ಸುವಾರ್ತಾಸೇವಕರು ವೈದ್ಯಕೀಯಸೇವೆ ಮಾಡುವವರೊಂದಿಗೆ ಒಂದಾಗಿರಬೇಕು.ಸತ್ಯಕ್ಕೆ ವಿರುದ್ಧವಾಗಿ ಜಗತ್ತಿನಲ್ಲಿರುವ ಪೂರ್ವಗ್ರಹ ಪೀಡಿತ ದ್ವೇಷ/ ಭಾವನೆಯನ್ನುಮುರಿಯಲು ಇದರಿಂದ ಸಹಾಯವಾಗುತ್ತದೆಂದು ದೇವರು ಶ್ರೀಮತಿವೈಟಮ್ಮನವರಿಗೆದರ್ಶನದಲ್ಲಿ ತಿಳಿಸಿದ್ದಾನೆ. ಸುವಾರ್ತಾಸೇವಕರು ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನೂಕಲಿತುಕೊಂಡಲ್ಲಿ, ಅವರು ತಮ್ಮ ಸೇವೆಯಲ್ಲಿ ಎರಡರಷ್ಟು ಯಶಸ್ಸು ಪಡೆದುಕೊಳ್ಳುತ್ತಾರೆಂದುಶ್ರೀಮತಿ ವೈಟಮ್ಮನವರು ಹೇಳುತ್ತಾರೆ. KanCCh 388.2
ಜನರು ಯಾವ ಸ್ಥಿತಿಯಲ್ಲಿದ್ದಾರೆಯೋ, ಎಲ್ಲಿದ್ದಾರೋ, ಯಾವ ಸ್ಥಾನಮಾನಹೊಂದಿರುತ್ತಾರೋ, ಅಲ್ಲಿಯೇ ಹೋಗಿ ಸಾಧ್ಯವಾದಷ್ಟು ಎಲ್ಲಾ ವಿಧದಲ್ಲಿಯೂ ಸಹಾಯಮಾಡಬೇಕು. ಇದೇ ನಿಜವಾದ ಸುವಾರ್ತಾ ಸೇವೆ, ದೇವರ ಸೇವಕರು ರೋಗಿಗಳಮನೆಗಳಿಗೆ ಹೋಗಿ “ನಾನು ನನ್ನ ಶಕ್ತಿಮೀರಿ ನಿಮಗೆ ಸಹಾಯ ಮಾಡಲು ಸಿದ್ಧನಿದ್ದೇನೆ.ನಾನು ವೈದ್ಯನಲ್ಲ. ಆದರೆ ಕ್ರಿಸ್ತನ ಸುವಾರ್ತಾಸೇವಕನಾಗಿದ್ದೇನೆ, ನಿಮ್ಮಂತ ರೋಗಿಗಳುಹಾಗೂ ಬಾಧೆಗೊಳಗಾದವರಿಗೆ ಸೇವೆ ಮಾಡಲು ಬಯಸುತ್ತೇನೆ” ಎಂದು ಹೇಳಬೇಕಾದಅಗತ್ಯವಿದೆ. ಶರೀರದಲ್ಲಿ ಅಸ್ವಸ್ಥರಾದವರು ಹೆಚ್ಚು ಕಡಿಮೆ ಆತ್ಮೀಕ ವಿಷಯದಲ್ಲಿಯೂರೋಗಿಗಳಾಗಿರುತ್ತಾರೆ. ಆತ್ಮವು ಅಸ್ವಸ್ಥವಾಗಿದ್ದರೆ, ಶರೀರವೂ ಸಹಅಸ್ವಸ್ಥವಾಗಿರುತ್ತದೆ. KanCCh 388.3
ಸುವಾರ್ತಾಸೇವೆ ಹಾಗೂ ವೈದ್ಯಕೀಯಸೇವೆಯ ನಡುವೆ ಯಾವುದೇಭಿನ್ನಾಭಿಪ್ರಾಯವಿರಬಾರದು. ರೋಗವನ್ನು ಗುಣಪಡಿಸಲು ವೈದ್ಯರು ಹೇಗೆ ಪ್ರಾಮಾಣಿಕವಾಗಿಚಿಕಿತ್ಸೆ ನೀಡುತ್ತಾರೋ, ಅದೇರೀತಿ ಜನರ ರಕ್ಷಣೆಗಾಗಿ ಅವರು ಅಷ್ಟೇ ಕಳಕಳಿಯಿಂದಲೂಹಾಗೂ ಪ್ರಾಮಾಣಿಕವಾಗಿಯೂ ಸುವಾರ್ತಾಸೇವಕರೊಂದಿಗೆ ಜೊತೆಗೂಡಿ ಸೇವೆಮಾಡಬೇಕು. ಯೌವನಸ್ಥರನ್ನು ವೈದ್ಯರನ್ನಾಗಿ ಮಾಡುವುದಕ್ಕೆ ದಶಾಂಶವನ್ನುಉಪಯೋಗಿಸಬಾರದೆಂದು ಕೆಲವು ಸಭಿಕರು ಹೇಳುತ್ತಾರೆ. ಆದರೆ ಅವರು ತಮ್ಮಸಂಕುಚಿತ ಭಾವನೆ ಬಿಡಬೇಕೆಂದು ಶ್ರೀಮತಿ ವೈಟಮ್ಮನವರಿಗೆ ದೇವರು ಸಲಹೆ ನೀಡಿದ್ದಾನೆ.ಸುವಾರ್ತಾಸೇವಕನು ಶಾರೀರಿಕವಾಗಿ ರೋಗ ಗುಣಪಡಿಸಬಲ್ಲ ವೈದ್ಯನೂ ಆಗಿದ್ದಲ್ಲಿ,ಅ೦ತವನು ಇತರರಿಗಿಂತ ಹೆಚ್ಚು ಸಮರ್ಥವಾಗಿ ಸೇವೆ ಮಾಡಬಲ್ಲನು. ಸುವಾರ್ತಾಸೇವಕನಾದ ಅವನ ಕೆಲಸವು ಹೆಚ್ಚು ಪರಿಪೂರ್ಣವಾಗಿರುತ್ತದೆ. ದೇವರಸೇವಕರು ಸೇವೆ ಮಾಡಲು ಸಾಧ್ಯವಾಗದಂತ ನಗರಗಳಲ್ಲಿ ತರಬೇತಿ ಪಡೆದ ವೈದ್ಯರುಸೇವೆ ಮಾಡಬಹುದು. ಅಲ್ಲಿ ಜನರಿಗೆ ಆರೋಗ್ಯಕರ ಜೀವನಶೈಲಿ ಹಾಗೂ ಆರೋಗ್ಯಸುಧಾರಣೆಯ ಸಂದೇಶ ತಿಳಿಸಿದಾಗ, ಅದು ಅವರ ಮೇಲೆ ಬಹಳ ಪರಿಣಾಮ ಬೀರುತ್ತದೆ.ಬುದ್ಧಿಶಾಲಿಯಾದ ವೈದ್ಯರು ಸತ್ಯವೇದದ ತತ್ವಗಳನ್ನು ತಿಳಿಸಿ ಹೇಳುವಾಗ, ಅದು ಜನರಮನಸ್ಸಿನಲ್ಲಿ ಹೆಚ್ಚು ಮಹತ್ವವುಳ್ಳ ಪ್ರಭಾವ ಉಂಟುಮಾಡುತ್ತದೆ. ಸುವಾರ್ತಾಸೇವೆ ಹಾಗೂವೈದ್ಯಕೀಯ ಸೇವೆಯನ್ನು ವೈದ್ಯರು ಒಟ್ಟಾಗಿಸಿ ಸೇವೆಮಾಡಿದಾಗ, ಅದು ಬಹು ಸಮರ್ಥವೂಪರಿಣಾಮಕಾರಿಯೂ ಆಗಿರುತ್ತದೆ. ಅವರ ಸೇವೆಯು ಯೋಗ್ಯವಾದ ಜನರ ಮೆಚ್ಚುಗೆಗಳಿಸುತ್ತದೆ. KanCCh 388.4
ನಮ್ಮ ಅಡ್ವೆಂಟಿಸ್ಟ್ ವೈದ್ಯರು ಈ ರೀತಿಯಾಗಿ ಸೇವೆಮಾಡಬೇಕು. ಅವರುಸುವಾರ್ತಾಸೇವಕರಾಗಿ ಹೇಗೆ ಜನರು ಕರ್ತನಾದ ಕ್ರಿಸ್ತಯೇಸುವಿನಿಂದ ಆತ್ಮೀಕವಾಗಿಗುಣಹೊಂದುವುದೆಂದು ಸಲಹೆ ನೀಡಿದಾಗ, ವೈದ್ಯರು ಕರ್ತನ ಸೇವೆಮಾಡುತ್ತಾರೆ.ಪ್ರತಿ ವೈದ್ಯನೂ ರೋಗಿಗಳಿಗೆ ನಂಬಿಕೆಯಿಂದ ಪ್ರಾರ್ಥಿಸುವುದನ್ನು ತಿಳಿದಿರುವುದುಮಾತ್ರವಲ್ಲದೆ, ಸರಿಯಾದ ಚಿಕಿತ್ಸೆಯನ್ನೂ ಕೊಡಬೇಕು. ಅದೇ ಸಮಯದಲ್ಲಿ ದೇವರಸೇವಕನೂ ಆಗಿದ್ದು, ರೋಗಿಗಳಿಗೆ ಮಾನಸಾಂತರ ಉಂಟುಮಾಡಿ ರಕ್ಷಣೆಪಡೆದುಕೊಳ್ಳುವಂತೆ ಬೋಧಿಸಬೇಕು. ಈ ಎರಡೂ ರೀತಿಯ ಸೇವೆಯು ಒಂದಾದಾಗ,ವೈದ್ಯರ ಅನುಭವ ಹೆಚ್ಚಾಗುವುದಲ್ಲದೆ, ಅವರ ಪ್ರಭಾವವೂ ಮಹತ್ತರವಾಗಿವಿಶಾಲಗೊಳ್ಳುತ್ತದೆ. KanCCh 389.1