Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಮನುÀ್ಯ ನಲ್ಲಿರಬೇಕಾದ ದೈವಜ್ಞಾನ

    ದೇವರು ತನ್ನನ್ನು ಮನುÀ್ಯರಿಗೆ ನಾನಾ ರೀತಿಯಲ್ಲಿ ಪ್ರಕಟಿಸಕೊಂಡು ತನ್ನ ಅನ್ಯೋನ್ಯತೆಯಲ್ಲಿ ಇರಿಸಿಕೊಳ್ಳಲು ಇÀ್ಟಪಡುತ್ತಾನೆ. ಪ್ರಕೃತಿಯೂ ಇದನ್ನು ನಮ್ಮ ಬುದ್ಧಿಗೆ ಗೋಚರಿಸುವಂತೆ ಮಾಡುತ್ತದೆ. ಆತನ ಕೈಕೆಲಸಗಳ ಮೂಲಕ ಪ್ರಕಟವಾಗುವ ಪ್ರೀತಿ ಮಹಿಮೆಗಳು ತೆರೆದ ಮನಸಿಗೆ ಖಚಿತವಾಗುತ್ತದೆ. ಗಮನವಿಟ್ಟು ಲಾಲಿಸುವ ಮನುÀ್ಯನು ಪ್ರಕೃತಿಯ ಮೂಲಕ ದೈವನಿಯಮವನ್ನು ಕೇಳಿ ತಿಳಿದುಕೊಳ್ಳುವನು. ಹಸುರಾದ ಮೈದಾನಗಳು, ಉನ್ನತವಾದ ವೃಕ್ಷಗಳು, ಚಲಿಸುವ ವೋಡಗಳು, ಹೂಗಳು, ವೊಗ್ಗುಗಳು, ಸುರಿಯುವ ಮನೆ, ಗುಳಗುಳನೆ ಹರಿಯುವ ತೊರೆಗಳು, ಆಕಾಶದ ಸೂರ್ಯ, ಚಂದ್ರ, ನಕ್ಷತ್ರಗಳೆಲ್ಲವೂ ದೇವರ ವಿಚಾರ ನಮಗೆ ಬೋಧಿಸಿ ಸೃಷ್ಟಿಕರ್ತನಾದ ಆತನ ಬಳಿಗೆ ನಮ್ಮನ್ನು ಕೊಂಡೊಯ್ಯಲು ಆಹ್ವಾನಿಸುತ್ತವೆ.LI 75.1

    ನಮ್ಮ ರಕ್ಷಕನೂ ಸಹ ಪ್ರಕೃತಿಯ ಸಾದೃÀ್ಯಗಳನ್ನು ತನ್ನ ಅಮೂಲ್ಯ ಬೋಧನೆಗಳೊಂದಿಗೆ ಸೇರಿಸಿ ಹೇಳುತ್ತಿದ್ದನು. ಕಣಿವೆಯ ಹೂವುಗಳೂ ಮರ ಗಿಡಗಳೂ, ಪಕ್ಷಿಗಳೂ, ಸುಂದರವಾದ ಆಕಾಶ ಜೀವಮಾನದ ಸಂಗತಿಗಳೂ, ಪ್ರಕೃತಿಯ ಸನ್ನಿವೇಶಗಳೂ ಆತನ ಬೋಧನೆಯಲ್ಲಿ ಸೇರಿಸಲ್ಪಟ್ಟಿರುತ್ತವೆ. ಈ ಕಾರಣದಿಂದ ನಮ್ಮ ಅನುದಿನದ ಯಾವ ಕÀ್ಟವಾದ ವೃತ್ತಿಯಲ್ಲಾಗಲಿ ಅಥವಾ ಜೀವನದ ಚಿಂತೆಗಳಲ್ಲಾಗಲಿ ಆ ಬೋಧನೆಗಳನ್ನು ಪದೇ ಪದೇ ಜ್ಞಾಪಿಸಿಕೊಳ್ಳ ಬಹುದು. ತನ್ನ ಮಕ್ಕಳು ಆತನ ಕೈಕೆಲಸಗಳನ್ನು ಗಮನಿಸಬೇಕೆಂದೂ ತಾವು ವಾಸಮಾಡುವ ಭೂಲೋಕಕ್ಕೆ ದಯಪಾಸಿರುವ ಸೌಂದರ್ಯವನ್ನು ನೋಡಿ ಹರ್ಷಿಸಬೇಕೆಂದೂ ಇÀ್ಟಪಡುತ್ತಾರೆ. ಆತನು ಸ್ವಯಂಸೌಂದರ್ಯಪ್ರಿಯನು; ಅಧಿಕವಾಗಿ ಹೊರಗಣ ನೋಟದಿಂದಲೂ ಆಕರ್Àಣೀಯವಾದ ಗುಣದ ಸೌಂದರ್ಯವನ್ನು ಕಂಡು ಪ್ರೀತಿಸುವವನೂ ಆಗಿರುತ್ತಾನೆ. ನಮ್ಮಲ್ಲಿ ಸರಳತೆಯೂ ಶುದ್ಧತೆಯೂ ನೆಲೆಯಾಗಿರಲೆಂದು ಆತನು ಇÀ್ಟಪಡುತ್ತಾನೆ. ಆದರೆ ಪುÁ್ಪದಿಗಳಿಂದ ನಮ್ಮನ್ನಲಂಕರಿಸಿ ಕೊಳ್ಳುವುದು ಆತನಿಗೆ ಸಮ್ಮತವಲ್ಲ. ದೇವರ ಸೃಷ್ಟಿಯ ಕೆಲಸಗಳೂ ಆತನ ವಿಧೇಯತೆ ಮತ್ತು ನಂಬಿಕೆಯ ಪಾಠಗಳೂ ಅವುಗಳನ್ನು ಗಮನಿಸಿದರೆ ಮಾತ್ರ ಅವು ನಮಗೆ ಪಾಠಗಳನ್ನು ಕಲಿಸುತ್ತವೆ. ಅತ್ಯಂತ ಸೂಕ್ಷ್ಮವಾದ ಒಂದು ಅಣುವಿನಿಂದ ಹಿಡಿದು ಮಹತ್ತರವಾದ ಒಂದು ನಕ್ಷತ್ರದವರೆಗೂ ನಾವು ಗಮನಿಸಿದರೆ ಅವು ತಮಗೆ ಗೊತ್ತಾದ ಹಾದಿಯಲ್ಲಿ ಯುಗದಿಂದ ಯುಗಕ್ಕೆ ವಿಶ್ವದಲ್ಲಿ ಸುತ್ತುತ್ತಿರುವ ಪ್ರಕೃತಿಯ ನಿಯಮವನ್ನು ಕಾಣಬಹುದಾಗಿದೆ. ಈ ಆಜ್ಞೆಯು ಸೃಷ್ಟಿಕರ್ತನಿಂದಲೇ ಬಂದುದಾಗಿದೆಯೆಂದು ನಾವು ಗ್ರಹಿಸತಕ್ಕದ್ದು. ದೇವರು ತಾನು ನಿರ್ಮಾಣ ಮಾಡಿರುವ ಸರ್ವಸೃಷ್ಟಿಯ ವಿಚಾರದಲ್ಲೂ ಗಮನವಿಟ್ಟು ಅವುಗಳನ್ನು ಸಂರಕ್ಷಿಸುತ್ತಾ ಬರುತ್ತಿದ್ದಾನೆ. ಅನಂತ ಸೃಷ್ಟಿಗೆ ಆಧಾರದ ಭೂತನಾಗಿರುವಾತನು ನಿರ್ಭಯವಾಗಿ ಹಾಡುವ ಕಂದುಬಣ್ಣದ ಒಂದು ಗುಬ್ಬಚ್ಚಿಯ ವಿಚಾರದಲ್ಲೂ ಕೇವಲ ಎಚ್ಚರಿಕೆಯನ್ನು ತೆಗೆದುಕೊಳ್ಳುತ್ತಾನೆ. ಈ ರೀತಿ ಎರಡು ತೆರನಾದ ಕಾರ್ಯಗಳನ್ನೂ ಆತನು ಏಕಕಾಲದಲ್ಲಿ ನಿರ್ವಹಿಸುತ್ತಾನೆ. ಜನರು ತಮ್ಮ ಅನುದಿನದ ಕೆಲಸಗಳನ್ನು ಕÀ್ಟದಿಂದ ಮಾಡುವುದುಮ ಅವರು ಪ್ರತಿದಿನವೂ ಪ್ರಾರ್ಥಿಸುವುದು, ರಾತ್ರಿಯಲ್ಲಿ ನಿದ್ರಿಸುವುದು. ಧನಿಕರು ತಮ್ಮ ಅರಮನೆಗಳಲ್ಲಿ ಭೋಜನ ಮಾಡುವುದು, ಅಥವಾ ಬಡವನು ತನ್ನ ಮಕ್ಕಳೊಡನೆ ಭುಂಜಿಸುತ್ತಿರುವುದು ಇವೇ ವೊದಲದ ಎಲ್ಲಾ ಕಾರ್ಯಗಳನ್ನೂ ನಮ್ಮ ಸ್ವರ್ಗಪಿತನು ಎಚ್ಚರಿಕೆಯಿಂದಲೂ ಪ್ರೀತಿಯಿಂದಲೂ ಗಮನಿಸುತ್ತಲೇ ಬರುತ್ತಿರುತ್ತಾನೆ. ದೇವರು ತಮ್ಮನ್ನು ಗಮನಿಸುತ್ತಿಲ್ಲವೆಂದು ಯಾರೂ ಕಣ್ಣೀರನ್ನು ಸುರಿಸುವುದಿಲ್ಲ. ಅಥವಾ ತಮ್ಮನ್ನು ಗಮನಿಸುತ್ತಿರುತ್ತಾನೆಂದು ಮುಗುಳ್ನಗೆಯನ್ನು ಬೀರುವುದಿಲ್ಲ. ಈ ಸತ್ಯಾಂಶಗಳನ್ನು ಗಮನಿಸದರೆ ನಾವು ಮಾಡುತ್ತಾ ಬರುವ ನಿರರ್ಥಕವಾದ ಚಿಂತೆಗಳನ್ನು ತ್ಯಜಿಸುತ್ತೇವೆ. ಇದನ್ನು ತಿಳಿದ ನಾವು ಆಶಾಭಂಗಪಡಬೇಕಾದುದಿಲ್ಲ; ಯಾಕಂದರೆ ಅವು ಅಲ್ಪವಿÀಯಗಳಾಗಿರಲಿ ಅಥವಾ ಮಹತ್ತರ ವಿಯ ಗಳಾಗಲಿ ದೇವರ ಕೈಯಲ್ಲಿರುತ್ತದೆ. ಅಧಿಕಸಂಖ್ಯೆಯ ಚಿಂತೆಗಳು ಆತನನ್ನು ಗಲಿಬಿಲಿಗೊಳಿಸ ಲಾರವು; ಅಥವಾ ಅವುಗಳ ಭಾರದಿಂದ ಕುಗ್ಗಿಯೂ ಹೋಗುವುದಿಲ್ಲ. ಆಗ ನಾವು ಇತರರು ಅನುಭವಿಸಲಾರದ ಮನಶಾಂತಿಯನ್ನು ಹೊಂದುವೆವು. ಆಕರ್Àಣೀಯವಾದ ಭೂಮಿಯ ಸೌಂದರ್ಯವನ್ನು ನೋಡಿದ ನಾವು ಸಂತೋÀಭರಿತರಾಗುತ್ತಿರುವಾಗಲೇ ಮುಂದಣ ಲೋಕದ ಸೌಂದರ್ಯವನ್ನು ಕುರಿತೂ ಯೋಚಿಸಿ ಹರ್ಷಿಸಬೇಕಲ್ಲವೇ? ಈ ಭೂಲೋಕದಲ್ಲಿರುವಂತೆ ಆ ಲೋಕದಲ್ಲಿ ದೈವಶಾಪದ ಮಾತೇ ಇಲ್ಲ. ರಕ್ಷಣೆ ಹೊಂದಿದವರು ವಾಸಿಸುವ ಆ ಪರಲೋಕವು ನಾವು ಊಹಿಸುವುದಕ್ಕಿಂತಲೂ ಅತ್ಯಧಿಕ ಸೌಂದರ್ಯದಿಂದಲೂ ಮಹಿಮೆ ಯಿಂದಲೂ ಕೂಡಿರುತ್ತದೆಂದು ಮನನಮಾಡಿಕೊಳ್ಳಬೇಕು. ಪ್ರಕೃತಿಯೂ ಸಹ ದೈವಮಹಿಮೆಯನ್ನು ಪೂರ್ಣವಾಗಿ ಪ್ರಕಟಿಸಿದೆ ಸ್ವಲ್ಪಮಟ್ಟಿಗೆ ಮಾತ್ರ ಪ್ರಕಟಸುವುದಾಗಿದೆ. ಇದರ ವಿಚಾರ ಹೀಗೆ ಬರೆದಿದೆ --- “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥಾದೆಲ್ಲವನ್ನು ಕಣ್ಣು ಕಾಣಲಿಲ್ಲ. ಕಿ” ಕೇಳಲಿಲ್ಲ, ಅದರ ಭಾವನೆಯು ಮನುÀ್ಯರ ಹೃದಯದಲ್ಲಿ ಹುಟ್ಟಲಿಲ್ಲ.”LI 75.2

    ಕವಿಗಳೂ ಪದಾರ್ಥ ವಿಜ್ಞಾನಶಾಸ್ತ್ರಿಗಳೂ ಪ್ರಕೃತಿಯ ವಿಚಾರ ಅನೇಕ ಸಂಗತಿಗಳನ್ನು ಹೇಳುತ್ತಾರೆ; ಆದರೆ ಕ್ರಿಸ್ತನು ಮಾತ್ರ ಭೂಮಿಯ ನಿಜಸೌಂದರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಗಣನೆಗೆ ತರವವನಾಗಿದ್ದಾನೆ. ಯಾಕಂದರೆ ಆತನು ತನ್ನ ತಂದೆಯ ಕೈಕೆಲಸಗಳನ್ನೂ ಅವುಗಳಲ್ಲಿ ಕಂಡುಬರುವ ದೈವ ಪ್ರೀತಿಯ ಮಹತ್ತನ್ನೂ, ಪ್ರತಿಯೊಂದು ಮರ, ಗಿಡ, ಹೂ, ಬಳ್ಳಿಗಳೂ ಸಾರುತ್ತಿರುವ ಅನಂತ ಪ್ರೀತಿಯನ್ನೂ ಕಂಡುಕೊಳ್ಳುತ್ತಾನೆ. ಗುಡ್ಡ, ನದಿ, ಪರ್ವತ, ಕಣಿವೆ, ಸಮುದ್ರ ಸಾಗರಗಳ ಮೂಲಕ ದೇವರು ಮನುÀ್ಯರಿಗೆ ಪ್ರಕಟಮಾಡುತ್ತಾ ಬರುವ ದೈವಪ್ರೀತಿಯನ್ನು ಯಾರು ಕಂಡುಕೊಳ್ಳಲಾರರೋ, ಅಂಥವರು ಇವುಗಳ ವಿಶೇÀ ಲಕ್ಷಣಗಳನ್ನೂ ಕಂಡುಕೊಳ್ಳಲಾರದವರಾಗಿರುತ್ತಾರೆ. ದೇವರು ನಮ್ಮ ಸಂಗಡ ತನ್ನ ಕರುಣೆಯ ಕೆಲಸಗಳ ಮೂಲಕವೂ, ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನು ನಡಿಸುವ ಕೆಲಸಗಳ ಮೂಲಕವೂ ಮಾತಾಡುವವನಾಗಿರುತ್ತಾನೆ. ನಮ್ಮ ಬಾಳಿನ ನಡವಳಿಕೆಗಳಲ್ಲೂ, ನಮಗಿರುವ ನಾನಾ ವಿಧವಾದ ಸನ್ನಿವೇಶಗಳಲ್ಲೂ ತೆರೆದ ಹೃದಯವುಳ್ಳವರಾಗಿದ್ದರೆ, ನಾವು ಪ್ರಕೃತಿಯಿಂದ ಬೆಲೆಯುಳ್ಳ ಪಾಠಗಳನ್ನು ಕಲಿತುಕೊಳ್ಳಬಹುದು. ದೈವಪರಿಪಾಲನೆಯನ್ನು ಕಂಡುLI 77.1

    ಕೊಂಡ ಕೀರ್ತನೆಗಾರನು ಹೀಗೆ ಹೇಳುತ್ತಾನೆ --- “ಭೂಲೋಕವೆಲ್ಲಾ ಯೇಹೋನನ ಕೃಪೆಯಿಂದ ತುಂಬಿದೆ.” ಮತ್ತು “ಜ್ಞಾನಿಗಳು ಈ ಸಂಗತಿಗಳನ್ನು ಗಮನಿಸಿ ಯೆಹೋವನ ಕೃಪಾಕಾರ್ಯಗಳನ್ನು ಗ್ರಹಿಸಿಕೊಳ್ಳಲಿ.” ದೇವರು ತನ್ನ ಪರಿಶುದ್ಧ ವಾಕ್ಯದ ಮೂಲಕ ನಮ್ಮ ಸಂಗಡ ಮಾತಾಡುವವನಾಗಿರುತ್ತಾನೆ. ಪರಿಶುದ್ಧ ಗ್ರಂಥದಲ್ಲಿ ಆತನ ಗುಣ, ಮನುÀ್ಯರೊಡನೆ ಆತನು ವರ್ತಿಸುವ ರೀತಿ ಮತ್ತು ರಕ್ಷಣೆಯ ದೊಡ್ಡ ಕೆಲಸ ಇವುಗಳ ವಿಚಾರ ಪರಿÁ್ಕರವಾದ ಪ್ರಕಟನೆಗಳು ಕೊಡಲ್ಪಟ್ಟಿರುತ್ತವೆ.LI 78.1

    ಮೂಲಪುರುÀರ, ಪ್ರವಾದಿಗಳ ಮತ್ತು ಹಿಂದಣಕಾಲದ ಸದ್ಭಕ್ತರ ಚರಿತ್ರೆಗಳು ಪರಿÁ್ಕರವಾಗಿ ಕೊಡಲ್ಪಟ್ಟಿರುತ್ತವೆ. ಅವರೂ “ನಮ್ಮಂಥಾ ಸ್ವಭಾವದವರಾಗಿದ್ದರು.” ಹೇಗೆ ಅವರು ಅಧೈರ್ಯವನ್ನುಂಟು ಮಾಡುವ ಸಂಕಟಗಳೊಡನೆ ಹೋರಾಡಿದರು. ಅವರೂ ಹೇಗೆ ನಮ್ಮ ಹಾಗೆ ಶೋಧನೆಗಳಿಗೆ ಒಳಗಾದರು? ಹಾಗಿದ್ದರೂ ಹೇಗೆ ದೈವಕೃಪೆಯಿಂದ ಆ ಶೋಧನೆಗಳಿಂದ ಪಾರಾದರು ಎಂಬ ಸಂಗತಿಗಳನ್ನು ನೋಡುತ್ತೇವೆ. ಇವರನ್ನು ಸ್ಮರಿಸಿಕೊಂಡು ಧರ್ಮ ಮಾರ್ಗದಲ್ಲಿ ಹೋರಾಡಲು ಧೈರ್ಯಗೊಳ್ಳುತ್ತೇವೆ. ಅವರಿಗುಂಟಾದ ಬೆಲೆಯುಳ್ಳ ಅನುಭವ, ಬೆಳಕು, ಆನಂದಕರವಾದ ಆಶೀರ್ವಾದ, ದೈವಕೃಪೆಯಿಂದ ಅವರು ನಡೆಯಿಸಿದ ಕಾರ್ಯಗಳು ಮತ್ತು ಅವರನ್ನು ಆವೇಶಪೂರಿತರನ್ನಾಗಿ ಮಾಡಿದ ಶಕ್ತಿ ಇವುಗಳೆಲ್ಲವೂ ನಮ್ಮ ಹೃದಯಗಳಲ್ಲಿ ಪರಿಶುದ್ಧತೆಯ ಸ್ಪರ್ಧೆಯ ಜ್ವಾಲೆಯನ್ನು ಉದ್ರೇಕಗೊಳಿಸಿ, ನಮ್ಮಲ್ಲೂ ಅವರಲ್ಲಿದ್ದ ಗುಣಗಳು ಉಂಟಾಗಬೇಕೆಂಬ ಅಲೋಚನೆಯನ್ನು ಹುಟ್ಟಿಸಿ ನಾವೂ ಅವರ ಹಾಗೆ ದೇವರ ಸಂಗಡ ಒಂದಾಗಿ ನಡೆಯಬೇಕೆಂದು ಬಯಕೆಯನ್ನುಂಟು ಮಾಡುತ್ತವೆ.LI 78.2

    ಹಳೆಯ ಒಡಂಬಡಿಕೆಯ ವಿಚಾರ ಅದರಲ್ಲೂ ಹೊಸ ಒಡಂಬಡಿಕೆಯ ವಿಚಾರ ಕ್ರಿಸ್ತನು ಹೀಗೆ ಹೇಳುತ್ತಾನೆ - “ಅವುಗಳೂ ನನ್ನ ವಿÀಯ ಸಾಕ್ಷಿ ಕೊಡುವವುಗಳಾಗಿವೆ.” ಆತನು ನಮ್ಮ ರಕ್ಷಕನು, ನಮ್ಮ ನಿತ್ಯಜೀವದ ಎಲ್ಲಾ ನೀರಿಕ್ಷೆಯೂ ಆತನಲ್ಲೇ ಕ್ರೇಂದ್ರೀಕರಿಸಲ್ಪಟ್ಟಿದೆ. ಹೌದು, ಸತ್ಯವೇದದ ಅದ್ಯಂತರಗಳು ಕ್ರಿಸ್ತನನ್ನೇ ಸಾರುತ್ತವೆ. ಸೃಷ್ಟಿಯ ವೊದಲನೆಯ ವಾಕ್ಯದಿಂದ ಹಳೆಯ ಒಡಂಬಡಿಕೆಯ ವಿಚಾರ ಅದರಲ್ಲೂ ಹೊಸ ಒಡಂಬಡಿಕೆಯ ವಿಚಾರ ಕ್ರಿಸ್ತನು ಹೀಗೆ ಹೇಳುತ್ತಾನೆ - “ಅವುಗಳೂ ನನ್ನ ವಿÀಯ ಸಾಕ್ಷಿ ಕೊಡುವವುಗಳಾಗಿವೆ.” ಆತನು ನಮ್ಮ ರಕ್ಷಕನು, ನಮ್ಮ ನಿತ್ಯಜೀವದ ಎಲ್ಲಾ ನೀರಿಕ್ಷೆಯೂ ಆತನಲ್ಲೇ ಕ್ರೇಂದ್ರೀಕರಿಸಲ್ಪಟ್ಟಿದೆ. ಹೌದು, ಸತ್ಯವೇದದ ಅದ್ಯಂತರಗಳು ಕ್ರಿಸ್ತನನ್ನೇ ಸಾರುತ್ತವೆ. ಸೃಷ್ಟಿಯ ವೊದಲನೆಯ ವಾಕ್ಯದಿಂದ “ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ” ಎಂಬುದರಿಂದ ಅಂತ್ಯದ ವಾಗ್ದಾನವಾದ “ಇಗೋ ಬೇಗನೆ ಬರುತ್ತೇನೆ” ಎಂಬುದರವರೆಗೂ ನಾವು ಆತನ ಕೆಲಸಗಳನ್ನು ನೋಡುತ್ತೇವೆ. ಮತ್ತು ಆತನ ಸ್ವಭಾವನ್ನು ಕೇಳುತ್ತಾ ಇದ್ದೇವೆ. ಕ್ರಿಸ್ತನ ಒಡನಾಟದಲ್ಲಿ ನೀನು ಇರಬೇಕಾದರೆ ಪರಿಶುದ್ಧ ಬರಹಗಳನ್ನು ಓದು. ನಿನ್ನ ಹೃದಯವೆಲ್ಲವೂ ದೈವವಾಕ್ಯಗಳಿಂದ ತುಂಬಿರಲಿ. ಅವು ನನ್ನಲ್ಲಿ ಜೀವಕರವಾದ ನೀರಾಗಿದ್ದು ನಿನ್ನ ಕಡುದಾಹವನ್ನು ಶಮನಮಾಡುತ್ತವೆ. ಅವು ಸ್ವರ್ಗದ ಜೀವಕರವಾದ ರೊಟ್ಟಿಗಳಾಗಿರುತ್ತವೆ. ಕ್ರಿಸ್ತನ ಮಾತುಗಳಲ್ಲಿಯೇ ಅವುಗಳನ್ನು ತಿಳಿಯೋಣ. “ನೀವು ಮನುÀ್ಯಕುಮಾರನ ಮಾಂಸವನ್ನು ತಿನ್ನದೆ ಅವರನ ರಕ್ತವನ್ನು ಕುಡಿಯದೆಹೋದರೆ ನಿಮ್ಮಲ್ಲಿ ಜೀವವಿಲ್ಲ.” ಮತ್ತು “ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇದೆ.” ನಾವು ತಿನ್ನುವ ವಸ್ತುಗಳಿಂದ ನಮ್ಮ ದೇಹವು ಬಲವಾಗಿ ಬೆಳೆಯುತ್ತದೆ; ಲೌಕಿಕ ವಿಚಾರವು ಹೇಗೋ ಪಾರಮಾರ್ಥಿಕ ವಿಚಾರವೂ ಹಾಗೆಯೆ; ಯಾವುದರ ವಿಚಾರ ನಾವು ತದೇಕ ಧ್ಯಾನ ಮಾಡುತ್ತೇವೋ ಅದೇ ನಮ್ಮ ಆತ್ಮೀಯ ಜೀವನಕ್ಕೆ ಬಲವನ್ನು ಕೊಡತ್ತದೆ.LI 78.3

    ರಕ್ಷಣಾಪ್ರಸ್ತಾವವನ್ನು ದೇವದೂತರೂ ತಿಳಿಯಲಿಚ್ಛಿಸುತ್ತಾರೆ, ಈ ವಿಚಾರವೇ ರಕ್ಷಿಸಲ್ಪಟ್ಟವರ ಯುಗಯುಗಗಳಲ್ಲಿರುವ ಸಂಗೀತವೂ, ವಿಜ್ಞಾನಶಾಸ್ತ್ರವೂ ಆಗಿದೆ. ಇದರ ವಿಚಾರ ನಾವು ಯೋಚಿಸಿ ಧ್ಯಾನ ಮಾಡುವುದು ಒಳ್ಳೆಯದಲ್ಲವೇ? ಕ್ರಿಸ್ತನ ಅಗಮ್ಯವಾದ ಪ್ರೀತಿ, ಕರುಣೆ, ಆತನು ನಮಗಾಗಿ ಮಾಡಿದ ತ್ಯಾಗ ಇವುಗಳನ್ನು ಗಂಭೀರವಾಗಿ ಯೋಚಿಸಬೇಕಾದುದು ನಮ್ಮ ಕರ್ತವ್ಯವಲ್ಲವೋ? ನಮ್ಮ ರಕ್ಷಕನೂ ಮಧ್ಯಸ್ಥನೂ ಕ್ರಿಸ್ತನ ವಿಚಾರ ಧ್ಯಾನಿಸಬೇಕಲ್ಲವೋ? ಪಾಪದಿಂದ ಜನರನ್ನು ಬಿಡಿಸಲು ಭೂಲೋಕಕ್ಕೆ ಬಂದಾತನ ವಿಚಾರ ನಾವು ಧ್ಯಾನಿಸಬೇಕು. ಸ್ವರ್ಗೀಯವಾದ ಈ ಪ್ರಸ್ತಾಪಗಳನ್ನೆಲ್ಲಾ ಧ್ಯಾನಿಸುತ್ತಾ ಬರುವುದಾದತೆ ನಮ್ಮ ನಂಬಿಕೆ, ಪ್ರೀತಿ ಇವು ಬಲವಾಗುತ್ತಾ ಬರುತ್ತವೆ. ನಮ್ಮ ಪ್ರಾರ್ಥನೆಗಳೂ ಹೆಚ್ಚುಹೆಚ್ಚಾಗಿ ದೇವರ ಸ್ವೀಕಾರಕ್ಕೆ ಅರ್ಹವಾಗುತ್ತವೆ. ಯಾಕಂದರೆ ಇವು ಪ್ರೀತಿ ಮತ್ತು ನಂಬಿಕೆಗಳೊಡನೆ ಸಮ್ಮಿಳಿತವಾಗುವುವು. ಬುದ್ಧಿಯಿಂದಲೂ ಆಸÀ ಕ್ತಿಯಿಂದಲೂ ತುಂಬಿರುವುವು. ಇದರಿಂದ ಕ್ರಿಸ್ತನಲ್ಲಿ ಸ್ಥಿರನಂಬಿಕೆಯುಂಟಾಗಿ ದೇವರ ಬಳಿಗೆ ಬರುವವರನ್ನೆಲ್ಲಾ ರಕ್ಷಿಸಲು ಪೂರ್ತಿ ಸಮರ್ಥನಾಗಿದ್ದಾನೆಂಬ ಜೀವದ ಅನುಭವವು ಪ್ರತಿದಿನದಲ್ಲೂ ನಮ್ಮಲ್ಲಿ ಹುಟ್ಟುವುದು. ನಾವು ಕ್ರಿಸ್ತನ ಸಂಪೂರ್ಣತೆಯನ್ನು ಧ್ಯಾನಮಾಡುತ್ತಾ ಬಂದ ಹಾಗೆಲ್ಲಾ ಪೂರ್ತಿಯಾಗಿ ಬದಲಾವಣೆಯನ್ನು ಹೊಂದಲೂ ಆತನ ಪರಿಶುದ್ಧತೆಯ ಸಾರೂಪ್ಯಕ್ಕೆ ಬರಲೂ ಆಶಿಸುತ್ತೇವೆ. ಯಾವಾತನನ್ನು ಆರಾಧಿಸುತ್ತೇವೋ ಆತನಂತೆ ನಾವೂ ಆಗಬೇಕೆಂದು ನಮ್ಮ ಆತ್ಮವು ತವಕಪಡುತ್ತದೆ. ಕ್ರಿಸ್ತನನ್ನು ಹೆಚ್ಚುಹೆಚ್ಚಾಗಿ ಧ್ಯಾನಿಸಿದ ಹಾಗೆಲ್ಲಾ ಆತನ ವಿಚಾರ ಹೆಚ್ಚುಹೆಚ್ಚಾಗಿ ಸಾರಲು ಇÀ್ಟಪಡುತ್ತೇವೆ. ಹಾಗೆಯೇ ಆತನನ್ನು ಲೋಕಕ್ಕೆ ಪ್ರದರ್ಶಿಸಲು ಬಯಸುತ್ತೇವೆ.LI 79.1

    ಸತ್ಯವೇದವು ಕೇವಲ ವಿದ್ವಾಂಸರಿಗೆ ಮಾತ್ರ ಬರೆಯಲ್ಪಡದೆ ಸಾಮಾನ್ಯರಿಗೂ ಸಹ ಬರೆಯಲ್ಪಟ್ಟಿರುತ್ತದೆ. ಮಧ್ಯಾಹ್ನದ ಬಿಸಿಲು ಎÀ್ಟರಮಟ್ಟಿಗೆ ಸ್ವÀ್ಟವಾಗಿದೆಯೋ ಅÉ್ಟೀ ಸ್ಪÀ್ಟವಾಗಿ ರಕ್ಷಣಾಕಾರ್ಯವೂ ತೋರಿಸಲ್ಪಟ್ಟಿರುತ್ತದೆ. ದೈವ ಸಂಕಲ್ಪವನ್ನು ಅನುಸರಿಸದೆ ತಮ್ಮ ಸ್ವಂತ ತೀರ್ಮಾನಗಳನ್ನು ಮಾಡಿಕೊಳ್ಳುವವರು ಮಾತ್ರ ತಮ್ಮ ತಪ್ಪು ಭಾವನೆಗಳಿಗೆ ಎಡೆಕೊಟ್ಟು ಸತ್ಯದ ಹಾದಿಯನ್ನು ಬಿಟ್ಟು ದೂರ ಸರಿಯುತ್ತಾರೆ. ಮತ್ತೊಬ್ಬರು ಸತ್ಯವೇದದ ವಿಚಾರ ಪಡುವ ಅಭಿಪ್ರಾಯವನ್ನೇ ನಾವು ಪ್ರಾಧಾನ್ಯವಾಗಿ ಪರಿಗಣಿಸದೆ, ನಾವೇ ಸ್ವತ: ಸತ್ಯವೇದವನ್ನು ಓದಿ ಧ್ಯಾನಿಸುವವರಾಗಬೇಕು. ನಾವೇ ಮಾಡಬಹುದಾದ ಯೋಚನೆಗಳನ್ನು ಮತ್ತೊಬ್ಬರಿಗೆ ಬಿಡುವುದಾದರೆ ನಮ್ಮ ಯೋಚನಾಶಕ್ತಿಗಳನ್ನು ನಾವು ಕಳೆದುಕೊಳ್ಳುತ್ತೇವೆ. ಧ್ಯಾನಾರ್ಹವಾದ ಸಂಗತಿಗಳನ್ನು ಯೋಚನೆ ಮಾಡದೆ ಬಿಡುವುದರಿಂದಿ, ಕಡೆಗೆ ಇವುಗಳ ಶಕ್ತಿಯು ಕಡಿಮೆಯಾಗಿ ದೇವರ ವಾಕ್ಯದಲ್ಲಿ ಅಡಗಿರುವ ಆಳವೂ ಸತ್ಯವೂ ಆದ ಆರ್ಥಗಳನ್ನು ಗ್ರಹಿಸಿಕೊಳ್ಳಲಾರದೆ ಹೋಗುತ್ತೇವೆ. ಸತ್ಯವೇದದಲ್ಲಿರುವ ಸಂಗತಿಗಳನ್ನು ಒಂದೊಂದನ್ನಾಗಿ ವಿಮರ್ಶೆ ಮಾಡುವುದರಿಂದಲೂ ಪರಸ್ಪರ ಹೊಂದಿಕೊಂಡಿರುವ ಆತ್ಮೀಯ ಸಂಬಂಧವನ್ನು ಕಂಡು ಹಿಡಿಯುವುದ ರಿಂದಲೂ ನಮ್ಮ ಮನಸ್ಸು ಪರಿಪಕ್ವವಾಗುತ್ತದೆ. ಆಳವಾಗಿಯೂ ಸೂಕ್ಷ್ಮವಾಗಿಯೂ ಸತ್ಯವೇದವನ್ನು ಧ್ಯಾನಿಸಬೇಕು.LI 80.1

    ಸತ್ಯವೇದವನ್ನು ಓದುವುದರಿಂದ ಬರುವÀ್ಟು ಮನಶ್ಯಕ್ತಿಯ ಜ್ಞಾನಾರ್ಜನೆಯು ಮತ್ಯಾವುದರಿಂದಲೂ ಬರುವುದಿಲ್ಲ. ಮತ್ತೆ ಯಾವುದೇ ಗ್ರಂಥವಾಗಲಿ ಮನುÀ್ಯನ ಯೋಚನೆಗಳನ್ನು ಉತ್ತರಿಸಲು ಸಹಕಾರಿಗಳಾಗಿಲ್ಲ. ಮತ್ತು ಇವು ಘನತರವಾಗ ಸತ್ಯಾಂಶಗಳನ್ನು ಎತ್ತಿ ತೋರಿಸಿ ಮಾನಸಿಕ ಶಕ್ತಿಯನ್ನುಂಟುಮಾಡಲಾರವು. ದೇವರ ವಾಕ್ಯವನ್ನು ಓದಬೇಕಾದ ರೀತಿಯಲ್ಲಿ ಓದಿ ಧ್ಯಾನಮಾಡಿದರೆ ನಮ್ಮ ಮನಸ್ಸೂ ವಿಶಾಲವಾಗುವುದು. ಮತ್ತು ಈ ಕಾಲದ ಇತರರಲ್ಲಿ ಕಂಡುಬರಲಾರದ ಘನೋದ್ಧೇಶಗಳ ಸ್ಥಿರತ್ವವೂ ನಮ್ಮಲ್ಲಿ ಕಂಡುಬರುವುದು. ಆತುರದಿಂದ ಸತ್ಯವೇದವನ್ನು ಓದುವುದರಿಂದ ಯಾವ ಪ್ರಯೋಜನವೂ ದೊರೆಯುವುದಿಲ್ಲ. ಒಬ್ಬನು ಇದನು ಅದ್ಯಂತವಾಗಿ ಓದಿದರೂ ಅದರ ಸೌಂದರ್ಯವನ್ನಾಗಲಿ ಅಥವಾ ಇದರಲ್ಲಿ ಅಡಗಿರುವ ಆಳವಾದ ಬೋಧನೆಗಳನ್ನಾಗಲಿ ಕಂಡುಕೊಳ್ಳಲಾರದೆ ಹೋಗಬಹುದು. ಯಾವುದಾದರೂ ಒಂದು ಭಾಗವನ್ನು ಓದಿ ಅದರ ಅರ್ಥವನ್ನು ಪೂರ್ಣವಾಗಿ ಮಾಡಿಕೊಳ್ಳುವುದೂ ಮತ್ತು ಅದರಲ್ಲಿ ಅಡಗಿರುವ ರಕ್ಷಣಾಭಾಗಗಳಿಗೆ ಸಂಬಂಧಿಸಿದ ಅಂಶಗಳನ್ನು ಕಂಡುಕೊಳ್ಳುವುದೂ ಸಹ ಗೊತ್ತುಗುರಿಯಿಲ್ಲದೆ ನೂರಾರು ಅಧ್ಯಾಯಗಳನ್ನು ಓದುವುದಕ್ಕಿಂತಲೂ ಶ್ರೇÀ್ಠವಾಗಿರುವುದು. ಗ್ರಹಿಕೆಯಿಟ್ಟು ಓದುವುದರಿಂದ ಮಾತ್ರ ನಮಗೆ ಆದರಿಂದ ಲಭಿಸಬೇಕಾದ ಪಾಠಗಳು ಬೋಧಿಸಲ್ಪಡುವವು. ಸತ್ಯವೇದವನ್ನು ಯಾವಾಗಲೂ ನಿನ್ನ ಜೊತೆಯಲ್ಲಿರಿಸಿಕೊಂಡಿರು, ಸಮಯ ದೊರೆತಾಗಲೆಲ್ಲಾ ಅದನ್ನು ಗಮನವಿಟ್ಟು ಓದು, ಓದಿದ ಅಂಶಗಳನ್ನು ಮನಸ್ಸಿನಲ್ಲಿ ಸ್ಥಿರಪಡಿಸಿಕೊ. ಬೀದಿಯಲ್ಲಿ ಹೋಗುವಾಗಲೂ ಇದನ್ನು ಓದಿ ಧ್ಯಾನಿಸಬಹುದು ಮತ್ತು ಮನಸ್ಸಿನಲ್ಲಿ ಖಚಿತ ಮಾಡಬಹುದು.LI 80.2

    ಎಚ್ಚರಿಕೆಯಾದ ಗಮನವೂ ಪ್ರಾರ್ಥನೆಯಿಂದ ಕೂಡಿದ ಅಧ್ಯಯನವೂ ಇಲ್ಲದೆ ನಮಗೆ ಜ್ಞಾನೋದಯವಾಗಲಾರದು. ಸತ್ಯವೇದದ ಕೆಲವು ಭಾಗಗಳನ್ನು ಅತಿ ಸುಲಭವಾದ ತಪ್ಪುಗಳಿಂದ ತಿಳಿದುಕೊಳ್ಳುವ ಸಂಭವಗಳುಂಟು. ಆದರೆ ಸತ್ಯವೇದದ ಅನೇಕ ಭಾಗಗಳನ್ನು ಒಂದೇ ಸಲ ಓದುವುದರಿಂದ ಎಂದಿಗೂ ಅರ್ಥವಾಗಲಾರದು. ಸತ್ಯವೇದವನ್ನು ಓದುವುದರಲ್ಲಿ ಬೇರೆಬೇರೆಯಾದ ವಾಕ್ಯಗಳನ್ನು ಒಂದರೊಡನೆ ಒಂದನ್ನು ಹೋಲಿಸಬೇಕಾಗಿರುತ್ತದೆ. ಎಚ್ಚರಿಕೆಯ ಹುಡುಕುವಿಕೆಯೂ, ಪ್ರಾರ್ಥನೆಯಿಂದ ಕೂಡಿದ ಯೋಚನೆಯೂ ಅವಶ್ಯಕವಾಗಿರುತ್ತದೆ. ಈ ತೆರನಾದ ಸತ್ಯವೇದಾಧ್ಯಯನವೇ ಫಲಕಾರಿಯಾದುದು. ಭೂಗರ್ಭದಲ್ಲಿ ಅಡಗಿರುವ ಬೆಲೆಯುಳ್ಳ ಲೋಹಗಳ ಪದರಗಳನ್ನು ಭೂಗರ್ಭಶೋಧಕರು ಕÀ್ಟಪಟ್ಟು ಕಂಡುಹಿಡಿಯುವಂತೆ ಯಾರೂ ದೇವರ ವಾಕ್ಯವನ್ನು ಬಿಡದೆ ಪರಿಶೋಧನೆ ಮಾಡು ತ್ತಾರೋ ಅಂಥವರು ಅದರಲ್ಲಿ ಅಡಗಿರುವ ನಿಧಿಯನ್ನು ಅಂದರೆ ಅತ್ಯಂತ ಬೆಲೆಯುಳ್ಳ ಸತ್ಯಾಂಶಗಳನ್ನು ಕಂಡುಕೊಳ್ಳುತ್ತಾರೆ. ಯಾರು ಎಚ್ಚರಿಕೆಯಿಲ್ಲದೆ ಓದುವರೋ ಅವರಿಗೆ ಈ ಸತ್ಯಾಂಶಗಳು ಮರೆಯಾಗಿರುವುವು. ಆವೇಶವನ್ನುಂಟು ಮಾಡುವ ನಾವು ಧ್ಯಾನಿಸುವುದಾದರೆ ಅವು ನಮ್ಮ ಹೃದಯಗಳಲ್ಲಿ ಜೀವದ ತೊರೆಗಳಂತಿರುವುವು.LI 81.1

    ಪ್ರಾರ್ಥನೆ ಮಾಡದೇ ಸತ್ಯವೇದವನ್ನು ಓದಬಾರದು, ಓದುವುದಕ್ಕೆ ವೊದಲು ಪವಿತ್ರಾತ್ಮನು ತನ್ನ ಬೆಳಕನ್ನು ನಮ್ಮ ಹೃದಯಗಳಿಗೆ ಕೊಡುವ ಹಾಗೆ ಪ್ರಾರ್ಥಿಸಬೇಕು. ಆಗ ಅದು ನಮಗೆ ದೊರಕುವುದು. ನತಾನಿಯೇಲನು ರಕ್ಷಕನ ಬಳಿಗೆ ಬಂದಾಗ ಹೀಗೆ ಹೇಳಿದನು - “ಇಗೋ ಇವನು ನಿಜವಾದ ಇಸ್ರಯೇಲ್ಯನು, ಇವನಲ್ಲಿ ಕಪಟವಿಲ್ಲ.” ನತಾನಿಯೇಲನು - “ನನ್ನನ್ನು ನೀನು ಹೇಗೆ ಬಲ್ಲೆ? ಎಂದು ಯೇಸುವನ್ನು ಕೇಳಿದ್ದಕ್ಕೆ ಆತನು ನಿನ್ನನ್ನು ಕರೆಯುವುದಕ್ಕೆ ಮುಂಚೆ ಆ ಅಂಜೂರದ ಮರದ ಕೆಳಗಿದ್ದಾಗ ನಿನ್ನನ್ನು ನೋಡಿದೆನು.” ನಾವು ಅಂತರಂಗದಲ್ಲಿ ಪ್ರಾರ್ಥನೆ ಮಾಡುವಾಗ ಸತ್ಯವನ್ನು ಕಂಡುಕೊಳ್ಳಲೂ ಮತ್ತು ಬೆಳಕಿಗಾಗಿಯೂ ಪ್ರಾರ್ಥಿಸಿದರೆ ಆತನು ನಮ್ಮನ್ನು ನೋಡುವನು. ಯಾರು ದೈನ್ಯತೆಯಿಂದ ದೇವರ ನಡೆಯಿಸುವಿಕೆಗಾಗಿ ಬೇಡುವರೋ ಅವರನ್ನು ಬೆಳಕಿನ ಲೋಕದ ದೇವದೂತರು ನೋಡುವರು.LI 82.1

    ಪವಿತ್ರಾತ್ಮನು ರಕ್ಷಕನನ್ನು ಘನಪಡಿಸಿ ಮಹಿಮೆಪಡಿಸುತ್ತಾನೆ. ಕ್ರಿಸ್ತನು ಪರಿಶುದ್ಧತೆಯನ್ನೂ ನೀತಿಯನ್ನೂ ಆತನ ಮೂಲಕ ನಮಗೆ ದೊರಕುವ ದೊಡ್ಡ ರಕ್ಷಣೆಯನ್ನು ತೋರಿಸಿಕೊಡುವುದೇ ಪವಿತ್ರಾತ್ಮನ ಕಾರ್ಯವಾಗಿದೆ. ಯೇಸು ಹೀಗೆ ಹೇಳುತ್ತಾನೆ - “ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಸುತ್ತಾ ನನ್ನನ್ನೇ ಮಹಿಮೆಪಡಿಸುವನು.” ಸತ್ಯದ ಆತ್ಮನು ಮಾತ್ರ ದೈವಸತ್ಯವನ್ನು ಬಲವಾಗಿ ಬೋಧಿಸುವ ಉಪಾಧ್ಯಾಯನಾಗಿರುತ್ತಾನೆ. ತನ್ನ ಕುಮಾರನನ್ನು ಮಾನವರ ಸಲುವಾಗಿ ಕೊಟ್ಟಿರುವುದೂ ಪವಿತ್ರಾತ್ಮನನ್ನು ಮಾನವರಿಗೆ ಬೋಧಕನನ್ನಾಗಿ ನೇಮಿಸಿರುವುದೂ ಮಾನವರ ಹಿತಚಿಂತನೆಯಲ್ಲಿ ದೇವರಿಗಿರುವ ಅಪರಿಮಿತವಾದ ಪ್ರೀತಿಗೆ ನಿದರ್ಶನಗಳಾಗಿವೆ. ದೈವಪ್ರೀತಿಯ ಅತಿಶಯವನ್ನು ಇವುಗಳು ತೋರಿಸಿಕೊಡುತ್ತವೆ.LI 82.2

    Larger font
    Smaller font
    Copy
    Print
    Contents