Go to full page →

ವೈಯಕ್ತಿಕ ಭಕ್ತಿಯ ಪ್ರಾಮುಖ್ಯತೆ KanCCh 443

ಇಂದುನಾವು ವೈಯಕ್ತಿಕಪ್ರಾರ್ಥನೆ ಹಾಗೂ ಸತ್ಯವೇದಅಧ್ಯಯನ ನಿರ್ಲಕ್ಷಿಸಿದಲ್ಲಿ, ಮುಂದಿನ ದಿನಗಳಲ್ಲಿ ಈ ಅಭ್ಯಾಸಗಳನ್ನು ಬಿಡುವುದು ಅಷ್ಟೊಂದು ಕಷ್ಟವೆನಿಸುವುದಿಲ್ಲ. ಹೃದಯದಲ್ಲಿ ಬಿತ್ತಲ್ಪಟ್ಟ ಒಂದು ಸಂಶಯದ ಬೀಜದಿಂದ ಅನೇಕ ಲೋಪದೋಷಗಳುಂಟಾಗುತ್ತವೆ. ಇದಕ್ಕೆ ಬದಲಾಗಿ ಸತ್ಯದ ಬೆಳಕನ್ನು ಎಚ್ಚರಿಕೆಯಿಂದ ಮನವರಿಕೆ ಮಾಡಿಕೊಂಡಾಗ, ಅದರಿಂದ ಇನ್ನೂಹೆಚ್ಚಾದ ಬೆಳಕುಕೊಡಲ್ಪಡುತ್ತದೆ. ನಾವು ಮೊದಲನೆ ಸಾರಿ ಶೋಧನೆಗಳನ್ನೂ ಸಹ ಇನ್ನೂ ದೃಢವಾಗಿಎದುರಿಸುವ ಬಲದೊರೆಯುತ್ತದೆ. ಸ್ವಾರ್ಥದಮೇಲೆ ಹೊಂದುವ ಪ್ರತಿಯೊಂದುಜಯವು ಇನ್ನೂಉನ್ನತವಾದ ಜಯಗಳಿಸಲು ಹಾದಿಯನ್ನು ಸರಳಗೊಳಿಸುತ್ತದೆ. ಪ್ರತಿಯೊಂದು ಜಯವೂ ಸಹ ನಿತ್ಯಜೀವಕ್ಕೆ ಬಿತ್ತಲ್ಪಟ್ಟ ಬೀಜವಾಗಿದೆ. KanCCh 443.3

ಕುಗ್ಗಿದ ಹೃದಯದಿಂದ ದೇವರ ಬಳಿಗೆ ಬಂದು ನಂಬಿಕೆಯಿಂದ ಬೇಡಿಕೊಳ್ಳುವ ದೇವರಮಕ್ಕಳ ಪ್ರಾರ್ಥನೆಗೆ ಉತ್ತರದೊರೆಯುತ್ತದೆ. ನಿಮ್ಮ ಪ್ರಾರ್ಥನೆಗೆ ತಕ್ಷಣದಲ್ಲಿ ಉತ್ತರ ದೊರೆಯದಿದ್ದಲ್ಲಿ, ದೇವರ ವಾಗ್ದಾನಗಳಲ್ಲಿ ನೀವು ನಂಬಿಕೆ ಕಳೆದುಕೊಳ್ಳಬಾರದು. ದೇವರಲ್ಲಿ ಭರವಸವಿಡುವುದಕ್ಕೆ ಹೆದರಬಾರದು. “...ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವುದು....” ಎಂಬ ಖಂಡಿತವಾದ ದೇವರ ವಾಗ್ದಾನದಲ್ಲಿ ಭರವಸವಿಡಿರಿ (ಯೋಹಾನ 16:24). KanCCh 444.1

ಯಥಾರ್ಥವಾಗಿ ನಡೆಯುವ ತನ್ನಭಕ್ತರಿಗೆ ದೇವರು ಎಲ್ಲಾರೀತಿಯ ಒಳ್ಳೆಯದನ್ನು ಕೊಡುತ್ತಾನೆ. ಆತನು ಎಂದಿಗೂ ತಪ್ಪುಮಾಡುವವನಲ್ಲ. ಮನುಷ್ಯರಾದ ನಾವು ತಪ್ಪುಮಾಡುತ್ತೇವೆ. ನಾವು ಪ್ರಾಮಾಣಿಕವಾಗಿ ದೇವರಲ್ಲಿ ನಮ್ಮ ಬೇಡಿಕೆಗಳನ್ನು ಇಟ್ಟರೂ, ಎಲ್ಲಾ ಸಮಯದಲ್ಲಿಯೂ ನಮಗೆ ಉತ್ತಮವಾದದ್ದನ್ನು ಬೇಡಿಕೊಳ್ಳುವುದಿಲ್ಲ ಅಥವಾ ನಾವು ಕೇಳಿಕೊಳ್ಳುವುದು ದೇವರಿಗೆ ಮಹಿಮೆ ತರುವುದಿಲ್ಲ. ಈ ರೀತಿ ಇರುವುದರಿಂದ ಮಹಾಜ್ಞಾನಿಯಾದ ಪರಲೋಕದ ನಮ್ಮ ಒಳ್ಳೆಯತಂದೆಯು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ ಹಾಗೂ ಕೆಲವುವೇಳೆ ತಕ್ಷಣದಲ್ಲಿಯೇ ಉತ್ತರಿಸುತ್ತಾನೆ. ಆದರೆ ನಮಗೆ ಅತ್ಯುತ್ತಮವಾದದ್ದನ್ನು ಹಾಗೂ ತನ್ನ ಮಹಿಮೆಗಾಗಿರುವುದನ್ನು ಮಾತ್ರ ಕೊಡುತ್ತಾನೆ.ದೇವರು ನಮಗೆ ಆಶೀರ್ವಾದ ಕೊಡುತ್ತಾನೆ. ಆತನ ಆಲೋಚನೆಗಳನ್ನು ನಾವು ಅರಿತುಕೊಂಡಾಗ, ನಮಗೆ ಅತ್ಯುತ್ತಮವಾದದ್ದು ಯಾವುದೆಂದು ದೇವರಿಗೆ ತಿಳಿದಿದೆ ಹಾಗೂ ನಮ್ಮ ಪ್ರಾರ್ಥನೆಗೆ ಉತ್ತರದೊರೆತಿದೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳುತ್ತೇವೆ. ನಮಗೆ ಹಾನಿಕರವಾದ ಯಾವುದನ್ನೂ ದೇವರು ಕೊಡುವುದಿಲ್ಲ. ಬದಲಾಗಿ ನಾವು ಬೇಡಿಕೊಂಡದ್ದು ನಮಗೆ ಒಳ್ಳೆಯದಾಗಿರುವುದಿಲ್ಲ, ಹಾಗೂ ಹಾನಿಕರವಾಗಿರುವುದರಿಂದ, ಆತನು ತನ್ನ ಚಿತ್ತಕ್ಕೆ ತಕ್ಕಂತೆ ನಮಗೆ ಹಿತವಾದ ಆಶೀರ್ವಾದಗಳನ್ನು ಕೊಡುತ್ತಾನೆ. KanCCh 444.2

ನಮ್ಮ ಪ್ರಾರ್ಥನೆಗೆ ತಕ್ಷಣದಲ್ಲಿ ಉತ್ತರದೊರೆಯದಿದ್ದರೂ, ದೇವರಲ್ಲಿ ನಮ್ಮ ನಂಬಿಕೆಯು ದೃಢವಾಗಿರಬೇಕು. ಅಪನಂಬಿಕೆ ಬಂದಲ್ಲಿ, ಅದು ನಮ್ಮನ್ನು ಆತನಿಂದ ದೂರಮಾಡುತ್ತದೆ. ಒಂದುವೇಳೆ ನಮ್ಮ ನಂಬಿಕೆಯು ಚಂಚಲವಾಗಿದ್ದಲ್ಲಿ, ದೇವರಿಂದ ನಮಗೆ ಯಾವ ಆಶೀರ್ವಾದವೂ ದೊರೆಯುವುದಿಲ್ಲ. ದೇವರಮೇಲೆ ನಮ್ಮ ಭರವಸವು ಬಲವಾಗಿಯೂ, ದೃಢವಾಗಿಯೂ ಇರಬೇಕು. ನಮಗೆ ಅತ್ಯಗತ್ಯವಾಗಿರುವಾಗ ಆತನ ಆಶೀರ್ವಾದವು ಮಳೆಯಂತೆ ಸುರಿಸಲ್ಪಡುವುದು. KanCCh 444.3