Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಶಿÀ್ಯ ತ್ವದ ಪರೀಕ್ಷೆ

    “ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನ ಇಗೋ ಪೂರ್ವಸ್ಥಿತಿ ಹೋಗಿ ಎಲ್ಲ ನೂತನವಾಯಿತು.”LI 49.1

    ಒಬ್ಬ ಮನುÀ್ಯನು ತಾನು ಪರಿವರ್ತನೆಯಾದ ಕಾಲ, ಜಾಗ ಮತ್ತು ಅದಕ್ಕೆ ಸಂಬಂಧಪಟ್ಟ ವಿವರಗಳನ್ನೆಲ್ಲಾ ನೆನಪಿನಲ್ಲಿಟ್ಟು ಕೊಳ್ಳದಿರಬಹುದು. ಆದರೆ ಇÀ್ಟು ಮಾತ್ರದಿಂದ ಅವನು ಪರಿವರ್ತನವಾಗಿಲ್ಲವೆಂದು ಸಿದ್ಧಾಂತ ಮಾಡುವ ಕಾರ್ಯಕ್ಕೆ ಕೈಹಾಕಬಾರದು; ಕ್ರಿಸ್ತನು ನಿಕೋದೇಮನಿಗೆ ಹೀಗೆ ಹೇಳಿದನು--- “ಗಾಳಿಯು ಮನಸ್ಸು ಬಂದಕಡೆಗೆ ಬೀಸುತ್ತದೆ; ಅದರ ಸಪ್ಪಳವನ್ನು ಕೇಳುತ್ತೀ; ಆದರೆ ಅದು ಎಲ್ಲಿಂದ ಬರುತ್ತದೋ, ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು; ಆತ್ಮನಿಂದ ಹುಟ್ಟಿದವರೆಲ್ಲರೂ ಅದರಂತೆಯೇ.” ಗಾಳಿಯು ಕಣ್ಣಿಗೆ ಕಾಣಿಸು ವುದಿಲ್ಲ; ಆದರೆ ಅದರ ಕಾರ್ಯವನ್ನು ನಾವು ಪರಿÁ್ಕರವಾಗಿ ಕಾಣಬಹುದು. ತದ್ರೀತಿ ದೇವರಾತ್ಮನೂ ಮನುÀ್ಯರ ಹೃದಯಗಳಲ್ಲಿ ತನ್ನ ಕೆಲಸವನ್ನು ಮಾಡುತ್ತಾನೆ. ಮನುÀ್ಯನನ್ನು ನವೀನ ಸೃಷ್ಟಿಯನ್ನಾಗಿ ಮಾಡುವ ಶಕ್ತಿಯನ್ನು ಮನುÀ್ಯನು ಕಾಣಲಾರದಿದ್ದರೂ ಅದು ಆತನಲ್ಲಿ ಹೊಸಜೀವನವನ್ನು ಹುಟ್ಟಿಸುತ್ತದೆ. ಇದು ಮಾನವನನ್ನು ದೇವರ ಸಾಮೀಪ್ಯದಲ್ಲಿ ನವೀನ ಜೀವಿಯನ್ನಾಗಿ ಮಾಡುತ್ತದೆ. ಆತ್ಮನ ಕಾರ್ಯವು ನಿಶ್ಯಬ್ದವಾಗಿಯೂ, ಪರೋಕ್ಷವಾಗಿಯೂ ಇದ್ದರೂ ಅದರ ಫಲಿತಾಂಶಗಳು ಪ್ರತ್ಯಕ್ಷವಾದವುಗಳಾಗಿರುತ್ತವೆ. ಪವಿತ್ರಾತ್ಮನಿಂದ ನವಜೀವನವು ಹೃದಯದಲ್ಲಿ ಹುಟ್ಟಿದ್ದರೆ, ಜೀವಮಾನದಲ್ಲಿ ಅದಕ್ಕೆ ನಿದರ್ಶನಗಳು ಕಾಣುತ್ತವೆ. ನಮ್ಮ ಹೃದಯಗಳಲ್ಲಿ ಬದಲಾವಣೆ ಯಾಗದಿದ್ದಾಗ, ದೈವಾನ್ಯೋನ್ಯತೆಗೆ ನಾವು ಯಾವ ಪ್ರಯತ್ನವನ್ನು ಮಾಡದಿರುವಾಗ, ದೇವರ ಕೃಪೆಯು ನಮ್ಮಲ್ಲಿ ನೆಲಸಿ ತನ್ನ ಕಾರ್ಯಗಳನ್ನು ಮಾಡುತ್ತಿದೆಯೇ ಇಲ್ಲವೇ ಎಂಬುದು ನಮಗೆ ಗೊತ್ತಾಗುತ್ತದೆ. ನಮ್ಮ ಗುಣದಲ್ಲೂ ನಮ್ಮ ಪದ್ಧತಿಯಲ್ಲೂ ನಮ್ಮ ಸಕಲ ಕಾರ್ಯಗಳಲ್ಲೂ ಒಂದು ಪ್ರಬಲ ಮಾರ್ಪಾಟು ಕಂಡು ಬರುತ್ತದೆ. ಹಿಂದಣ ಮತ್ತು ಈಗಿನ ಸ್ಥಿತಿಗಳನ್ನು ಹೋಲಿಸಿದರೆ ನಮ್ಮ ಹೃದಯದಲ್ಲಿ ಬದಲಾವಣೆಯು ಆಗಿದೆಯೇ ಇಲ್ಲವೇ ಎಂಬುದು ಪರಿÁ್ಕರವಾಗಿ ಗೊತ್ತಾಗುತ್ತದೆ. ಆಗಾಗ್ಯೂ ಮಾಡುವ ಒಳ್ಳೆಯ ಅಥವಾ ಕೆಟ್ಟಕೆಲಸಗಳಿಂದ ಗುಣಪರೀಕ್ಷೆ ಮಾಡದೇ, ತಾನಾಡುವ ಮಾತುಗಳಿಂದಲೂ, ಕೃತ್ಯಗಳಿಂದಲೂ ತಿಳಿದುಕೊಳ್ಳಬೇಕು. ನೂತನ ಜೀವಮಾನವನ್ನುಂಟು ಮಾಡುವ ಕ್ರಿಸ್ತನ ಶಕ್ತಿಯು ಇಲ್ಲದೆ ಕೆಲವರ ಬಾಹ್ಯ ಚರ್ಯೆಯು ಸರಿಯಾಗಿಡುವಂತೆ ಕಾಣಬಹುದು, ಕೆಲವು ಸಮಯಗಳಲ್ಲಿ ಇದು ವಾಸ್ತವವಾಗಿರುವುದೂ ಉಂಟು. ಪರರ ಪ್ರೀತಿಯನ್ನು ಮರ್ಯಾದೆಯನ್ನೂ ಸಂಪಾದಿಸಲು ಉತ್ತಮ ಜೀವಮಾನದಲ್ಲಿರಬಹುದು, ಸ್ವಮರ್ಯಾದೆಯನ್ನು ಉಳಿಸಿಕೊಳ್ಳು ಕೆಟ್ಟ ಮಾರ್ಗವನ್ನು ನಾವು ನಿರಾಕರಿಸ ಬಹುದು; ಸ್ವಾರ್ಥವರನಾದವನೂ ಉದಾರಬುದ್ಧಿಯ ಕಾರ್ಯಗಳನ್ನು ಮಾಡಬಹುದು. ಆದರೆ ನಾವು ಯಾವ ಪಕ್ಷಕ್ಕೆ ಸೇರಿದವರೆಂದು ಹೇಗೆ ತೋರಿಸೋಣ? ನಾವು ಯಾರನ್ನು ಪ್ರೀತಿಸುತ್ತೇವೆ, ನಮ್ಮ ಅಲೋಚನೆಗಳು ಯಾರ ವಿಚಾರದಲ್ಲಿ ಕೇಂದ್ರೀಕೃತವಾಗಿವೆ, ನಾವು ಯಾರ ಸಂಗಡ ಸಂಭಾಷಿಸಲು ಇÀ್ಟಪಡುತ್ತೇವೆ, ಯಾರಿಗೆ ಹೆಚ್ಚಿನ ಪ್ರೀತಿಯನ್ನು ತೋರಿಸಿ ದುಡಿಯಬೇಕು? ನಾವು ಕ್ರಿಸ್ತನವರಾಗಿದ್ದರೆ ನಮ್ಮ ಯೋಚನೆಗಳೆಲ್ಲವೂ ಆತನವುಗಳಾಗಿರಬೇಕು; ನಮ್ಮ ಸರ್ವಸ್ವವನ್ನೂ ಆತನಿಗಾಗಿ ಪ್ರತಿÉ್ಠ ಮಾಡಬೇಕು. ಆತನ ಆತ್ಮವನ್ನೂ ಆತನ ಸಾರೂಪ್ಯವನ್ನೂ ಪಡೆದುಕೊಳ್ಳಲು ಆಶಿಸಿ, ನಮ್ಮ ಎಲ್ಲಾ ಕೃತಿಗಳಿಂದಲೂ ಆತನನ್ನು ಸಂಪೂರ್ಣ ಸಂತೋ ಪಡಿಸಬೇಕು.LI 49.2

    ಕ್ರಿಸ್ತೇಸುವಿನಲ್ಲಿ ನೂತನ ಸೃಷ್ಟಿಗಳಾದವರು ಆತ್ಮನ ಫಲಗಳನ್ನು ತೋರಿಸುವರು. ದೇವರಾತ್ಮನಿಂದ ಉಂಟಾಗುವ ಫಲಗಳೇನಂದರೆ -- ಪ್ರೀತಿ, ಸಮಾಧಾನ, ಸಂತೋÀ, ದೀರ್ಘಶಾಂತಿ, ದಯ, ಉಪಕಾರ, ನಂಬಿಕೆ, ಸಾಧುತ್ವ, ಶಮೆ, ದಮೆ ಇಂಥವುಗಳೇ. ಇನ್ನು ಮುಂದೆ ಅವರು ಎÀ್ಟು ಮಾತ್ರವೂ ತಮ್ಮ ಪೂರ್ವದ ಭೋಗಾಶೆಗಳಂತೆ ನಡೆಯದೆ, ದೇವಕುಮಾರನಲ್ಲಿ ನಂಬಿಕೆಯನ್ನಿಟ್ಟು, ಆತನ ಹೆಜ್ಜೆ ಜಾಡಿನಲ್ಲಿ ನಡೆದು, ಆತನಂತೆ ತಮ್ಮನ್ನು ಶುದ್ಧ ಮಾಡಿಕೊಂಡು, ಆತನ ಗುಣಗಳನ್ನು ತಮ್ಮಲ್ಲಿ ಪ್ರತಿಬಿಂಬಿಸುವರು. ಹಿಂದೆ ಅವರು ದ್ವೇಷಿಸುತ್ತಿದ್ದ ಗುಣಗಳನ್ನು ಈಗ ಪ್ರೀತಿಸುವರು, ಹಿಂದೆ ಪ್ರೀತಿಸುತ್ತಿದ್ದ ಗುಣಗಳನ್ನು ಈಗ ದ್ವೇಷಿಸುವರು. ಹಿಂದೆ ಅಹಂಭಾವದಿಂದಿದ್ದು ತಮ್ಮ ಮಾತಿಗೇ ಮನ್ನಣೆ ಬರಬೇಕೆಂದು ಹೇಳುತ್ತಿದ್ದವರು ಈಗ ದೀನತೆಯನ್ನು ತೋರುತ್ತಾ ನ್ಯಾಯಕ್ಕೆ ಮನ್ನಣೆ ಕೊಡುವರು. ಆಗ ದುರಭಿಮಾನದ ಸೊಕ್ಕಿನಿಂದ ಕೂಡಿದ್ದವರು ಈಗ ಗಾಂಭೀರ್ಯದ ಯೋಚನೆಯ ನುಡಿಗಳನ್ನಾಡುವರು. ಕುಡಿಗಾರರು ತಮ್ಮ ಕುಡಿತವನ್ನೂ ದುರಾಚಾರಿಗಳು ತಮ್ಮ ದುರಾಚಾರವನ್ನೂ ಬಿಡುವರು. ಲೌಕಿಕ ಡಂಭಾಚಾರಗಳನ್ನು ತ್ಯಜಿಸುವರು. ನಿಜ ಕ್ರೈಸ್ತರು ಬಾಹ್ಯಾಡಂಬರಗಳನ್ನು ತೊರೆದು ಭಾವ ಶುದ್ಧಿಯ ಅಂತರಂಗಭೂÀಣಕ್ಕೆ ಬೆಲೆ ಕೊಡುವರು. “ಜಡೆ ಹೆಣೆದುಕೊಳ್ಳುವುದು ಈ ವೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತ ಮನಸ್ಸು ಎಂಬ ಒಳಗಣ ಭೂÀನವೇ ನಿಮಗೆ ಅಲಂಕಾರವಾಗಿರಲಿ.”LI 51.1

    ಪಾಪಿಯು ನಿಜವಾದ ಮಾನಸಾಂತರ ಪಟ್ಟಿದ್ದಾನೆಂಬುದಕ್ಕೆ ನೂತನ ಜೀವಮಾನದ ಕೃತ್ಯಗಳು ಆತನಲ್ಲಿ ಕಂಡುಬಂದ ಹೊರತು ಮಾನಸಾಂತರ ಪಟ್ಟಿದ್ದಾನೆಂದು ದೃಢಪಡಿಸಲಾಗದು. ತಾನು ಅಡುವಿಟ್ಟಕೊಂಡ ಪದಾರ್ಥಗಳನ್ನೂ ಅಪಹರಿಸಿದ್ದ ಪದಾರ್ಥಗಳನ್ನೂ ಹಿಂದಕ್ಕೆ ಕೊಟ್ಟ ತನ್ನ ಪಾಪಗಳನ್ನು ಅರಿಕೆ ಮಾಡಿ ತಂದೆಯಾದ ದೇವರನ್ನೂ ತನ್ನ ಜತೆ ಸೃಷ್ಟಿಗಳನ್ನೂ ಪ್ರೀತಿ ಮಾಡುವುದಾದರೆ ಆಗ ಆತನು ಮರಣದಿಂದ ಪಾರಾಗಿ ಜೀವಕ್ಕೆ ಸೇರಿದನೆಂದು ಭರವಸೆ ಯುಳ್ಳವರಾಗಬಹುದು. ಪಾಪ ಮಾಡುವ ನಾವು ಕ್ರಿಸ್ತನ ಬಳಿಗೆ ಬಂದು ಆತನ ಕ್ಷಮಾಪೂರ್ಣವಾದ ಕೃಪೆಯಲ್ಲಿ ಪಾಲನ್ನು ಹೊಂದದ ನಂತರ ನಮ್ಮಲ್ಲಿ ಪ್ರೀತಿಯು ಉತ್ಪತ್ತಿಯಾಗುತ್ತದೆ. ಕ್ರಿಸ್ತನ ನೊಗವು ಸುಲಭವಾದುದರಿಂದ ಪ್ರತಿಯೊಂದು ಹೊರೆಯೂ ಹಗುರವಾಗಿರುತ್ತದೆ. ನಮ್ಮ ಆತ್ಮವು ನಮ್ಮಲ್ಲಿ ಸಂತೋÀವನ್ನು ಉಂಟು ಮಾಡಿ, ತ್ಯಾಗ ಆನಂದಗಳ ಹರ್Àವುಂಟಾಗುತ್ತದೆ. ಕತ್ತಲಿನಿಂದ ಕೂಡಿದ ನಮ್ಮ ಹಾದಿಯು ನೀತಿಸೂರ್ಯನ ಕಿರಣದಿಂದ ಪ್ರಕಾಶವಾಗುತ್ತದೆ.LI 51.2

    ಕ್ರಿಸ್ತನ ಗುಣವು ಆತನ ಹಿಂಬಾಲಕರಲ್ಲಿ ಕಂಡುಬರುತ್ತದೆ. ದೇವರ ದಿವ್ಯ ಚಿತ್ತದ ಈಡೇರುವಿಕೆಯು ಕ್ರಿಸ್ತನ ಹರ್Àವಾಗಿದ್ದಿತು. ದೈವಪ್ರೇಮ, ತಂದೆಯ ಮಹಿಮೆಗೋಸ್ಕರ ಆತನಲ್ಲಿದ್ದ ಆಸಕ್ತಿ ಇವು ಕ್ರಿಸ್ತನ ಜೀವಮಾನವನ್ನು ಆಳುತ್ತಿದ್ದ ಗುಣಗಳಾಗಿದ್ದವು. ಕ್ರಿಸ್ತನು ಮಾಡುತ್ತಿದ್ದ ಸರ್ವಕಾರ್ಯಗಳಲ್ಲೂ ಆತನ ಪ್ರೀತಿಯನ್ನು ಘನತೆಯನ್ನೂ ಕೊಡುತ್ತಿದ್ದಿತು. ದೇವರು ಪ್ರೀತಿಯಾಗಿದ್ದಾನೆ. ತಮ್ಮನ್ನು ದೇವರಿಗೆ ಪ್ರತಿÉ್ಠಪಡಿಸಿಕೊಳ್ಳಲಾರದ ಹೃದಯಗಳಿಂದ ಪ್ರೀತಿಯು ಜನಿಸಿ ಹೊರಸೂಸುವುದೇ? ಕ್ರಿಸ್ತನು ಯಾರ ಹೃದಯಗಳಲ್ಲಿದ್ದು ಆಳುತ್ತಾನೋ ಅಂಥವರಲ್ಲಿ ಮಾತ್ರ ಈ ಪ್ರೀತಿಯ ಕಂಡುಬರುವುದು. “ನಮ್ಮನ್ನು ಆತನು ವೊದಲು ಪ್ರೀತಿಸಿದ್ದರಿಂದ ನಾವು ಆತನನ್ನು ಪ್ರೀತಿಸುತ್ತೇವೆ.”1 ದೇವರ ಪ್ರೀತಿಯಿಂದ ಪರಿವರ್ತನೆ ಹೊಂದಿದ ಹೃದಯದಲ್ಲಿ ಪ್ರೀತಿಯು ಪ್ರಾಮುಖ್ಯವಾಗಿ ತನ್ನ ಕೆಲಸವನ್ನು ಮಾಡುತ್ತದೆ. ಆದು ಗುಣವನ್ನು ರೂಪಾಂತರ ಮಾಡುತ್ತದೆ, ಪ್ರೇರೇಪಣೆಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳುತ್ತದೆ, ಅತ್ಯಾಶೆಗಳು ಹತೋಟಿಗೆ ಬರುತ್ತವೆ, ದ್ವೇÁಸೂಯೆಗಳು ಸ್ವಾಧೀನದಲ್ಲಿಡಲ್ಪಡುತ್ತವೆ, ಪ್ರೀತಿಯು ಶ್ರೇÀ್ಠ ಸ್ಥಿತಿಗೆ ಬರುತ್ತದೆ; ಈ ಪ್ರೀತಿಯು ಹೃದಯದಲ್ಲಿ ಪೋಷಿಸಲ್ಪಟ್ಟು ದೇವರನ್ನು ಉಲ್ಲಾಸಗೊಳಿಸುತ್ತಲೂ ಶುದ್ಧವಾದ ಶಕ್ತಿಯ ಪ್ರೇರಣೆಯನ್ನು ಬೀರುತ್ತದೆ.LI 52.1

    ದೇವರ ಕೃಪೆಯಲ್ಲಿ ಆಗತಾನೇ ನಂಬಿಕೆಯನ್ನಿಡಲು ಪ್ರಾರಂಭಿಸುವ ಮಕ್ಕಳು ಎರಡು ತಪ್ಪುಗಳ ವಿಚಾರ ವಿಶೇÀ ಎಚ್ಚರಿಕೆಯನ್ನು ತೆಗೆದುಕೊಳ್ಳು ಪ್ರಾರಂಭಿಸಬೇಕು. ದೈವಸಹಾಯವಿಲ್ಲದೆ ತನ್ನ ಶಕ್ತಿಯಿಂದ ಧರ್ಮಶಾಸ್ತ್ರವನ್ನು ಅನುಸರಿಸಿ, ಪರಿಶುದ್ಧತೆಯನ್ನು ಪಡೆಯಲೆತ್ನಿಸುವುದು ಒಂದು ಅಪರಾಧ. ಯಾಕಂದರೆ ಕ್ರಿಸ್ತನಿಲ್ಲದೆ ಮನುÀ್ಯನು ಯಾವ ಕಾರ್ಯವನ್ನು ಮಾಡಿದರೂ ಅವು ಸ್ವಾರ್ಥತೆಯಿಂದಲೂ, ಪಾಪದಿಂದಲೂ ಮಿಶ್ರವಾಗಿರುತ್ತವೆ. ಆದುದರಿಂದ ಯಾವ ಕಾರ್ಯ ವನ್ನು ಮಾಡಿದರೂ ಅದರಲ್ಲಿ ಕ್ರಿಸ್ತನು ಮುಖ್ಯನಾಗಿರಬೇಕು. ಕ್ರಿಸ್ತನಲ್ಲಿ ನಂಬಿಕೆಯಿಟ್ಟು ನಾವು ಶುದ್ಧರಾಗಬಹುದು. ಇದರÉ್ಟ ಅಪಾಯಕರವಾದ ಮತ್ತೊಂದು ತಪ್ಪನ್ನು ಮನುÀ್ಯನು ಮಾಡುವುದುಂಟು. ಆ ಅಪರಾಧವು ಈ ರೀತಿಯಾಗಿದೆ. ಅದೇನೆಂದರೆ - ಕ್ರಿಸ್ತನಲ್ಲಿ ನಂಬಿಕೆಯಿಟ್ಟ ಮಾತ್ರದಿಂದಲೇ ತಾವು ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯಬೇಕಾದ ಅಗತ್ಯವಿಲ್ಲವೆಂಬ ಅಭಿಪ್ರಾಯಕ್ಕೆ ತಮ್ಮನ್ನು ಒಪ್ಪಿಸಿಕೊಡುವಿಕೆ. ಇದು ತಪ್ಪು ಮಾರ್ಗಕ್ಕೆ ಮಾನವರನ್ನು ತಳ್ಳುವುದಾಗಿರುತ್ತದೆ. ನಮ್ಮ ಸ್ವಕಾರ್ಯಗಳು ರಕ್ಷಣಾಕರ್ತೃಗಳಾಗಲಾರವು. ದೇವರ ಕಟ್ಟಳೆಗಳು ಆತನ ನೈಜಲಕ್ಷಣಗಳನ್ನು ನಮಗೆ ಸರಿಯಾಗಿ ತೋರಿಸಿಕೊಡುತ್ತವೆ. ವಿಧೇಯತ್ವದ ಬಾಹ್ಯ ಚಿನ್ಹೆಗಳಿಗಿಂತಲೂ ಪ್ರೀತಿಯ ಸೇವೆಯು ಶ್ರೇÀ್ಠವಾದುದಾಗಿದೆ. ಇದರಲ್ಲಿ ಆತನ ಪ್ರೀತಿಯ ಸೂತ್ರಗಳು ಒಟ್ಟುಗೂಡಿರುತ್ತವೆ. ಸ್ವರ್ಗ ಮತ್ತು ಭೂಮಿಯ ಧೊರೆತನಕ್ಕೆ ಇವು ತಳಹದಿಯಾಗಿವೆ ದೇವರ ಸಾರೂಪ್ಯಕ್ಕೆ ನಮ್ಮ ಹೃದಯಗಳು ಪರಿವರ್ತನೆಯಾಗಿದ್ದರೆ, ದೈವಪ್ರೀತಿಯ ನಮ್ಮ ಹೃದಯಗಳಲ್ಲಿ ನೆಡಲ್ಪಟ್ಟಿದ್ದರೆ, ನಾವು ದೇವರ ಕಟ್ಟಳೆಗಳನ್ನು ನಮ್ಮ ಜೀವಮಾನದಲ್ಲಿ ಅನುÁ್ಠನಕ್ಕೆ ತರಬೇಕಲ್ಲವೋ? ಪ್ರೀತಿಯ ಸೂತ್ರಗಳು ಒಬ್ಬನ ಹೃದಯದಲ್ಲಿ ನೆಡಲ್ಪಟ್ಟು ಅವನು ಸೃಷ್ಟೀಶನ ರೂಪಕ್ಕೆ ಮಾರ್ಪಡುವುದಾದರೆ ಹೊಸ ಒಡಂಬಡಿಕೆಯ ವಾಗ್ದಾನವು ಅವನಲ್ಲಿ ನೆರವೇರುವುದೆಂದು ಗ್ರಹಿಸಿಕೊಳ್ಳಬಹುದಾಗಿದೆ. “ಆ ದಿನಗಳು ಬಂದ ಮೇಲೆ ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು -- ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು. ಅವರ ಮನಸ್ಸಿನ ಮೇಲೆ ಅವುಗಳನ್ನು ಬರೆಯುವೆನು.” ದೇವರ ಕಟ್ಟಳೆಗಳು ಹೃದಯಗಳಲ್ಲಿ ಬರೆಯಲ್ಪಟ್ಟರೆ, ಅವು ಮನುÀ್ಯನ ಮುಂದಣ ಜೀವಮಾನವನ್ನು ಬೇರೆ ರೀತಿಯಾಗಿ ಮಾರ್ಪಡಿಸಲಾರವೇ? ವಿಧೇಯತೆ, ಸೇವೆ, ಪ್ರೀತಿಯ ಶ್ರದ್ಧೆ ಇವುಗಳು ಶಿÀ್ಯತ್ವದ ನಿಜಲಕ್ಷಣಗಳು. ಈ ವಿಚಾರ ಸತ್ಯವೇದವು ಹೀಗೆ ಹೇಳುತ್ತದೆ - “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” “ಆತನನ್ನು ಒಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದೆ ನಡೆಯುವವನು ಸುಳ್ಳಗಾರನಾಗಿದ್ಧಾನೆ; ಸತ್ಯವೆಂಬುದು ಅವನಲ್ಲಿಲ್ಲ.” ಮನುÀ್ಯ ನನ್ನು ನಂಬಿಕೆಯು ವಿಧೇಯತ್ವದಿಂದ ದೂರಮಾಡದೇ, ಕ್ರಿಸ್ತನ ಕರುಣೆಯಲ್ಲಿ ಭಾಗಿಯಾಗುವಂತೆಯೂ ಆತನಿಗೆ ವಿಧೇಯನಾಗಿ ಬಾಳುವಂತೆಯೂ ಮಾಡುತ್ತದೆ.LI 52.2

    ನಾವು ಕೇವಲ ವಿಧೇಯತೆಯಿಂದ ಮಾತ್ರ ರಕ್ಷಣೆಯನ್ನು ಸಂಪಾದಿಸಲಾರೆವು; ಯಾಕಂದರೆ ರಕ್ಷಣೆಯು ನಂಬಿಕೆಯಿಂದ ಮಾತ್ರ ದೊರೆಯುವ ದೇವರ ಉಚಿತ ವರವಾಗಿದೆ. “ಪಾಪಗಳನ್ನು ಹೋಗಲಾಡಿಸುವುದಕ್ಕಾಗಿ ಕ್ರಿಸ್ತನು ಪ್ರತ್ಯಕ್ಷನಾದನೆಂಬುದು ನಿಮಗೆ ಗೊತ್ತಾಗಿದೆ. ಆತನಲ್ಲಿ ಪಾಪವಿಲ್ಲ. ಆತನಲ್ಲಿ ನೆಲೆಗೊಂಡಿರುವವನು ಪಾಪಮಾಡನು. ಪಾಪಮಾಡುವವನು ಆತನನ್ನು ಕಂಡವನೂ ಅಲ್ಲ ಕೇಳಿದವನೂ ಅಲ್ಲ.” ಸರಿಯಾದ ಪರೀಕ್ಷೆಯು ಇದರಲ್ಲಿದೆ. ನಾವು ಕ್ರಿಸ್ತನಲ್ಲಿ ನೆಲಸಿ, ನಮ್ಮ ಹೃದಯದಲ್ಲಿ ಆತನ ಪ್ರೀತಿಯು ತುಂಬಿದ್ದರೆ ನಮ್ಮ ಮನೋಭಾವನೆಗಳೂ, ಯೋಚನೆಗಳೂ, ಕಾರ್ಯಗಳೂ ದೈವಕಟ್ಟಳೆಯಲ್ಲಿ ಕಂಡುಬರುವ ಆತನ ಇÁ್ಟನುಸಾರವಿರುವವು. “ಪ್ರಿಯರಾದ ಮಕ್ಕಳೆ, ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸುವುದಕ್ಕೆ ಯಾಗಿಗೂ ಅವಕಾಶ ಕೊಡಬೇಡಿರಿ. ಕ್ರಿಸ್ತನು ಹೇಗೆ ನೀತಿವಂತನಾಗಿದ್ದನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ.” ಸೀನಾಯಿ ಬೆಟ್ಟದಲ್ಲಿ ಕೊಡಲ್ಪಟ್ಟ ದಶಾಜ್ಞೆಗಳಲ್ಲಿ ನೀತಿಯ ಮಹತ್ವವು ವಿÀದೀಕರಿಸಲ್ಪಟ್ಟಿದೆ. ಕ್ರಿಸ್ತನಲ್ಲಿ ನಂಬಿಕೆಯಿಟ್ಟ ಮಾತ್ರಕ್ಕೆ ನಾವು ವಿಧೇಯತ್ವದ ಹಂಗಿನಲ್ಲಿರಬೇಕಾದ ಅಗತ್ಯವಿಲ್ಲವೆಂದು ಹೇಳುವ ಮಾತು ದುರಹಂಕಾರದ ನುಡಿಯಾಗಿದೆ. ಶ್ರೀ ಪೌಲನು “ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೀರಿ” ಎಂದು ಹೇಳಿರುತ್ತಾನೆ. ಹೀಗೆಯೇ “ಕ್ರಿಯೆಗಳಿಲ್ಲದ ನಂಬಿಕೆ ಸತ್ತದ್ದು.” “ನನ್ನ ದೇವರೇ ನನ್ನ ಚಿತ್ತವನ್ನು ಅನುಸರಿಸುವುದು ನನ್ನ ಸಂತೋÀ; ನಿನ್ನ ಧರ್ವೋಪದೇಶವು ನನ್ನ ಅಂತರಂಗದಲ್ಲಿದೆ.” ಕ್ರಿಸ್ತನು ಸ್ವರ್ಗಾರೋಹಣ ವಾಗುವುದಕ್ಕೆ ಸ್ವಲ್ಪ ಮುಂಚೆ ಈ ರೀತಿಯಾಗಿ ಹೇಳಿದನು.LI 54.1

    “ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.” ಸತ್ಯವೇದವು ಈ ರೀತಿ ಹೇಳುತ್ತದೆ - “ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆದರೆ ಅದರಿಂದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳಿದುಕೊಳ್ಳುತ್ತೇವೆ. ಆತನನ್ನು ಬಲ್ಲೆನೆಂದು ಹೇಳಿ ………………… ನಡೆಯುವುದಕ್ಕೆ ಬದ್ಧನಾಗಿದ್ದಾನೆ”1 ಆದಿ ತಂದೆತಾಯಿಗಳ ಬೀಳುವಿಕೆಗೆ ವೊದಲೇ ಯಾವ ಪ್ರಕಾರವಾಗಿ ನಿತ್ಯಜೀವವನ್ನು ಪಡೆಯುವ ಆಜ್ಞೆ ಇದ್ದಿತ್ತೋ ಹಾಗೆಯೇ ಈಗಲೂ ಆಜ್ಞೆ ಉಳಿದಿದೆ; ಅದು ಯಾವುದಂದರೆ - ದೇವರ ಕಟ್ಟಳೆಗೆ ಸಂಪೂರ್ಣ ವಿಧೇಯರಾಗಿರುವುದು ಮತ್ತು ಪೂರ್ಣ ಶುದ್ಧರಾಗಿರುವುದು. ಈ ಆಜ್ಞೆಗಳಿಲ್ಲದ ಬೇರೆ ಯಾವ ಆಜ್ಞೆಯಿಂದ ನಿತ್ಯಜೀವವು ದೊರಕಿದರೂ ಅದರಲ್ಲಿ ಸದಾ ಗಂಡಾಂತರವು ಇದ್ದೇ ಇರುವುದು ಮತ್ತು ಇದರಿಂದ ಪಾಪಕ್ಕೆ ಹೆಬ್ಬಾಗಿಲು ತೆರೆಯಲ್ಪಟ್ಟು ಭೂಲೋಕದಲ್ಲಿ ಗೋಳಾಟವೂ ಸಂಕಟವೂ ಅಧಿಕವಾಗಿರುತ್ತದೆ.LI 54.2

    ಅದಮನು ಪಾಪಕ್ಕೆ ಬೀಳುವ ವೊದಲು ದೇವರ ಕಟ್ಟಳೆಗಳಿಗೆ ವಿಧೇಯನಾಗಿ ಪರಿಶುದ್ಧವಾದ ಗುಣವನ್ನು ಪಡೆಯಲು ಸಾಧ್ಯವಾಗಿತ್ತು. ಆದರೆ ಆತನು ಹಾಗೆ ಮಾಡದೆ ಬಿದ್ದು ಹೋದುದರಿಂದ ನಮ್ಮ ಸ್ವಭಾವಗಳು ಪಾಪದ ವಾಸನೆಗೆ ಸಿಕ್ಕಿ ನಾವೇ ಪರಿಶುದ್ಧರನ್ನಾಗಿ ಮಾಡಿಕೊಳ್ಳಲು ಅಸಾಧ್ಯವಾಗಿದೆ. ನಾವು ಪಾಪಾತ್ಮರಾಗಿಯೂ ಅಶುದ್ಧರಾಗಿಯೂ ಇರುವುದರಿಂದ ಪರಿಶುದ್ಧವಾದ ದೈವ ಕಟ್ಟಳೆಗಳನ್ನು ಸಂಪೂರ್ಣವಾಗಿ ಕೈಕೊಳ್ಳಲಾರೆವು. ನಾವು ಪಾಪದಿಂದ ಪಾರಾಗಲು ಕ್ರಿಸ್ತನು ದಾರಿಯನ್ನು ಮಾಡಿದ್ದಾನೆ. ಭೂಲೋಕದಲ್ಲಿ ಕ್ರಿಸ್ತನು ಇದ್ದಾಗ ಆತನೂ ನಮ್ಮಂತೆ ಶೋಧನೆಗಳಿಗೆ ಸಿಕ್ಕಿದ್ದರಿಂದ ನಾವು ಅವುಗಳಿಂದ ಪಾರಾಗಲು ದಾರಿಯನ್ನು ತೋರಿಸಿದ್ದಾನೆ. ಆತನು ನಮಗಾಗಿ ಸತ್ತು ನಮ್ಮ ಪಾಪಗಳನ್ನು ತಾನು ಹೊತ್ತುಕೊಳ್ಳುವುದರ ಮೂಲಕ ನಮಗೆ ಪರಿಶುದ್ಧತೆಯನ್ನು ದಯಪಾಲಿಸುತ್ತಾನೆ. ನಿನ್ನನ್ನು ಆತನಿಗೆ ಅರ್ಪಿಸಿ ನಿನ್ನ ರಕ್ಷಕನನ್ನಾಗಿ ಸ್ವೀಕರಿಸಿದರೆ, ಪಾಪಾತ್ಮನಾಗಿದ್ದರೂ ಆತನ ದೆಸೆಯಿಂದ ಪರಿಶುದ್ಧನೆಂದು ಗಣಿಸಲ್ಪಡುವ. ನೀನಿರುವ ಸ್ಥಾನದಲ್ಲಿ ಕ್ರಿಸ್ತನು ಬಂದು ಪಾಪ ಮಾಡದಂತೆ ನಿನ್ನನ್ನು ಮಾರ್ಪಡಿಸುವನು. ಇದಕ್ಕಿಂತಲೂ ಹೆಚ್ಚಾಗಿ ಆತನು ನಿನ್ನ ಗುಣವನ್ನು ಬದಲಾಯಿಸುತ್ತಾನೆ. ನಂಬಿಕೆಯ ಮೂಲಕವೇ ನಮ್ಮಲ್ಲಿ ಆತನು ನೆಲಸುತ್ತಾನೆ. ಆತನ ಚಿತ್ತಕ್ಕೆ ನಿನ್ನನ್ನು ಅಧಿನಪಡಿಸಿ ಆ ಸಂಬಂಧದಲ್ಲಿಯೇ ಇರಬೇಕು. ನೀವು ಆತನಲ್ಲಿ ನೆಲಸಿ ಆತನ ಐಕ್ಯತೆಯಲ್ಲಿರುವಿರಾದರೆ ಆತನು ನಿಮ್ಮ ಮೂಲಕ ತನ್ನ ಕಾರ್ಯಗಳನ್ನು ಮಾಡುವನು. ಈ ಕಾರಣದಿಂದ ನೀನು ಹೀಗೆ ಹೇಳಬೇಕು.LI 55.1

    “ಈಗ ಶರೀರದಲ್ಲಿರುವ ನಾನು ಜೀವಿಸಿರುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಲ್ಲಿಯೇ ಜೀವಿಸುತ್ತೇನೆ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಮರಣಕ್ಕೆ ಒಪ್ಪಿಸಿದನು.” ಆದುದರಿಂದ ಕ್ರಿಸ್ತನು ಹೀಗೆ ಹೇಳಿದನು. “ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತಾಡುವನು.” ಕ್ರಿಸ್ತನು ನಿಮ್ಮಲ್ಲಿದ್ದು ಕೆಲಸ ನಡಿಸುವನು. ನೀವು ಆತನ ನೀತಿಯ ಮನಸ್ಸನ್ನೂ ವಿಧೇಯತ್ವದ ಕೆಲಸಗಳನ್ನೂ ಮಾಡುವಿರಿ.LI 56.1

    ಅಹಂಕಾರ ಮಾಡಲು ನಮ್ಮಲ್ಲಿ ಏನೂ ಇಲ್ಲವು; ನಮ್ಮನ್ನು ಹೆಚ್ಚಿಸಿಕೊಳ್ಳುಲು ಯಾವ ಕಾರಣವೂ ಇರುವುದಿಲ್ಲ. ನಮಗಿರುವುದು ಒಂದೇ ನಿರೀಕ್ಷೆ. ಆ ನಿರೀಕ್ಷೆಯ ಮೂಲಕ ಕ್ರಿಸ್ತನ ನೀತಿಯು ಆರೋಪಿಸಲ್ಪಡುವುದು. ಆ ಸ್ಥಿತಿಯು ನಮಗೆ ಪವಿತ್ರಾತ್ಮನ ಮೂಲಕ ದೊರಕುವುದಾದರೆ ತನ್ನ ಕಾರ್ಯಗಳನ್ನು ನಮ್ಮ ಮೂಲಕ ಸಿದ್ಧಿಗೆ ತರುವನು. ನಂಬಿಕೆಯ ವಿಚಾರ ಮಾತಾಡುವಾಗ ನಾವು ಒಂದು ವಿಶೇÀ ತಾರತಮ್ಯವನ್ನು ಗಮನಿಸಬೇಕು. ನಂಬಿಕೆಯಲ್ಲಿಯೂ ಒಂದು ವಿಶೇÀತರಹ ಪ್ರಬೇಧವಿದೆ. ದೇವರ ಶಕ್ತಿಯನ್ನೂ ಆತನ ಇರುವಿಕೆಯನ್ನೂ ಆತನ ಮಾತುಗಳ ಯತಾರ್ಥತೆಯನ್ನೂ ಸೈತಾನನೂ ಆತನ ಸಂಘವೆಲ್ಲವೂ ನಿರಾಕರಿಸದೆ ಒಪ್ಪಿಕೊಳ್ಳುವುದು. ಸತ್ಯವೇದವೂ ಹೀಗೆ ಹೇಳುತ್ತದೆ.LI 56.2

    “ದೆವ್ವಗಳೂ ಕೂಡ ಹಾಗೆಯೇ ನಂಬಿ ನಡೆಯುತ್ತವೆ.” ಆದರೆ ಇದು ನಂಬಿಕೆಯಲ್ಲ. ದೇವರ ಮಾತುಗಳಲ್ಲಿ ನಂಬಿಕೆಯಿಡುವುದು ಮಾತ್ರ ಸಾಲದು; ನಂಬಿಕೆಯಿಡುವುದರ ಜೊತೆಗೆ ನಮ್ಮ ಹೃದಯಗಳನ್ನೂ ಆತನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಡಬೇಕು. ಹೀಗೆ ಮಾಡುವುದರಿಂದ ನಾವು ಆತನನ್ನು ಪ್ರೀತಿಸುವವರಾಗಿರುತ್ತೇವೆ.LI 56.3

    ನಂಬಿಕೆಯ ಪ್ರೀತಿಯು ನಮ್ಮಲ್ಲಿ ತನ್ನ ಕಾರ್ಯಗಳನ್ನು ನಡೆಯಿಸಿ ನಮ್ಮ ಆತ್ಮಗಳನ್ನು ಶುದ್ಧ ಮಾಡುತ್ತದೆ. ಈ ನಂಬಿಕೆಯ ಮೂಲಕ ದೇವರ ಸಾರೂಪ್ಯಕ್ಕೆ ಮನಸ್ಸು ಮಾರ್ಪಡುತ್ತದೆ. ಈ ಮಾರ್ಪಾಡಿನ ಸ್ಥಿತಿಯಲ್ಲಿರುವ ಹೃದಯವು ಧರ್ಮಶಾಸ್ತ್ರದ ನಿಯಮಗಳಿಗೆ ಮಾತ್ರ ಅಧೀನವಾಗಿರದೆ, ಅದರ ಪರಿಶುದ್ಧ ವಿಧಿಗಳಲ್ಲಿ ಆನಂದಿಸಿ ಹೀಗೆ ಹೇಳುತ್ತದೆ. “ನಿನ್ನ ಧರ್ಮಶಾಸ್ತ್ರವು ನನಗೆ ಎÉ್ಟೂೀ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.” “ಹೀಗಿರಲು ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮಾನುಸಾರವಾಗಿ ನಡೆಯುವವರಾದ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮವು ನೆರವೇರುವುದಕ್ಕೆ ಮಾರ್ಗವಾಯಿತು.” ಕ್ರಿಸ್ತನ ಕ್ಷಮಾಪಣಾ ಪ್ರೀತಿಯನ್ನು ಬಲ್ಲವರು ಅನೇಕರಿದ್ದಾರೆ; ಅವರು ನಿಜವಾಗಿಯೂ ದೇವರ ಮಕ್ಕಳಾಗಲು ಇÀ್ಟಪಡುತ್ತಾರೆ. ಆದರೆ ಇಂಥವರು ತಮ್ಮ ಗುಣವು ಅಸಂಪೂರ್ಣವಾದುದೆಂದು ಮನನ ಮಾಡಿಕೊಂಡು, ತಮ್ಮ ಹೃದಯಗಳು ಪವಿತ್ರಾತ್ಮನಿಂದ ನೂತರ ಮಾಡಲ್ಪಟ್ಟಿವೆಯೋ ಇಲ್ಲವೋ ಎಂಬ ಸಂಶಯಗ್ರಸ್ಥರಾಗಿರುತ್ತಾರೆ. ಅಂಥವರಿಗೆ ನಮ್ಮ ಉತ್ತರ ಇಲ್ಲಿದೆ. ನಿರಾಶರಾಗಿ ಹಿಮ್ಮುಖರಾಗ ಬೇಡಿರಿ; ನಮ್ಮ ಪಾಪಗಳ ಸಲುವಾಗಿ ಕ್ರಿಸ್ತನ ಪಾದಗಳಿಗೆ ಎರಗಿ ಆತನಿಗೆ ವೊರಯಿಡಬೇಕಾಗಿದೆ. ಆದರೂ ನಾವು ಧೈರ್ಯಹೀನರಾಗಬೇಕಾದುದಿಲ್ಲ; ಶತೃವಾದ ಸೈತಾನನಿಗೆ ನಾವು ಸೋತರೂ ದೇವರಿಂದ ತಳ್ಳಲ್ಪಡುವುದಿಲ್ಲ. ಕ್ರಿಸ್ತನು ತಂದೆಯ ಬಲಪಾಶ್ರ್ವದಲ್ಲಿ ನಮಗೋಸ್ಕರ ಹೋರಾಡುತ್ತಾ ಇದ್ದಾನೆ. ಯೋಹಾನನು ಹೀಗೆ ಹೇಳುತ್ತಾನೆ. “ನನ್ನ ಪ್ರಿಯರಾದ ಮಕ್ಕಳೆ, ನೀವು ಪಾಪ ಮಾಡುದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪ ಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸುಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ” ಕ್ರಿಸ್ತನ ಮಾತುಗಳನ್ನು ಸಹ ಮರೆಯಬಾರದು. “ತಂದೆಯು ನಿಮ್ಮನ್ನು ಪ್ರೀತಿಸುತ್ತಾನೆ.” ಮತ್ತೆ ನೀವು ಆತನ ಬಳಿಗೆ ಬರುವಂತೆಯೂ, ನಿಮ್ಮಲ್ಲಿ ಆತನ ಪರಿಶುದ್ಧತೆಯು ಪ್ರತಿಬಿಂಬಿಸುವಂತೆಯೂ ಆತನು ಇÀ್ಟಪಡುತ್ತಾನೆ. ನೀವು ನಿಮ್ಮನ್ನು ಕ್ರಿಸ್ತನಿಗೆ ಒಪ್ಪಿಸಿಕೊಟ್ಟರೆ, ನಿಮ್ಮಲ್ಲಿ ಒಳ್ಳೇ ಕೆಲಸಗಳನ್ನು ಪ್ರಾರಂಭಿಸಿದಾತನು ಕ್ರಿಸ್ತನು ಬರುವವರೆಗೆ ಅವನ್ನು ಮುಂದುವರಿಸುವನು. ಹೆಚ್ಚಿನ ಆಸಕ್ತಿಯಿಂದ ಪ್ರಾರ್ಥಿಸಿ ಹೆಚ್ಚುಹೆಚ್ಚಾಗಿ ಆತನನ್ನು ನಂಬಿರಿ. ಸ್ವಶಕ್ತಿಯಲ್ಲಿ ನಮ್ಮ ನಂಬಿಕೆಯು ಕಡಿಮೆಯಾದ ಹಾಗೆಲ್ಲಾ ನಮ್ಮ ರಕ್ಷಕನ ಶಕ್ತಿಯಲ್ಲಿಯೇ ನಮ್ಮ ನಂಬಿಕೆಯನ್ನು ದೃಢಪಡಿಸೋಣ. ನಮಗೆ ಕಾಂತಿಯನ್ನೂ ಆರೋಗ್ಯವನ್ನೂ ಕೊಡುವಾತನನ್ನು ಸ್ತುತಿಸೋಣ. ನೀನು ಹೆಚ್ಚೆಚ್ಚಾಗಿ ಕ್ರಿಸ್ತನ ಬಳಿಗೆ ಸಮೀಪಿಸಿದಂತೆಲ್ಲಾ ಹೆಚ್ಚು ಅಪರಾಧಿಯೆಂದು ನಿನಗೆ ಕಂಡುಬರುವುದು. ನಿನ್ನ ದೃಷ್ಟಿಯು ಸ್ಪÀ್ಟವಾಗಿ ಆತನ ಸಂಪೂರ್ಣವಾದ ಸ್ವಭಾವದೊಡನೆ ನಿನ್ನನ್ನು ಹೋಲಿಸಿಕೊಂಡರೆ ನಿನ್ನ ಅಸಂಪೂರ್ಣತೆಯು ಸ್ಪÀ್ಟವಾಗುವುದು. ಸೈತಾನನ ಮಾಯಾಪಾಶಗಳು ನಿನ್ನ ಮೇಲೆ ಅವುಗಳಿಗಿರುವ ಶಕ್ತಿಯನ್ನು ಕಳೆದುಕೊಂಡಿರುತ್ತವೆಂಬುದೂ ಮತ್ತು ಜೀವಕೊಡುವ ಪವಿತ್ರಾತ್ಮ ಶಕ್ತಿಯು ನಿನ್ನನ್ನು ಹುರಿದುಂಬಿಸುತ್ತದೆಂಬುದೂ ಇದರಿಂದ ಸಿದ್ಧಾಂತವಾಗುತ್ತದೆ. ತನ್ನ ಪಾಪವನ್ನು ತಿಳಿದು ಕೊಳ್ಳದವನ ಮನಸ್ಸಿನಲ್ಲಿ ಕ್ರಿಸ್ತನ ಪ್ರೀತಿಯು ಆಳವಾಗಿ ಬೇರೂರಲಾರದು. ಕ್ರಿಸ್ತನಿಂದ ಮಾರ್ಪಟ್ಟವನು ಆತನ ದೈವೀಕ ಗುಣವನ್ನು ಶ್ಲಾಘಿಸುವನು. ಆದರೆ ನಮ್ಮ ಧರ್ಮಜ್ಞಾನದ ಚ್ಯುತಿಯನ್ನು ಅರಿತುಕೊಳ್ಳದಿರುವುದು, ಕ್ರಿಸ್ತನ ಗುಣವನ್ನೂ, ಅದರ ಉನ್ನತಿಯನ್ನೂ ತಿಳಿದಿಲ್ಲವೆಂಬುದನ್ನು ಸಿದ್ಧಾಂತಪಡಿಸುವುದು. ನಮ್ಮನ್ನು ಎÀ್ಟು ಕನಿÀ್ಟವೆಂದು ಗಣನೆ ಮಾಡುತ್ತೇವೋ ಅÀ್ಟೂ ಹೆಚ್ಚಾಗಿ ರಕ್ಷಕನ ಪ್ರೀತಿಯ ಮತ್ತು ಅಸಮಾನವಾದ ಆತನ ಶುದ್ಧತೆಯನ್ನೂ ಗಣನೆ ಮಾಡುತ್ತೇವೆ. ನಮ್ಮ ಪಾಪದ ಸ್ಥಿತಿಯನ್ನು ತಿಳಿದುಕೊಳ್ಳುವ ಜ್ಞಾನವು ನಮ್ಮನ್ನು ಕ್ಷಮಿಸುವ ಕ್ರಿಸ್ತನ ಕಡೆಗೆ ಎಳೆಯುತ್ತದೆ; ಮತ್ತು ಮನುÀ್ಯನು ಯಾವಾಗ ಸಹಾಯ ಶೂನ್ಯತೆಯನ್ನು ತಿಳಿದು ಕ್ರಿಸ್ತನ ಕಡೆಗೆ ಬರುತ್ತಾನೋ ಆಗ ಅವನಿಗೆ ಕ್ರಿಸ್ತನು ಶಕ್ತಿಯನ್ನು ಪ್ರಕಟಿಸುತ್ತಾನೆ. ಆತನ ವಾಕ್ಯಗಳ ಮತ್ತು ಆತನ ಅವಶ್ಯಕತೆಯು ನಮ್ಮಲ್ಲಿ ಹೆಚ್ಚಿದ ಹಾಗೆಲ್ಲಾ ಆತನ ಗುಣದ ವಿಚಾರ ಅÀ್ಟೂ ಹೆಚ್ಚಾದ ಉನ್ನತಾಭಿಪ್ರಾಯಗಳು ಹುಟ್ಟಿ ಹೆಚ್ಚುಹೆಚ್ಚಾಗಿ ಆತನ ರೂಪವನ್ನು ಪ್ರತಿಬಿಂಬಿಸುವೆವು.LI 56.4