Go to full page →

ಇತರ ಸಭೆಗಳ ಸಭಾಪಾಲಕರೊಂದಿಗೆ ಸಂಬಂಧ KanCCh 392

ಇತರಸಭೆಗಳಲ್ಲಿ ದೇವರವಾಕ್ಯ ಹೇಳುವಂತ ಅವಕಾಶ ನಮಗೆ ಒದಗಬಹುದು.ಇಂತಹ ಅವಕಾಶಗಳನ್ನು ಉತ್ತಮಗೊಳಿಸುವಾಗ “ಸರ್ಪಗಳಂತೆ ಜಾಣರೂ,ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ” ಎಂಬ ರಕ್ಷಕನ ಮಾತುಗಳನ್ನುನೆನಪಿನಲ್ಲಿಟ್ಟುಕೊಳ್ಳಬೇಕು. ಅಲ್ಲಿ ಯಾವುದೇ ಕಾರಣದಿಂದಲೂ ಶತ್ರುವಿನ ಹಗೆತನವನ್ನುಕೆರಳಿಸುವಂತೆ ಸಭೆಯ ವಿರುದ್ಧವಾಗಿ ಬಹಿರಂಗ ಆಪಾದನೆ ಮಾಡಬಾರದು ಅಥವಾಉಗ್ರವಾಗಿ ಖಂಡಿಸಬಾರದು. ಹಾಗೆ ಮಾಡಿದಲ್ಲಿ, ಸತ್ಯವನ್ನು ಅವರಿಗೆ ತಿಳಿಸುವಂತಉತ್ತಮ ಅವಕಾಶವನ್ನು ಎಂದೆಂದಿಗೂ ಕಳೆದುಕೊಳ್ಳುವಿರಿ. ಸಂದೇಶವು ಸ್ಪಷ್ಟವಾಗಿರಲಿ.ಆದರೆ ವೈಷಮ್ಯ ಉಂಟಾಗುವುದಕ್ಕೆ ಆಸ್ಪದ ಕೊಡಬಾರದು. ಅನೇಕ ಜನರುರಕ್ಷಿಸಲ್ಪಡಬೇಕಾಗಿರುವುದರಿಂದ ಎಲ್ಲಾ ವಿಧವಾದ ಕಠಿಣ ಮಾತುಗಳಿಂದ ದೂರವಾಗಿರಿ.ನೀವು ಭೇಟಿ ಮಾಡುವವರ ಮುಂದೆ ನಿಮ್ಮ ನಡೆ-ನುಡಿಯು ರಕ್ಷಣೆ ತರುವಂತೆವಿವೇಕತನದಿಂದ ಕೂಡಿರಬೇಕು. ನೀವು ಕ್ರಿಸ್ತನನ್ನು ಪ್ರತಿನಿಧಿಸುತ್ತಿದ್ದೀರಿ. ಶಾಂತಿಯಸುವಾರ್ತೆ, ಮನುಷ್ಯರಲ್ಲಿ ಸೌಹಾರ್ದತೆ ಹುಟ್ಟಿಸುವ ರೀತಿಯಲ್ಲಿ ನಿಮ್ಮ ಸಂದೇಶವಿರಬೇಕು.ಕ್ರಿಸ್ತನ ಆತ್ಮನಿಂದ ಪ್ರೇರಿತರಾಗಿ ನಾವು ಆತನ ಸೇವೆಮಾಡುವಾಗ ಬರುವ ಫಲಿತಾಂಶಗಳುಅದ್ಭುತವಾಗಿರುತ್ತವೆ. ನಮ್ಮ ಸೇವೆಯನ್ನು ನೀತಿ, ಕರುಣೆ ಹಾಗೂ ಪ್ರೀತಿಯಿಂದಮುಂದುವರಿಸಿದಾಗ, ನಮಗೆ ಅಗತ್ಯವಿದ್ದಾಗ ದೇವರ ಸಹಾಯ ಒದಗಿಬರುವುದು.ಅಂತಿಮವಾಗಿ ಸತ್ಯವು ಜಯಗಳಿಸುತ್ತದೆ. KanCCh 392.5

ಇತರ ಸಭೆಗಳ ಸಭಾಪಾಲಕರಿಗಾಗಿ ನಾವು ಮಾಡಬೇಕಾದ ಕರ್ತವ್ಯವಿದೆ. ಅವರೂಸಹ ರಕ್ಷಿಸಲ್ಪಡಬೇಕೆಂದು ದೇವರು ಬಯಸುತ್ತಾನೆ. ಅವರೂ ಸಹ ನಮ್ಮಂತೆಯೇ,ನಂಬಿಕೆ ಹಾಗೂ ವಿಧೇಯತೆಯ ಮೂಲಕ ಮಾತ್ರ ನಿತ್ಯಜೀವ ಹೊಂದುತ್ತಾರೆ.ನಿತ್ಯಜೀವವನ್ನು ಅವರು ಪಡೆದುಕೊಳ್ಳುವಂತೆ ಅವರಿಗಾಗಿ ನಾವು ಪ್ರಾಮಾಣಿಕವಾಗಿಸೇವೆಮಾಡಬೇಕು. ಈ ಅಂತ್ಯಕಾಲದಲ್ಲಿ ದೇವರ ವಿಶೇಷ ಕಾರ್ಯದಲ್ಲಿ ಅವರೂ ಸಹಭಾಗವಹಿಸಬೇಕೆಂದು ದೇವರು ಬಯಸುತ್ತಾನೆ. ಅವರು ಯಾಕೆ ಇಂತಹ ಕಾರ್ಯದಲ್ಲಿಭಾಗವಹಿಸಬಾರದು? ಅಡ್ರೆಂಟಿಸ್ಟ್ ಬೋಧಕರು ಇತರ ಸಭೆಗಳ ಬೋಧಕರೊಂದಿಗೆಉತ್ತಮ ಸಂಬಂಧ ಹೊಂದಿರಬೇಕು. ಅವರಿಗಾಗಿಯೂ ಹಾಗೂ ಅವರೊಂದಿಗೆ ಸೇರಿಪ್ರಾರ್ಥಿಸಿರಿ. ಕ್ರಿಸ್ತನು ಅವರಿಗಾಗಿ ಮಧ್ಯಸ್ಥಿಕೆ ವಹಿಸಿಬೇಡಿಕೊಳ್ಳುತ್ತಾನೆ. ಗಂಭೀರವಾದ KanCCh 393.1

ಜವಾಬ್ದಾರಿಯು ಅವರ ಮೇಲಿದೆ. ಕ್ರಿಸ್ತನ ಸಂದೇಶವಾಹಕರಾದ ನಾವು ಮಂದೆಗಳಕುರುಬರಾಗಿರುವ ಇತರ ಸಭೆಗಳ ಸಭಾಪಾಲಕರಿಗೆ ಪ್ರಾಮಾಣಿಕವಾದ, ಕಳಕಳಿಯಆಸಕ್ತಿ ತೋರಿಸಬೇಕು. ಅವರೊಂದಿಗೆ ಸಂಘರ್ಷಕ್ಕಿಳಿಯಬಾರದು. ಬದಲಾಗಿ ಸತ್ಯವೇದವನ್ನುಕೂಲಂಕುಶವಾಗಿ ಅಧ್ಯಯನ ಮಾಡಿ ಸತ್ಯ ತಿಳಿದುಕೊಳ್ಳುವಂತೆ ಪ್ರೇರಿಸಬೇಕು. ಈರೀತಿಯಾಗಿ ಮಾಡಿದಾಗ, ತಪ್ಪು ಬೋಧನೆ ಮಾಡುತ್ತಿರುವ ಇತರ ಸಭೆಗಳ ಅನೇಕಬೋಧಕರು ಅಂತ್ಯಕಾಲದ ಸತ್ಯವನ್ನು ಬೋಧಿಸುವರು. KanCCh 393.2

*****