Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಪಾಪಾತ್ಮನಿಗೆ ಕ್ರಿಸ್ತನ ಅಗತ್ಯ..

    ಆದಿಯಲ್ಲಿ ದೇವರು ಮನುÀ್ಯನಿಗೆ ಘನತರವಾದ ಶಕ್ತಿಯನ್ನು ಸ್ಥಿರವಾದ ಮನಸ್ಸನ್ನೂ ಕೊಟ್ಟಿದ್ದನು. ಆದಿಮಾನವನು ಸಂಪೂರ್ಣ ವಾಗಿದ್ದು ದೇವರೊಂದಿಗೆ ಅನ್ಯೋನ್ಯತೆಯಿಂದಿರುತ್ತಿದ್ದನು. ಆತನ ಯೋಚನೆ ಮತ್ತು ಉದ್ದೇಶಗಳು ಶುದ್ಧವಾಗಿದ್ದವು. ಹೀಗಿದ್ದಾಗ್ಯೂ ಅವಿಧೇಯತೆಯಿಂದ ಅವು ತಾರುಮಾರಾಗಿ ಪ್ರೀತಿಯ ಸ್ಥಾನದಲ್ಲಿ ಸ್ವಾರ್ಥತೆಯು ನೆಲೆಗೊಂಡಿತು. ಆತನ ಸ್ವಭಾವವು ಅಪರಾಧಗಳ ದೆಸೆಯಿಂದ ಪಾಪದ ಶಕ್ತಿಗಳನ್ನು ಎದುರಿಸಲಾರದÀ್ಟರ ಮಟ್ಟಿಗೆ ಬಲಹೀನವಾಯಿತು. ಈ ನಿರ್ಬಲಾಕಾಲದಲ್ಲಿ ದೇವರ ಕೈ ಮಾನವನಿಗೆ ನೆರವಾಗದಿದ್ದರೆ ಮಾನವನು ನಿತ್ಯವೂ ಸೈತಾನನ ಶೆರೆಯಾಳಾಗಿಯೇ ಇರಬೇಕಾಗಿದ್ದಿತು. ಮನುÀ್ಯನನ್ನು ಉಂಟು ಮಾಡಿದ ದೇವರ ಸದುದ್ದೇಶಕ್ಕೆ ಎಡೆತಡೆಯನ್ನುಂಟು ಮಾಡಲು ಸೈತಾನನು ಅಡ್ಡಲಾಗಿ ಬಂದು, ಈ ಜಗತ್ತನ್ನು ಗೋಳಾಟದಿಂದಲೂ ನಾಶನದಿಂ ದಲೂ ತುಂಬಿಸುವುದು ಆತನ ಉದ್ದೇಶವಾಗಿದ್ದಿತು. ದೇವರು ಮನುÀ್ಯನನ್ನು ಸೃಷ್ಟಿಸಿದ್ದೇ ಈ ಎಲ್ಲಾ ಕೆಡಕುಗಳಿಗೆ ಕಾರಣವಾಗಿದೆ ಎಂಬುದನ್ನು ತೋರಿಸುವುದೇ ಸೈತಾನನ ಕೃತ್ಯವಾಗಿದ್ದಿತು.LI 12.3

    ಪಾಪರಹಿತವಾದ ಸ್ಥಿತಿಯಲ್ಲಿದ್ದ ಮನುÀ್ಯನು “ತನ್ನಲ್ಲೇ ಜ್ಞಾನವಿದ್ಯಾ ಸಂಬಂಧವಾದ ನಿಕ್ಷೇಪಗಳನ್ನೆಲ್ಲಾ ಅಡಿಗಿಸಿಕೊಂಡಿರುವ” ದೇವರೊಡನೆ ಸಂತೋÀದ ಅನ್ಯೋನ್ಯ ಸಂಪರ್ಕವನ್ನು ಇಟ್ಟುಕೊಂಡಿದ್ದನು. ಆದರೆ ಪಾಪದಿಂದ ಈ ಸ್ಥಿತಿಯು ತೊಲಗಿ ದೇವರ ಸಮ್ಮುಖದಿಂದ ಅಡಿಗಿಕೊಳ್ಳುವಂತಾದನು. ಇದರಂತೆಯೇ ಮಾರ್ಪಾಟಾದ ಜೀವನನ್ನು ಹೊಂದದವರು ಈಗಲೂ ನಡೆದು ಕೊಳ್ಳುತ್ತಿದ್ದಾರೆ. ದೇವರೊಂದಿಗೆ ಮನುÀ್ಯನು ಅನ್ಯೋನ್ಯ ಸ್ಥಿತಿಯಲ್ಲಿಲ್ಲ ದಿರುವುದರಿಂದ ದೇವರೊಂದಿಗೆ ಸಂಭಾಷಿಸಲು ಮನುÀ್ಯನಿಗೆ ಇÀ್ಟವಿಲ್ಲ. ದೇವರ ಸಮ್ಮುಖದಲ್ಲಿ ಪಾಪಿಗೆ ಸಂತೋÀ ದೊರೆಯದು; ಪರಿಶುದ್ಧ ದೂತರೊಡನೆ ದೊರೆಯುವ ಸ್ನೇಹಕ್ಕೆ ಅಂಜಿ ಆತನು ದೂರ ಬರುತ್ತಾನೆ. ಮನುÀ್ಯನಿಗೆ ಸ್ವರ್ಗ ಪ್ರವೇಶವು ದೊರೆಯುವುದಾದರೂ ಅದೂ ಈತನಿಗೆ ಸಂತೋÀಕರವಾಗಿರದು. ಅಲ್ಲಿರುವ ಸ್ವಾರ್ಥ ತ್ಯಾಗದ ಪ್ರೀತಿಯ ಲಕ್ಷಣವೂ ಅಲ್ಲಿರುವ ಆ ಜನರ ಸುಗುಣವೂ ಸಹ ಪಾಪಿಯ ಮನವನ್ನು ತಾಗಲಾರದು. ಸ್ವರ್ಗದ ಶುದ್ಧಾತ್ಮರ ಇÀ್ಟ, ಆಶೆ ಮತ್ತು ಧ್ಯೇಯಗಳಿಗೆ ಮಾನವನ ಆಶೆಗಳು ತೀರಾ ವ್ಯತಿರಿಕ್ತವಾದವುಗಳಾಗಿರುತ್ತವೆ. ಇಂಪಾದ ಗಾನದಲ್ಲಿ ಅಪಸ್ವರವು ಎÀ್ಟು ಹಾಸ್ಯಾಸ್ಪದವೋ ಹಾಗೆಯೇ ಮಾನವನ ಇರುವಿಕೆಯು ಸ್ವರ್ಗದಲ್ಲಿ ಪರಿಗಣಿಸಲ್ಪಡುವುದು; ಸ್ವರ್ಗವು ಈತನಿಗೆ ನರಕವಾಗುವುದು. ಬೆಳಕಿಗೂ ಸಂತೋÀಕ್ಕೂ ಮೂಲನಾದ ದೇವರಿಂದ ದೂರವಾಗಿರಲು ಈತನು ಇÀ್ಟಪಡುವನು. ಸ್ವರ್ಗದಿಂದ ದುÀ್ಟರನ್ನು ದೂಡ ಬೇಕೆಂದು ದೇವರು ತಾನೇ ಸ್ವತ: ಆಜ್ಞೆ ಮಾಡಿಲ್ಲ;ಆದರೆ ದುÀ್ಟರು ತಮ್ಮ ದುÀ್ಟತ್ವದ ದೆಸೆಯಿಂದ ದೇವರ ಅನ್ಯೋನ್ಯತೆಗೆ ದೂರವಾಗಿದ್ದಾರೆ. ದೇವರ ಮಹಿಮೆಯು ದುÀ್ಟರನ್ನು ದಹಿಸುವ ಆಜ್ಞೆಯೋ ಅಥವಾ ಅಗ್ನಿಯೋ ಆಗಿದೆ. ತಮ್ಮನ್ನು ರಕ್ಷಿಸಲು ಸತ್ತಾತನ ಸಮ್ಮುಖದಿಂದ ತಪ್ಪಿಸಿಕೊಳ್ಳಲು ಇವರು ತಮ್ಮ ಮೇಲೆ ನಾಶನ ಬಂದರೆ ಉತ್ತಮವೆಂದು ಹೇಳುತ್ತಾರೆ.LI 13.1

    ತಾವು ಬಿದ್ದಿರುವ ಪಾಪದ ಕೆಸರಿನಿಂದ ತಾವೇ ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ. ನಮ್ಮ ಹೃದಯಗಳು ಅಪವಿತ್ರವಾದವುಗಳು; ಅವುಗಳನ್ನು ನಾವೇ ಬದಲಾಯಿಸಿಕೊಳ್ಳಲಾರವು. “ಅಶುದ್ಧದಿಂದ ಶುದ್ಧ ವುಂಟಾದೀತೇ ಎಂದಿಗೂ ಇಲ್ಲ” “ಪ್ರಪಂಚದ ಮೇಲೆ ಮನಸ್ಸಿಡುವುದು ದೇವರಿಗೆ ವಿರೋಧವು; ಇಂಥಾ ಮನಸ್ಸು ದೇವರ ನಿಯಮಕ್ಕೆ ಒಳಪಡುವುದಿಲ್ಲ ಮತ್ತು ಒಳಪಡುವುದಕ್ಕಾಗುವುದೂ ಇಲ್ಲ.” ವಿದ್ಯೆ, ಮಾನಸಿಕ ಪರಿಪಕ್ವ, ಅಭ್ಯಾಸ, ಮನುÀ್ಯ ಪ್ರಯತ್ನ ಇವುಗಳೆಲ್ಲವೂ ಸರಿಯೆ; ಆದರೆ ಇವು ಹೃದಯ ಪರಿವರ್ತನವನ್ನು iÁಡಲಾರವು; ಹೃದಯವನ್ನು ಶುದ್ಧಗೊಳಿಸಲಾರವು; ಇವುಗಳಿಗೆ ಆ ಶಕ್ತಿ ಇಲ್ಲದೆ ಈ ವಿಚಾರ ಸೋತು ಹೋಗುತ್ತವೆ. ಪಾಪದಿಂದ ಮನುÀ್ಯನು ಪರಿಶುದ್ಧತ್ವಕ್ಕೆ ಬರುವ ವೊದಲು ಆತನ ಹೃದಯದೊಳಕ್ಕೆ ಮೇಲಿನಿಂದ ಬರುವ ಹೊಸ ಜೀವನವು ತನ್ನ ಶಕ್ತಿಯ ಕಾರ್ಯಗಳನ್ನು ಮಾಡಬೇಕು. ಈ ಹೊಸ ಶಕ್ತಿಯು ಕ್ರಿಸ್ತನೇ. ಕ್ರಿಸ್ತನ ಕರುಣೆಯು ಮಾತ್ರ ಆತ್ಮನನ್ನು ಪುನರುಜ್ಜೀವನಗೊಳಿಸಿ ದೇವರ ಶುದ್ದತೆಯ ಕಡೆಗೆ ಎಳೆಯುವುದು. “ಒಬ್ಬನು ಮೇಲಣಿಂದ ಹುಟ್ಟದಿದ್ದರೆ ಆತನು ನೂತನ ಹೃದಯ, ಆಶೆ, ಉದ್ದೇಶ, ಹೊಸ ಜೀವನದ ಹಾದಿ ಇವುಗಳನ್ನು ಪಡೆದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಕ್ರಿಸ್ತನು ಹೇಳಿದನು. ಮನುÀ್ಯನಲ್ಲಿ ಸ್ವಾಭಾವಿಕವಾಗಿರುವ ಒಳ್ಳೆಯತನವನ್ನು ವಿಕಸಿತ ಮಾಡಿಕೊಂಡರೆ ಸಾಕೆಂದು ಕೆಲವರು ಹೇಳುವರು. ಆದರೆ ಈ ಬೋಧನೆಯಿಂದ ಅಪಾಯಗಳುಂಟಾಗುವವು.LI 13.2

    ‘ಪ್ರಾಕೃತ ಮನುÀ್ಯನು ದೇವರಾತ್ಮನ ವಿÀಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚು ಮಾತಾಗಿ ತೋರುತ್ತವೆ; ಅವು ಆತ್ಮವಿಚಾರದಿಂದ ತಿಳಿಯ ತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಲಾರನು’ “ನೀವು ಹೊಸದಾಗಿ ಹುಟ್ಟಬೇಕು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.” ಕ್ರಿಸ್ತನ ವಿಚಾರ ಹೀಗೆ ಬರೆದಿದೆ “ಆತನಲ್ಲಿ ಜೀವವಿತ್ತು, ಆ ಜೀವವು ಮನುÀ್ಯರಿಗೆ ಬೆಳಕಾಗಿತ್ತು” ಮತ್ತು “ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುÀ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ.”LI 14.1

    ದೇವರಲ್ಲಿರುವ ಪ್ರೀತಿ, ಔದಾರ್ಯ, ಕರಣಾ ಹೃದಯ, ಆತನ ಜ್ಞಾನ, ಆತನ ಕಟ್ಟಳೆಗಳಲ್ಲಿ ಅಡಗಿರುವ ನ್ಯಾಯ, ಆತನ ದಯಾದ್ರ್ರ ಸ್ವಭಾವಗಳನ್ನು ಮಾತ್ರ ತಿಳಿದುಕೊಂಡರೆ ಸಾಲದು. ಆತ್ಮ ಪ್ರೇರಿತನಾದ ಪೌಲನು ಇವುಗಳೆಲ್ಲವನ್ನು ತಿಳಿದು ಕೊಂಡಿದ್ದರೂ ಆತನು “ಧರ್ಮಶಾಸ್ತ್ರವು ಉತ್ತಮವಾದದ್ದು” ಎಂದು ಹೇಳುತ್ತಾನೆ. “ಧರ್ಮಶಾಸ್ತ್ರವು ಪರಿಶುದ್ಧವಾದದ್ದು, ಧರ್ಮಶಾಸ್ತ್ರವು ಪಾರಮಾರ್ಥಿಕವಾದದ್ದು” ಆದರೆ ಆತ್ಮವೇದನೆಯಿಂದಲೂ ನಿರಾಶೆಯಿಂದಲೂ ನರಳಿ ಹೀಗೆ ಹೇಳುತ್ತಾನೆ - “ನಾನು ದೇಹಧರ್ಮಕ್ಕೆ ಒಳಗಾದವನೂ ಪಾಪದ ಸ್ವಾಧೀನಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ” ಪರಿಶುದ್ಧನಾಗಲು ಅಧಿಕವಾಗಿ ಆಶಿಸಿದನು, ಆದರೆ ತಾನೇ ಸ್ವತ: ಆ ಸಿದ್ಧಿಯನ್ನು ಹೊಂದಲು ಶಕ್ತನಾಗಲಿಲ್ಲ. ಆದುದರಿಂದ ಆತನು ಹೀಗೆ ಹೇಳಿದನು: “ಅಯ್ಯೋ ನಾನು ಎಂಥಾ ದುರವಸ್ಥೆಯಲ್ಲಿ ಬಿದ್ದ ಮನುÀ್ಯನು! ಈ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವರು ಯಾರು?” ಇದೇ ತೆರನಾದ ಆರ್ತಧ್ವನಿಯು ಸಕಲ ಯುಗಗಳಲ್ಲಿ ಎಲ್ಲಾ ಪಾಪತ್ಮರ ಹೃದಯದಿಂದಲೂ ಹೊರಟಿದೆ. ಇವರೆಲ್ಲರಿಗೂ ಒಂದೇ ಉತ್ತರ ಉಂಟು. ಆ ಉತ್ತರವು ಏನಂದರೆ -- “ಲೋಕದ ಪಾಪವನ್ನು ಹೊತ್ತು ಕೊಂಡು ಹೋಗುವ ದೇವರ ಕುರಿಮರಿಯನ್ನು ನೋಡಿರಿ.”LI 14.2

    ಯಾರು ಪಾಪದ ಹೊರೆಯಿಂದ ಬಿಡುಗಡೆಯಾಗಲು ಇÀ್ಟಪಡುತ್ತಾರೋ ಅಂಥವರಿಗೆ ದೇವರಾತ್ಮನು ನಾನಾ ದೃÀ್ಯಗಳ ಮೂಲಕ ತಿಳಿಸಿದ್ದಾನೆ. ಏಸಾವನನ್ನು ವಂಚಿಸಿದ ಯಾಕೋಬನು ತಂದೆಯ ಮನೆಯಿಂದ ಓಡಿ ಹೋಗುತ್ತಿದ್ದಾಗ ಅವನ ಅಪರಾಧದ ತೂಕವು ಅವನಿಗೆ ಗೊತ್ತಾಯಿತು. ಒಂಟಿಯಾಗಿಯೂ, ಮನೆಗೆ ದೂರವಾಗಿಯೂ, ತನ್ನ ಸುಖಗಳು ತನ್ನನ್ನು ಬಿಟ್ಟಾಗಲೂ, ತಾನು ಪಾಪಿಯಾಗಿದ್ದೇನೆಂಬ ಈ ಯೋಚನೆಯು ಆತನನ್ನು ಕುಗ್ಗಿಸಿ, ತಾನು ದೇವರಿಂದ ದೂರವಾದವನೆಂದೂ ತನ್ನ ಮನಸ್ಸಾಕ್ಷಿಗೆ ವಿರೋಧಿಯಾದವನೆಂದೂ ಆತನನ್ನು ಹಂಗಿಸಿತು. ಚಿಂತೆಯಲ್ಲಿ ಬೆಂದ ಆತನು ಒಂಟಿಗನಾಗಿ ಗುಡ್ಡಗಳ ನಡುವೆ ಒಣನೆಲದ ಮೇಲೆ ಮಲಗಿಕೊಂಡನು. ಆಕಾಶದಲ್ಲಿ ತಾರಾಗಣಗಳು ಮಿರುಗುತ್ತಿದ್ದವು. ಆತನು ಹಾಗೆಯೇ ಮಲಗಿರುವಾಗ ಒಂದು ವಿಚಿತ್ರವಾದ ಬೆಳಕು ಬಂದು ಒಂದು ದರ್ಶನವಾಯಿತು, ಒಂದು ನಿಚ್ಚಣಿಯ ತುದಿಯು ಭೂಮಿಯನ್ನೂ ಮತ್ತೊಂದು ತುದಿಯು ಸ್ವರ್ಗದ ಹೆಬ್ಬಾಗಿಲನ್ನೂ ಮುಟ್ಟುತ್ತಿವೆ; ದೇವದೂತರು ಆ ನಿಚ್ಚಣಿಯ ಮೇಲೆ ಏರುತ್ತಾ ಇಳಿಯುತ್ತಾ ಇದ್ದಾರೆ, ಇಂತಹ ಸಂದರ್ಭದಲ್ಲಿ ದೈವಮಹಿಮೆಯಿಂದಲೂ, ಸಮಾಧಾನದಿಂದಲೂ, ನಿರೀಕ್ಷೆಯಿಂದಲೂ ಕೂಡಿದ ವಾಣಿಯೊಂದು ಕೇಳಿಬರುತ್ತಿದೆ. ಈತನ ಆತ್ಮಕ್ಕೆ ಬೇಕಾದುದು ಏನು? ಆತನಿಗೆ ಒಬ್ಬ ರಕ್ಷಕನು ಬೇಕು ಎಂಬ ಜ್ಞಾನೋದಯ ಉಂಟಾಯಿತು. ಹೇಗೆ ಪಾಪಾತ್ಮನು ದೇವರೊಂದಿಗೆ ಐಕ್ಯವಾಗುವನೆಂಬ ಅಂಶವು ಆತನಿಗೆ ಪ್ರಕಟವಾಯಿತು. ಆತನಲ್ಲಿ ಸಂತೋÀವೂ ಕೃತಜ್ಞತೆಯೂ ಏಕಕಾಲದಲ್ಲುಂಟಾದವು. ಈ ಗೂಡಾರ್ಥದ ನಿಚ್ಚಣಿಯು ಸ್ವರ್ಗಕ್ಕೂ ಭೂಮಿಗೂ ಮಧ್ಯಸ್ಥನಾದ ಕ್ರಿಸ್ತನನ್ನು ಸೂಚಿಸುತ್ತದೆ.LI 15.1

    ಸ್ವಾಮಿಯು ನತಾನಿಯೇಲನನ್ನು ಕಂಡಾಗ, ಈ ಉಪಮಾನನ್ನೇ ತೆಗೆದುಕೊಂಡು ಹೀಗೆ ಹೇಳಿದನು: “ಪರಲೋಕವು ತೆರೆದಿರುವುದನ್ನೂ ಮನುÀ್ಯ ಕುಮಾರನ ಮೇಲೆ ದೇವದೂತರು ಏರಿ ಹೋಗುತ್ತಾ ಇಳಿದು ಬರುತ್ತಾ, ಇರುವುದನ್ನು ಕಾಣುವಿರಿ” ಮತಭ್ರÀ್ಟತೆಯಿಂದ ಮನುÀ್ಯನು ದೇವರಿಗೆ ಶತ್ರುವಾಗಿ ಆತನಿಂದ ದೂರನಾದದು; ಸ್ವರ್ಗಕ್ಕೂ ಭೂಮಿಗೂ ಸಂಬಂಧವು ತಪ್ಪಿತು; ಮಧ್ಯೆ ಆಳವಾದ ಡೊಂಗರವುಂಟಾಯಿತು; ಅನ್ಯೋನ್ಯತೆಗೆ ಸಾಧ್ಯವಿಲ್ಲವಾಯಿತು. ಕ್ರಿಸ್ತನಿಂದ ಈ ಡೊಂಗರವು ತೊಲಗಿ ಭೂಮಿಗೂ ಸ್ವರ್ಗಕ್ಕೂ ಮತ್ತೊಮ್ಮೆ ಸಂಬಂಧವುಂಟಾಯಿತು. ಪಾಪದಿಂದ ಉಂಟಾದ ಡೊಂಗರವು ಕ್ರಿಸ್ತನ ತ್ಯಾಗಬಲಿಯಿಂದ ನಾಶ ಮಾಡಲ್ಪಟ್ಟು ಕ್ರಿಸ್ತನೆಂಬ ಸೇತುವೆಯ ಮೂಲಕ ದೇವದೂತರು ಮಾನವರೊಡನೆ ಸಂಪರ್ಕವನ್ನಿಟ್ಟು ಕೊಳ್ಳುವಂತೆ ಮಾಡಿತು. ಬಲಹೀನನೂ ಪಾಪಿಯೂ ಆದ ಮನುÀ್ಯನನ್ನು ಕ್ರಿಸ್ತನು ಸರ್ವಶಕ್ತನಾದ ದೇವರೊಡನೆ ಒಟ್ಟು ಗೂಡಿಸುತ್ತಾನೆ. ಬಿದ್ದು ಹೋದವರಿಗೆ ಕ್ರಿಸ್ತನು ತೋರಿಸುವ ಈ ಸಹಾಯ ನಿರೀಕ್ಷೆಯನ್ನು ಬಿಟ್ಟರೆ ಮನುÀ್ಯರು ಉನ್ನತೆಗೆ ಬರುವರೆಂಬ ಕನಸೂ ವ್ಯರ್ಥ, ತಾವು ಮಾನವರನ್ನು ಮೇಲಕ್ಕೆತ್ತಲು ಮಾಡುವ ಇತರ ಪ್ರಯತ್ನಗಳೂ ವ್ಯರ್ಥ. “ಎಲ್ಲಾ ಒಳ್ಳೇ ದಾನಗಳೂ, ಕುಂದಿಲ್ಲದ ಎಲ್ಲಾ ವರಗಳೂ ದೇವರಿಂದ ಬರುತ್ತವೆ.” ಎಂದು ಕ್ರಿಸ್ತನು ನುಡಿದಿರುತ್ತಾನೆ. ದೇವರ ಪ್ರೀತಿಯು ಮರಣಕ್ಕಿಂತಲೂ ಬಲವಾಗಿದ್ದು ಭೂಲೋಕದ ತನ್ನ ಮಕ್ಕಳೆಲ್ಲರನ್ನೂ ತನ್ನ ಬಳಿಗೆ ಅತ್ಯಾಶೆಯಿಂದ ಆಹ್ವಾನಿಸುತ್ತದೆ. ಕ್ರಿಸ್ತನನ್ನು ನಮಗೆ ಅನುಗ್ರಹಿಸಿದುದರಿಂದ ಸ್ವರ್ಗನಿಧಿಯನ್ನೇ ನಮಗೆ ಕೊಟ್ಟಂತಾಯಿತು. ರಕ್ಷಕನ ಭೂಲೋಕದ ಜೀವಮಾನ, ಆತನ ಮರಣ, ಆತನು ನಮಗಾಗಿ ಪ್ರಾರ್ಥಿಸುವುದು, ದೇವದೂತರ ಸೇವೆ, ಪವಿತ್ರಾತ್ಮನ ಕೆಲಸ ಇವುಗಳೆಲ್ಲವೂ ನಮಗಾಗಿ ಬಿಡದೇ ಸೇವೆ ಮಾಡುವವು. ಇಡೀ ಸ್ವರ್ಗವೇ ನಮಗಾಗಿ ಕೆಲಸ ಮಾಡುವುದು. ಮನುÀ್ಯನಿಗೆ ರಕ್ಷಣೆಯನ್ನುಂಟು ಮಾಡಲು ಇವುಗಳೆಲ್ಲವೂ ಕೆಲಸ ಮಾಡುತ್ತಿರುವುವೆಂಬುದನ್ನು ನಾವು ಗ್ರಹಿಸೋಣ. ಕ್ರಿಸ್ತನು ನಮಗಾಗಿ ಮಾಡಿದ ತ್ಯಾಗವನ್ನು ನಾವು ಧ್ಯಾನಿಸೋಣ. ನಮ್ಮನ್ನು ದೇವರ ಬಳಿಗೆ ತರಲು ಸ್ವರ್ಗವೇ ನಮಗಾಗಿ ಕೆಲಸ ಮಾಡುತ್ತಿರುವುದೆಂಬುದನ್ನು ನಾವು ಗಮನಿಸಿ ಶ್ಲಾಘಿಸುವ. ಮನುÀ್ಯರ ರಕ್ಷಣೆಗೆ ಇವುಗಳಿಗಿಂತಲೂ ಬಲವಾದ ಉದ್ದೇಶ, ಕಾರಣ ಕರ್ತೃಗಳಾಗಲಿ ಬೇಕೇ? ಉತ್ತಮವಾದುದನ್ನು ಮಾಡಿದರೆ ದೊರಕುವ ಘನತರವಾದ ಬಹುಮಾನ, ಸ್ವರ್ಗದ ಸುಖಸಂತೋÀ, ದೇವರ ಸಿಂಹಾನದೊಡನೆ ದೊರಕುವ ಅನ್ಯೋನ್ಯತೆಗಳು ಯುಗ ಯುಗಾಂತರಕ್ಕೂ ನಮ್ಮ ಶಕ್ತಿಯನ್ನು ಹೆಚ್ಚಿಸುವವು. ಸೃಷ್ಟಿಕರ್ತನಿಗೂ ನಮ್ಮ ರಕ್ಷಕನಿಗೂ ನಾವು ಹೃತ್ಪೂರ್ಪಕವಾಗಿ ಸಲ್ಲಿಸುವ ಪ್ರೀತಿಯ ಸೇವೆಗೆ ನಮ್ಮನ್ನು ಪ್ರೇರಿಸಿ ಸೇರಿಸುವುದಕ್ಕೆ ಇವುಗಳೆಲ್ಲವೂ ಧೈರ್ಯೋತ್ಸಾಹದ ಸಾಧನಗಳಾಗಿರುವುದಲ್ಲವೇ?LI 16.1

    ಮತ್ತೊಂದುಕಡೆ ಗಮನಿಸುವುದಾದರೆ, ಪಾಪಕ್ಕೆ ವಿರುದ್ಧವಾಗಿ ದೇವರು ಕೊಡುವ ತೀರ್ಮಾನ, ತಪ್ಪಿಸಿಕೊಳ್ಳಲಾಗದ ಶಿಕ್ಷೆ, ದುರ್ಗಣದ ಪ್ರತಿಫಲರೂಪವಾದ ಅವಮಾನ, ಅಂತ್ಯದ ನಾಶನ ಇವುಗಳು ಸೈತಾನನ ಸೇವಕರಿಗೆ ದೊರೆಯುತ್ತವೆಂಬುದನ್ನು ತಿಳಿಸುವುದರ ಮೂಲಕ ಸತ್ಯವೇದವು ನಮ್ಮನ್ನು ಎಚ್ಚರಿಸುತ್ತದಲ್ಲವೇ?LI 17.1

    ದೇವರ ಕರುಣೆಯ ವಿಚಾರ ನಾವು ಗಮನ ಕೊಡಬಾರದೇ? ಇದಕ್ಕಿಂತಲೂ ಹೆಚ್ಚಾಗಿ ದೇವರು ಇನ್ನೇನನ್ನು ಮಾಡಬೇಕು. ನಮ್ಮನ್ನು ಅದ್ಬುತವಾಗಿ ಪ್ರೀತಿಸುವ ನಮ್ಮ ತಂದೆಯಾದ ದೇವರೊಡನೆ ನಾವು ಸರಿಯಾದ ಸಂಬಂಧವನ್ನು ಇಟ್ಟು ಕೊಳ್ಳೋಣ. ಕ್ರಿಸ್ತಸಾರೂಪ್ಯಕ್ಕೆ ನಾವು ಮುಟ್ಟುವಂತೆಯೂ, ಊಳಿಗ ನಡಿಸುತ್ತಲಿರುವ ದೇವದೂತ ರೊಡನೆ ಆತನ ಸಹವಾಸಕ್ಕೆ ಮರಳಿ ಬರುವಂತೆಯೂ ತಂದೆ ಯೊಡನೆಯೂ, ಮಗನೊಡನೆಯೂ ಐಕ್ಯವಾಗುವಂತೆಯೂ, ದೇವರು ದಯೆಯಿಟ್ಟು ನಮಗೆ ದೊರಕಿಸಿ ಕೊಟ್ಟಿರುವ ಸಕಲ ಸಹಾಯಗಳನ್ನೂ ನಾವು ನಮ್ಮ ಹಿತಾರ್ಥವಾಗಿ ಪಡೆದು ಕೊಳ್ಳುವಂತೆ ಆತನ ಸಹಾಯಕ್ಕಾಗಿ ಬೇಡೋಣ.LI 17.2

    Larger font
    Smaller font
    Copy
    Print
    Contents