Go to full page →

ಮದುವೆಯು ಕಾನೂನು ಸಮ್ಮತವೂ ಮತ್ತು ಪರಿಶುದ್ಧವೂ ಆಗಿದೆ KanCCh 147

ತಿನ್ನುವುದು ಮತ್ತು ಕುಡಿಯುವುದು, ಮದುವೆ ಮಾಡಿಕೊಳ್ಳುವುದು ಹಾಗೂ ಮದುವೆ ಮಾಡಿಕೊಡುವುದು ಪಾಪವಲ್ಲ. ನ್ಯಾಯಸಮ್ಮತವಾಗಿರುವುದನ್ನು ಪಾಪಪೂರಿತವಾಗಿ ದುರುಪಯೋಗ ಪಡಿಸಿಕೊಳ್ಳದೆ ಉಚಿತವಾದ ರೀತಿಯಲ್ಲಿ ಪರಿಗಣಿಸಿದಲ್ಲಿ, ನೋಹನ ಕಾಲದಲ್ಲಿ ಮದುವೆಯು ಹೇಗೆ ನ್ಯಾಯಸಮ್ಮತವಾಗಿತ್ತೋ ಅದೇ ರೀತಿ ಈಗಲೂ ನ್ಯಾಯಸಮ್ಮತವಾಗಿರುವುದು. ಆದರೆ ನೋಹನ ಕಾಲದಲ್ಲಿ ಜನರು ದೇವರ ಸಲಹೆ ಹಾಗೂ ಮಾರ್ಗದರ್ಶನ ಕೇಳದೆ ಮದುವೆಯಾಗುತ್ತಿದ್ದರು. KanCCh 147.2

ಜೀವನದ ಎಲ್ಲಾ ಸಂಬಂಧಗಳು ನಶ್ವರವಾಗಿರುವುದರಿಂದ, ನಮ್ಮ ಎಲ್ಲಾ ನಡೆನುಡಿಗಳಲ್ಲಿ ಅದು ಬದಲಾವಣೆಯ ಪ್ರಭಾವ ಬೀರಬೇಕು. ನೋಹನ ಕಾಲದಲ್ಲಿ ಮಿತಿಮೀರಿದ ಮೋಹ ಹಾಗೂ ಕಾಮುಕತೆಯು ನ್ಯಾಯಸಮ್ಮತವಾಗಿದ್ದು, ಅದು ದೇವರ ದೃಷ್ಟಿಯಲ್ಲಿ ಮದುವೆಯು ಕೆಟ್ಟದ್ದು ಹಾಗೂ ಪಾಪಮಯವೂ ಆಗುವಂತೆ ಮಾಡಿತ್ತು. ಈ ಕಾಲದಲ್ಲಿ ಅನೇಕರು ಮದುವೆಯ ಆಲೋಚನೆ ಹಾಗೂ ಅದರ ಸಂಬಂಧದಲ್ಲಿ ಮುಳುಗಿ ಹೋಗಿ ತಮ್ಮ ಆತ್ಮವನ್ನು ನಷ್ಟ ಪಡಿಸಿಕೊಳ್ಳುತ್ತಿದ್ದಾರೆ, ಅಂದರೆ ಪರಲೋಕವನ್ನು ಕಳೆದುಕೊಳ್ಳುತ್ತಿದ್ದಾರೆ. KanCCh 147.3

ಮದುವೆ ಸಂಬಂಧ ಪರಿಶುದ್ಧವಾದದ್ದು. ಆದರೆ ಇಂದಿನ ಅವನತಿಗೊಂಡ ನೈತಿಕ ಭ್ರಷ್ಟಕಾಲದಲ್ಲಿ ಮದುವೆಯು ನೈತಿಕವಲ್ಲದ ಎಲ್ಲಾ ವಿಧವಾದ ಅಸಹ್ಯಕರವಾದ ವಿವರಣೆಗಳನ್ನು ಹೊಂದಿದೆ. ಇದು ಬಹಳವಾಗಿ ದುರುಪಯೋಗಕ್ಕೆ ಒಳಗಾದ ಅಪರಾಧವಾಗಿದ್ದು ಕೊನೆಯಕಾಲದ ಸೂಚನೆಯಾಗಿದೆ. ನೋಹನ ಕಾಲದಲ್ಲಿ ಜಲಪ್ರಳಯಕ್ಕೆ ಮೊದಲು ಮದುವೆಯು ಹೇಗೆ ಅಸಹ್ಯಕರವಾದ ರೀತಿಯಲ್ಲಿ ದುರುಪಯೋಗಿತ್ತೋ, ಆ ರೀತಿ ಇದ್ದಲ್ಲಿ ಇಂದೂ ಸಹ ಅದು ಒಂದು ಅಪರಾಧವಾಗಿದೆ. ಆದರೆ ಮದುವೆಯಪಾವಿತ್ರತೆ ಹಾಗೂ ಅದರ ಉತ್ತಮ ಉದ್ದೇಶಗಳನ್ನು ಅರ್ಥಮಾಡಿಕೊಂಡಲ್ಲಿ, ಅದು ಇಂದೂ ಸಹ ಪರಲೋಕದ ದೃಷ್ಟಿಯಲ್ಲಿ ಮೆಚ್ಚುಗೆಯಾಗಿದೆ. ಇದರಿಂದ ಗಂಡ ಹೆಂಡತಿಯರಿಬ್ಬರಿಗೂ ಸಂತೋಷವುಂಟಾಗುತ್ತದೆ ಮತ್ತು ದೇವರು ಮಹಿಮೆ ಹೊಂದುತ್ತಾನೆ. KanCCh 147.4