Go to full page →

ಅಧ್ಯಾಯ-20 — ಸಂತೋಷವುಳ್ಳ ಹಾಗೂ ಯಶಸ್ವಿಯಾದ ಪಾಲುದಾರಿಕೆ KanCCh 142

ಮದುವೆಯಾಗುವ ಪತಿಪತ್ನಿಯರ ನಡುವೆಪ ರಿಪೂರ್ಣವಾದ ಪ್ರೀತಿ ಹಾಗೂಹೊಂದಾಣಿಕೆ ಇರಬೇಕೆಂದು ದೇವರು ಸಂಕಲ್ಪಿಸಿದ್ದಾನೆ. ವಧೂವರರು ಪರಲೋಕದ ದೇವದೂತರ ಮುಂದೆ ದೇವರು ಸಂಕಲ್ಪಿಸಿದಂತೆ ಪರಸ್ಪರ ಪ್ರೀತಿಸುತ್ತೇವೆಂದು ಪ್ರಮಾಣ ಮಾಡಲಿ. ಹೆಂಡತಿಯು ಗಂಡನಿಗೆ ಭಯಭಕ್ತಿಯಿಂದ ಗೌರವಾದರ ನೀಡಬೇಕು ಹಾಗೂ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಿ ಸಲಹಬೇಕು. ಇವರು ತಮ್ಮ ನೂತನ ವೈವಾಹಿಕಜೀವನ ಆರಂಭಿಸುವಾಗ ತಮ್ಮನ್ನು ದೇವರಿಗೆ ಪುನ ರ್ಪ್ರತಿಷ್ಠೆಗೊಳಿಸಬೇಕು. KanCCh 142.1

ಎಷ್ಟೇ ಎಚ್ಚರಿಕೆಯಿಂದಲೂ ವಿವೇಕತನದಿಂದಲೂ ಮದುವೆಯಾಗಿದ್ದರೂ, ಆ ಸಂಸ್ಕಾರವು ನಡೆಯುವ ಸಮಯದಲ್ಲಿ ಕೆಲವು ದಂಪತಿಗಳು ಮಾತ್ರ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಇವರಿಬ್ಬರೂ ಮದುವೆಯ ಬಂಧನದಲ್ಲಿ ಅನೇಕ ವರ್ಷಗಳ ನಂತರ ಸಂಪೂರ್ಣವಾಗಿ ಒಂದಾಗುತ್ತಾರೆ. KanCCh 142.2

ಹೊಸದಾಗಿ ಮದುವೆಯಾದವರಿಗೆ ನಿಜ ಜೀವನದ ಜಂಜಾಟ, ಗೊಂದಲ ಗೊಳಿಸುವ ಸಮಸ್ಯೆಗಳು ಎದುರಾದಾಗ, ಮದುವೆಯ ಬಗ್ಗೆ ಅವರು ಕಲ್ಪಿಸಿಕೊಂಡಿದ್ದ ಪ್ರೇಮ, ಪ್ರಣಯ ಪ್ರಸಂಗಗಳು ಶೀಘ್ರವಾಗಿ ಮಾಯವಾಗುತ್ತವೆ. ಈಗ ಗಂಡಹೆಂಡತಿಯರು ಪರಸ್ಪರ ಗುಣಸ್ವಭಾವಗಳನ್ನು ಅರಿಯುವರು. ಇದು ಅವರ ಅನುಭವದ ಅತ್ಯಂತ ನಿರ್ಧಾರಕವಾದ ಸಮಯವಾಗಿದೆ. ಮುಂದಿನ ಅವರ ಸಂಪೂರ್ಣ ಜೀವನದ ಸಂತೋಷ ಮತ್ತು ಉಪಯುಕ್ತತೆಯು ಈಗ ಅವರು ತೆಗೆದುಕೊಳ್ಳುವ ಸರಿಯಾದ ಮಾರ್ಗವನ್ನು ಅವಲಂಬಿಸಿದೆ. ಇಬ್ಬರೂ ಸಹ ಪರಸ್ಪರರಲ್ಲಿ ಅವರ ದೋಷ, ಬಲಹೀನತೆಗಳನ್ನು ತಿಳಿದುಕೊಳ್ಳುವರು, ಮಾತ್ರವಲ್ಲದೆ ಪ್ರೀತಿಯಿಂದ ಒಂದಾದ ಹೃದಯಗಳು ಇದುವರೆಗೂ ಅವರಲ್ಲಿ ತಿಳಿಯದಿದ್ದಂತ ಅತ್ಯುತ್ತಮವಾದ ಹಾಗೂ ವಿಶಿಷ್ಟವಾದ ಸ್ವಭಾವವನ್ನು ಸಹ ಕಂಡುಕೊಳ್ಳುವರು. KanCCh 142.3

ಪ್ರೀತಿಯನ್ನು ವ್ಯಕ್ತಪಡಿಸುವುದು ಒಂದು ದೌರ್ಬಲ್ಯವೆಂದು ತಿಳಿದುಕೊಂಡಿರುವ ಅನೇಕರಿದ್ದಾರೆ ಹಾಗೂ ಅವರು ಇತರರಿಂದ ಒಂದು ರೀತಿಯ ಅಂತರ ಕಾದುಕೊಂಡು ಬಿಗುಮಾನ ತೋರಿಸುತ್ತಾರೆ. ಇದರಿಂದ ಬೇರೆಯವರು ಇವರ ಸ್ನೇಹವನ್ನು ನಿರಾಕರಿಸುತ್ತಾರೆ. ಇಂತಹ ಮನೋಭಾವವು ಅನುಕಂಪ ಹುಟ್ಟಿಸುವುದಿಲ್ಲ. ಸಾಮಾಜಿಕವಾದ ಮತ್ತು ಉದಾರವಾದ ಇಂತಹ ಭಾವನೆಗಳನ್ನು ಬಲವಂತವಾಗಿ ದಮನಿಸಿದಾಗ ಅಥವಾ ಅದುಮಿಟ್ಟುಕೊಂಡಾಗ, ಅವರು ತಿರಸ್ಕಾರದಿಂದ ಕಳೆಗುಂದಿ ಹೋಗುತ್ತಾರೆ. ಆಗ ಅವರು ಯಾರು ಜೊತೆಯನ್ನೂ ಸೇರದೆ ಒಂಟಿಯಾಗುತ್ತಾರೆ ಮತ್ತು ಉತ್ಸಾಹ ಕಳೆದುಕೊಳ್ಳುತ್ತಾರೆ. ಇಂತಹ ತಪ್ಪು ಮಾಡದಂತೆ ನಾವು ಎಚ್ಚರಿಕೆಯಾಗಿರಬೇಕು. ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ, ಅದು ಹೆಚ್ಚು ಕಾಲ ಇರುವುದಿಲ್ಲ. ಮದುವೆಯ ಮೂಲಕ ನಿಮ್ಮ ಹೃದಯದೊಂದಿಗೆ ಒಂದಾಗಿರುವ ನಿಮ್ಮ ಸಂಗಾತಿಗೆ ಅನುಕಂಪ ಪ್ರೀತಿ, ಕರುಣೆಯ ಕೊರತೆಯಾಗಬಾರದು. KanCCh 142.4

ಪ್ರತಿಯೊಬ್ಬರೂ ಸಹ ಪ್ರೀತಿಯನ್ನು ಒತ್ತಾಯದಿಂದ ಪಡೆದುಕೊಳ್ಳುವುದಕ್ಕಿಂತ ಸಹಜವಾಗಿ ತೋರಿಸಬೇಕು. ದಂಪತಿಗಳಾದ ನೀವು ನಿಮ್ಮಲ್ಲಿರುವ ಉತ್ತಮ ಗುಣಗಳನ್ನು ಬೇಗನೆ ತಿಳಿದುಕೊಳ್ಳಬೇಕು. ಒಳ್ಳೆಯ ಗುಣಗಳಿಗೆ ಮೆಚ್ಚುಗೆ ಸಿಗುತ್ತದೆಂಬ ಭಾವನೆಯು ಒಂದು ಅದ್ಭುತವಾದ ಉತ್ತೇಜಕವಾಗಿದ್ದು ದಾಂಪತ್ಯ ಜೀವನದಲ್ಲಿ ತೃಪ್ತಿತರುತ್ತದೆ. ಪರಸ್ಪರ ಗೌರವ, ಕರುಣೆ ತೋರಿಸುವುದರಿಂದ ದಂಪತಿಗಳಲ್ಲಿ ಪ್ರೀತಿ ಹೆಚ್ಚಾಗಿ ಉನ್ನತವಾದ ಗುರಿಗಳನ್ನು ಮುಟ್ಟಲು ಪ್ರಚೋದಿಸುತ್ತದೆ. KanCCh 143.1