Go to full page →

ಸರಿಯಾದನಿರ್ಧಾರತೆಗೆದುಕೊಳ್ಳಲುಪ್ರಾರ್ಥನೆ ಹಾಗೂಸತ್ಯವೇದಅಧ್ಯಯನಅಗತ್ಯ KanCCh 121

ಮದುವೆಯು ದೇವರೇ ಸ್ಥಾಪಿಸಿದ ಒಂದು ಪವಿತ್ರ ಸಂಸ್ಕಾರವಾಗಿದೆ. ಆದುದರಿಂದ ಯಾರೂ ಸಹ ಸ್ವಾರ್ಥ ಮನೋಭಾವದಿಂದ ಮದುವೆಯಾಗಬಾರದು. ಮದುವೆಯಾಗಬೇಕೆಂದು ಯೋಚಿಸುತ್ತಿರುವವರು ಅದರ ಪ್ರಾಮುಖ್ಯತೆಯನ್ನು ಗಂಭೀರವಾಗಿ, ಪ್ರಾರ್ಥನಾಪೂರ್ವಕವಾಗಿಯೂ ಪರಿಗಣಿಸಬೇಕು ಹಾಗೂ ತಾವು ಅನುಸರಿಸುತ್ತಿರುವ ಮಾರ್ಗವು ದೇವರಚಿತ್ತದೊಂದಿಗೆ ಸಾಮರಸ್ಯವಿದೆಯೇ ಎಂದು ತಿಳಿದುಕೊಳ್ಳಲು ದೈವೀಕ ಸಲಹೆಗಾಗಿ ಪ್ರಾರ್ಥಿಸಬೇಕು. ಮದುವೆಯ ವಿಷಯದಲ್ಲಿ ದೇವರ ವಾಕ್ಯದಲ್ಲಿ ಕೊಡಲಾಗಿರುವ ಸಲಹೆಗಳನ್ನು ಎಚ್ಚರಿಕೆಯಿಂದ ಅನುಸರಿಸಬೇಕು. ಸತ್ಯವೇದದಲ್ಲಿ ನೀಡಲಾಗಿರುವ ಸಲಹೆಗಳು ಹಾಗೂ ಮನಃಪೂರ್ವಕವಾದ ಬಯಕೆಗೆ ಅನುಗುಣವಾಗಿ ನಡೆಯಲ್ಪಡುವ ಮದುವೆಯು ಪರಲೋಕದಲ್ಲಿ ಸಂತೋಷ ತರುತ್ತದೆ. KanCCh 121.3

ಮದುವೆ ವಿಷಯದಲ್ಲಿ ಸ್ಥಿಮಿತವೂ, ಶಾಂತವೂ ಆದ ವಿವೇಚನಾ ಶಕ್ತಿಯಿಂದಲೂ ಮತ್ತು ಭಾವಾವೇಶ ರಹಿತವಾಗಿಯೂ ನಿರ್ಣಯ ತೆಗೆದುಕೊಳ್ಳಬೇಕು. ಮದುವೆಯಲ್ಲಿ ಒಂದಾಗಲಿಕ್ಕೆ ಮೊದಲು ಸತ್ಯವೇದದ ಸಲಹೆ, ಬುದ್ಧಿವಾದಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಆದರೆ ಇಂದಿನ ಯುವಜನರು ಸತ್ಯವೇದದ ಮಾರ್ಗದರ್ಶನ ಬಿಟ್ಟು ಭಾವನೆಗಳಿಗೆ ಹಾಗೂ ಪ್ರೇಮ ಜ್ವರದಿಂದ ಪೀಡಿತರಾಗಿ ಭಾವನಾತ್ಮಕ ವಿಷಯಗಳಿಗೆ ಮಹತ್ವ ಕೊಡುತ್ತಾರೆ. ಇದರಿಂದ ಅಂತವರ ದಾಂಪತ್ಯ ಜೀವನವು ಹಾಳಾಗುವ ಸಂಭವ ಹೆಚ್ಚು. ಮದುವೆಯ ವಿಷಯದಲ್ಲಿ ಯೌವನಸ್ಥರು ಬುದ್ಧಿ ಕಡಿಮೆ ಉಪಯೋಗಿಸುತ್ತಾರೆ ಮತ್ತು ವಿವೇಕದಿಂದ ನಿರ್ಧಾರ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಮದುವೆಯ ಪ್ರಶ್ನೆಯು ಅವರ ಮೇಲೆ ಮರಳುಗೊಳಿಸುವ ಸಾಮರ್ಥ್ಯ ಹೊಂದಿದೆ. ಅವರು ತಮ್ಮನ್ನು ದೇವರಿಗೆ ಒಪ್ಪಿಸಿಕೊಡುವುದಿಲ್ಲ. ಅವರಲ್ಲಿ ಪರಿಜ್ಞಾನ ಇರುವುದಿಲ್ಲ, ತಮ್ಮ ಯೋಜನೆಯು ಯಾರಿಗಾದರೂ ತಿಳಿದುಬರಬಹುದೆಂಬ ಕಾರಣದಿಂದ ಈ ವಿಷಯವನ್ನು ಗುಟ್ಟಾಗಿಡುತ್ತಾರೆ. KanCCh 121.4

ಮದುವೆಯ ವಿಷಯದಲ್ಲಿ ಅನೇಕ ಯುವಕ/ಯುವತಿಯರು ಅಪಾಯಕರವಾದ ಬಿರುಗಾಳಿಯಲ್ಲಿ ಸಿಕ್ಕಿದ್ದಾರೆ. ಅವರಿಗೆ ನಿಪುಣನಾದ ನಾವಿಕನ ಅಗತ್ಯವಿದೆ. ಆದರೆ ಅವರು ಅಗತ್ಯವಾದ ಸಹಾಯವನ್ನು ಅಪಹಾಸ್ಯ ಮಾಡುತ್ತಾರೆ. ನಾವಿಕನಿಲ್ಲದೆ ಈ ಹಡಗು ಬಂಡೆಗೆ ಅಪ್ಪಳಿಸಿ ಒಡೆದು ಹೋಗಬಹುದು, ಇದರಿಂದ ತಮ್ಮ ನಂಬಿಕೆ ಮತ್ತು ಸಂತೋಷ ಹಾಳಾಗುತ್ತದೆಂಬ ಅರಿವಿಲ್ಲದೆ, ಮದುವೆಯ ವಿಷಯದಲ್ಲಿ ಸ್ವತಂತ್ರವಾಗಿ ನಿರ್ಣಯಿಸುವುದಕ್ಕೆ ತಾವು ಸಮರ್ಥರಾಗಿದ್ದೇವೆಂಬ ಭಾವನೆ ಅವರಲ್ಲಿರುತ್ತದೆ. ಸತ್ಯವೇದ ಬಗ್ಗೆ ಅವರು ಬಹಳಷ್ಟು ತಿಳಿದಿರಬೇಕು. ಇಲ್ಲದಿದ್ದಲ್ಲಿ ಅವರು ಗಂಭೀರ ತಪ್ಪುಗಳನ್ನು ಮಾಡುವವರಾಗಿದ್ದು, ವರ್ತಮಾನದ ಜೀವನ ಮಾತ್ರವಲ್ಲ, ಭವಿಷ್ಯತ್ತಿನ ಜೀವನದಲ್ಲಿಯೂ ತಮ್ಮ ಹಾಗೂ ಇತರರ ಸಂತೋಷವನ್ನು ಹಾಳು ಮಾಡುತ್ತಾರೆ. KanCCh 122.1

ಮದುವೆಗೆ ಮೊದಲು ಯುವಕ/ ಯುವತಿಯರು ದಿನಕ್ಕೆ ಎರಡು ಬಾರಿ ಪ್ರಾರ್ಥಿಸುತ್ತಿದ್ದಲ್ಲಿ, ಮದುವೆಗೆ ಚಿಂತಿಸುತ್ತಿರುವಾಗ ದಿನಕ್ಕೆ ನಾಲ್ಕು ಬಾರಿ ಪ್ರಾರ್ಥಿಸಬೇಕು. ಮದುವೆಯು ಈ ಲೋಕದಲ್ಲಿ ಮಾತ್ರವಲ್ಲ. ಮುಂದಿನ ಲೋಕದ ಜೀವಿತದಲ್ಲಿಯೂ ಸಹ ನಿಮ್ಮ ಮೇಲೆ ಪ್ರಭಾವ ಹಾಗೂ ಪರಿಣಾಮ ಬೀರುತ್ತದೆ. ಈಗಿನ ಕಾಲದ ಹೆಚ್ಚಿನ ಮದುವೆಗಳು ಹಾಗೂ ಅವುಗಳು ನಡೆಯುತ್ತಿರುವ ವಿಧವನ್ನು ನೋಡುವಾಗ, ಇದು ಕೊನೆಯ ಕಾಲದ ಸೂಚನೆಗಳಲ್ಲಿ ಒಂದೆಂದು ಕಂಡುಬರುತ್ತದೆ. ಯುವಕ, ಯುವತಿಯರು ಎಷ್ಟೊಂದು ಹಠಮಾರಿಗಳಾಗಿದ್ದಾರೆಂದರೆ, ದೇವರ ವಿಷಯವನ್ನು ಮರೆತಿದ್ದಾರೆ. ಮದುವೆಯೆಂಬ ಪವಿತ್ರವೂ, ಗಂಭೀರವೂ ಆದ ಪ್ರಮುಖ ಸಂಸ್ಕಾರದಲ್ಲಿ ಧರ್ಮವನ್ನು ನಿರ್ಲಕ್ಷಿಸಲಾಗಿದೆ. KanCCh 122.2