Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ತಪ್ಪಿಸು.”

    ಶೋಧನೆಯೆಂದರೆ ಪಾಪಮಾಡಲು ಪ್ರೇರಿಸುವುದೆಂದರ್ಥ, ಇದು ದೇವರಿಂದ ಬಂದುದಲ್ಲ, ಸೈತಾನನಿಂದಲೂ ಮತ್ತು ನಮ್ಮ ಹೃದಯಗಳ ದುಷ್ಟತನದಿಂದಲೂ ಬಂದುವುಗಾಲಾಗಿವೆ. “ದೇವರು ಕೆಟ್ಟದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರಿಸುವುದಿಲ್ಲ.” ಯಾಕೋಬ 1: 13.MBK 118.1

    ಸೈತಾನನು ನಮ್ಮನ್ನು ಶೋಧನೆಯಲ್ಲಿ ಬೀಳಿಸಿ, ನಮ್ಮ ದುರ್ಗುಣಗಳು ಮನುಷ್ಯರ ಮುಂದೆಯೂ ದೇವದೂತರ ಮುಂದೆಯೂ ವ್ಯಕ್ತವಾಗಿ, ನಮ್ಮನ್ನು ತನ್ನವರೆಂದು ಸಾಧಿಸಲು ಪ್ರಯತ್ನಿಸುತ್ತಾನೆ. ಜೆಕರ್ಯನ ಪ್ರವಾದನೆಯ ಸಂಕೇತದಲ್ಲಿ ಸೈತಾನನು ಕರ್ತನ ದೂತನ ಬಲಪಾರ್ಶ್ವದಲ್ಲಿ ನಿಂತು, ಮಲಿನ ವಸ್ತ್ರಧಾರಿಯಾಗಿ ನಿಂತಿದ್ದ ಮಹಾಯಾಜಕನಾದ ಯೆಹೋಶುವನ್ನು ದೂಷಿಸುತ್ತಾ, ದೇವದೂತನು ಅವನಿಗೆ ಮಾಡಲಿಚ್ಛಿಸಿದ ಕಾರ್ಯಕ್ಕೆ ಅಡ್ಡಿ ಮಾಡುತ್ತಾ ಇರುವುದನ್ನು ನೋಡುತ್ತೇವೆ. ಕ್ರಿಸ್ತನು ತನ್ನ ಬಳಿಗೆ ಬರಸೆಳೆಯಲು ಪ್ರಯತ್ನಿಸುವ ಆತ್ಮಗಳ ವಿಚಾರದಲ್ಲಿ ಸೈತಾನನ ಕುಯುಕ್ತಿ ಏನೆಂಬುದು ಇದರಲ್ಲಿ ವ್ಯಕ್ತವಾಗುತ್ತದೆ. ವಿರೋಧಿಯೇ ನಮ್ಮನ್ನು ಪಾಪಕ್ಕೆ ಬೀಳಿಸುವವನಾಗಿದ್ದಾನೆ, ತರುವಾಯ ನಾವು ದೇವರ ಪ್ರೀತಿಗೆ ಅಯೋಗ್ಯರೆಂದು ಪರಲೋಕದ ಮುಂದೆ ನಮ್ಮನ್ನು ದೂಷಿಸುತ್ತಾನೆ, ಆದರೆ “ಆಗ ಯೆಹೋವನ ದೂತನು ಸೈತಾನನಿಗೆ-ಸೈತಾನನೇ, ಯೆಹೋವನು ನಿನ್ನನ್ನು ಖಂಡಿಸಲಿ, ಹೌದು ಯೆರುಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ ಎಂದು ಹೇಳಿದನು.” ಮತ್ತು ಆತನು ಯೆಹೋಶುವನಿಗೆ ಹೇಳಿದ್ದೇನಂದರೆ, “ಇಗೋ ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ, ನಿನಗೆ ಶ್ರೇಷ್ಠ ವಸ್ತ್ರಗಳನ್ನು ತೊಡಿಸುವೆನು.” ಜೆಕರ್ಯ 3: 2, 4.MBK 118.2

    ದೇವರು ತನ್ನ ಮಹಾ ಪ್ರೀತಿಯಿಂದ ತನ್ನ ಆತ್ಮನ ಅಮೂಲ್ಯ ಕೃಪೆಯನ್ನು ನಮ್ಮಲ್ಲಿ ವೃದ್ಧಿಪಡಿಸಲು ಪ್ರಯತ್ನಿಸುತ್ತಾನೆ. ನಾವು ಅಡಚಣೆಗಳನ್ನೂ, ಉಪದ್ರವಗಳನ್ನೂ ಮತ್ತು ಕಷ್ಟಗಳನ್ನೂ ಪ್ರತಿಭಟಿಸುವಂತೆ ಬಿಡುತ್ತಾನೆ, ಇದು ಶಾಪದಿಂದಲ್ಲ, ಆದರೆ ನಮ್ಮ ಜೀವ್ಯದ ಮಹೋನ್ನತ ಆಶೀರ್ವಾದಗಳಾಗಿಯೇ ಇವೆ. ಪ್ರತಿಭಟಿಸಿದ ಒಂದೊಂದು ಶೋಧನೆಯೂ, ಧೈರ್ಯದಿಮ್ದ ಸಹಿಸಿದ ಒಂದೊಂದು ಹೆಂಸೆಯೂ ನಮಗೆ ನೂತನ ಅನುಭವಗಳನ್ನು ಕೊಟ್ಟು ನಮ್ಮ ಗುಣಗಳ ಕಟ್ಟೋಣದಲ್ಲಿ ಅಭಿವೃದ್ಧಿಯನ್ನೀಯುತ್ತದೆ. ದೈವಶಕ್ತಿಯ ಮೂಲಕ ಶೋಧನೆಗಳನ್ನು ಎದುರಿಸುವ ಆತ್ಮವು, ಲೋಕಕ್ಕೆ ಮತ್ತು ಪರಲೋಕಕ್ಕೂ ಕ್ರಿಸ್ತನ ಕೃಪೆಯ ಪ್ರತಾಪವನ್ನು ಪ್ರಕಟಿಸುವುದಾಗಿದೆ.MBK 119.1

    ಶೋಧನೆಯು ಎಷ್ಟೇ ಅಸಹನೀಯವಾಗಿದ್ದರೂ ಭಯಪಡದೆ, ನಮ್ಮ ಸ್ವಂತ ಹೃದಯಗಳ ದುಷ್ಟತನದಿಮ್ದ ಮಾರ್ಗ ತಪ್ಪಿ ಹೋಗಲೀಸದಂತೆ ಕಾಯಲೆಂದು ದೇವರಲ್ಲಿ ಪ್ರಾರ್ಥಿಸಬೇಕು. ಕ್ರಿಸ್ತನು ಕಲಿಸಿಕೊಟ್ಟ ಪ್ರಾರ್ಥನೆಯನ್ನು ನಿವೇದಿಸುವುದರಿಂದ, ನಾವು ನಮ್ಮನ್ನು ದೇವರ ಪರಮಾರಿಕೆಗೆ ಒಪ್ಪಿಸಿಕೊಟ್ಟು, ನಮ್ಮನ್ನು ಸುಗಮಹಾದಿಯಲ್ಲಿ ನಡಿಸುವಂತೆ ಆತನನ್ನು ಬೇಡುವವರಾಗಿದ್ದೇವೆ. ನಾವು ಯಥಾರ್ಥವಾಗಿ ಈ ಪ್ರಾರ್ಥನೆಯನ್ನು ನಿವೇದಿಸುತ್ತಾ, ನಮ್ಮ ಆಯ್ಕೆಯ ಮಾರ್ಗದಲ್ಲೇ ನಡೆಯಲು ತೀರ್ಮಾನಿಸಲಾರೆವು. ಆತನ ಕರಗಳು ನಮ್ಮನ್ನು ನಡಿಸುವಂತೆ ಹಂಬಲಿಕೆಯಿಂದ ಕಾದಿರಬೇಕು, “ಇದೇ ಮಾರ್ಗ ಇದರಲ್ಲೇ ನಡೆಯಿರಿ,” ಯೆಶಾಯ 3೦: 2೦, ಎಂಬ ಆತನ ಶಬ್ದಕ್ಕೆ ಕಿವಿಗೊಡಬೇಕು.MBK 119.2

    ಸೈತಾನನ ಆಲೋಚನೆಗಳಿಗೆ ಒಡಂಬಟ್ಟು ಅದರಿಂದಾಗುವ ಸಯೋಗಗಳನ್ನು ಧ್ಯಾನಿಸುವುದರಲ್ಲಿ ತಾಮಸ ಮಾಡಬಾರದು. ಪಾಪವೆಂದರೆ, ಅದರಲ್ಲಿ ಆಸ ಕ್ತರಾಗಿರುವ ಪ್ರತಿಯೋಮ್ದು ಆತ್ಮಕ್ಕೂ ಮಾನಚ್ಯ್ತಿಯೂ ಮತ್ತು ಅನರ್ಥವೂ ಆಗಿದೆ; ಆದರೆ ಅದು ನಮ್ಮನ್ನು ಮೋಸಗೊಳಿಸಿ ಅಂಧರನ್ನಾಗಿ ಮಾಡುವ ಸ್ವಭಾವವುಳ್ಳದ್ದಾಗಿದೆ, ಮತ್ತು ಮುಖಸ್ತುತಿಯ ಪ್ರತಿವಾದನೆಯಿಮ್ದ ಸೆಳೆದುಬಿಡುತ್ತದೆ. ಸೈತಾನನ ಪ್ರದೇಶಕ್ಕೆ ಪ್ರವೇಶಿಸಲು ಸಾಹಸಪಟ್ಟರೆ, ಅವನ ಶಕ್ತಿಯಿಂದ ಸಂರಕ್ಷಿಸಲ್ಪಡುವ ಭರವಸೆಯಿಲ್ಲ. ನಮ್ಮಿಂದಾದಷ್ಟೂ ಶೋಧಕನು ಪ್ರವೇಶಿಸದಂತೆ ಎಲ್ಲಾ ಮಾರ್ಗಗಳನ್ನೂ ಬಂಧಿಸಬೇಕು.MBK 119.3

    “ಶೋಧನೆಗೆ ಸೇರಿಸಬೇಡ” ಎಂಬ ಪ್ರರ್ಥನೆಯೇ ಒಂದು ವಾಗ್ದಾನವಾಗಿದೆ. ನಾವು ನಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟರೆ, “ಮನುಷ್ಯರು ಸಹಿಸಬಹುದಾದಶೋಧನೆಯೇ ಹೊರತು ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ತನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಸಿದ್ಧಮಾಡುವನು.” 1 ಕೊರಿಂಥ 1೦: 13, ಎಂಬ ಭರವಸವು ನಮಗಿದೆ. ಕ್ರಿಸ್ತನ ನೀತಿಯಲ್ಲಿ ನಂಬಿಕೆಯಿಂದಾದ, ನಮ್ಮ ಹೃದಯದಲ್ಲಿ ಆತನ ನಿವಾಸನೇ ದುಷ್ಟತನವನ್ನು ನಿವಾರಿಸುವ ರಕ್ಷಣೋಪಾಯವಾಗಿದೆ. ನಮ್ಮ ಹೃದಯದಲ್ಲಿ ಸ್ವಾರ್ಥತೆಯು ನೆಲಸುವುದರಿಂದಲೇ ಶೋಧನೆಗಳು ನಮ್ಮ ಮೇಲೆ ಆಳುತ್ತವೆ. ಆದರೆ ನಾವು ದೇವರ ಮಹಾ ಪ್ರೀತಿಯನ್ನು ದೃಷ್ಟಿಸಿದಾಗ ಸ್ವಾರ್ಥತೆಯು ತನ್ನ ಭಯಂಕರವೂ ಮತ್ತು ಹೇಸಿಗೆಯೂ ಆದ ಗುಣದಲ್ಲಿ ಕಂಡುಬರುತ್ತದೆ, ಆಗ ನಾವು ಅದನ್ನು ಆತ್ಮದಿಂದ ಹೊರದೂಡಬೇಕೆಂದು ಹಂಬಲಿಸುತ್ತೇವೆ. ಪವಿತ್ರಾತ್ಮನು ಕ್ರಿಸ್ತನನ್ನು ಮಹಿಮೆಪಡಿಸುವಂತೆ, ನಮ್ಮ ಹೃದಯಗಳು ಕೋಮಲಗೊಂಡು ಅಧೀನವಾಗಿ, ಶೋಧನೆಯು ತನ್ನ ಪ್ರತಾಪವನ್ನು ಕಳೆದುಕೊಂಡು ಕ್ರಿಸ್ತನ ಕೃಪೆಯು ನಮ್ಮ ಗುಣಗಳನ್ನು ಮಾರ್ಪಡಿಸುತ್ತದೆ.MBK 120.1

    ಕ್ರಿಸ್ತನು ತಾನು ಪ್ರಾಣಕೊಟ್ಟ ಆತ್ಮಗಳನ್ನು ಎಂದಿಗೂ ತಳ್ಳಿಬಿಡುವುದಿಲ್ಲ. ಆತ್ಮವು ಆತನನ್ನು ತ್ಯಜಿಸಿ ಪಾಪದಲ್ಲಿ ಸಂಪೂರ್ಣವಾಗಿ ಹೂಣಲ್ಪಡಬಹುದು; ಆದರೂ ಕ್ರಿಸ್ತನು ತನ್ನ ಪ್ರಾಣವನ್ನೇ ಈಡುಕೊಟ್ಟಿರುವ ಒಂದು ಆತ್ಮದಿಂದಾದರೂ ವಿಮುಖನಾಗುವುದೇ ಇಲ್ಲ. ನಮ್ಮ ಆತ್ಮೀಯ ದೃಷ್ಟಿಯು ಸ್ಪುರಿತಗೊಂಡರೆ, ಆತ್ಮಗಳು ಹಿಂಸೆಗೆ ಮಣಿದು ವ್ಯಥೆಯಿಂದ ಕುಗ್ಗಿಸಲ್ಪಟ್ಟು ಗಾಡಿಯು ಕಟ್ಟಿ ಚಕ್ರದಲ್ಲಿ ಅದುಮಲ್ಪಟ್ಟಿರುವಂತೆ. ಅಧೈರ್ಯದಿಂದ ಸಾಯಲು ಸಿದ್ಧವಾಗಿರುವುದನ್ನು ಕಾಣಬಹುದು. ಕಡಿದಾದ ಪ್ರದೇಶದ ಅಂಚಿನಲ್ಲಿ ನಿಂತಿರುವರೋ ಎಂಬಂತೆ ಶೋಧನೆಗೊಳಗಾದವರಿಗೆ ಉಪಚಾರ ಮಾಡಲು ದೇವದೂತರು ವೇಗವಾಗಿ ಹಾರಿಹೋಗುವುದನ್ನು ನೋಡಬೇಕು. ಈ ಆತ್ಮಗಳನ್ನು ಆವರಿಸಿರುವ ದುಷ್ಟ ಸೈನ್ಯಗಳನ್ನು ಹಿಂದಟ್ಟುತ್ತಾ, ಅವರ ಪಾದಗಳು ಗಟ್ಟಿಯಾದ ಆಸ್ತಿವಾರದ ಮೇಲೆ ನಿಲ್ಲುವಂತೆ ಕಾಯುವರು. ಈ ಎರಡು ಸೈನ್ಯಗಳಲ್ಲಾಗುವ ಕದನವು, ಭೂಮಿಯ ಮೇಲೆ ಜನಾಂಗಗಳ ಸೈನ್ಯಗಳು ಹೋರಾಡಿದಂತೆಯೇ ನಿಜವಾದುದು, ಮತ್ತು ಈ ಆತ್ಮೀಯ ಕದನದಿಂದಾಗುವ ಫಲಿತಾಂಶದ ಮೇಲೆಯೇ ನಿತ್ಯ ಅದೃಷ್ಟವು ಆಧಾರಗೊಂಡಿದೆ.MBK 120.2

    ಪ್ರೇತನಿಗೆ ಹೇಳಿದಂತೆ ನಮಗೂ ಹೇಳಲ್ಪಟ್ಟಿರುವುದೇನಂದರೆ “ಸೈತಾನನು ನಿಮ್ಮನ್ನು ಗೋಧಿಯಂತೆ ಒನೆಯಬೇಕೆಂದು ಅಪ್ಪಣೆ ಕೇಳಿಕೊಂಡನು; ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು.” ಲೂಕ 22: 31, 32. ದೇವರಿಗೆ ಸ್ತೋತ್ರ, ನಾವು ಒಬ್ಬಂಟಿಗರಾಗಿ ಬಿಡಲ್ಪಡಲಿಲ್ಲ. “ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು....ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು...” ಯೋಹಾನ 3: 16, ಕೊಟ್ಟಾತನು ದೇವರಿಗೂ ಮನುಷ್ಯರಿಗೂ ವಿರೋಧಿಯಾದ ಸೈತಾನನೊಡನೆ ಕಾಳಗದಲ್ಲಿ ಕೈಬಿಡುವುದಿಲ್ಲ. ಆತನು ನಮಗೆ ಹೇಳುವುದು: “ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ.” ಲೂಕ 1೦: 19.MBK 121.1

    ಜೀವಸ್ವರೂಪನಾದ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಜೀವಿಸಿರಿ, ಆತನು ತನ್ನ ಕರದಿಂದ ಎಂದೆಂದಿಗೂ ಭದ್ರವಾಗಿ ನಿಮ್ಮನ್ನು ಹಿಡಿಯುವನು. ದೇವರು ನಮ್ಮ ಮೇಲಿಟ್ಟಿರುವ ಪ್ರೀತಿಯನ್ನು ಗ್ರಹಿಸಿ ನಂಬಿದರೆ ನಾವು ಸುರಕ್ಷಿತರಾಗಿರುವೆವು; ಆ ಪ್ರೀತಿಯು ಸೈತಾನನ ಕೃತ್ರಿಮಗಳಿಗೂ ಮತ್ತು ಆಘಾತಕ್ಕೂ ಅಜೇಯವಾದ ರಕ್ಷಣಾದುರ್ಗವಾಗಿದೆ. “ಯೆಹೋವ ನಾಮವು ಬಲವಾದ ಬುರುಜು; ಶಿಷ್ಯನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು” ಜ್ಞಾನೋಕ್ತಿ 18: 1೦.MBK 121.2