ಸಬ್ಬತ್ತಿನ ಪ್ರಶ್ನೆಯು ಲೋಕದವರೆಲ್ಲರೂ ಭಾಗವಹಿಸುವ ಕೊನೆಯ ಮಹಾಹೋರಾಟದಲ್ಲಿ ಚರ್ಚೆಗೊಳಪಟ್ಟಿರುವ ವಿಷಯವಾಗಿರುತ್ತದೆ. ಪರಲೋಕದ ನಿಯಮಗಳ ಸಿದ್ಧಾಂತಗಳಿಗಿಂತಲೂ, ಸೈತಾನನತತ್ವಗಳಿಗೆ ಜನರು ಹೆಚ್ಚು ಗೌರವ ಕೊಡುತ್ತಿದ್ದಾರೆ. ಸೈತಾನನ ತನ್ನ ಅಧಿಕಾರದ ಗುರುತಾಗಿ ಉನ್ನತ ಸ್ಥಾನಕ್ಕೇರಿಸಿರುವ ವಾರದ ಮೊದಲನೆದಿನವಾದ ಭಾನುವಾರವೆಂಬ ಸುಳ್ಳಾದ ಸಬ್ಬತ್‍ದಿನವನ್ನು ಜನರು ಅಂಗೀಕರಿಸಿದ್ದಾರೆ. ಆದರೆ ಸಬ್ಬತ್ತಿನಿಂದ ಸ್ಥಾಪಿತಗೊಂಡ ಪ್ರತಿಯೊಂದು ಪದ್ಧತಿಯೂ, ಅದರ ನಿರ್ಮಾತೃವೂ, ಮೂಲಪುರುಷನೂ ಆದ ದೇವರ ಹೆಸರನ್ನು ಹೊಂದಿಕೊಂಡಿವೆ. ಇವು ಎಂದೆಂದಿಗೂ ಅಳಿಸಲಾಗದ ಗುರುತಾಗಿದ್ದು, ಪ್ರತಿಯೊಂದರ ಅಧಿಕಾರವನ್ನು ತೋರಿಸುತ್ತದೆ. ಇದನ್ನು ಜನರಿಗೆ ಮನವರಿಕೆ ಮಾಡಿಸುವುದು ನಮ್ಮ ಕರ್ತವ್ಯವಾಗಿದೆ. ಜನರು ದೇವರ ರಾಜ್ಯದ ಮುದ್ರೆ ಹೊಂದಿದ್ದಾರೆಯೇ ಅಥವಾ ಸೈತಾನನರಾಜ್ಯದ ಗುರುತು ಹೊಂದಿದ್ದಾರೆಯೇ ಎಂಬುದು ಪ್ರಾಮುಖ್ಯವಾದ ಪರಿಣಾಮ ಉಂಟು ಮಾಡುತ್ತದೆಂದು ಅವರಿಗೆ ತೋರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅವರು ಯಾವಮುದ್ರೆ ಅಥವಾ ಗುರುತು ಹೊಂದಿರುತ್ತಾರೋ, ಆ ರಾಜ್ಯದ ಪ್ರಜೆಯಾಗಿದ್ದೇವೆಂದು ಸ್ವತಃ ಅವರೇ ತಿಳಿದುಕೊಳ್ಳುತ್ತಾರೆ. ಕೊನೆಕಾಲದಲ್ಲಿ ದಬ್ಬಾಳಿಕೆಯಿಂದ ತುಳಿತಕ್ಕೊಳಗಾಗಿರುವ ದೇವರ ಸಬ್ಬತ್ತನ್ನು ಉನ್ನತ ಸ್ಥಾನಕ್ಕೇರಿಸಬೇಕೆಂದು ದೇವರು ನಮ್ಮನ್ನು ಆರಿಸಿಕೊಂಡಿದ್ದಾನೆ. KanCCh 426.4
ಶತಶತಮಾನಗಳಿಂದಲೂ ದೇವರಿಗೆ ನಂಬಿಗಸ್ತರಾದವರ ವಿರುದ್ಧವಾಗಿ ಪಿತೂರಿ ಹೂಡಿದ್ದ ಅದೇ ದರ್ಪದ, ಉದ್ಧಟತನದ ಸಭೆಯು ಇಂದಿಗೂ ಸಹ ದೇವರಿಗೆ ಭಯಪಟ್ಟು ಆತನ ಆಜ್ಞೆಗಳಿಗೆ ವಿಧೇಯರಾಗಿರುವವರನ್ನು ನಾಶಮಾಡಬೇಕೆಂದು ಪ್ರಯತ್ನಿಸುತ್ತಿದೆ. ಜನಪ್ರಿಯ ಪದ್ಧತಿ ಹಾಗೂ ಮಾನವ ಸಂಪ್ರದಾಯಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವ, ಆದರೆ ಆತ್ಮಸಾಕ್ಷಿಯಿಂದಲೂ, ನಿಷ್ಠೆಯಿಂದಲೂ ಏಳನೇ ದಿನದ ಸಬ್ಬತ್ತನ್ನು ಅನುಸರಿಸುವ ದೀನರಾದ ಅಲ್ಪಸಂಖ್ಯಾತರ ವಿರುದ್ಧವಾಗಿ ಇತರರು ರೋಷಗೊಳ್ಳುವಂತೆ ಸೈತಾನನು ಪ್ರಚೋದಿಸುವನು. ಅಧಿಕಾರದಲ್ಲಿಯೂ ಹಾಗೂ ಗೌರವಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಕಾನೂನು ಉಲ್ಲಂಘನೆ ಮಾಡುವ ದುಷ್ಟರೊಂದಿಗೆ ಸೇರಿ ದೇವರ ಜನರಿಗೆ ವಿರುದ್ಧವಾಗಿ ಕುತಂತ್ರ ಮಾಡುವರು. ಐಶ್ವರ್ಯವಂತರೂ, ಮೇಧಾವಿಗಳೂ ಹಾಗೂ ಉನ್ನತಶಿಕ್ಷಣ ಹೊಂದಿರುವ ಇತರರು ದೇವರ ಮಕ್ಕಳನ್ನು ಬಹಳ ತಿರಸ್ಕಾರದಿಂದ ಕಾಣುವರು. ಕಿರುಕುಳನೀಡುವ ಆಡಳಿತಗಾರರು, ಸರ್ಕಾರಿ ಅಧಿಕಾರಿಗಳು, ಕ್ರೈಸ್ತ ಬೋಧಕರು ಹಾಗೂ ಕ್ರೈಸ್ತಸಭೆಯ ಇತರ ಸದಸ್ಯರು ಏಳನೇದಿನದ ಸಬ್ಬತ್ತನ್ನು ಕೈಕೊಂಡು ನಡೆಯುವವರ ವಿರುದ್ಧವಾಗಿ ಪಿತೂರಿ ನಡೆಸುವರು. ಭಾಷಣಗಳು ಮತ್ತು ಲೇಖನಗಳು ಹಾಗೂ ಅಪಹಾಸ್ಯ, ಬೆದರಿಕೆ, ಬಡಾಯಿ ಮಾತುಗಳ ಮೂಲಕ ವಿಶ್ವಾಸಿಗಳ ನಂಬಿಕೆಯನ್ನು ಬುಡಮೇಲು ಮಾಡಲು ಇವರು ಪ್ರಯತ್ನಿಸುವರು. ಸುಳ್ಳು ಆಪಾದನೆಗಳು ಮತ್ತು ಆವೇಶದ ನಿವೇದನೆಯ (Appeal) ಮೂಲಕ ಜನರ ಭಾವೋದ್ವೇಗಗಳನ್ನು ಪ್ರಚೋದಿಸುವರು. ಏಳನೇದಿನದ ಸಬ್ಬತ್ತನ್ನು ಸಮರ್ಥಿಸುವವರ ವಿರುದ್ಧವಾಗಿ ಸತ್ಯವೇದದ ವಾಕ್ಯಗಳ ಆಧಾರಕೊಡದೆ, ದಬ್ಬಾಳಿಕೆಯ ಮಾರ್ಗ ಅನುಸರಿಸುವರು. ಜನಪ್ರಿಯತೆ ಮತ್ತು ಬೆಂಬಲ ಗಳಿಸಿಕೊಳ್ಳುವ ಸಲುವಾಗಿ ರಾಜ್ಯಸಭೆ, ಲೋಕಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರು. ಕಡ್ಡಾಯ ಭಾನುವಾರಾಚರಣೆಯ ಬೇಡಿಕೆಗಳಿಗೆ ತಮ್ಮ ಬೆಂಬಲ ನೀಡುವರು. ದೇವರಲ್ಲಿ ಭಯಭಕ್ತಿಯುಳ್ಳವರು ದೇವರಾಜ್ಞೆಗಳನ್ನು ಮೀರಿ ನಡೆಯುವ ಸಂಸ್ಥೆ/ ಸಭೆಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಯುದ್ಧಭೂಮಿಯಲ್ಲಿ ಸತ್ಯ ಮತ್ತು ಸುಳ್ಳಿನ ನಡುವಣ ಕೊನೆಯ ಮಹಾಹೋರಾಟ ನಡೆಯುವುದು. ದೇವರು ನೇಮಿಸಿದ ಸಬ್ಬತ್ತು ಏಳನೇದಿನವೋ ಅಥವಾ ಮನುಷ್ಯರಿಂದ ನೇಮಿಸಲ್ಪಟ್ಟ ವಾರದ ಮೊದಲನೆದಿನವು ಪರಿಶುದ್ಧವೋ ಎಂಬ ವಿಷಯದಲ್ಲಿ ದೇವರಮಕ್ಕಳಿಗೆ ಯಾವುದೇ ಸಂಶಯವಿರಬಾರದು. ಮೊರ್ದೆಕೈ ಕಾಲದಲ್ಲಿ ನಡೆದಂತೆ ಇಂದೂ ಸಹ ದೇವರು ತನ್ನ ಸತ್ಯ ಹಾಗೂ ತನ್ನ ಜನರ ಮೇಲಿರುವ ದೋಷವನ್ನು ಹಾಗೂ ಸಂಶಯವನ್ನು ತೊಲಗಿಸಿ ಅವರನ್ನು ನಿರ್ದೋಷಿಗಳು ಮತ್ತು ನ್ಯಾಯವಂತರೆಂದು ಸಮರ್ಥಿಸುವನು. KanCCh 427.1