Go to full page →

ಔಷಧಗಳಸೇವನೆ KanCCh 105

ವಿಷಯುಕ್ತವಾದ ಔಷಧಗಳ ಸೇವನೆ ಬಹಳ ಗಂಭೀರವಾದ ಮತ್ತು ಹೆಚ್ಚಿನ ರೋಗಗಳಿಗೆ ಕಾರಣವಾಗಿದೆ. ರೋಗ ಬಂದಾಗ ಅನೇಕರು ಅದಕ್ಕೆ ಮೂಲ ಕಾರಣವೇನೆಂದು ತಿಳಿದುಕೊಳ್ಳುವ ಕಷ್ಟ ತೆಗೆದುಕೊಳ್ಳುವುದಿಲ್ಲ. ತತ್‍ಕ್ಷಣದಲ್ಲಿ ಈ ತೊಂದರೆಯ ನೋವು ಹಾಗೂ ಕಿರಿಕಿರಿಯನ್ನು ಹೋಗಲಾಡಿಸುವುದು ಅವರ ಮುಖ್ಯ ಉದ್ದೇಶವಾಗಿರುತ್ತದೆ. KanCCh 105.2

ವಿಷಕಾರಕ ಔಷಧಗಳ ಸೇವನೆಯಿಂದ ಅನೇಕರು ವಾಸಿಯಾಗದ ಕಾಯಿಲೆಗಳನ್ನು ತಂದುಕೊಳ್ಳುತ್ತಾರೆ. ನೈಸರ್ಗಿಕವಾಗಿ ಗುಣಪಡಿಸುವ ವಿಧಾನಗಳನ್ನು ಉಪಯೋಗಿಸುವುದರಿಂದ ಮರಣ ಹೊಂದಿದ ಎಷ್ಟೋ ಜನರು ಬದುಕಿರಬಹುದಾಗಿತ್ತು. ನೋವುನಿವಾರಕಗಳು, ರೋಗ ವಾಸಿ ಮಾಡುವ ಔಷಧಗಳಲ್ಲಿರುವ ವಿಷವು ಶರೀರವನ್ನು ನಾಶ ಮಾಡುತ್ತದೆ. ಸರ್ವರೋಗ ಪರಿಹಾರವೆಂದು ಹೇಳಿಕೊಳ್ಳುವ ಹಾಗೂ ಹಕ್ಕುಸ್ವಾಮ್ಯ ಪಡೆದಿರುವ ಜನಪ್ರಿಯವಾದ ಅನೇಕ ಔಷಧಗಳು ಮತ್ತು ವೈದ್ಯರು ಕೊಡುವ ಕೆಲವು ಔಷಧಗಳು ಮದ್ಯಪಾನ, ಮಾದಕ ಪದಾರ್ಥ ಸೇವನೆ ಬೆಳೆಸಿಕೊಳ್ಳಲು ಪ್ರಚೋದನೆ ನೀಡುತ್ತವೆ. ಇದು ಸಮಾಜಕ್ಕೆ ಒಂದು ಭಯಂಕರ ಶಾಪವಾಗಿದೆ. KanCCh 105.3

ವೈದ್ಯರು ಸಾಮಾನ್ಯವಾಗಿ ಕೊಡುವ ಔಷಧವು ಒಂದು ಶಾಪವಾಗಿದೆ. ಅವುಗಳ ಬಳಕೆಯನ್ನು ಕಡಿಮೆ ಮಾಡುತ್ತಾ ಹೋಗಿ, ಅವುಗಳ ಬದಲಾಗಿ ಆರೋಗ್ಯಕರವಾದ ಚಟುವಟಿಕೆಗಳನ್ನು ಬೆಳೆಸಿಕೊಳ್ಳಿರಿ. ಆಗ ನಿಸರ್ಗವು ದೇವರ ವೈದ್ಯರಾದ ಶುದ್ಧವಾದ ಗಾಳಿ, ನೀರು, ವ್ಯಾಯಾಮ, ಸ್ಪಷ್ಟವಾದ ಮನಸ್ಸಾಕ್ಷಿ ಇವುಗಳಿಗೆ ಪ್ರತಿಕ್ರಿಯೆ ತೋರಿಸುವುದು. ಕಾಫಿ, ಚಹಾ, ಕುಡಿಯುವವರು ಮತ್ತು ಮಾಂಸಾಹಾರಿಗಳು ಔಷಧ ಬೇಕೆಂದು ಬಯಸುವರು. ಆದರೆ ಆರೋಗ್ಯದ ನಿಯಮಗಳನ್ನು ಅನುಸರಿಸುವವರು ಯಾವುದೇ ಔಷಧ ಸೇವನೆಯೂ ಇಲ್ಲದೆ ಗುಣಹೊಂದಬಹುದು. ಔಷಧಗಳನ್ನು ಬಹಳ ಅಪರೂಪವಾಗಿ ಉಪಯೋಗಿಸಬೇಕು. KanCCh 105.4