Go to full page →

ಆಣೆ ಮಾಡಬಾರದು KanCCh 396

ದೇವರ ಮಕ್ಕಳು ಪ್ರಮಾಣ/ ಆಣೆ ಮಾಡುವ ವಿಷಯದಲ್ಲಿ ತಪ್ಪು ಮಾಡುತ್ತಾರೆ.ಸೈತಾನನು ಇದರ ದುರುಪಯೋಗ ಮಾಡಿಕೊಂಡು, ಅವರ ಮನಸ್ಸಿನಲ್ಲಿ ಭಾರಹುಟ್ಟಿಸುತ್ತಾನೆ ಹಾಗೂ ಅವರಿಂದ ದೇವರ ಹಣವನ್ನು ತೆಗೆದುಕೊಳ್ಳುತ್ತಾನೆ. ಆಣೆಯನ್ನುಇಡಬಾರದು. “ಆದರೆ ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ;ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು” ಎಂದು ಕರ್ತನವಾಕ್ಯವು ತಿಳಿಸುತ್ತದೆ(ಮತ್ತಾಯ 5:33-31). ಇದು ಸಾಮಾನ್ಯವಾದ ಮಾತುಕತೆಗೆ ಸಂಬಂಧಿಸಿದ್ದಾಗಿದೆ.ಕೆಲವರು ಉತ್ತೇಕ್ಷೆಯ ಮಾತುಗಳನ್ನಾಡುತ್ತಾರೆ. ಕೆಲವರು ತಮ್ಮ ಪ್ರಾಣದ ಮೇಲೆ, ಮತ್ತೆಕೆಲವರು ತಮ್ಮ ತಲೆಯಮೇಲೆ, ಕೆಲವರು ಭೂಮ್ಯಾಕಾಶಗಳ ಮೇಲೆ ಆಣೆಇಡುತ್ತಾರೆ.ತಾವು ಹೇಳಿದ್ದು ನಿಜವಲ್ಲವಾದರೆ ದೇವರು ಅವರನ್ನು ನಾಶಮಾಡುತ್ತಾನೆಂದು ಇನ್ನೂಕೆಲವರು ನಿರೀಕ್ಷಿಸುತ್ತಾರೆ. ಇಂತಹ ಸಾಧಾರಣವಾದ ಆಣೆ, ಪ್ರಮಾಣಗಳ ವಿರುದ್ಧವಾಗಿಕ್ರಿಸ್ತನು ತನ್ನ ಶಿಷ್ಯರಿಗೆ ಎಚ್ಚರಿಕೆನೀಡಿದನು. KanCCh 396.3

ದೇಶದ ಕಾನೂನು ಕಟ್ಟಳೆಗಳ ಮೇಲೆ ದೇವರು ಇನ್ನೂ ಸಹ ನಿಯಂತ್ರಣ ಹೊಂದಿದ್ದಾನೆ.ಯೇಸುಸ್ವಾಮಿಯು ಮಹಾಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುತ್ತಿರುವಾಗ, ದೇವರಾತ್ಮನುಜನರನ್ನು ಮತ್ತು ಅಧಿಕಾರಿಗಳು, ನಾಯಕರುಗಳನ್ನು ನಿಯಂತ್ರಿಸುತ್ತಾನೆ. ಆದರೆ ಜಗತ್ತಿನಬಹುಪಾಲು ಜನರ ಮೇಲೆ ಸೈತಾನನು ಹಿಡಿತ ಹೊಂದಿದ್ದಾನೆ. ದೇಶದ ಕಾನೂನು,ಕಟ್ಟಳೆಗಳು ಇಲ್ಲದಿದ್ದಲ್ಲಿ ಕ್ರೈಸ್ತರಾದ ನಾವು ಇನ್ನೂ ಹೆಚ್ಚಿನ ಕಷ್ಟಸಂಕಟ ಅನುಭವಿಸುತ್ತಿದ್ದೆವು.ಕ್ರೈಸ್ತರು ನ್ಯಾಯಸಮ್ಮತವಾಗಿ ಅಗತ್ಯಬಿದ್ದಾಗ ಸಾಕ್ಷಿ ಹೇಳುವುದಕ್ಕೆ ಕರೆಯಲ್ಪಟ್ಟಾಗ, ತಾವುಹೇಳುವುದು ಸತ್ಯ, ಸತ್ಯವನ್ನಲ್ಲದೆ ಬೇರೆನೂ ಹೇಳುವುದಿಲ್ಲವೆಂದು ಗಂಭೀರವಾಗಿ ದೇವರಹೆಸರಿನಲ್ಲಿ ಪ್ರಮಾಣಮಾಡಿದರೆ ಅದು ದೇವರವಾಕ್ಯ ಮೀರಿದಂತಾಗುವುದಿಲ್ಲವೆಂದುಶ್ರೀಮತಿ ವೈಟಮ್ಮನವರು ಹೇಳುತ್ತಾರೆ. KanCCh 396.4

ಕ್ರೈಸ್ತರು ದೇವರ ಮುಖಭಾವದ (Countenance) ಬೆಳಕಿನಲ್ಲಿ ಜೀವಿಸುತ್ತಾರೆ.ಕಾನೂನು ಪ್ರಕಾರವಾಗಿ ಪ್ರಾಮುಖ್ಯವಾದ ವಿಷಯಗಳು ನಿರ್ಧರಿಸಲ್ಪಡುವಾಗ, ಕ್ರೈಸ್ತರಿಗಿಂತಬೇರೆ ಯಾರೂ ಸಹ ದೇವರಿಗೆ ಉತ್ತಮವಾಗಿ ಮೊರೆಯಿಡುವುದಿಲ್ಲ. ದೇವರು ಸ್ವತಃತನ್ನಮೇಲೆ ಆಣೆಯಿಡುತ್ತಾನೆಂಬುದನ್ನು ಗಮನಿಸಬೇಕೆಂದು ದೇವದೂತನು ತನಗೆಆಜ್ಞಾಪಿಸಿದನೆಂದು ವೈಟಮ್ಮನವರು ಹೇಳುತ್ತಾರೆ. KanCCh 397.1