Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕರ್ತನ ಪ್ರಾರ್ಥನೆ

    “ಆದುದರಿಂದ ನೀವು ಹೀಗೆ ಪ್ರಾರ್ಥನೆ ಮಾಡಿರಿ.”

    ಕರ್ತನ ಪ್ರಾರ್ಥನೆಯು ನಮ್ಮ ರಕ್ಷಕನಿಂದ ಎರಡು ಸಾರಿ ಕೊಡಲ್ಪಟ್ಟಿತು, ಮೊದಲು ಪರ್ವತ ಪ್ರಸಂಗದಲ್ಲಿ ಜನಸಮೂಹಕ್ಕೂ, ಮತ್ತೊಮ್ಮೆ ಕೆಲವು ತಿಂಗಳುಗಳ ನಂತರ, ಶಿಷ್ಯರಿಗೆ ಮಾತ್ರ. ಶಿಷ್ಯರು ಕೆಲವು ಕಾಲದವರೆಗೆ ತಮ್ಮ ಕರ್ತನಿಂದ ಬೇರ್ಪಟ್ಟಿದ್ದರು, ಅವರು ಹಿಂದಿರುಗಿ ಬಂದಾಗ ಆತನು ದೇವರ ಸಂಪರ್ಕದಲ್ಲಿ ತಲ್ಲೀನನಾಗಿರುವುದನ್ನು ಕಂಡರು. ಅವರ ಪ್ರಸನ್ನತೆಯ ಪರಿಜ್ಞಾನವಿಲ್ಲದೆ, ಆತನು ಗಟ್ಟಿಸ್ವರದಿಂದ ಪ್ರಾರ್ಥನೆ ಮಾಡುತ್ತಾ ಇದ್ದನು. ಸ್ವರ್ಗಲೋಕದ ಪ್ರಭೆಯಿಂದ ರಕ್ಷಕನ ವದನವು ಹೊಳೆಯುತ್ತಿತ್ತು. ಅದೃಶ್ಯನಾದಾತನ ಸಮುಖದಲ್ಲಿ ಇರುವಂತೆಯೇ ಕಂಡನು; ಆತನ ವಾಕ್ಯಗಳಲ್ಲಿ ದೇವರೊಡನೆ ಸಂಭಾಷಿಸಿದವನಿಗಿರುವಂತೆ ಜೀವಶಕ್ತಿಯಿತ್ತು.MBK 103.4

    ಇದನ್ನು ಕೇಳುತ್ತಿದ್ದ ಶಿಷ್ಯರ ಹೃದಯಗಳು ಗಾಢವಾಗಿ ಚಲಿಸಿದುವು. ಆತನು ತನ್ನ ತಂದೆಯ ಅನ್ಯೋನ್ಯತೆಯಲ್ಲಿ ಏಕಾಂತವಾಗಿ ದೀರ್ಘಕಾಲವನ್ನು ಕಳೆದುದನ್ನು ಅವರು ಅರಿತಿದ್ದರು. ಆತನನ್ನು ಮುತ್ತಿದ ಜನಸಮೂಹಕ್ಕೆ ಉಪದೇಶಿಸಿ ಆತನ ದಿನಗಳು ಕಳೆದಿದ್ದುವು, ಮತ್ತು ಶಾಸ್ತ್ರಿಗಳ ವಿಶ್ವಾಸಘಾತುಕ ಕುತರ್ಕವನ್ನು ಬೈಲುಪಡಿಸಿ, ಎಡೆಬಿಡದ ದುಡುಮೆಯ ಆತನನ್ನು ಪದೇ ಪದೇ ತೀರಾ ಬಳಲಿಸಿಬಿಡುತ್ತಿದ್ದುವು. ಇದನ್ನು ಕಂಡ ಆತನ ತಾಯಿಯೂ ಸಹೋದರರೂ, ಮತ್ತು ಆತನ ಶಿಷ್ಯರೂ ಸಹ ಆತನು ಪ್ರಾಣಬಲಿಯಾಗಬಹುದೆಂದು ಭಯಪಟ್ಟರು. ಆದರೆ ಶ್ರಮೆಯ ದಿನವನ್ನು ಅಂತ್ಯಗೊಳಿಸಿದ ಪ್ರಾರ್ಥನೆಯ ಸಮಯದಿಮ್ದ ಹಿಂದಿರುಗಿದಾಗ, ಆತನ ಮುಖದಲ್ಲಿ ಪ್ರಶಾಂತತೆಯು ತಾಂಡವಾಡುವುದನ್ನೂ ಮತ್ತು ಆತನ ಪ್ರಸನ್ನತೆಯನ್ನು ನವಚೈತನ್ಯವೇ ಆಕ್ರಮಿಸಿದೆಯೋ ಎಂಬಂತೆ ಭಾಸವಾಗುತ್ತಿತ್ತು. ಆತನು ಪ್ರತಿ ಪ್ರಾತಃಕಾಲವೂ ಮಾನವರಿಗೆ ಸ್ವರ್ಗೀಯ ಪ್ರಕಾಶವನ್ನು ತಂದುದು, ದೇವರೊಡನೆ ಪ್ರಾರ್ಥನೆಯಲ್ಲಿ ಆತನು ಕಳೆದ ಸಮಯದಿಂದಲೇ. ಶಿಷ್ಯರು ಆತನ ಪ್ರಾರ್ಥನಾ ಸಮಯವನ್ನು ಆತನ ವಾಕ್ಯಗಳ ಮತ್ತು ಸೇವೆಯ ಶಕ್ತಿಯೊಡನೆ ಸಂಯೋಜಿಸಲು ಬಂದಿದ್ದರು. ಈಗ, ಆತನ ಪ್ರಾರ್ಥನೆಯನ್ನು ಕೇಳಿದಾಗ ಅವರ ಹೃದಯಗಳು ಭಯಭಕ್ತಿಯಿಂದ ನಮ್ರವಾದುವು. ಆತನು ಪ್ರಾರ್ಥನೆಯನ್ನು ಬಿಟ್ಟೆದ್ದಾಗ, ಅವರು ತಮ್ಮ ಸ್ವಂತ ಗಾಢವಾದ ನ್ಯೂನತೆಯನ್ನು ಮನಗಂಡವರಾಗಿಯೇ “ಸ್ವಾಮೀ, ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು” ಎಂದು ಬೇಡಿಕೊಂಡರು.MBK 104.1

    ಯೇಸುವು ಅವರಿಗೆ ನೂತನ ಮಾದರಿಯ ಪ್ರಾರ್ಥನೆಯನ್ನು ಕಲಿಸಲಿಲ್ಲ. ಆತನು ಮೊದಲೇ ಅವರಿಗೆ ಕಲಿಸಿದ್ದನ್ನೇ ಪುನರಾವೃತ್ತಿಸಿ, ನಾನು ನಿಮಗೆ ಕಲಿಸಿರುವುದನ್ನೇ ಗ್ರಹಿಸಿಕೊಳ್ಳುವುದು ಅವಶ್ಯವೆನ್ನುವ ಹಾಗೆ ನುಡಿದನು. ನೀವು ಇನ್ನೂ ಪರೀಕ್ಷಿಸದಿರುವ ಅಗಾಧ ಅರ್ಥವು ಅದರಲ್ಲಿದೆ.MBK 105.1

    ರಕ್ಷಕನು ನಾವು ಇದೇ ಪದಗಳನ್ನು ಉಪಯೋಗಿಸುವುದನ್ನು ನಿರ್ಬಂಧಿಸುವುದಿಲ್ಲ. ಮಾನವರಲ್ಲೊಬ್ಬನಾಗಿ, ತನ್ನ ಸ್ವಂತ ಆದರ್ಶ ಪ್ರಾರ್ಥನೆಯನ್ನು ಪರಿಚಯ ಮಾಡಿಸುತ್ತಾನೆ,-ಚಿಕ್ಕ ಮಕ್ಕಳಿಂದಲೂ ಅನುಸರಿಸಬಹುದಾದ ಬಹು ಸರಳವಾದ ಪದಗಳು, ಆದರೂ ಮಹಾ ಜ್ಞಾನಕ್ಕೂ ಪರಿಪೂರ್ಣವಾಗಿ ಗ್ರಹಿಸಲಸದಳವಾದ ಭಾವಗರ್ಭಿತವಾದುದಾಗಿದ್ದುವು. ನಾವು ದೇವರ ಬಳಿಗೆ ಕೃತಜ್ಞತಾಕಾಣಿಕೆಗಳೊಡನೆ ಬರಬೇಕೆಂದೂ, ನಮ್ಮ ಕೊರತೆಗಳನ್ನು ಆತನಿಗೆ ತಿಳಿಸಬೇಕೆಂದೂ, ನಮ್ಮ ಪಾಪಗಳನ್ನು ನಿವೇದಿಸಿ ಆತನ ವಾಗ್ದಾನಕ್ಕನುಸಾರವಾಗಿ ಆತನ ಕೃಪೆಯನ್ನು ಸಾಧಿಸಬೇಕೆಂದೂ ಕಲಿಸಲ್ಪಟ್ಟಿದ್ದೇವೆ.MBK 105.2