Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಪ್ರ ತಿÉ್ಠ ಯು

    “ನೀವು ನನ್ನನ್ನು ಹುಡುಕುವಿರಿ, ಮನ:ಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳವಿರಿ” ಎಂಬುದಾಗಿ ದೇವರು ನಮಗೆ ವಾಗ್ದಾನ ಮಾಡಿದ್ದಾನೆ. ನಾವು ನಮ್ಮ ಹೃದಯಗಳನ್ನು ದೇವರಿಗೆ ಕೊಡಬೇಕು. ಹೀಗೆ ಮಾಡದಿದ್ದರೆ ನಾವು ಆತನ ಸಾರೂಪ್ಯಕ್ಕೆ ಮುಟ್ಟಲು ನಮ್ಮಲ್ಲಿ ಆಗಬೇಕಾದ ಬದಲಾವಣೆಗಳಾಗಲಾರವು, ಸ್ವಾಭಾವಿಕವಾಗಿಯೂ ನಾವು ದೇವರಿಗೆ ದೂರವಾಗಿದ್ದೇವೆ. ಪರಿಶುದ್ಧಾತ್ಮನು ನಮ್ಮ ಸ್ಥಿತಿಯನ್ನು ಈ ರೀತಿ ವರ್ಣಿಸುತ್ತಾನೆ - “ಪಾಪಗಳ ದೆಸೆಯಿಂದ ಸತ್ತವರು” “ತಲೆತುಂಬಾ ಘಾಯಗಳು, ಹೃದಯವೆಲ್ಲಾ ದುರ್ಬಲ” “ಏನೂ ಸೌಖ್ಯವಿಲ್ಲ” ಸೈತಾನನು ನಮ್ಮನ್ನು ತನ್ನ ಬಲೆಯಲ್ಲಿ ಬಲವಾಗಿ ಹಿಡಿ ದಿರುತ್ತಾನೆ. “ಸೈತಾನನ ಉರ್ಲಿಗೆ ಬಿದ್ದವರು” ದೇವರು ನಮ್ಮನ್ನು ವಾಸಿ ಮಾಡಿ ಬಿಡುಗಡೆ ಮಾಡಲು ಇÀ್ಟಪಡುತ್ತಾನೆ. ಆದರೆ ಆತನು ಹೀಗೆ ಮಾಡಲು ನಮ್ಮಲ್ಲಿ ಪೂರ್ಣವಾದ ಪರಿವರ್ತನೆಯುಂಟಾಗಬೇಕು ಮತ್ತು ನಮ್ಮ ಹಿಂದಣ ಸ್ವಭಾವಗಳೆಲ್ಲಾ ಮಾರ್ಪಾಡನ್ನು ಹೊಂದಿ, ನಾವು ಆತನಿಗೆ ಸಂಪೂರ್ಣವಾಗಿ ನಮ್ಮನ್ನು ಒಪ್ಪಿಸಿಕೊಡಬೇಕು. ನಾವು ಮಾಡುವ ಆತ್ಮೀಯ ಯುದ್ಧವು ದೊಡ್ಡ ಯುದ್ಧ. ಸ್ವಾರ್ಥವನ್ನು ತ್ಯಾಗ ಮಾಡುವುದೂ, ನಮ್ಮನ್ನು ದೇವರಿಗೆ ಒಪ್ಪಿಸಿ ಕೊಡುವುದೂ ಜೀವನದ ಒಂದು ದೊಡ್ಡ ಹೋರಾಟವೇ ಸರಿ; ಆದರೆ ನಮ್ಮ ಹೃದಯ ಪರಿವರ್ತನೆಯಾಗಲು ನಾವು ನಮ್ಮನ್ನು ದೇವರಿಗೆ ಒಪ್ಪಿಸಿಕೊಡಬೇಕು. ದೇವರ ನಡೆಯಿಸುವಿಕೆಯು ಸೈತಾನನು ನಮಗೆ ಕಾಣಬರುವಂತೆ ಮಾಡುವ ರೀತಿಯಾಗಿಲ್ಲ. ದೇವರ ನಡೆಯಿಸುವಿಕೆಯು ಅವಿವೇಕದ ಅಧೀನತೆಯೆಂದೂ, ಸರ್ಕಾರ ಹಣವಿಲ್ಲದ ಅಧಿಕಾರವೆಂದೂ ಸೈತಾನನು ನಮಗೆ ತೋರಿಸಿಕೊಡುತ್ತಾನೆ. ಸೈತಾನನು ತೋರಿಸಿಕೊಡುವುದು ನಮ್ಮ ಬುದ್ಧಿಗೂ, ಮನಸ್ಸಾಕ್ಷಿಗೂ ಸರಿಯಾಗಿರುವಂತೆಯೇ ಕಂಡು ಬರುವುದು. ಆದರೆ ಜಗನ್ನಿರ್ಮಾಣಕರ್ತನು ತನ್ನ ದೃಷ್ಟಿಯನ್ನು ಹೀಗೆ ಸಂಬೋಧಿಸುತ್ತಾನೆ. “ಬನ್ನಿರಿ ವಾದಿಸುವ” ದೇವರು ತನ್ನ ಸೃಷ್ಟಿಗಳನ್ನು ಬಲಾತ್ಕರಿಸುವುದಿಲ್ಲ. ಮನುÀ್ಯನು ಬುದ್ಧಿಪೂರ್ವಕ ವಾಗಿಯೂ ಮನಸ್ಸಾರವೂ ಅರ್ಪಿಸುವ ಅರಾಧನೆಯನ್ನು ದೇವರು ಅಂಗೀಕರಿಸುತ್ತಾನೆ. ಬಲಾತ್ಕಾರವ ಒಪ್ಪಿಸುವಿಕೆಯಿಂದ ನಮ್ಮ ಮನಸ್ಸಾಗಲಿ ಅಥವಾ ಗುಣವಾಗಲಿ ಸರಿಯಾಗಿ ಬೆಳೆಯುತ್ತಾ ಸಂಪೂರ್ಣ ವಾಗಲಾರದು; ಇದು ಮನುÀ್ಯನನ್ನು ಸೂತ್ರದಿಂದಾಡುವ ಗೊಂಬೆಯಂತೆ ಮಾಡುತ್ತದೆ. ಸೃಷ್ಟಿಕರ್ತನ ಸದುದ್ದೇಶವೂ ಇದಲ್ಲ; ತನ್ನ ಸೃಷ್ಟಿಯಲ್ಲಿ ಕಿರೀಟಪ್ರಾಯನಾದ ಮನುÀ್ಯನು ಸ್ವಾತಂತ್ರ ಸ್ಥಿತಿಯಲ್ಲಿದ್ದು, ಸಂಪೂರ್ಣಸ್ಥಿತಿಗೆ ಬರಬೇಕೆಂದು ದೇವರು ಇÀ್ಟ ಪಡುತ್ತಾನೆ. ತನ್ನ ಅಪಾರ ಕರುಣೆಯಿಂದ ದೇವರು ನಮಗೆ ಅನುಗ್ರಹಿಸಿ ಕೊಡಬೇಕೆಂದಿರುವ ವರಗಳನ್ನು ಆತನು ನಮ್ಮ ಎದುರಿಗಿರಿಸಿದ್ದಾನೆ. ಆತನು ತನ್ನ ಇÁ್ಟನುಸಾರ ನಮ್ಮನ್ನು ನಡಿಸಲು ಹೃದಯಗಳನ್ನು ಕೇಳುತ್ತಾನೆ. ಇದನ್ನು ಅದು ಕೊಳ್ಳುವುದೂ ಬಿಡುವುದೂ ನಮಗೆ ಸೇರಿರುತ್ತದೆ. ನಾವು ನಮ್ಮನ್ನು ದೇವರಿಗೆ ಒಪ್ಪಿಸಿಕೊಡುವಾಗ ಆತನಿಗೂ ನಮಗೂ ಅಂತರವನ್ನುಂಟು ಮಾಡುವ ದುರ್ಗುಣಗಳು ನಮ್ಮಲ್ಲಿರುವು ದಾದರೆ ನಾವು ಅವುಗಳನ್ನು ಬಿಡಬೇಕು. ಆದುದರಿಂದ ನಮ್ಮ ರಕ್ಷಕನು ಹೀಗೆ ಹೇಳುತ್ತಾನೆ--- “ನಿಮ್ಮಲ್ಲಿ ಯಾವನೇ ಆಗಲಿ ಅವನು ತನಗಿರುವುದನ್ನೆಲ್ಲಾ ಬಿಟ್ಟು ಬಿಡದೇ ಹೋದರೆ ನನ್ನ ಶಿÀ್ಯನಾಗಲಾರನು.” ನಾವು ದೇವರನ್ನು ಬಿಡುವ ಯಾವುದಾದರೂ ನಮ್ಮಲ್ಲಿದ್ದರೆ ಅದನ್ನು ನಾವು ತ್ಯಜಿಸಬೇಕು. ಐಶ್ವರ್ಯವು ಕೆಲವರ ವಿಗ್ರಹವಾಗಿದೆ; ಐಶ್ವರ್ಯವಂತರಾಗಬೇಕೆಂಬ ಹಣದಾಸೆಯು ಅವರನ್ನೂ ಸೈತಾನನನ್ನೂ ಬಂಧಿಸುವ ಚಿನ್ನದ ಸರಪಳಿಯಾಗಿದೆ. ಕೀರ್ತಿ ಮತ್ತು ಪ್ರಪಂಚ ಗೌರವ ಇದು ಕೆಲವರ ಆರಾಧ್ಯ ದೇವತೆಯಾಗಿದೆ; ಆದರೆ ದಾಸತ್ವಕ್ಕೆ ಮನ ಒಲಿಸುವ ಗುಲಾಮಗಿರಿಯ ಈ ಬಂಧನಗಳು ತೊಲಗಬೇಕು. ಸ್ವಾರ್ಥದ ಭೋಗಾಶೆಯಿಂದ ಯಾವು ಜವಾಬ್ದಾರಿಕೆಯನ್ನೂ ಹೊತ್ತು ಕೊಳ್ಳದೆ ಸ್ವೇಚ್ಛೆಯಾಗಿರುವುದೇ ಕೆಲವರ ಆರಾಧ್ಯ ದೇವತೆಯಾಗಿದೆ. ಆದರೆ ಬಂಧನದ ಈ ದಾಸ್ಯ ಬುದ್ಧಿಯು ತೊಲಗಬೇಕು. ನಾವು ಅರ್ಧಭಾಗ ದೇವರ ಕಡೆಯೂ, ಅರ್ಧಭಾಗ ಲೋಕದ ಕಡೆಯೂ ಇರಲಾರೆವು. ಈ ಸ್ಥಿತಿಯಿಂದ ನಾವು ಬಿಡುಗಡೆಯನ್ನು ಹೊಂದದ ಹೊರತು ಪೂರ್ಣವಾಗಿ ದೇವರ ಮಕ್ಕಳಾಗಲಾರೆವು. ತಾವು ದೇವರ ಸೇವೆ ಮಾಡುವುದಾಗಿ ಕೆಲವರು ಹೇಳುತ್ತಾರೆ, ಆದರೆ ಇಂಥವರು ರಕ್ಷಣೆಯನ್ನು ಪಡೆಯುವುದಕ್ಕೂ, ದೈವಾಜ್ಞೆಗಳಂತೆ ನಡೆಯುವುದಕ್ಕೂ ತಮ್ಮ ಶಕ್ತಿಯ ಮೇಲೆ ಆತುಕೊಂಡಿರುತ್ತಾರೆಯೇ ಹೊರತು, ದೇವರ ಮೇಲೆ ಆತುಕೊಂಡಿರುವುದಿಲ್ಲ. ಇವರ ಹೃದಯಗಳಲ್ಲಿ ಕ್ರಿಸ್ತನ ಪ್ರೀತಿಯ ಆಳದ ಪರಿಜ್ಞಾನವೇ ಇರುವುದಿಲ್ಲ; ಸ್ವರ್ಗ ಪ್ರವೇಶಾರ್ಥವಾಗಿ ಕ್ರೈಸ್ತರು ಮಾಡಬೇಕಾದ ಕಾರ್ಯಗಳಲ್ಲಿ ದೇವರು ನಿಯಮಿಸಿರುವುದನ್ನು ತಮ್ಮ ಜೀವಮಾನದ ಬಾಳಿನಲ್ಲಿ ಮಾಡಿ ಪೂರೈಸಬೇಕೆಂದು ಇವರು ಆಶೆಪಡುತ್ತಾರೆ; ಆದರೆ ಇಂಥವರಿಂದ ಯಾವ ಪ್ರಯೋಜನವೂ ಇಲ್ಲ. ಯಾರ ಹೃದಯಗಳಲ್ಲಿ ಕ್ರಿಸ್ತನು ನೆಲಸುತ್ತಾನೋ ಅಂಥವರ ಆತ್ಮಗಳಲ್ಲಿ ಆತನ ಪ್ರೀತಿ, ಆತನ ಸಹವಾಸದಿಂದುಂಟಾಗುವ ಸಂತೋÁನುಭವ ಇವು ತುಂಬಿ ಅವರು ಆತನಲ್ಲಿ ಲೀನವಾಗಿ ತಮ್ಮನ್ನು ಮರೆತು ಧ್ಯಾನಮಗ್ನ ರಾಗುತ್ತಾರೆ. ಕ್ರಿಸ್ತನ ಪ್ರೀತಿಯು ಅವರ ಸಕಲ ಕಾರ್ಯಗಳಿಗೂ ಮೂಲವಾಗಿರುತ್ತದೆ. ಇವರು ದೇವರ ಪ್ರೀತಿಯ ಒತ್ತಾಯವನ್ನು ಅರಿತವರಾಗಿರುತ್ತಾರೆ. ಇಂಥವರಿಗೆ ದೇವರು ಪೂರ್ಣ ಪ್ರಸನ್ನನಾಗದಿದ್ದರೂ ಇವರು ಅಲ್ಪ ದರ್ಜೆಯ ಸೂತ್ರಗಳನ್ನು ಅದುಕೊಳ್ಳದೆ, ತಮ್ಮ ರಕ್ಷಕನ ಮನಸ್ಸಿಗೆ ತಕ್ಕಹಾಗೆ ನಡಿಯಲು ಯತ್ನಿಸುತ್ತಾರೆ. ಇವರು ಆತನಿಗೆ ತಮ್ಮ ಸರ್ವಸ್ವವನ್ನೂ ಒಪ್ಪಿಸಿ, ತಾವು ದೇವರಿಂದ ಇಚ್ಛಿಸುವ ಪ್ರಯಾಣಗಳಿಗೆ ತಕ್ಕ ಹಾಗೆ ಆತನು ನಿಯಮಿಸಿದ ಕಾರ್ಯಗಳನ್ನು ಮಾಡಲು ಇÀ್ಟ ಪಡುತ್ತಾರೆ. ಕ್ರಿಸ್ತನಿಗಾಗಿ ಕೆಲಸ ಮಾಡುವುದಂದರೆ ಇದು ಬಾಹ್ಯಾಡಂಭರದಂತಿರದೆ ನೈಜವಾಗಿರುವುದಾಗಿದೆ.LI 36.2

    ಸರ್ವಸ್ವವನ್ನೂ ಕ್ರಿಸ್ತನಿಗೆ ಅರ್ಪಿಸುವುದು ದೊಡ್ಡ ತ್ಯಾಗವೆಂದು ನೀನು ಭಾವಿಸುವಿಯಾ? “ಕ್ರಿಸ್ತನು ನಮಗಾಗಿ ಏನು ಕೊಟ್ಟಿದ್ದಾನೆ?” ಎಂಬೀ ಪ್ರಶ್ನೆಯನ್ನು ನೀನು ಹಾಕಿಕೋ. ನಮ್ಮ ರಕ್ಷಣೆಗೋಸ್ಕರವಾಗಿ ಕ್ರಿಸ್ತನು ತನ್ನ ಸರ್ವಸ್ವವನ್ನೂ - ಆತನ ಜೀವ, ಪ್ರೀತಿ, ಶ್ರಮೆಗಳೆಲ್ಲವನ್ನೂ ಕೊಟ್ಟನು. ಕ್ರಿಸ್ತನ ಈ ಮಹಾಪ್ರೀತಿಗೆ ಯೋಗ್ಯರಲ್ಲದ ನಾವು ಆತನ ಪ್ರೀತಿಯನ್ನು ಪಡೆದನಂತರವೂ ನಮ್ಮ ಹೃದಯಗಳನ್ನು ಆತನಿಗೆ ಒಪ್ಪಿಸದಿರಲು ಸಾಧ್ಯವೇ? ನಮ್ಮ ಜೀವಮಾನದ ಪ್ರತಿಕ್ಷಣವೂ ನಾವು ಆತನ ವರಗಳಲ್ಲಿ ಭಾಗಿಗಳಾಗಿರುತ್ತೇವೆ. ಆದರೂ ನಾವು ಯಾವ ದುರವಸ್ಥೆಯಿಂದ ಪಾರಾಗಿದ್ದೇವೆಂಬ ಪರಿಜ್ಞಾನವನ್ನು ಹೊಂದಿಕೊಳ್ಳದೆ ಆತನ ಪ್ರೀತಿಯ ಅನುಭವವನ್ನು ಮಾಡಿಕೊಂಡಿರುವುದಿಲ್ಲ. ಇದು ಶೋಚನೀಯವಲ್ಲವೇ? ನಮ್ಮ ಪಾಪಗಳಿಗಾಗಿ ಘಾಯ ಹೊಂದಿದ ಕ್ರಿಸ್ತನನ್ನು ಕಂಡೂ ಕಾಣದಂತಿರಬಹುದೇ? ಆತನ ಪ್ರೀತಿ ಮತ್ತು ಬಲಿಗಳಿಗೆ ವಿರುದ್ಧವಾಗಿ ವರ್ತಿಸಬಹುದೇ? ನಾವು ಮಹಿಮಾಕರ್ತನ ಅಸಮಾನವಾದ ದೀನತೆಯನ್ನು ಕಂಡವರಾಗಿದ್ದರೂ ಏತಕ್ಕೆ ಹೋರಾಟ ಮಾಡಬೇಕು? ಮತ್ತು ತಗ್ಗಿಸಿಕೊಳ್ಳಬೇಕೆಂದು ನಾವು ಗುಣಮಟ್ಟಬಹುದೇ? ಅನೇಕ ದುರಹಂಕಾರಿಗಳು ಹೀಗೆ ಹೇಳುತ್ತಾರೆ. “ದೇವರಿ ನಮ್ಮನ್ನು ಸ್ವೀಕರಿಸಿದ್ದಾನೆಂಬ ಭರವಸೆಯು ನಮಗೆ ಬರುವುದಕ್ಕೆ ವೊದಲು ನಾವೇತಕ್ಕೆ ಪಶ್ಚಾತ್ತಾಪ ಪಡಬೇಕು, ಮತ್ತು ನಮ್ಮನ್ನು ದೈನ್ಯತೆಯಿಂದ ತಗ್ಗಿಸಿಕೊಳ್ಳಬೇಕು” ಆಗ ನಾನು ಯಾವ ಉತ್ತರವನ್ನು ಕೊಡಬಲ್ಲೆನು? ಆತನು ಪಾಪರಹಿತ ನಾಗಿದ್ದನು, ಮಿಗಿಲಾಗಿ ಆತನು ಸ್ವರ್ಗದ ರಾಜಕುಮಾರನಾಗಿದ್ದನು. “ಆದರೆ ಮನುÀ್ಯರಿಗಾಗಿ ಪಾಪಸ್ವರೂಪಿಯಾಗಿ ಮಾಡಲ್ಪಟ್ಟನು” “ತನ್ನ ಪ್ರಾಣವನ್ನು ಧಾರೆಯೆರೆದು ಮರಣ ಹೊಂದಿ ದ್ರೋಹಿಗಳೊಂದಿಗೆ ತನ್ನನ್ನು ಎಣಿಸಿ ಕೊಂಡು ಬಹುಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆ ಮಾಡಿದನಲ್ಲಾ.”LI 39.1

    ಕ್ರಿಸ್ತನಿಗಾಗಿ ಸರ್ವಸ್ವವನ್ನೂ ಒಪ್ಪಿಸಲನುವಾದಾಗ ನಾವು ಆತನಲ್ಲಿಗೆ ತರುವುದೇನು? ನಮ್ಮ ಪಾಪದ ಹೃದಯವನ್ನು ಆತನು ತನ್ನ ರಕ್ತದಿಂದ ತೊಳೆದು ಶುದ್ಧ ಮಾಡಲು ಆತನ ಅಸಮಾನ ಪ್ರೇಮಾಸ್ತಕ್ಕೆ ನಮ್ಮ ಹೃದಯಗಳನ್ನು ತರುವೆವು. ಹೀಗಿದ್ದರೂ ಹೃದಯವನ್ನು ದೇವರಿಗೆ ಕ್ರಿಸ್ತನಿಗಾಗಿ ಕ್ರಿಸ್ತನಿಗಾಗಿ ಸರ್ವಸ್ವವನ್ನೂ ಒಪ್ಪಿಸಲನುವಾದಾಗ ನಾವು ಆತನಲ್ಲಿಗೆ ತರುವುದೇನು? ನಮ್ಮ ಪಾಪದ ಹೃದಯವನ್ನು ಆತನು ತನ್ನ ರಕ್ತದಿಂದ ತೊಳೆದು ಶುದ್ಧ ಮಾಡಲು ಆತನ ಅಸಮಾನ ಪ್ರೇಮಾಸ್ತಕ್ಕೆ ನಮ್ಮ ಹೃದಯಗಳನ್ನು ತರುವೆವು. ಹೀಗಿದ್ದರೂ ಹೃದಯವನ್ನು ದೇವರಿಗೆ ಕೊಡುವುದು ಕಠಿನವೆಂದು ನೆನಸುತ್ತಾರೆ. ಇದನ್ನು ಹೇಳಲೂ ಬರಿಯಲೂ ನಾಚಿಕೆಯಾಗುತ್ತದೆ. ನಮಗೆ ಉಪ ಯೋಗವಾಗುವವುಗಳನ್ನೆಲ್ಲಾ ತನಗೆ ಕೊಟ್ಟುಬಿಡಬೇಕೆಂದು ದೇವರು ನಮ್ಮನ್ನು ಕೇಳುವುದಿಲ್ಲ. ದೇವರು ಮಾಡುವ ಎಲ್ಲಾ ಕಾರ್ಯಗಳಲ್ಲೂ ತನ್ನ ಮಕ್ಕಳಿಗೆ ಒಳ್ಳೆಯದಾಗುವುದನ್ನೇ ಯೋಚಿಸುತ್ತಾನೆ. ತಾವು ಹುಡುಕುವುದಕ್ಕಿಂತಲೂ ಉತ್ತಮವಾದುದನ್ನು ಕೊಡಲು ದೇವರು ಸಿದ್ಧನಾಗಿದ್ದಾನೆಂದು ಗ್ರಹಿಸುವವನು. ಕ್ರಿಸ್ತನನ್ನು ಕೊಡುವುದೇ ದೇವರ ಉದ್ದೇಶವೆಂದು ತಿಳಿಯುವುದು ಎÉ್ಟೂೀ ಉತ್ತಮವಾಗಿದೆ. ದೇವರ ಸದುದ್ದೇಶಕ್ಕೆ ವಿರುದ್ಧವಾಗಿ ಮನುÀ್ಯನು ಯೋಚಿಸುವುದರಿಂದಲೂ, ವಿರುದ್ಧವಾದ ಕಾರ್ಯಗಳನ್ನು ಮಾಡುವುದ ರಿಂದಲೂ ಇವನು ತನ್ನ ಆತ್ಮಕ್ಕೆ ತಾನೇ ದೊಡ್ಡ ಅನ್ಯಾಯವನ್ನೂ, ನೋವನ್ನೂ ಉಂಟುಮಾಡಿಕೊಳ್ಳುತ್ತಾನೆ. ತನ್ನ ಮಕ್ಕಳಿಗೆ ಅತ್ಯುತ್ತಮ ವಾದುದು ಯಾವುದು? ಮತ್ತು ಇವರಿಗೆ ಒಳ್ಳೆಯದನ್ನು ಮಾಡುವುದು ಹೇಗೆ ಎಂಬುದು ದೇವರಿಗೆ ತಿಳಿದಿರುತ್ತದೆ. ಹೀಗಿದ್ದಾಗ್ಯೂ ಆತನ ಹಾದಿಗಳನ್ನು ಬಿಟ್ಟು ದೂರ ಹೋವುವವರಿಗೆ ಯಾವು ನಿಜವಾದ ಸಂತೋÀವು ದೊರಕೀತು? ನಾಶನ ಮತ್ತು ಸಂಕಟಗಳು ನಾಶನದ ಮಾರ್ಗಗಳಾಗಿವೆ. ತನ್ನ ಮಕ್ಕಳಿಗೆ ಕÀ್ಟ ತೊಂದರೆಗಳಾಗುವುದನ್ನು ದೇವರು ನೋಡಿ ಸಂತೋಷಿಸುತ್ತಾನೆಂಬುದು ಒಂದು ದೊಡ್ಡ ತಪ್ಪು ಅಭಿಪ್ರಾಯ ವಾಗಿದೆ. ಇಡೀ ಸ್ವರ್ಗವೇ ದೇವರ ಮಕ್ಕಳಿಗೆ ಸಂತೋÀ ಉಂಟಾಗುವುದನ್ನು ಕಂಡು ಆನಂದಿಸುತ್ತದೆ. ತನ್ನ ಎಲ್ಲಾ ಮಕ್ಕಳಿಗೂ ದೇವರು ಸಂತೋÀದ ಮಹಾ ದ್ವಾರವನ್ನು ಮುಚ್ಚುವುದೇ ಇಲ್ಲ. ನಮಗೆ ತೊಂದರೆಯನ್ನೂ, ಆಶಾಭಂಗವನ್ನೂ ತರುವ ಭೋಗಾಶೆಗಳನ್ನು ತ್ಯಜಿಸಬೇಕೆಂಬುದು ದೇವರ ಆಜ್ಞೆಯಾಗಿದೆ. ಇವುಗಳಿಂದ ನಮಗೆ ಸ್ವರ್ಗದ ಸಂತೋÀವು ಲಭಿಸದು. ಬಲಹೀನವೂ, ಅಸಂಪೂರ್ಣವೂ ಆದ ಮಾನವನ ಸ್ಥಿತಿಯಲ್ಲೇ ರಕ್ಷಕನು ಅವನನ್ನು ಸ್ವೀಕರಿಸುತ್ತಾನೆ. ತನ್ನ ರಕ್ತದಿಂದ ಅವರನ್ನು ತೊಳೆದು ಶುದ್ಧರನ್ನಾಗಿ ಮಾಡುತ್ತಾನೆ. ಆತನ ನೊಗವನ್ನು ತೆಗೆದು ಕೊಂಡು ಹೊರಲೊಪ್ಪುವವರ ಹೃದಯದ ಬಯಕೆಯನ್ನು ಆತನು ನೆರವೇರ ಮಾಡುತ್ತಾನೆ. ನಮ್ಮ ನಿರೀಕ್ಷೆಗೆ ಆಧಾರವಾದ ಕ್ರಿಸ್ತನನ್ನು ನಮ್ಮಲ್ಲಿ ಉದ್ಭವ ಮಾಡಿಕೊಳ್ಳುವುದೇ ಆತ್ಮದ ನಿಜವಾದ ಸಂತೋÀವಾಗಿದೆ. ಯಾವು ಕೃತ್ಯಗಳಿಂದ ನಮಗೆ ಆಶೀರ್ವಾದವು ದೊರಕುತ್ತದೋ ಅಂಥ ಪರಿಧಿಗೆ ಆತನು ನಮ್ಮನ್ನು ನಡಿಸುತ್ತಾನೆ. ಆದರೆ ಅವಿಧೇಯರು ಈ ಸ್ಥಿತಿಗೆ ಮುಟ್ಟಲಾರರು. ಜೀವನರೊಟ್ಟಿಯನ್ನೂ, ವಿಶ್ರಾಂತಿಯನ್ನೂ ಕೊಡುವುದು ಆತನ ಇÀ್ಟವಾಗಿದೆ. LI 39.2

    ಅನೇಕರು ಹೇಳುವ ಮಾತು ಯಾವುದಂದರೆ - “ನಾನು ನನ್ನನ್ನು ದೇವರಿಗೆ ಒಪ್ಪಿಸಿಕೊಡುವುದು ಹೇಗೆ?” ನೀನು ನಿನ್ನನ್ನು ಆತನಿಗೆ ಒಪ್ಪಿಸಿಕೊಡಲು ಇÀ್ಟದಿಂದಿರುತ್ತೀ. ಆದರೆ ಧರ್ಮಜ್ಞಾನದಲ್ಲಿ ನೀನು ಬಲಹೀನನಾಗಿರುವುದರಿಂದಲೂ, ಸಂದೇಹಗಳಿಗೆ ದಾಸನಾಗಿರುವು ದರಿಂದಲೂ, ಪಾಪದ ಜೀವಮಾನದಿಂದ ನಿನ್ನ ಬಾಳು ಅಳಲ್ಪಡುತ್ತಿರುವುದರಿಂದಲೂ ನಿನ್ನನ್ನು ದೇವರಿಗೆ ಒಪ್ಪಿಸಿಕೊಡುವುದು ಅಸಾಧ್ಯವಾಗಿದೆ. ನಿನ್ನ ವಾಗ್ದಾನಗಳೂ ತೀರ್ಮಾನಗಳೂ ಮಣ್ಣಿನ ಹಗ್ಗದಂತಿರುತ್ತದೆ. ಪ್ರಿಯ ಸಹೋದರನೇ, ನೀನು ನಿನ್ನ ಯೋಚನಗೆಳನ್ನೂ, ಹೃದಯದ ಪ್ರೇರಣೆಗಳನ್ನೂ, ಇÁ್ಟರ್ಥಗಳನ್ನೂ ನಿನ್ನ ಅಧೀನದಲ್ಲಿಟ್ಟು ಕೊಂಡಿರುವುದಿಲ್ಲ. ನೀನು ನಿನ್ನ ವಾಗ್ದಾನಗಳನ್ನು ಮೀರಿ ನಡೆಯುವುದ ರಿಂದಲೂ, ನಂಬಿಕೆಯನ್ನು ಕೆಡಿಸಿಕೊಂಡಿರುವುದರಿಂದಲೂ, ನಿನ್ನ ವಿÀಯದಲ್ಲಿ ನೀನೇ ಸತ್ಯಪರನಾಗಿ ನಡೆಯಲು ನಿನ್ನಲ್ಲಿ ಯಾವು ಶಕ್ತಿಯೂ ಇರುವುದಿಲ್ಲ. ಆದರೆ ನೀನು ಆಶಾಭಂಗಕ್ಕೆ ಗುರಿಯಾಗಬೇಕಾದ ಪ್ರಮೇಯವಿಲ್ಲ, ನಿನ್ನ ಮನಸ್ಸಿನ ನಿಜಶಕ್ತಿಯೇನೆಂಬುದನ್ನು ತಿಳಿದುಕೊಳ್ಳಬೇಕು. ಇದೇ ಮನುÀ್ಯನ ಸ್ವಭಾವವನ್ನು ಆಳುವ, ತೀರ್ಮಾನ ಮಾಡಿಸುವ ಮತ್ತು ಆಯ್ದುಕೊಳ್ಳುವಂತೆ ಮಾಡುವ ಶಕ್ತಿಯಾಗಿದೆ. ಮಾನಸಿಕ ಶಕ್ತಿಯ ಸರಿಯಾದ ವ್ಯಾಪಾರಗಳ ಮೇಲೆ ಸಕಲವೂ ಅಧೀನವಾಗಿದೆ. ಒಳ್ಳೆಯದನ್ನೂ ಉತ್ತಮವಾದುದನ್ನೂ ಮನುÀ್ಯನು ತನಗಾಗಿ ಅಂದುಕೊಳ್ಳುವಂತೆ ಈ ಶಕ್ತಿಯು ಮಾಡುವುದು. ಒಳ್ಳೆಯದನ್ನು ಯೋಚಿಸಿ ಮಾಡುವ ಬುದ್ಧಿಶಕ್ತಿಯನ್ನು ದೇವರು ಮನುÀ್ಯನಿಗೆ ಕೊಟ್ಟಿರುತ್ತಾನೆ. ಇದನ್ನು ಉಪಯೋಗಿಸಿಕೊಳ್ಳುವುದು ಮನುÀ್ಯನ ಕರ್ತವ್ಯ.. LI 40.1

    ನಿನ್ನ ಮನಸ್ಸನ್ನು ನೀನೇ ಬದಲಾಯಿಸಲಾರೆ, ನಿನ್ನನ್ನು ನೀನೇ ದೇವರಿಗೆ ಒಪ್ಪಿಸಿಕೊಡಲಾರೆ, ಆದರೆ ಹಾಗೆ ಮಾಡಲು ನೀನು ಅಂದುಕೊಳ್ಳಬಹುದು. ನೀನು ನಿನ್ನ ಮನಸ್ಸನ್ನು ದೇವರಿಗೆ ಒಪ್ಪಿಸಿಕೊಡುವಿಯಾದರೆ ದೇವರು ನಿನ್ನ ಮೂಲಕ ತನ್ನ ಕಾರ್ಯಗಳನ್ನು ಮಾಡಿಸುವನು. ಈ ರೀತಿಯಾಗಿ ನಿನ್ನ ಎಲ್ಲಾ ಸ್ವಭಾವಗಳನ್ನೂ ಕ್ರಿಸ್ತನ ಅಧೀನಕ್ಕೆ ಒಳಪಡಿಸಿ, ನಿನ್ನ ಯೋಚನೆಗಳನ್ನು ಪ್ರೀತಿಪೂರ್ವಕವಾಗಿ ಆತನಲ್ಲಿ ಕೇಂದ್ರೀಕರಿಸುವುದಾದರೆ ಆಗ ಆತನು ನಿನ್ನಲ್ಲಿ ವಾಸ ಮಾಡುವನು. ಒಳ್ಳೆಯತನವನ್ನೂ, ಪರಿಶುದ್ಧತೆಯನ್ನೂ ಆಶಿಸುವುದು ನ್ಯಾಯವಾದದ್ದೇ, ಆದರೆ ಬರೀ ಆಶೆಮಾತ್ರದಿಂದ ಇದಾಗದು. ಆದರಿಂದ ಏನೂ ಪ್ರಯೋಜನವಾಗಲಾರದು. ಅನೇಕರು ಕ್ರೈಸ್ತರಾಗಬೇಕೆಂದು ಬಯಿಸಿ ನಿರೀಕ್ಷಿಸುತ್ತಾರೆ. ಆದರೆ ಈ ಆಶೆಯನ್ನು ಇಟ್ಟುಕೊಂಡು ತಮ್ಮನ್ನು ದೇವರ ಇÀ್ಟಕ್ಕೆ ಒಪ್ಪಿಸಿಕೊಡಲಾರದೆ ನಾಶವಾಗಿದ್ದಾರೆ. ಕ್ರೈಸ್ತರಾಗಬೇಕೆಂದು ಅವರು ಅಂದುಕೊಳ್ಳುವುದಿಲ್ಲ. ಮನಶ್ಯಕ್ತಿಯಿಂದಲೇ ನಿನ್ನ ಜೀವಮಾನದಲ್ಲಿ ಪೂರ ಬದಲಾ ವಣೆಯಾಗಬಹುದು; ನಿನ್ನನ್ನು ಕ್ರಿಸ್ತನಿಗೆ ಒಪ್ಪಿಸಿಕೊಡುವುದರಿಂದ, ಈ ಭೂಲೋಕದ ರಾಜತ್ವ ಮತ್ತು ಪ್ರಭುತ್ವದಿಂದ ಶಕ್ತಿಗಿಂತಲೂ ಅಧಿಕವಾದ ಶಕ್ತಿಯು ನಿನ್ನಲ್ಲಿ ಸಮಾಧಾನವನ್ನುಂಟು ಮಾಡಬಹುದು. ನೀನು ಸ್ಥಿರಮನಸ್ಕನಾಗಿ ನಡೆಯುತ್ತಾ ಬರುವುದರಿಂದ ದೇವರು ನಿನಗೆ ಮೇಲಣಿಂದ ಶಕ್ತಿಯನ್ನು ಕೊಟ್ಟು ನಿನ್ನ ಜೀವಮಾನವನ್ನು ನೂತನಪಡಿಸಿ ಕಡೇವರಿವಿಗೂ ನಡೆಯಿಸುವನು, ಮತ್ತು ನೀನು ನಂಬಿಗಸ್ತನೆನಿಸಿ ಬಾಳುವಿ.LI 41.1

    Larger font
    Smaller font
    Copy
    Print
    Contents