Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  “ನೀವು ಪ್ರಾರ್ಥಿಸುವಾಗ-ತಂದೆಯೇ, ಎನ್ನಿರಿ.”

  ಯೇಸುವು ತನ್ನ ತಂದೆಯನ್ನು ನಮ್ಮ ತಂದೆಯೆಂದು ಕರೆಯುವಂತೆ ಕಲಿಸುತ್ತಾನೆ. ಆತನು ನಮ್ಮನ್ನು ಸಹೋದರರೆಂದು ಕರೆಯಲು ನಾಚಿಕೆಪಡುವುದಿಲ್ಲ. (ಇಬ್ರಿಯ 2: 11), ರಕ್ಷಕನ ಹೃದಯವು ನಮ್ಮನ್ನು ದೇವರ ಕುಟುಂಬದ ಅಂಗಗಳಾಗಿರುವಂತೆ ಸ್ವಾಗತಿಸಲು ಸದಾ ಸಿದ್ಧನಾಗಿಯೂ ತವಕವುಳ್ಳವನಾಗಿಯೂ ಇದ್ದಾನೆ. ನಾವು ದೇವರನ್ನು ಸಮೀಪಿಸುವಾಗ್ಗೆ ಉಪಯೋಗಿಸಬೇಕಾದ ಪ್ರಥಮ ವಾರ್ತೆ,- “ನಮ್ಮ ತಂದೆಯೇ” ಎಮ್ಬುದರಲ್ಲಿ ನಮ್ಮ ದೈವಸಂಬಂಧವನ್ನು ದೃಡಪಡಿಸುತ್ತಾನೆ.MBK 105.3

  ದೇವರು ತನ್ನ ಮಗನನ್ನು ಪ್ರೀತಿಸುವ ಹಾಗೆ ನಮ್ಮನ್ನೂ ಪ್ರೀತಿಸುತ್ತಾನೆ ಎಂಬುದರಲ್ಲಿ ಉತ್ತೇಜನ ಮತ್ತು ಉಪಶಮನಕಾರಿಯಾದ ಅದ್ಭುತವಾದ ಸತ್ಯದ ಪ್ರಕಟನೆಯು ವ್ಯಕ್ತವಾಗಿದೆ. ಯೇಸುವು ಕೊನೆಯ ಬಾರಿ ತನ್ನ ಶಿಷ್ಯರಿಗಾಗಿ ಪ್ರಾರ್ಥಿಸುವಾಗ ಹೇಳಿದ್ದು ಇದೇ, “ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ.” ಯೋಹಾನ 17: 23.MBK 106.1

  ಸೈತಾನನು ತನ್ನದೆಂದು ಸಾಧಿಸಿ ಕ್ರೂರ ದಬ್ಬಾಳಿಕೆಯನ್ನು ನಡಿಸಿದ ಈ ಲೋಕವನ್ನು ದೇವಕುಮಾರನು, ತನ್ನ ಮಹತ್ಸಾಧನೆಯಿಂದ ತನ್ನ ಪ್ರೀತಿಯಿಂದ ನಮ್ಮನ್ನಾವರಿಸಿ ಯೆಹೋವನ ಸಿಂಹಾಸನದೊಂದಿಗೆ ನಮ್ಮನ್ನು ಸಂಯೋಜಿಸಿದ್ದಾನೆ. ಕೆರೂಬಿಯರೂ ಸೆರಾಫಿಯರೂ ಮತ್ತು ಪಾತಕಕ್ಕೊಳಗಾಗದ ಇತರ ಲೋಕದ ಅಗಣಿತ ಸೈನ್ಯವೂ, ಈ ಜಯವು ಲಭಿಸಿ ದೃಢವಾದಾಗ ದೇವರನ್ನೂ ಮತ್ತು ಯಜ್ಞದ ಕುರಿಯನ್ನೂ ಹೊಗಳುವ ಸ್ತೋತ್ರಗೀತೆಯನ್ನು ಹಾಡಿದರು. ಪಾತಕಕ್ಕೊಳಗಾದವರಿಗೆ ರಕ್ಷಣೆಯ ಮಾರ್ಗವು ತೆರೆಯಿತೆಂದೂ ಮತ್ತು ಭೂಮುಯು ಪಾಪದ ಶಾಪದಿಂದ ವಿಮೋಚಿಸಲ್ಪಟ್ಟಿತೆಂದು ಉಲ್ಲಾಸಿಸಿದರು. ಹಾಗಾದರೆ ಅಂಥಾ ಅಪಾರ ಪ್ರೀತಿಪಾತ್ರರಾದವರು ಇನ್ನೆಷ್ಟು ಹೆಚ್ಚಾಗಿ ಉಲ್ಲಾಸಿಸಬೇಕಲ್ಲವೇ! MBK 106.2

  ಇನ್ನೆಷ್ಟರ ವರೆಗೆ ನಾವು ಸಂದೇಹಭರಿತರೂ ಚಂಚಲಸ್ವಭಾವದವರೂ ಆಗಿದ್ದು ತಬ್ಬಲಿಗಳೆಂದು ಹೇಳಿಕೊಳ್ಳುವುದು? ದೈವಾಜ್ಞೆಗಳನ್ನು ಮೀರಿದವರಿಗಾಗಿಯೇ ಯೇಸುವು ಮಾನವ ಸ್ವಭಾವವನ್ನು ಧರಿಸಿದನು; ನಾವು ನಿತ್ಯ ಸಮಾಧಾನವನ್ನೂ ಭರವಸವನ್ನೂ ಹೊಂದುವಂತೆ, ಆತನು ನಮ್ಮಂತೆ ಆದನು. ಪರಲೋಕದಲ್ಲಿ ನಮಗೊಬ್ಬ ಮಧ್ಯಸ್ಥನಿದ್ದಾನೆ, ಯಾರಾರು ಆತನನ್ನು ತಮ್ಮ ಸ್ವಂತ ರಕ್ಷಕನೆಂದು ಅಂಗೀಕರಿಸಿಕೊಳ್ಳುತ್ತಾರೋ, ಅಂಥವರು ತಬ್ಬಲಿಗಳಂತೆ, ತಮ್ಮ ಪಾಪದ ಹೊರೆಯನ್ನು ಅವರೇ ಹೊರುವಂತೆ ಬಿಡಲ್ಪಡರು.MBK 106.3

  “ಪ್ರಿಯರೇ, ಈಗ ದೇವರ ಮಕ್ಕಳಾಗಿದ್ದೇವೆ.” “ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗೆಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗಿರುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು,” “ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತ್ಯಕ್ಷವಾಗಿಲ್ಲ. ಕ್ರಿಸ್ತನು ಪ್ರತ್ಯಕ್ಷನಾದರೆ ನಾವು ಆತನ ಹಾಗಿರು ವುವೆಂದು ಬಲ್ಲೆವು. ಯಾಕಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು.” 1 ಯೋಹಾನ 3: 2; ರೋಮಾಯ 8: 17.MBK 106.4

  ದೇವರ ಸನ್ನಿಧಿಗೆ ಹೋಗುವಾಗ ನಮ್ಮ ಪ್ರಥಮ ಹೆಜ್ಜೆಯಲ್ಲೇ ನಾವು ತಿಳಿಯಬೇಕಾದದ್ದು ಮತ್ತು ನಂಬಬೇಕಾದದ್ದು ಏನಂದರೆ ಆತನಿಗೆ ನಮ್ಮ ಮೇಲಿರುವ ಪ್ರೀತಿಯನ್ನೇ; (1 ಯೋಹಾನ 4: 16) ಯಾಕಂದರೆ ಆತನ ಪ್ರೀತಿಯ ಸೆಳೆತದಿಂದಲೇ ತಾನೆ ನಾವು ಆತನ ಬಳಿಗೆ ಹೋಗುವಂತೆ ಪ್ರೇರಿಸಲ್ಪಡುತ್ತೇವೆ.MBK 107.1

  ದೇವರ ಪ್ರೀತಿಯ ಗ್ರಹಣಶಕ್ತಿಯು ಸ್ವಾರ್ಥತೆಯನ್ನು ತೊರೆಯುವಂತೆಸಗುತ್ತದೆ. ದೇವರನ್ನು ನಾವು ತಂದೆಯೆಂದು ಕರೆಯುವುದರಿಂದ ಆತನ ಮಕ್ಕಳೆಲ್ಲರನ್ನು ನಮ್ಮ ಸಹೋದರರೆಂದು ಪರಿಗಣಿಸುತ್ತೇವೆ. ನಾವೆಲ್ಲರೂ ಮಾನವ ಸಂತಾನದ ಮಹಾ ಬಲೆಯ ಒಂದು ಅಂಗವಾಗಿದ್ದೇವೆ. ಎಲ್ಲರೂ ಒಂದೇ ಕುಟುಂಬದ ಅಂಗಗಳು, ನಮ್ಮ ವಿಜ್ಞಾಪನೆಯಲ್ಲಿ ನಮ್ಮನ್ನು ಮತ್ತು ನಮ್ಮ ನೆರೆಯವರನ್ನೂ ಸೇರಿಸಿಕೊಳ್ಳಬೇಕು, ತನ್ನೊಬ್ಬನಿಗೇ ಆಶೀರ್ವಾದವನ್ನು ಬಯಸುವವನು ಯುಕ್ತವಾಗಿ ಪ್ರಾರ್ಥಿಸುವುದಿಲ್ಲ.MBK 107.2

  ಅನಂತನಾದ ದೇವರು ನಮಗೆ ತನ್ನನ್ನು ತಂದೆಯೆಂಬ ಹೆಸರಿನಿಂದ ಆತನ ಬಳಿಗೈದುವ ಸುಯೋಗವನ್ನು ದಯಪಾಲಿಸಿದ್ದಾನೆಂದು ಯೇಸುವು ಹೇಳಿದನು. ಇದರ ಅಭಿಪ್ರಾಯವನ್ನು ಗ್ರಹಿಸಿಕೊಳ್ಳಿರಿ. ನಮ್ಮ ಸೃಷ್ಟಿಕರ್ತನು ತನಗೆ ಅವಿಧೇಯರಾದ ನಮ್ಮೊಡನೆ ವಾದಿಸುವಂತೆ ಭೂಲೋಕದ ತಂದೆತಾಯಿಗಳಾರೂ ತಪ್ಪು ಮಾಡುವ ಮಗುವಿನೊಡನೆ ವಾದಿಸುವುದಿಲ್ಲ. ಮಾನವನ ಪ್ರೀತಿಭರಿತ ಆಸಕ್ತಿಯು ಎಂದೂ ಪಶ್ಚಾತ್ತಾಪ ಪಡದವನನ್ನು ಇಷ್ಟು ವಿನಯದಿಮ್ದ ಬೇಡುತ್ತಾ ಹಿಂಬಾಲಿಸಲಿಲ್ಲ. ದೇವರು ಪ್ರತಿಯೊಂದು ಗೃಹದಲ್ಲೂ ನಿವಾಸಿಸುತ್ತಾನೆ; ಮಾತಾಡುವ ಪ್ರತಿಯೊಂದು ಮಾತನ್ನೂ ಲಾಲಿಸುತ್ತಾನೆ, ಪ್ರತಿಯೊಂದು ಪ್ರಾರ್ಥನೆಯನ್ನೂ ಆಲಿಸುತ್ತಾನೆ, ಪ್ರತಿಯೊಂದು ಆತ್ಮದ ವ್ಯಥೆಯನ್ನೂ ಆಶಾಭಂಗವನ್ನೂ ರುಚಿಸುತ್ತಾನೆ, ತಂದೆ, ತಾಯಿ, ತಂಗಿ, ಮಿತ್ರ ಮತ್ತು ನೆರೆಯವರೊಡನೆ ವರ್ತಿಸುವ ರೀತಿಯಲ್ಲಿ ಎವೆಯಿಕ್ಕದೆ ದೃಷ್ಟಿಸುತ್ತಾನೆ. ನಮ್ಮ ಕೊರತೆಗಳಲ್ಲಿ ಪಾಲಿಸುತ್ತಾನೆ, ಮತ್ತು ಆತನ ಪ್ರೀತಿ, ಕನಿಕರ, ಕೃಪೆ ಇವುಗಳು ನಮ್ಮ ನ್ಯೂನತೆಯನ್ನು ತಣಿಸಲು ನಿರಂತರವೂ ಪ್ರವಹಿಸುತ್ತವೆ.MBK 107.3

  ದೇವರನ್ನು ನೀವು ನಿಮ್ಮ ತಂದೆಯೆಂದು ಎಣಿಸುವುದಾದರೆ, ಆತನ ಜ್ಞಾನದಿಂದ ನಿಮ್ಮನ್ನೂ ಕಾಯಲೂ, ನೀವು ಆತನಿಗೆ ಎಲ್ಲಾ ವಿಷಯಗಳಲ್ಲಿಯೂ ವಿಧೇಯರಾಗಿರಲೂ ಮತ್ತು ಆತನ ಪ್ರೀತಿಯು ಮಾರ್ಪಡದ ಪ್ರೀತಿಯೆಂದೂ ಅರಿತು ನೀವು ಆತನ ಮಕ್ಕಳೆಂದೂ ಅಂಗೀಕರಿಸಿಕೊಳ್ಳಿರಿ. ನಿಮ್ಮ ಜೀವನಕ್ಕೆ ಆತನ ಯೋಜನೆಗಳೇನೆಂಬುದನ್ನು ಸ್ವೀಕರಿಸುವಿರಿ. ನೀವು ದೇವರ ಮಕ್ಕಳಂತೆ, ಆತನ ಗೌರವವನ್ನೂ, ಆತನ ಸೌಜನ್ಯವನ್ನೂ, ಆತನ ಕುಟುಂಬವನ್ನೂ ಮತ್ತು ಆತನ ಸೇವೆಯನ್ನೂ ನಿಮ್ಮ ಮಹೋನ್ನತ ಹಕ್ಕಿನ ವಸ್ತುಗಳೆಂದು ಸಮರ್ಥಿಸುವಿರಿ. ನಿಮ್ಮ ದೇವರೊಡನೆಯೂ ಮತ್ತು ಆತನ ಕುಟುಂಬದ ಪ್ರತಿಯೊಂದು ವ್ಯಕ್ತಿಯೊಡನೆಯೂ ನಿಮಗಿರುವ ಸಂಬಂಧವನ್ನು ಗ್ರಹಿಸಿ ಗೌರವಿಸುವುದು ನಿಮಗೊಂದು ಉಲ್ಲಾಸವಾಗಿರುತ್ತದೆ. ಆತನ ಮಹಿಮೆಗಾಗಿಯೂ ಅಥವಾ ನಿಮ್ಮ ನೆರೆಯವರ ಹೆತೆಕ್ಕಾಗಿಯೂ ಎಷ್ಟೇ ಕೀಳಾದ ಸೇವೆಯನ್ನಾದರೂ ಮಾಡುವುದರಲ್ಲಿ ಆನಂದಿಸುವಿರಿ.MBK 107.4

  “ಪರಲೋಕದಲ್ಲಿರುವ” ನಮ್ಮ ತಂದೆ. “ನಮ್ಮ ತಂದೆಯೆಂದು” ಎಣಿಸಬೇಕೆಂದು ಕ್ರಿಸ್ತನು ನಮಗೆ ಹೇಳಿದಾತನು “ಪರಲೋಕದಲ್ಲಿದ್ದಾನೆ; ಆತನು ನನಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾನೆ.” ಆತನ ಸಂರಕ್ಷಣೆಯಲ್ಲಿ ಸುರಕ್ಷಿತರಾಗಿರಬಹುದು. “ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ ಆಶ್ರಯಿಸಿಕೊಳ್ಳುವೆನು.” ಕೀರ್ತನೆ 115: 3; 56: 3.MBK 108.1