Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಕ್ರಿಸ್ತನ ಸಾರೂಪ್ಯಕ್ಕೆ ಬೆಳೆಯುವಿಕೆ

    ಹೃದಯ ಪರಿವರ್ತನೆಯಿಂದ ನಾವು ದೇವರ ಮಕ್ಕಳಾಗುತ್ತೇವೆ; ಸತ್ಯವೇದವು ಇದನ್ನು ಪುನರ್ಜನ್ಮವೆಂದು ಸಾರುತ್ತದೆ. ರೈತನು ಬಿತ್ತಿದ ಒಳ್ಳೇ ಬೀಜದ ಬೆಳವಣಿಗೆಗೆ ಇದನ್ನು ಹೋಲಿಸಲಾಗಿದೆ. ಇದು ಹೇಗೋ ಹಾಗೆಯೇ ಈಗತಾನೇ ಮಾರ್ಪಟ್ಟು ಕ್ರಿಸ್ತನ ಬಳಿಗೆ ಬಂದವರನ್ನು ಅಂದರೆ ಸ್ತ್ರೀಯರನ್ನೂ ಪುರುÀರನ್ನೂ ಮಕ್ಕಳೆಂದು ಸಂಬೋಧಿಸಲಾಗಿದೆ. ಭೂಮಿಯಲ್ಲಿ ಬಿತ್ತಲ್ಪಟ್ಟು ಫಲಫಲಿಸುವ ಒಳ್ಳೆಯ ಬೀಜದಂತೆ ಇವರು ಫಲಫಲಿಸುವವರಾಗಬೇಕು. ಯೆಶಾಯನು ಇಂಥವರ ವಿಚಾರ ಹೀಗೆ ಹೇಳುತ್ತಾನೆ. “ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವುದು.”LI 58.1

    ಮಾನವನು ತನ್ನ ಬುದ್ಧಿ ಚತುರತೆಯನ್ನೆಲ್ಲಾ ಉಪಯೋಗಿಸಿದರೂ ಪ್ರಕೃತಿಯಲ್ಲಿರುವ ಯಾವ ಸಣ್ಣ ಪ್ರಾಣಿಯನ್ನಾದರೂ ಸೃಷ್ಟಿಸಲಾರನು. ದೇವರು ಸ್ವತ: ಕೊಟ್ಟಿರುವ ಜೀವದಿಂದಲೇ ಪ್ರಾಣಿಗಳಾಗಲಿ ಸಸ್ಯಗಳಾಗಲಿ ಜೀವಿಸಬಲ್ಲವು. ಇದರಂತೆಯೇ ಆತ್ಮೀಯ ಜೀವಮಾನವೂ ಮನುÀ್ಯನ ಹೃದಯಗಳಲ್ಲಿ ದೇವರಿಂದಲೇ ಹುಟ್ಟಬೇಕಾಗಿದೆ. ಮನುÀ್ಯನು “ಮೇಲಣಿಂದ ಹುಟ್ಟದಿದ್ದರೆ” ಇಂಥವನು ಕ್ರಿಸ್ತನು ಕೊಡುವ ಜೀವದಲ್ಲಿ ಭಾಗಿಯಾಗಲಾರನು. ಜೀವದ ವಿಚಾರ ಹೇಗೋ ಹಾಗೆಯೇ ಬೆಳವಣಿಗೆಯ ವಿಚಾರ ವೊಗ್ಗುಗಳು ವಿಕಸಿತವಾಗುವುದಕ್ಕೂ ಹೂವುಗಳು ಫಲಫಲಿಸುವುದಕ್ಕೂ ದೇವರು ತಾನೇ ಕಾರಣನು. ಆತನ ಶಕ್ತಿಯಿಂದಲೇ ಬೀಜವು ದೊಡ್ಡದಾಗಿ ಬೆಳೆಯುತ್ತದೆ. “ವೊದಲು ಗರಿಯನ್ನೂ ಆಮೇಲೆ ಹೊಡೆಯನ್ನೂ ತರುವಾಯ ತೆನೆಯ ತುಂಬಾ ಕಾಳನ್ನೂ ತನ್ನÀ್ಟಕ್ಕೆ ತಾನೇ ಫಲಿಸುತ್ತದೆ.” ಪ್ರವಾದಿಯಾದ ಹೊಶೇಯನು ಇಸ್ರಾಯೇಲರನ್ನು ಕುರಿತು ಹೀಗೆ ಹೇಳುತ್ತಾನೆ --- “ಅವನು ನೈದೆಲೆಯ ಹಾಗೆ ಬೆಳೆಯುವನು.” “ಅವರು ಧ್ಯಾನ್ಯದ ಹಾಗೆ ಜೀವಿಸುವರು; ದ್ರಾಕ್ಷೆಬಳ್ಳಿಯ ಹಾಗೆ ಬೆಳೆಯುವರು.” ಕ್ರಿಸ್ತನು “ಹೂವುಗಳು ಬೆಳೆಯುವ ರೀತಿಯನ್ನು ಯೋಚನೆಗೆ ತಂದುಕೊಳ್ಳಿರಿ” ಎಂದು ನಮಗೆ ಹೇಳುತ್ತಾನೆ. ಗಿಡಗಳೂ ಹೂವುಗಳೂ ತಮ್ಮಿಂದ ಸ್ವತ: ಎಚ್ಚರಿಕೆಯನ್ನು ತೆಗೆದುಕೊಂಡು ಬೆಳೆಯದೆ ದೇವರು ಅವುಗಳ ಬೆಳವಣಿಗೆಗೆ ಅವಶ್ಯವಾದವುಗಳನ್ನು ಇಟ್ಟಿರುವುದರಿಂದ ಮಾತ್ರ ಅವು ಬೆಳೆಯುತ್ತವೆ. ಇದು ಹೇಗೋ ಹಾಗೆಯೇ ಯಾವ ಮಗುವಾದರೂ ತನ್ನ ಎಚ್ಚರಿಕೆಯಿಂದ ತಾನೇ ಬೆಳೆಯಲಾರದು. ಹಾಗೆಯೇ ನೀನೂ ಎಚ್ಚರಿಕೆ ಮತ್ತು ಚಿಂತೆಯಿಂದ ನಿನ್ನ ಆತ್ಮೀಯ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಲಾರೆ. ಗಿಡವಾಗಲಿ ಮಗುವಾಗಲಿ ತಮ್ಮಿಂದ ತಾವು ಬೆಳೆಯದೆ ದೇವರು ಇವುಗಳ ಬೆಳವಣಿಗೆಗಾಗಿ ಏರ್ಪಡಿಸಿರುವ ಗಾಳಿ, ಬೆಳಕು ಮತ್ತು ಆಹಾರಗಳಿಂದ ಬೆಳೆಯುತ್ತವೆ. ಪ್ರಾಣಿಗಳ ಮತ್ತು ಸಸ್ಯಗಳ ಬೆಳವಣಿಗೆಗೆ ಪ್ರಕೃತಿಯ ವರಗಳು ಯಾವ ರೀತಿ ಸಹಕಾರಿಗಳಾಗಿವೆಯೋ ತದ್ರೀತಿ ಕ್ರಿಸ್ತನು ತನ್ನನ್ನು ನಂಬುವವರ ಆತ್ಮೀಯ ಬೆಳವಣಿಗೆಗೆ ಸಹಕಾರಿಯಾಗಿದ್ದಾನೆ. ಅವನು ಅವರ ನಿತ್ಯಪ್ರಕಾಶವು ಮತ್ತು ಸೂರ್ಯನೂ ಗುರಾಣಿಯೂ ಆಗಿದ್ದಾನೆ. ಅವನು ಇಸ್ರಾಯೇಲ್ಯರಿಗೆ ಮಂಜಿನಂತೆ ಇರುವನು. ಹುಲ್ಲುಕೊಯಿದ ಮೇಹುಗಾಡಿನ ಮೇಲೆ ಸುರಿಯುವ ವೃಷ್ಟಿಯಂತೆ ಇರಲಿ. ಆತನು ಅವರ ಜೀವಕರವಾದ ನೀರಾಗಿರುವನು; ದೇವರು ಕೊಡುವ ರೊಟ್ಟಿ ಯಾವುದಂದರೆ ಪರಲೋಕದಿಂದ ಇಳಿದು ಬಂದು ಜೀವವನ್ನು ಉಂಟು ಮಾಡುವಂಥಾದ್ದೆ.LI 59.1

    ಭೂಮಂಡಲವನ್ನು ಗಾಳಿಯು ಹೇಗೆ ಆವರಿಸಿಕೊಂಡಿರುವುದೋ ಅÀ್ಟರ ಮಟ್ಟಿಗೆ ಸತ್ಯವಾಗಿಯೂ ದೇವರು ತನ್ನ ಕುಮಾರನನ್ನು ಕೊಟ್ಟು ಅಸಮಾನವಾದ ತನ್ನ ಕೃಪಾವರದ ವಾತಾವರಣವು ವಿಶ್ವವ್ಯಾಪಾಯಾಗಿರುವಂತೆ ಮಾಡಿದ್ದಾನೆ. ಯಾರು ಇದನ್ನು ಆಯ್ದುಕೊಂಡು ಇದರಲ್ಲಿ ಉಸಿರಾಡಿ ಜೀವಿಸುವರೋ ಅವರೆಲ್ಲರೂ ಸ್ತ್ರೀಯರಾಗಲಿ ಪುರÀರಾಗಲಿ ಪೂರ್ಣಪ್ರಮಾಣಕ್ಕೆ ಬೆಳೆಯುವರು. ಪ್ರಕಾಶಮಾನವಾದ ಕಿರಣಗಳು ತಮ್ಮ ಸೌಂದರ್ಯವನ್ನೂ, ಅಂಗಸಂಯೋಗವನ್ನೂ ಪರಿಪೂರ್ಣ ಮಾಡಲೆಂದು ಪುÀ್ಪ ಒಂದು ಸೂರ್ಯನ ಕಡೆಗೆ ತಿರುಗುವಂತೆ ನಾವೂ ನೀತಿಸೂರ್ಯನಾದ ಕ್ರಿಸ್ತನ ಕಡೆಗೆ ತಿರುಗಿಕೊಳ್ಳಲು ಸ್ವರ್ಗದ ಪ್ರಕಾಶವು ನಮ್ಮ ಗುಣವನ್ನು ಕ್ರಿಸ್ತನ ಕಡೆಗೆ ತಿರುಗಿಸಲಿ. ಕ್ರಿಸ್ತನು ಈ ಮುಂದಣ ಮಾತುಗಳಲ್ಲಿ ನಮಗೆ ತಿಳಿಸುವುದೇನಂದರೆ “ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನಂತೂ ನಿಮ್ಮಲ್ಲಿ ನೆಲೆಗೊಂಡಿರುವೆನು; ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನÀ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವೂ ನನ್ನಲ್ಲಿ .................. ಫಲಕೊಡಲಾರಿರಿ ................... ನೀವು ನನ್ನನ್ನು ಬಿಟ್ಟು ಏನನ್ನೂ ಮಾಡಲಾರರಿ.” ಕೊಂಬೆಯು ಅದರ ಬೆಳವಣಿಗೆಗೂ ಮತ್ತು ಫಲಫಲಿಸಲಿಕ್ಕೂ ಹೇಗೆ ಬಳ್ಳಿಯ ಮೇಲೆ ಆತುಕೊಂಡಿರುವುದೋ ಹಾಗೆಯೇ ನೀವೂ ಶುದ್ಧವಾದ ಜೀವಮಾನದಲ್ಲಿ ನಡಿಯಲು ಕ್ರಿಸ್ತನನ್ನೇ ಆತುಕೊಂಡಿರಬೇಕು. ಆತನಿಲ್ಲದೆ ನಿಮ್ಮಲ್ಲಿ ಜೀವವಿಲ್ಲ. ಶೋಧನೆಗಳನ್ನು ಎದುರಾಯಿಸುವುದಕ್ಕೂ ಕೃಪೆಯಲ್ಲೂ ಶುದ್ಧತೆಯಲ್ಲೂ ಬೆಳೆಯುವುದಕ್ಕೂ ನಿಮ್ಮಲ್ಲಿಯೇ ಶಕ್ತಿಯಿಲ್ಲ. ಆತನಲ್ಲಿ ನೀವು ವಾಸಿಸುವುದರಿಂದ ಉತ್ತಮ ಸ್ಥಿತಿಗೆ ಬರುವಿರಿ. ಆತನ ಜೀವಸತ್ವವನ್ನು ನೀವು ಎಳೆದುಕೊಳ್ಳತ್ತಾ ಇದ್ದರೆ ನೀವೂ ಬಾಡದೆ ಉತ್ತಮ ಫಲವನ್ನು ಕೊಡುವಿರಿ. ನದಿಯ ಕಾಲುವೆಯ ಬಳಿಯಲ್ಲಿ ನೆಟ್ಟ ಸಸಿಯಂತಿರುವಿರಿ. ತಮ್ಮ ಕೆಲಸದ ಒಂದು ಭಾಗವನ್ನಾದರೂ ಸ್ವತಂತ್ರಿಸಿ ಮಾಡುವುದು ಸರಿಯೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಇವರು ಪಾಪ ಕ್ಷಮೆಗಾಗಿ ಕ್ರಿಸ್ತನಲ್ಲಿ ನಂಬಿಕೆಯಿಡುತ್ತಾರೆ. ಈ ಸ್ಥಿತಿಯಲ್ಲಿರುವಾಗ ತಮ್ಮ ಸ್ವಪ್ರಯತ್ನಗಳಿಂದ ಪವಿತ್ರ ಜೀವಮಾನದಲ್ಲಿ ನಡೆಯಲು ಪ್ರಯತ್ನಿಸುತ್ತಾರೆ; ಆದರೆ ಇದು ಸಾರ್ಥಕವಾಗಲಾರದು. ಯಾಕಂದರೆ ಕ್ರಿಸ್ತನು - “ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.” ಎಂದು ಹೇಳಿದ್ದಾನೆ. ಕೃಪೆಯಲ್ಲಿ ನಾವು ಬೆಳೆಯುವುದಕ್ಕೂ ನಮ್ಮ ಸಂತೋÀದಲ್ಲಿರುವುದಕ್ಕೂ, ಇತರರಿಗೆ ಉಪಯೋಗವಾಗಿರುವುದಕ್ಕೂ ನಾವು ಕ್ರಿಸ್ತನಲ್ಲಿ ಅಂಟಲ್ಪಟ್ಟವರಾಗಿರಬೇಕು. ಆತನಲ್ಲಿ ಪ್ರತಿದಿನವೂ ಪ್ರತಿಗಂಟೆಯಲ್ಲಿಯೂ ನೆಲಸಿರುವುದಾದರೆ ಮಾತ್ರ ಆತನ ಆಗಿರುತ್ತಾನೆ. ಕ್ರಿಸ್ತನು ಆದಿಯೂ ಅಂತ್ಯವೂ ಸದಾ ಇರುವಾತನೂ ಆಗಿರುತ್ತಾನೆ. ಕ್ರಿಸ್ತನು ನಮ್ಮ ಜೀವಮಾನದ ಅದಿಯಲ್ಲೂ ಅಂತ್ಯದಲ್ಲೂ ಮಾತ್ರ ಇರುವುದು ಸಾಲದು. ಆದರೆ ಆತನು ನಮ್ಮ ಬಾಳಿನ ಪ್ರತಿದಿನವೂ ಪ್ರತಿಗಂಟೆಯಲ್ಲೂ ನವ್ಮೊಂದಿಗಿರಬೇಕು. ಹೀಗೆ ಮಾಡುವುದರಿಂದ ಮಾತ್ರ ಆತನ ಕೃಪೆಯ ಸಹವಾಸದಲ್ಲಿ ಬೆಳೆಯುಲು ಸಾಧ್ಯವಾಗುತ್ತದೆ. ದಾವೀದನು ಹೇಳುವುದೇನೆಂದರೆ “ನಾನು ಯಾವಾಗಲೂ ಯೆಹೋವನನ್ನು ದೃಷ್ಟಿಸುತ್ತಾ ಇರುವೆನು, ಆತನು ನನ್ನ ಬಲಗಡೆ ಇರುವುದರಿಂದ ನಾನು ಎಂದೆಂದಿಗೂ ಕದಲೆನು.” “ಕ್ರಿಸ್ತನಲ್ಲಿ ಇರುವುದು ಹೇಗೆ” ಎಂದು ನೀನು ಕೇಳುತ್ತೀಯಾ? ನೀನು ಹೇಗೆ ವೊದಲು ಕ್ರಿಸ್ತನನ್ನು ಸ್ವೀಕರಿಸಿದೆಯೋ ಹಾಗೆಯೇ ಆತನ ಬಳಿಗೆ ಸೇರಿಯೂ ಆತನೊಂದಿಗಿರಬೇಕು.LI 60.1

    “ನೀವು ಕರ್ತನಾದ ಯೇಸುವೆಂಬ ಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದುಕೊಳ್ಳಿರಿ.” “ನೀತಿವಂತನು ನಂಬಿಕೆಯಿಂದಲೇ ಬದುಕುವನು.”4 ದೇವರಿಗೆ ಪೂರ್ತಿ ವಿಧೇಯರಾಗಿರಲೂ ಆತನ ಸೇವೆ ಮಾಡಲೂ ಪೂರ್ಣವಾಗಿ ಜೀವಿಸಲೂ ನಿಮ್ಮನ್ನು ಆತನಿಗೆ ಒಪ್ಪಿಸಿಕೊಟ್ಟಿದ್ದೀರಿ; ಮತ್ತು ಕ್ರಿಸ್ತ ನನ್ನು ರಕ್ಷಕನನ್ನಾಗಿ ಸ್ವೀಕರಿಸಿದ್ದೀರಿ. ನೀವೇ ನಿಮ್ಮ ಪಾಪಕ್ಕಾಗಿ ಬಲಿಯನ್ನರ್ಪಿಸಲೂ ನಿಮ್ಮ ಹೃದಯಗಳನ್ನು ಪರಿವರ್ತಿಸಲೂ ನೀವು ಅಶಕ್ತರಾಗಿರುತ್ತೀರಿ; ಆದರೆ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟನಂತರ ಇದನ್ನೆಲ್ಲಾ ದೇವರೇ ಕ್ರಿಸ್ತನ ಸಲುವಾಗಿ ನಿಮಗೆ ಮಾಡಿದ್ದಾನೆಂದು ನಂಬುವವರಾಗಬೇಕು. ನಂಬಿಕೆಯಿಂದಲೇ ಕ್ರಿಸ್ತನವರಾಗಿದ್ದೀರಿ, ನಂಬಿಕೆಯಿಂದಲೇ ಆತನಲ್ಲಿದ್ದು ಬೆಳೆಯುವವರಾದಿರಿ; ಇದು ದೇವರ ಕೊಡುವಿಕೆಯಿಂದಲೂ ನಿಮ್ಮ ಸ್ವೀಕಾರದಿಂದಲೂ ಆಯಿತು. ನೀನು ಸರ್ವಸ್ವವನ್ನೂ ಅಂದರೆ ನಿನ್ನ ಹೃದಯ, ಮನಸ್ಸು ಮತ್ತು ಸೇವೆಯನ್ನೂ ಆತನಿಗೆ ಅರ್ಪಿಸಬೇಕು; ಆತನ ಅಜ್ಞಾವಿಧಿಗಳೆಲ್ಲವನ್ನೂ ಕೈಕೊಂಡು ನಡೆಯಲು ನಿನ್ನದೆಲ್ಲವನ್ನೂ ಆತನಿಗೆ ಒಪ್ಪಿಸಿಕೊಡು; ವಿಧೇಯನಾಗಿರಲು ಶಕ್ತಿ ಬರುವಂತೆಯೂ ಕ್ರಿಸ್ತನು ನಿನ್ನನ್ನು ಪೂರ್ಣವಾಗಿ ಆಶೀರ್ವದಿಸುವಂತೆಯೂ, ಆತನು ನಿನ್ನಲ್ಲಿ ನೆಲಸಿ ನಿನ್ನ ಶಕ್ತಿಯಾಗಿರುವಂತೆಯೂ, ನಿನ್ನನ್ನು ಪರಿಶುದ್ಧನನ್ನಾಗಿ ಮಾಡುವಂತೆಯೂ ಸ್ವೀಕರಿಸಿ ಆತನಿಂದ ಪಡೆಯಬೇಕಾದುದನ್ನೆಲ್ಲಾ ಪಡೆಯುವಂತಾಗು.LI 61.1

    ಪ್ರತಿ ಪ್ರಾತ:ಕಾಲದಲ್ಲೂ ನಿನ್ನನ್ನು ಆತನಿಗೆ ಪ್ರತಿÉ್ಠ ಪಡಿಸಿಕೋ; ಇದೇ ನಿನ್ನ ಪ್ರತಿದಿನದ ಪ್ರಥಮ ಕರ್ತವ್ಯವಾಗಿರಲಿ. ನಿನ್ನ ಪ್ರಾರ್ಥನೆಯು ಹೀಗಿರಲಿ. ನಾನು ಪೂರ್ತಿ ನಿನ್ನವನಾಗಿರುವಂತೆ ಸ್ವೀಕರಿಸು. ನನ್ನ ಸರ್ವಯೋಚನೆಗಳನ್ನೂ ನಿನ್ನ ಪಾದಕಮಲಗಳಲ್ಲಿರಿಸುತ್ತೇನೆ. ನಾನು ನಿನ್ನಲ್ಲಿದ್ದುಕೊಂಡು ಎಲ್ಲಾ ಕೆಲಸಗಳನ್ನು ಮಾಡುವಂತೆ ಸಹಾಯಮಾಡು. ಆತನ ಕೃಪೆಯು ನಿನಗೆ ಮಾರ್ಗ ದರ್ಶಕವಾಗಿರುವಂತೆಯೂ ಸಮಸ್ತ ಕಾರ್ಯಗಳನ್ನು ಆತನಿಗೇ ಅಧೀನಮಾಡಿಕೊಟ್ಟು ಮಾಡಬೇಕಾದವುಗಳನ್ನು ಮಾಡು. ಬಿಡಬೇಕಾದವುಗಳನ್ನು ಬಿಡು. ಈ ರೀತಿ ಪ್ರತಿದಿನವೂ ನಿನ್ನನ್ನು ದೇವರಿಗೆ ಪ್ರತಿÉ್ಠ ಮಾಡಿಕೊಳ್ಳುತ್ತಿರಬಹುದು; ಮತ್ತು ನಿನ್ನ ಜೀವಮಾನವೂ ಕ್ರಿಸ್ತನ ಜೀವಮಾನಕ್ಕೆ ರೂಪಾಂತರಿಸಲ್ಪಡುತ್ತಿರಬಹುದು. ಕ್ರಿಸ್ತನಲ್ಲಿರುವ ಜೀವಮಾನವು ಶಾಂತಜೀವಮಾನ, ಸಂಭ್ರಮದ ಭಾವನೆಯು ನಿಲ್ಲಲ್ಲಿಲ್ಲದಿರಬಹುದು. ಆದರೆ ನಾವು ಶಾಂತರಾಗಿಗೂ ನಂಬಿಕೆಯುಳ್ಳವರಾಗಿಯೂ ಇರಬೇಕಾಗಿದೆ. ಆಗ ನಿನ್ನ ಬಲಹೀತನೆಯು ಆತನ ಶಕ್ತಿಯಲ್ಲೂ ನಿನ್ನ ಅಜ್ಞಾನವು ಆತನ ಜ್ಞಾನದಲ್ಲೂ, ಶೋಧನೆಗೆ ಒಳಬೀಳುವ ಸ್ಥಿತಿಯು ಶೋಧನೆಗಳನ್ನು ಎದುರಾಯಿಸುವ ಆತನ ಸ್ಥಿತಿಯಲ್ಲೂ ಐಕ್ಯಗೊಳ್ಳುವುವು. ನೀನು ನಿನ್ನನ್ನೇ ಆತುಕೊಳ್ಳದೆ ಕ್ರಿಸ್ತನನ್ನು ಆತುಕೊಳ್ಳುವವನಾಗು. ನಿನ್ನ ಬಲಹೀನತೆಯಲ್ಲಿ ಬಲವುಂಟೋ? ಆತನನ್ನು ನಂಬು, ಆತನ ಗುಣವನ್ನು ನಿನ್ನ ಹೃದಯವು ಅರಿತುಕೊಳ್ಳುವಂತಾಗಲಿ. ಕ್ರಿಸ್ತನ ನಿಸ್ವಾರ್ಥತೆ, ದೈನ್ಯತೆ, ಪರಿಶುದ್ಧತ್ವ, ಅಸಮಾನವಾದ ಪ್ರೇಮ ಇವುಗಳೆಲ್ಲವೂ ನಿನ್ನ ಆತ್ಮಧ್ಯಾನಾಂಶಗಳಾಗಿರಲಿ, ಆತನನ್ನು ಪ್ರೀತಿಸಿ, ಆತನ ಮೇಲೆ ಆತುಕೊಂಡು ಇರುವುದಾದರೆ ಆಗ ಕ್ರಿಸ್ತನ ಸಾರೂಪ್ಯಕ್ಕೆ ಮಾರ್ಪಡುವಿ. ‘ನನ್ನ ಸಂಗಡ ಇರ್ರಿ, ನನ್ನಲ್ಲಿ ನೆಲೆಗೊಂಡಿರ್ರಿ’ ಎಂಬೀ ಮಾತುಗಳನ್ನು ಕ್ರಿಸ್ತನು ನಮಗೆ ಹೇಳುತ್ತಿರುತ್ತಾನೆ. ಈ ಶಬ್ದಗಳು ನಮಗೆ ವಿಶ್ರಾಂತಿಯ, ಸ್ಥಿರತ್ವದ ಮತ್ತು ನಂಬಿಕೆಯ ಅಭಿಪ್ರಾಯಗಳನ್ನು ಸೂಚಿಸುತ್ತವೆ. ಮತ್ತು ಆತನ ಕರೆಯುವಿಕೆಯ ನುಡಿಗಳಿಲ್ಲಿವೆ - “ನನ್ನ ಬಳಿಗೆ ಬನ್ನಿರಿ ............................ ನಿಮಗೆ ವಿಶ್ರಾಂತಿ ಕೊಡುವೆನು.” ಕೀರ್ತನೆಗಾರನ ಅಭಿಪ್ರಯವೂ ಹೀಗೆಯೇ ಇದೆ. “ಯೆಹೋವನ ಸನ್ನದಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು.” “ಶಾಂತರಾಗಿ ಭರವಸೆದಿಂದಿರುವುದೇ ನಿಮಗೆ ಬಲ”3 ಎಂಬೀ ಭರವಸೆಯನ್ನು ಯೆಶಾಯನು ಕೊಡುತ್ತಾನೆ. ಅಲಸ್ಯವುಳ್ಳವರಾಗಿದ್ದರೆ ಈ ವಿಶ್ರಾಂತಿಯು ದೊರಕುವುದಿಲ್ಲ. ಕಾರಣವೇನಂದರೆ - ರಕ್ಷಕನ ಕರೆಯುವಿಕೆಯಲ್ಲಿ ವಿಶ್ರಾಂತಿಯೆಂಬುದು ಕಾರ್ಯವನ್ನು ನಿಲ್ಲಿಸದೆ ಮುಂದುವರಿಸುತ್ತಿರುವುದರಲ್ಲಿ ಸೇರಿದೆ. “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತು ಕೊಳ್ಳಿರಿ. ಆಗ ನಿಮಗೆ ವಿಶ್ರಾಂತಿಯಾಗುವುದು.” ನಮ್ಮ ಮನಸ್ಸು ಕ್ರಿಸ್ತನನ್ನು ಬಿಟ್ಟು ನಮ್ಮ ಮೇಲೇ ಆತುಕೊಂಡಿರುವುದಾದರೆ ಆಗ ಇದು ನಮ್ಮ ಬಲ, ಜೀವಗಳಿಗೆ ಮೂಲನಾದ ಕ್ರಿಸ್ತನನ್ನು ಬಿಟ್ಟು ದೂರ ಹೋಗುತ್ತದೆ. ಕ್ರಿಸ್ತನ ಕಡೆ ಇರುವ ನಮ್ಮ ಗಮನವನ್ನು ಬೇರೆ ಕಡೆಗೆ ಸೆಳೆಯಬೇಕೆಂದೂ, ನಮಗೂ ಕ್ರಿಸ್ತನಿಗೂ ಇರುವ ಪರಸ್ಪರ ಐಕ್ಯವನ್ನು ಭೇದಿಸಿ ನಮ್ಮನ್ನು ಆತನಿಂದ ದೂರ ಸರಿಯುವಂತೆ ಸೈತಾನನು ಸದಾಕಾಲದಲ್ಲೂ ನಾನಾ ಪ್ರಯತ್ನಗಳನ್ನು ಮಾಡುತ್ತಿರುವನು. ಭೂಲೋಕದ ಭೋಗಾಶೆ, ಜೀವಮಾನದ ಹೊರೆ, ಜೀವಮಾನದ ಚಿಂತೆ, ಕಳವಲ ಮತ್ತು ಇತರ ಅಸಂಪೂರ್ಣತೆ ಇವುಗಳಲ್ಲಿ ಒಂದರ ಮೂಲಕವಾದರೂ ಸರಿ ಅಥವ ಇವುಗಳೆಲ್ಲವುಗಳ ಮೂಲಕವಾದರೂ ಸರಿ ನಿಮ್ಮ ಗಮನವನ್ನು ಬೇರೆಕಡೆಗೆ ಸೆಳೆಯುತ್ತಾನೆ. ನೀವು ಸೈತಾನನ ಉಪಾಯಗಳಿಂದ ದಾರಿತಪ್ಪಿ ಹೋಗಬೇಡಿರಿ. ದೇವರ ಸೇವೆಯಲ್ಲಿ ಪ್ರಾಮಾಣಿಕರಾಗಿಯೂ, ದೇವರಿಗೋಸ್ಕರ ಬಾಳಬೇಕೆಂದೂ ಬಯಸುವ ಅನೇಕರ ಅಪರಾಧಗಳನ್ನೂ ಬಲಹೀನತೆಗಳನ್ನೂ ಅವರ ಗಮನಕ್ಕೆ ತಂದು ಅವರನ್ನು ಕ್ರಿಸ್ತನಿಂದ ಅಗಲಿಸಿ ತಾನು ಜಯ ಪಡೆಯಬೇಕೆಂದು ಸೈತಾನನು ಬಯಸುತ್ತಾನೆ. ನಾನು ನನ್ನದು ಎಂಬ ಯೋಚನೆಯಲ್ಲಿ ನಾವುಗಳಿರದೆ, ನಮಗೆ ರಕ್ಷಣೆಯಾಗುತ್ತದೋ ಇಲ್ಲವೋ ಎಂಬ ಸಂದೇಹದಲ್ಲೂ ನಾವಿರದೆ ಕ್ರಿಸ್ತನಲ್ಲಿ ವಿಶ್ವಾಸಿಗಳಾಗಿರೋಣ. ಇವುಗಳೆಲ್ಲವೂ ನಮ್ಮ ಶಕ್ತಿಗೆ ಮೂಲನಾದವನಿಂದ ನಮ್ಮ ಆತ್ಮಗಳನ್ನು ತಿರುಗಿಸುತ್ತವೆ. ನಿನ್ನ ಆತ್ಮವನ್ನು ದೇವರಿಗೆ ಒಪ್ಪಿಸಿ ಆತನನ್ನೆ ನಂಬು. ‘ನಾನು’ ಎಂಬ ಸ್ವಯಂಪ್ರತಿÉ್ಠಯು ಅಳಿದುಹೋಗಲಿ. ಸಂದೇಹಗಳನ್ನು ದೂರಮಾಡು. ಶ್ರೀ ಪೌಲನು ಹೇಳುವಂತೆ “ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ. ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ನಂಬಿಕೆಯ ಮೇಲಣಿಂದಲೇ.” ದೇವರಲ್ಲಿ ವಿಶ್ರಾಂತರಾಗಿರು. ನೀವು ಆತನಿಗೆ ಒಪ್ಪಿಸಿಕೊಟ್ಟದ್ದನ್ನು ಇಟ್ಟುಕೊಳ್ಳಲು ಶಕ್ತನಾಗಿದ್ದಾನೆ. ಆತನ ಕೃಪಾಸ್ತ್ರಗಳಲ್ಲಿ ನಿಮ್ಮನ್ನು ಒಪ್ಪಿಸಿಕೊಟ್ಟರೆ ಪ್ರೀತಿಸುವಾತನ ಮೂಲಕ ಜಯಶಾಲಿಗಳಿಗಿಂತಲೂ ನಿಮ್ಮನ್ನೇ ಉತ್ತಮರನ್ನಾಗಿ ಮಾಡುವನು.LI 62.1

    ಕ್ರಿಸ್ತನು ನರಾವತಾರವೆತ್ತುದುದರ ಮೂಲಕ ತನ್ನನ್ನು ಮಾನವರೊಂದಿಗೆ ಪ್ರೀತಿಯ ಕಟ್ಟಿನಿಂದ ಬಂಧಿಸಿಕೊಂಡಿದ್ದಾನೆ. ಮನುÀ್ಯನು ಸ್ವಯಂಕೃತಾಪರಾಧದಿಂದ ಈ ಪ್ರೀತಿಯಿಂದ ದೂರವಾಗುವನೇ ವಿನ: ಮತ್ತ್ಯಾವ ಶಕ್ತಿಯಾದರೂ ಮಾನವನನ್ನು ಕ್ರಿಸ್ತನಿಂದ ಭಿನ್ನಮಾಡಲು ಸಾಧ್ಯವಿಲ್ಲ. ಕ್ರಿಸ್ತನ ಸಹವಾಸದಿಂದ ನಮ್ಮನ್ನು ಬಿಡಿಸಿಕೊಳ್ಳುವಂತೆಯೂ ಆತನ ಸಂಬಂಧದಿಂದ ದೂರ ಸರಿಯುವಂತೆಯೂ ಸೈತಾನನು ನಮ್ಮಲ್ಲಿ ತನ್ನ ಕಾರ್ಯವನ್ನು ಸಾಧಿಸಲು ಸದಾ ಹೊಂಚುತ್ತಿರುವನು. ಈ ವಿÀಯದಲ್ಲಿ ನಾವು ಎಚ್ಚರದಿಂದಿರುವ ಅಗತ್ಯವಿದೆ. ಇದಕ್ಕಾಗಿ ಹೋರಾಡಲೂ ಪ್ರಯತ್ನ ಮಾಡುವವರಾಗಬೇಕು. ಯಾವುದೇ ರೀತಿಯಿಂದಲಾದರೂ ಮತ್ತೊಬ್ಬ ಯಜಮಾನನನ್ನು ನಾವು ಆರಿಸಿಕೊಳ್ಳದಂತೆ ಎಚ್ಚರದಿಂದ ಇರೋಣ. ಯಾರನ್ನು ನಮ್ಮ ಯಜಮಾನನನ್ನಾಗಿ ಆರಿಸಿಕೊಳ್ಳಬೇಕೆಂಬ ವಿಚಾರ ಸ್ವತಂತ್ರರಾಗಿರುತ್ತೇವೆ. ಕ್ರಿಸ್ತನಲ್ಲಿ ನಮ್ಮ ದೃಷ್ಟಿಯನ್ನು ಇರಿಸುವೆವಾದರೆ ಆತನು ನಮ್ಮನ್ನು ಕಾಪಾಡುವನು. ನಾವು ಆತನನ್ನು ಸದಾ ನೋಡುತ್ತಿರುವುದಾದರೆ ಸುರಕ್ಷಿತರಾಗಿರಬಹುದು. ಆತನನ್ನು ನಾವು ಸದಾ ನೋಡುತ್ತಿರುವುದರಿಂದ ನಾವೂ ದೃಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ.LI 64.1

    ಆದಿಶಿÀ್ಯರು ಈ ಪ್ರಕಾರವಾಗಿಯೇ ಪ್ರಿಯ ರಕ್ಷಕನ ಸಾರೂಪ್ತವನ್ನು ಹೊಂದಿದರು. ಅವರು ಆತನ ಮಾತುಗಳನ್ನು ಲಾಲಿಸಿದಾಗ ತಮಗೆ ಆತನು ಅವಶ್ಯಕವಾಗಿದ್ದನೆಂದು ಭಾವಿಸಿದರು. ಅವರು ಹುಡುಕಿದ್ದರಿಂದ ಕಂಡುಕೊಂಡರು. ಕಂಡುಕೊಂಡವರು ತಟಸ್ಥರಾಗಿರದೆ ಆತನನ್ನು ಹಿಂಬಾಲಿಸಿದರು. ಮನೆಯಲ್ಲೂ ಊಟಮಾಡುವಾಗಲೂ ಏಕಾಂತದಲ್ಲೂ ಬಯಲಿನಲ್ಲೂ ಆ ಶಿÀ್ಯರು ಕ್ರಿಸ್ತನ ಸಹವಾಸದಲ್ಲಿದ್ದರು. ಶಿÀ್ಯರು ಗುರುವಿನ ಬಳಿಯಿದ್ದುಕೊಂಡು ಆತನಿಂದ ಬೋಧನೆಗಳನ್ನು ಅಭ್ಯಾಸಿಸುವಂತೆ ಕ್ರಿಸ್ತನ ಶಿÀ್ಯರೂ ಸದಾ ತಮ್ಮ ಗುರುವಿನ ಸಹವಾಸದಲ್ಲಿದ್ದುಕೊಂಡು ಸತ್ಯದ ಪರಿಶುದ್ಧ ಪಾಠಗಳನ್ನು ಕಲಿತುಕೊಳ್ಳತ್ತಿದ್ದರು. ಅವರು ಆತನನ್ನು ತಮ್ಮ ನಾಯಕನನ್ನಾಗಿ ಭಾವಿಸಿ, ಆತನ ಬೋಧನೆಯಿಂದ ತಮ್ಮ ತಮ್ಮ ಕರ್ತವ್ಯಗಳನ್ನು ಕಂಡುಕೊಂಡರು. ಆಗ ಯೇಸುಕ್ರಿಸ್ತನೊಡನೆ ಇದ್ದ ಶಿÀ್ಯರೂ ‘ನಮ್ಮಂಥಾ ಸ್ವಭಾವವುಳ್ಳವರಾಗಿದ್ದರು.’ ಪಾಪದ ಸಂಗಡ ಅವರೂ ನಮ್ಮಂತೆ ಹೋರಾಟ ಮಾಡಬೇಕಾಗಿತ್ತು. ಪವಿತ್ರ ಜೀವಮಾನದಲ್ಲಿ ನಡೆಯಲು ನಮ್ಮಂತೆ ಅವರಿಗೂ ಕ್ರಿಸ್ತನ ಕೃಪಾಸಹಾಯವು ಬೇಕಾಗಿದ್ದಿತು.LI 65.1

    ಅತ್ಯಧಿಕ ಪ್ರಮಾಣದಲ್ಲಿ ಕ್ರಿಸ್ತನ ಸಾರೂಪ್ಯವನ್ನು ಪ್ರತಿಬಿಂಬಿಸಿದ ಯೋಯಾನನೂ ಸಹ ಪ್ರಥಮದಲ್ಲಿ ಅ ಗುಣವನ್ನು ಸ್ವಾಭಾವಿಕವಾಗಿ ಹೊಂದಿರಲಿಲ್ಲ. ತನ್ನ ಮಾತೇ ನಡೆಯಬೇಕೆಂಬ ಹಟವಾದವನ್ನೂ, ಸ್ಥಾನಮಾನ ಗೌರವಗಳನ್ನು ಪಡೆಯಬೇಕೆಂಬ ದುರಾಶೆಯನ್ನೂ ಹೊಂದಿದ್ದನಲ್ಲದೆ, ಮುಂಗೋಪಿಯೂ ಅಪಕಾರವಾದಾಗ ಸಿಟ್ಟಿಗೆದ್ದು ರೋÀಸ್ವಭಾವವನ್ನು ಹೊಂದುವವನೂ ಆಗಿದ್ದನು. ಆದರೆ ದೈವಪುರÀನ ಗುಣವು ಆತನಿಗೆ ಕಂಡಾಗ ಆತನು ತನ್ನ ನ್ಯೂನತೆಯನ್ನು ತಿಳಿದುಕೊಂಡು ಆ ಜ್ಞಾನದಿಂದಲೇ ತನ್ನನ್ನು ತಗ್ಗಿಸಿಕೊಂಡು ದೇವಕುಮಾರನ ಪ್ರತಿದಿನದ ಬಾಳಿನಲ್ಲಿ ತಾನು ಕಂಡ ಬಲ, ತಾಳ್ಮೆ, ಶಕ್ತಿ, ಕರುಣೆ, ಮಹಿಮೆ, ದೈನ್ಯತೆ ಇವುಗಳು ಯೇಹಾನನನ್ನು ಪ್ರೀತಿಯಿಂದಲೂ ಆಶ್ಚರ್ಯದಿಂದಲೂ ತುಂಬಿಸಿದವು. ದಿನದಿನವೂ ಆತನ ಹೃದಯವು ಕ್ರಿಸ್ತನ ಕಡೆಗೆ ಎಳೆಯಲ್ಪಡುತ್ತಾ ಇದ್ದಿತು; ಕಡೆಗೆ ತನ್ನನ್ನು ಮರೆತುಬಿಟ್ಟನು. ಕೋಪದಿಂದಲೂ, ದುರಾಶೆಯಿಂದಲೂ ಕೂಡಿದ ಈ ಯೋಹಾನನ ಮನಸ್ಸು ಕ್ರಿಸ್ತನಿಗೆ ಅಧೀನ ಮಾಡಲ್ಪಟ್ಟು ರೂಪಾಂತರವನ್ನು ಹೊಂದಿತು. ಪವಿತ್ರಾತ್ಮನ ಪುನರ್ಜನ್ಮದ ಶಕ್ತಿಯು ಆತನನ್ನು ನೂತನ ಸೃಷ್ಟಿಯ ನ್ನಾಗಿ ಮಾಡಿತು. ಕ್ರಿಸ್ತನ ಪ್ರೀತಿಯ ಶಕ್ತಿಯು ಯೋಹಾನನಿಗೆ ನೂತನ ಶಕ್ತಿಯನ್ನು ತಂದಿತು. ಕ್ರಿಸ್ತನಲ್ಲಿ ಒಂದಾಗುವುದರ ಪರಿಪೂರ್ಣ ಫಲಿತಂಶವು ಇದೇನೇ ಕ್ರಿಸ್ತನು ನಮ್ಮಲ್ಲಿ ನೆಲೆಸಿದರೆ ನಮ್ಮ ಸ್ವಭಾವವೆಲ್ಲವೂ ಮಾರ್ಪಾಡುಗುತ್ತದೆ. ಆತನ ಪ್ರೀತಿಯ ಹೃದಯವು ನಮ್ಮ ಹೃದಯದ ಕಾಠಿಣ್ಯವನ್ನು ಕರಗಿಸಿ ಆತ್ಮವನ್ನು ಸ್ವಾಧೀನ ಮಾಡಿಕೊಂಡು ನಮ್ಮ ಯೋಚನೆಗಳನ್ನು ದೇವರ ಕಡೆಗೂ ಸ್ವರ್ಗದ ಕಡೆಗೂ ತಿರುಗಿಸುತ್ತವೆ.LI 65.2

    ಕ್ರಿಸ್ತನು ಸ್ವರ್ಗಕ್ಕೆ ಏರಿಹೋದರೂ ಆತನ ಇರುವಿಕೆಯನ್ನು ಆತನ ಹಿಂಬಾಲಕರು ಮನನ ಮಾಡಿಕೊಂಡರು. ಅದು ಪ್ರತಿ ವ್ಯಕ್ತಿಯ ಹತ್ತಿರವೂ ಇರುವಂಥಾದ್ದಾಗಿ ಪ್ರೀತ ಬೆಳಕುಗಳಿಂದ ತುಂಬಿತು. ರಕ್ಷಕನಾದ ಯೇಸುವು ಅವರ ಸಂಗಡ ನಡೆದನು, ಮಾತಾಡಿದನು, ಅವರ ಸಂಗಡವಿದ್ದು ಪ್ರಾರ್ಥನೆ ಮಾಡಿದನು. ಅವರ ಹೃದಯಗಳಲ್ಲಿ ನೆಮ್ಮದಿಯೂ ನಿರೀಕ್ಷೆಯೂ ಬಂದಿತು. ಸಮಾಧಾನದ ಸಮಾಚಾರವು ಆತನ ಬಾಯಿಯಲ್ಲಿರುವಾಗಲೇ ಆತನು ಸ್ವರ್ಗಕ್ಕೆ ಏರಿದು. ದೇವದೂತರು ಆತನನ್ನು ವೋಡದಲ್ಲಿ ಸ್ವೀಕರಿಸಿದಾಗ ಆತನ ಧ್ವನಿಯು ಅವರಿಗೆ ಹೀಗೆ ಹೇಳಿತು - “ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” ಆತನು ಶರೀರಧಾರಿಯಾಗಿ ಸ್ವರ್ಗಕ್ಕೆ ಏರಿಹೋದನು. ದೇವರ ಸಿಂಹಾಸನದ ಎದುರಿನಲ್ಲಿರುವೆನೆಂದೂ, ಇನ್ನೂ ಆತನು ಅವರ ಸ್ನೇಹಿತನೂ ರಕ್ಷಕನೂ ಆಗಿರುವನೆಂದೂ, ಆತನ ಕರುಣೆಯಲ್ಲಿ ಬದಲಾವಣೆಯಾಗಿಲ್ಲವೆಂದೂ, ತಮ್ಮ ಕÀ್ಟ ತೊಂದರೆಗಳಲ್ಲಿ ಆತನೂ ಒಂದಾಗಿಯೇ ಇರುವನೆಂದೂ ತಿಳಿದುಕೊಂಡು ತನ್ನಿಂದ ರಕ್ಷಣೆ ಹೊಂದಿದವರ ಪರವಾಗಿ ತನ್ನ ಗಾಯದ ಕೈಗಳನ್ನೂ, ಕಾಲುಗಳನ್ನೂ ತೋರಿಸುತ್ತಾ, ಪರಿಶುದ್ಧ ರಕ್ತದ ಪುಣ್ಯವನ್ನು ದೇವರಿಗೆ ಅರ್ಪಿಸುತ್ತಾ ಗಂಭೀರವಾದ ಭಯದಿಂದ ನಮಸ್ಕರಿಸುತ್ತಾ ಕ್ರಿಸ್ತನ ಭರವಸೆಯನ್ನು ನಂಬಿ ಅವರು ಪ್ರಾರ್ಥನೆ ಮಾಡುತ್ತಿದ್ದರು. “ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು. ನೀವು ಇದುವರೆಗೆ ನನ್ನ ಹೆಸರಿನ ಮೇಲೆ ಯಾವುದೊಂದನ್ನೂ ಬೇಡಿಕೊಂಡಿಲ್ಲ; ಬೇಡಿಕೊಳ್ಳಿರಿ ನಿಮಗೆ ಸಿಕ್ಕುವುದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವುದು.” ನಂಬಿಕೆಯಲ್ಲಿ ಮೇಲೆ ಏರುತ್ತಾ ಅವರು ಈ ಪ್ರಬಲವಾದ ವಾದಕ್ಕೆ ಬಂದರು. “ಕ್ರಿಸ್ತಯೇಸು ಮರಣವನ್ನು ಹೊಂದಿದ್ದಲ್ಲದೆ ಜೀವಿತ ನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿದ್ದಾನೆ.” ಪಂಚಾಶತ್ತಮ ಹಬ್ಬದಲ್ಲಿ ಅದರಿಕನು ಬಂದನು; ಕ್ರಿಸ್ತನು ಆತನ ವಿಚಾರದಲ್ಲಿ ಹೀಗೆ ಹೇಳಿದನು - “ಆತನು ನಿಮ್ಮಲ್ಲಿರುವನು” ಮತ್ತು “ನಾನು ಹೋಗುವುದು ನಿಮಗೆ ಹಿತಕರವಾಗಿದೆ. ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ.” “ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ.”3 ಅಲ್ಲಿಂದ ಮುಂದೆ ಕ್ರಿಸ್ತನ ತನ್ನವರ ಹೃದಯದಲ್ಲಿ ಪವಿತ್ರಾತ್ಮನ ಮೂಲಕ ನೆಲಸುವಂತಾಯಿತು. ಈ ಅನ್ಯೋನ್ಯತೆಯು ಕ್ರಿಸ್ತನ ಸ್ವತ: ದೇಹಧಾರಿಯಾಗಿದ್ದಾಗ ನೆಲಸಿದುದಕ್ಕಿಂತಲೂ ಹತ್ತಿರವಾಯಿತು. ಕ್ರಿಸ್ತನ ಬೆಳಕು, ಪ್ರೀತಿ ಆಂತರ್ಯದಲ್ಲಿ ನೆಲಸಿದ್ದ ಆತನ ಶಕ್ತಿಗಳೆಲ್ಲವೂ ಅವರ ಮೂಲಕ ಹೊರಸೂಸಿ, ನೋಡುವ ಜನರು “ಇವರು ಯೇಸುವಿನ ಸಂಗಡ ಇದ್ದವರು” ಎಂದು ಆಶ್ಚರ್ಯಪಡುವಂತಾಯಿತು. ಕ್ರಿಸ್ತನು ಹಿಂದೆ ಆದಿಶಿÀ್ಯರಿಗೆ ಏನಾಗಿದ್ದನೋ ಹಾಗೆಯೇ ಈ ಕಾಲದ ತನ್ನ ಮಕ್ಕಳಿಗೂ ಆಗಿರಲು ಇÀ್ಟಪಡುತ್ತಾನೆ. ಯಾಕಂದರೆ ಕಟ್ಟಕಡೆಯಲ್ಲಿ ತನ್ನ ಸುತ್ತಲೂ ನೆರದಿದ್ದ ಶಿÀ್ಯರ ಗುಂಪನ್ನು ನೋಡಿ ಆತನು ಹೇಳಿದ್ದೇನಂದರೆ - “ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೆನೆ.”LI 66.1

    ಕ್ರಿಸ್ತನು ನಮಗಾಗಿ ಪ್ರಾರ್ಥಿಸಿದನು. ತಾನು ತಂದೆಯೊಡನೆ ಒಂದಾಗಿರುವಂತೆ ನಾವು ಆತನೊಡನೆ ಒಂದಾಗಿರ ಬೇಕೆಂದು ಕೇಳುತ್ತಾನೆ. ಇದು ಎಂಥಾ ಅನ್ಯೋನ್ಯತೆ! ರಕ್ಷಕನು ತನ್ನ ವಿಚಾರ ಹೀಗೆ ಹೇಳುತ್ತಾನೆ. - “ಮಗನು ತನ್ನÀ್ಟಕ್ಕೆ ತಾನು ಏನೂ ಮಾಡಲಾರನು.” ಮತ್ತು “ತಂದೆಯು ನನ್ನಲ್ಲಿದ್ದು ಕೊಂಡು ತನ್ನ ಕ್ರಿಯೆಗಳನ್ನು ನಡಿಸುತ್ತಾನೆ.” ಕ್ರಿಸ್ತನು ನಮ್ಮಲ್ಲಿ ವಾಸಿಸಿದ್ದರೆ ತನ್ನ ಕೆಲಸಗಳನ್ನು ನಡಿಸುವನು. “ದೇವರೇ ತನ್ನ ಸುಚಿತ್ತವನ್ನು ನೆರೆವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟು ಮಾಡುವವನಾಗಿದ್ದಾನೆ.” ನಾವು ಆತನಂತೆ ಕೆಲಸ ಮಾಡೋಣ; ಆತನಲ್ಲಿದ್ದ ಮನಸ್ಸನ್ನೇ ನಾವೂ ತೋರಿಸೋಣ. ಈ ರೀತಿ ಆತನನ್ನು ಪ್ರೀತಿಸಿ, ಆತನಲ್ಲಿ ನೆಲೆಗೊಂಡು “ಪ್ರೀತಿಯಿಂದ ಸತ್ಯವನ್ನು ಅನುಸರಿಸುತ್ತಾ ಬೆಳೆದು ಕ್ರಿಸ್ತನ ಪ್ರಮಾಣವನ್ನು ಮುಟ್ಟುವ ತನಕ ಬೆಳೆಯಬೇಕು.”LI 67.1

    Larger font
    Smaller font
    Copy
    Print
    Contents