇಕು. ನಮಗಾಗಿ ವ್ಯಕ್ತಪಡಿಸಲ್ಪಟ್ಟ ದೇವರಪ್ರೀತಿಯು ನಮ್ಮ ಹೃದಯಕ್ಕೆ ಮಾತನಾಡುವಂತೆ ಕ್ರಿಸ್ತನು ಈ ಪವಿತ್ರ ಸಂಸ್ಕಾರವನ್ನುಸ್ಥಾಪಿಸಿದನು. ಕ್ರಿಸ್ತನ ಮೂಲಕವಾಗಿಯೇ ಹೊರತು ನಮ್ಮ ಮತ್ತು ದೇವರ ನಡುವೆಯಾವುದೇ ಬಂಧವಿರುವುದಿಲ್ಲ. ಕ್ರೈಸ್ತ ಸಹೋದರರ ನಡುವಣ ಐಕ್ಯತೆ ಹಾಗೂ ಪ್ರೀತಿಯುಕ್ರಿಸ್ತನ ಶಾಶ್ವತ ಪ್ರೀತಿಯಿಂದ ಗಟ್ಟಿಗೊಳ್ಳಬೇಕು. ಕ್ರಿಸ್ತನಮರಣವು ಮಾತ್ರ ದೇವರಪ್ರೀತಿಯನ್ನುನಮಗಾಗಿ ಪರಿಣಾಮಕಾರಿಯನ್ನಾಗಿ ಮಾಡುತ್ತದೆ. ಆತನ ಮರಣದಕಾರಣದಿಂದಮಾತ್ರ ಆತನ ಎರಡನೇ ಬರೋಣವನ್ನು ನಾವು ಸಂತೋಷದಿಂದ ಎದುರು ನೋಡುವಂತೆಮಾಡುತ್ತದೆ. ಆತನ ತ್ಯಾಗವು ನಮ್ಮ ನಿರೀಕ್ಷೆಯ ಕೇಂದ್ರವಾಗಿದ್ದು, ಅದರ ಮೇಲೆ ನಮ್ಮವಿಶ್ವಾಸವು ನೆಲೆಗೊಂಡಿರಬೇಕು. KanCCh 377.2
*****