“ಬೇಡಿಕೊಳ್ಳಿರಿ ನಿಮಗೆ ದೊರೆಯುವುದು; ಹುಡುಕಿರಿ ನಿಮಗೆ ಸಿಕ್ಕುವುದು; ತಟ್ಟಿರಿ ನಿಮಗೆ ತೆರೆಯುವುದು.”
ಆತನ ವಾಕ್ಯಗಳಲ್ಲಿ ಅವಿಶ್ವಾಸ, ತಪ್ಪು ತಿಳಿವಳಿಕೆ ಅಥವಾ ಅಪಾರ್ಥವುಂಟಾಗಲು ಆಸ್ಪದವಿಲ್ಲದಂತೆ, ಕರ್ತನು ಮೂರುಬಾರಿ ತನ್ನ ವಾಗ್ದಾನವನ್ನು ಪುನರಾವೃತ್ತಿ ಮಾಡಿದ್ದಾನೆ. ದೇವರನ್ನು ಹುಡುಕುವವರು, ಆತನ ಸಕಲ ಕಾರ್ಯವನ್ನೂ ಮಾಡಲು ಶಕ್ತನೆಂದು ನಂಬಬೇಕೆಂದು ಇಚ್ಛಿಸುತ್ತಾನೆ. ಆದುದರಿಂದ ಆತನು ಇನ್ನೂಹೇಳಿದ್ದೇನಂದರೆ: “ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿಗೆ ತೆರೆಯುವುದು.” MBK 130.3
ಕರ್ತನು ನಮಗೆ, ನಾವು ಆತನ ಕೃಪೆಗಾಗಿ ಹಸಿದವರಾಗಿಯೂ, ಆತನ ಸಲಹೆಯನ್ನು ಹಂಬಲಿಸುವವರಾಗಿಯೂ, ಮತ್ತು ಆತನ ಪ್ರೀತಿಯನ್ನು ಹಾರೈಸು ವವರಾಗಿಯೂ ಇರಬೇಕೆನ್ನುತ್ತಾನೆಯೇ ಹೊರತು ಬೇರೆ ಯಾವ ನಿರ್ದಿಷ್ಟ ನಿವಂಧನೆಯನ್ನೂ ಕೊಟ್ಟಿಲ್ಲ. “ಬೇಡಿಕೊಳ್ಳಿರಿ,” ಬೇಡಿಕೊಳ್ಳುವುದು ನೀವು ನಿಮ್ಮ ಅವಶ್ಯಕತೆಯನ್ನು ಮನಗಂಡಿದ್ದೀರೆಂಬುದನ್ನು ವ್ಯಕ್ತಪಡಿಸುತ್ತದೆ; ನೀವು ನಂಬಿಕೆಯಿಂದ ಬೇಡಿದರೆ ನಿಮಗೆ ದೊರೆಯುವುದು, ದೇವರು ತಾನೇ ವಾಗ್ದಾನ ಮಾಡಿದ್ದಾನೆ, ಅದು ಎಂದಿಗೂ ನಿಷ್ಫಲವಾಗದು. ಯಥಾರ್ಥವಾದ ಪಶ್ಚಾತ್ತಾಪದಿಂದ ಬಂದರೆ, ಕರ್ತನು ವಾಗ್ದಾನ ಮಾಡಿರುವುದನ್ನು ನೀನು ಕೇಳುವುದು ಮಿತಿಮೀರಿದ ಭರವಸೆಯೆಂದು ನೆನಸಬೇಕಾದ ಅವಶ್ಯವಿಲ್ಲ. ಕ್ರಿಸ್ತನ ಗುಣಸಾದೃಶ್ಯದಂತೆ ನಿಮ್ಮ ಗುಣಗಳು ಪರಿಪೂರ್ಣವಾಗಿ ದೋಷರಹಿತವಾಗಿರುವಂತೆ ಅವಶ್ಯಕವಾದ ಆಶೀರ್ವಾದವನ್ನು ನೀನು ಬೇಡುವಾಗ, ನೀನು ನಿರೀಕ್ಷಿಸಿದ ವಾಗ್ದಾನಕ್ಕನುಗುಣವಾಗಿ ಬೇಡುತ್ತಿದ್ದೀ ಎಮ್ದು ಕರ್ತನು ಭರವಸೆಯನ್ನು ಕೊಡುತ್ತಾನೆ. ನೀನು ಪಾಪಿಯೆಂದು ಗ್ರಹಿಸಿದರೆ ಆತನ ಕೃಪೆಯಾನ್ನೂ ಕನಿಕರವನ್ನೂ ಬೇಡುವುದಕ್ಕೆ ಅದೆ ಸಾಕಷ್ಟು ಆಸ್ಪದವಾಗಿದೆ. ನೀನು ದೇವರ ಬಳಿಗೆ ಬರಬೇಕಾದರೆ ಪರಿಶುದ್ಧನಾಗಿರಬೇಕೆಂಬ ನಿಬಂಧನೆಯಿಲ್ಲ, ಆದರೆ ಆತನು ನಿನ್ನನ್ನು ಎಲ್ಲಾ ಪಾಪಗಳಿಂದಲೂ ಪರಿಶುದ್ಧಪಡಿಸಿ, ಎಲ್ಲಾ ಅಧರ್ಮಗಳಿಂದಲೂ ಪವಿತ್ರಗೊಳಿಸುವಂತೆ ಬೇಡಿಕೊಳ್ಳುವುದೇ ಸಾಕಾಗಿದೆ. ನಮ್ಮ ಮಹಾ ಆಕಾಂಕ್ಷೆ; ಕೇವಲ ಸಹಾಯ ಶೂನ್ಯವಾದ ಸ್ಥಿತಿ ಇವುಗಳಿಗಾಗಿ ಈಗಲೂ ಯಾವಾಗಲೂ ಬೇಡುವುದು ಆತನೂ ಮತ್ತು ಆತನ ರಕ್ಷಣದಾಯಕ ಶಕ್ತಿಯೂ ಅವಶ್ಯವೆಂಬುದೇ ತರ್ಕಸಿದ್ಧವಾಗಿದೆ.MBK 130.4
“ಹುಡುಕಿರಿ.” ಆತನ ಆಶೀರ್ವಾದವನ್ನು ಮಾತ್ರವೇ ಇಚ್ಛಿಸಬೇಡಿರಿ, ಆದರೆ ಆತನನ್ನು ಆಶಿಸಿರಿ. “ದೇವರ ಚಿತ್ತಕ್ಕೆ ಒಡಂಬಟ್ಟು ಸಮಾಧಾನ ಹೊಂದು.” ಯೋಬ 22: 21. ಹುಡುಕಿರಿ ನಿಮಗೆ ಸಿಕ್ಕುವುದು. ದೇವರು ನಿಮ್ಮನ್ನು ಹುಡುಕುತ್ತಿದ್ದಾನೆ, ನಿಮ್ಮಲ್ಲಿ ಆತನ ಬಳಿಗೆ ಬರಬೇಕೆಂದು ಉಂಟಾಗುವ ಇಚ್ಛೆಯು, ಆತ್ಮನ ಆಕರ್ಷಣೆಯಾಗಿದೆ. ಆ ಸೆಳೆತಕ್ಕೆ ಅಧೀನರಾಗಿರಿ. ಕ್ರಿಸ್ತನು ಶೋಧನೆಗೊಳಗಾದವರ, ತಪ್ಪು ಮಾಡುವವರ ಮತ್ತು ನಂಬಿಕೆಯಿಲ್ಲದವರ ವ್ಯಾಜವನ್ನು ವಾದಿಸುತ್ತಾನೆ. ಅವರನ್ನು ತನ್ನ ಅನ್ಯೋನ್ಯತೆಗೆ ಸೇರಿಸಲು ಹುಡುಕುತ್ತಿದ್ದಾನೆ. “ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು.” ಪೂರ್ವಕಾಲದ ವೃತ್ತಾಂತ 28: 9.MBK 131.1
“ತಟ್ಟಿರಿ” ವಿಶೇಷವಾದ ಆಹ್ವಾನದಿಂದ ನಾವು ದೇವರ ಬಳಿಗೆ ಬರುತ್ತೇವೆ, ನಮ್ಮನ್ನು ತನ್ನ ಸಂದರ್ಶನ ಕೋಣೆಗೆ ಸ್ವಾಗತಿಸಲು ಕಾದಿದ್ದಾನೆ. ಕ್ರಿಸ್ತನನ್ನು ಅನುವರ್ತಿಸಿದ ಪ್ರಥಮ ಶಿಷ್ಯರು ಮಾರ್ಗದಲ್ಲಿ ಆತನೊಡನೆ ಅವಸರವಾಗಿ ಸಂಭಾ ಷಿಸಿದ್ದರಿಂದ ತೃಪ್ತರಾಗದೆ ಆತನನ್ನು ಕೇಳಿದ್ದೇನಂದರೆ “ರಬ್ಬಿಯೇ ನೀನು ಇಳುಕೊಂಡಿರುವುದು ಎಲ್ಲ್?....ಅವರು ಬಂದು ಆತನು ಇಳುಕೊಂಡಿದ್ದ ಸ್ಥಳವನ್ನು ನೋಡಿ ಆ ದಿವಸ ಆತನ ಸಂಗಡ ಇದ್ದರು.” ಯೋಹಾನ 1: 38, 39. ಹಾಗೆಯೇ ನಾವೂ ದೇವರೊಡನೆ ಅತಿ ಸಾಮೀಪ್ಯವಾದ ಗಾಢಪರಿಚಯವನ್ನು ಮತ್ತು ಸಂಪರ್ಕವನ್ನು ಹೊಂದಬಹುದು. “ಪರಾತ್ಪರನ ಮರೆ ಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತವಾಗಿರುವನು.” ಕೀರ್ತನೆ 91: 1. ದೇವರ ಆಶೀರ್ವಾದವನ್ನು ಹಾರೈಸುವವರೆಲ್ಲಾ ದೃಢಭರವಸೆಯಿಂದ ಕೃಪೆಯ ಬಾಗಿಲನ್ನು ತಟ್ಟುತ್ತಾ ಕಾದುನಿಂತು, ಕರ್ತನೇ, ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿರೆ ತೆರೆಯುವುದೆಂದು ನೀನೇ ಹೇಳಿದ್ದೀ ಎಂದು ಹೇಳಬೇಕು. ತನ್ನ ಉಪದೇಶವನ್ನು ಕೇಳಲು ಕೂಡಿಬಂದಿದ್ದ ಜನರು ದೇವರ ಕೃಪೆಯನ್ನು ಮತ್ತು ಆತನ ಪ್ರೀತಿಯ ದಯೆಯನ್ನು ಪ್ರಶಂಸಿಸುವಂತೆ ಕ್ರಿಸ್ತನು ಆಸಕ್ತಿಯಿಂದ ಹಾರೈಸಿದನು. ಅವರ ಕೊರತೆಯನ್ನೂ ಮತ್ತು ದೇವರು ಕೊಡಲು ಇಚ್ಛೆಯುಳ್ಳ ಮನಸ್ಸನ್ನೂ ಉದಾಹರಿಸಲು, ಹಸಿದ ಒಂದು ಮಗುವು ತನ್ನ ಈ ಲೋಕದ ತಂದೆತಾಯಿಗಳನ್ನು ರೊಟ್ಟಿಗಾಗಿ ಕೇಳುವ ಉಪಮೆಯನ್ನು ಹೇಳುತ್ತಾನೆ. “ನಿಮ್ಮಲ್ಲಿ ಯಾವನಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ?” ಎಂದು. ಈ ಲೋಕದ ತಂದೆಗೆ ತನ್ನ ಮಗುವಿನ ಮೇಲಿರುವ ಕೋಮಲವೂ, ಸ್ವಾಭಾವಿಕವೂ ಆದ ಮಮತೆಯನ್ನು ಕುರಿತು ಹೇಳಿದ ತರುವಾಯ ಹೇಳಿದ್ದೇನಂದರೆ: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು ಕೊಡುವನಲ್ಲವೇ. ತಂದೆಯ ಹೃದಯವುಳ್ಳ ಯಾವ ಮನುಷ್ಯನೂ ಹಸಿದ ತನ್ನ ಮಗನು ರೊಟ್ಟಿ ಕೇಳುವಾಗ ಮುಖವನ್ನು ಓರೆಮಾಡಿಕೊಳ್ಳುವುದಿಲ್ಲ. ತನ್ನ ಮಗುವಿನೊಡನೆ ಲಘುವಾಗಿ ವರ್ತಿಸಲು ಶಕ್ತನೇ ಎಂದೂ ಅಥವಾ ಆ ಮಗುವಿನ ಆಕಾಂಕ್ಷೆಗಳನೆಲ್ಲಾ ಕೈಗೂಡದಂತೆ ಮಾಡಿ ಗೋಳುಗುಟ್ಟಿಸಿ ಆಶಾಭಂಗ ಪಡಿಸುವನೇ ಎಂದು ಜನರು ಯೋಚಿಸುವರಲ್ಲವೇ? ಮಗುವಿಗೆ ಒಳ್ಳೆಯದೂ ಮತ್ತು ಪುಷ್ಟಿಕರವಾದ ಆಹಾರವನ್ನು ಕೊಡುತ್ತೇನೆಂದು ವಾಗ್ದಾನ ಹೇಳಿ ಕಲ್ಲನ್ನು ಕೊಡುವನೇ? ಮತ್ತು ದೇವರು ತನ್ನ ಮಕ್ಕಳ ಮೊರೆಯನ್ನು ಕೇಳನೆಂದು ಭಾವಿಸಿ ಆತನನ್ನು ಅಗೌರವ ಪಡಿಸಬಹುದೇ?MBK 131.2
“ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗ ಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮ ವರವನ್ನು ಕೊಡುವನಲ್ಲವೇ?” ಲೂಕ 11: 13, ಆತನ ಪ್ರತಿನಿಧಿಯಾದ ಪರಿಶುದ್ಧಾತ್ಮನು ಬೇರೆಲ್ಲಾ ವರಗಳಿಗಿಂತಲೂ ಅತ್ಯಮೂಲ್ಯವಾದದ್ದು, ಎಲ್ಲಾ “ಒಳ್ಳೇ ಕಾರ್ಯಗಳೂ” ಇದರಲ್ಲಿ ಅಡಗಿವೆ. ಸೃಷ್ಟಿಕರ್ತನು ತಾನೇ ನಮಗೆ ಯಾವ ಒಳ್ಳೇದನ್ನೂ ಕೊಡುವುದಿಲ್ಲ. ಆದರೆ ನಾವು ನಮ್ಮ ಇಕ್ಕಟ್ಟಿನ ಸಮಯದಲ್ಲಿ ದೇವರನ್ನು ಪ್ರಾರ್ಥಿಸಿದರೆ, ತನ್ನ ಪವಿತ್ರಾತ್ಮನ ಸಹಾಯದಿಂದ ನಡಿಸೆಂದು ಬೇಡಿಕೊಂಡರೆ, ನಮ್ಮ ಮನವೆಗಳನ್ನು ಆತನು ಎಂದಿಗೂ ತಳ್ಳಿಬಿಡನು. ಒಬ್ಬ ತಂದೆಯು ಹಸಿದ ತನ್ನ ಮಗುವಿನಿಂದ ಓರೆಯಾಗಲು ಸಾಧ್ಯ, ಆದರೆ ದೇವರು ಹಂಬಲಿಕೆಯಿಂದ ಕೂಡಿದ ಹೃದಯವುಳ್ಳವರನ್ನು ತಳ್ಳಿಬಿಡುವುದೇ ಇಲ್ಲ. ಎಂಥಾ ಆಶ್ಚರ್ಯವಾದ ತನ್ನ ಮಮತೆಯನ್ನು ವರ್ಣಿಸಿದ್ದಾನೆ ನೋಡಿರಿ! ಸಂಕಟ ದಿನಗಳಲ್ಲಿ ದೇವರು ನಮ್ಮನ್ನು ಲಕ್ಷಿಸುವುದಿಲ್ಲವೆಂದು ನೆನಸುವವರಿಗೆ ತಂದೆಯಾದ ದೇವರಿಂದ ಬರುವ ಸುವಿಶೇಷವನ್ನು ಕೇಳಿರಿ:MBK 132.1
“ಚಿರ್ಯೋ ನಗರಿಯಾದರೋ-ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು ನನ್ನನ್ನು ಮರೆತಿದ್ದಾನಲ್ಲಾ ಅಂದುಕೊಂಡಳು. ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ. ಇಗೋ ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿದ್ದೇನೆ; ನಿನ್ನ ಪೌಳಿಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.” ಯೆಶಾಯ 49: 14-16.MBK 133.1
ದೇವರ ಮಾಕ್ಯದ ಪ್ರತಿಯೊಂದು ವಾಗ್ದಾನವೂ, ಯೆಹೋವನು ಕೊಟ್ಟ ಭಾಷೆಯು ನಮ್ಮ ಭರವಸೆಯಂತಿದ್ದು ನಮ್ಮ ಪ್ರಾರ್ಥನೆಗಳಿಗೆ ವಿಷಯವಸ್ತುವನ್ನು ಒದಗಿಸಿಕೊಡುತ್ತದೆ. ನಮಗೆ ಅವಶ್ಯವಾದ ಆತ್ಮೀಯ ಅವಶ್ಯಕತೆಗಳನ್ನೆಲ್ಲಾ ಯೇಸುವಿನ ಮೂಲಕವಾಗಿ ನಾವು ಕೇಳಿಕೊಳ್ಳಲು ಬಾಧ್ಯರಾಗಿದ್ದೇವೆ. ಚಿಕ್ಕ ಮಗುವಿನಂತೆ, ನಮಗೆ ಬೇಕಾದದ್ದನ್ನು ನಿರ್ದಿಷ್ಟವಾಗಿ ಕರ್ತನ ಹತ್ತಿರ ವಿಜ್ಞಾಪಿಸಿಕೊಳ್ಳಬಹುದು. ನಮ್ಮ ಐಹಿತ ವಸ್ತುಗಳನ್ನು ಅಂದರೆ ಅನುದಿನದ ಆಹಾರವನ್ನೂ ಉಡುಪನ್ನೂ ಮತ್ತು ಅವುಗಳೊಡನೆ ಜೀವಕೊಡುವ ರೊಟ್ಟಿಯನ್ನೂ, ಕ್ರಿಸ್ತನ ನೀತಿಯ ವಸ್ತ್ರಗಳನ್ನೂ ಆತನಲ್ಲಿ ಬೇಡಿಕೊಳ್ಳಬಹುದು. ನಿಮಗೆ ಇವೆಲ್ಲವೂ ಅವಶ್ಯವೆಂದು ನಿಮ್ಮ ಪರಮತಂದೆಗೆ ಗೊತ್ತಿದೆ, ಆದುದರಿಂದ ನೀವು ಅವುಗಳ ವಿಷಯದಲ್ಲಿ ಬಿನ್ನೈಸುವಂತೆ ನಿಮ್ಮನ್ನು ಆಹ್ವಾನಿಸುತ್ತಾನೆ. ಯೇಸುವಿನ ಹೆಸರಿನ ಮೂಲಕವೇ ಪ್ರತಿಯೊಂದು ಅನುಗ್ರಹವೂ ದೊರಕುತ್ತದೆ. ದೇವರು ಆ ಹೆಸರನ್ನು ಘನಪಡಿಸಿ, ನಿಮ್ಮ ಅವಶ್ಯಕತೆಗಳನ್ನು ತನ್ನ ಹೃದಯವೈಶಾಲ್ಯದ ಸಂಪತ್ತಿನಿಂದ ಧಾರಾಳವಾಗಿ ಒದಗಿಸುವನು.MBK 133.2
ಆದರೆ ನೀವು ದೇವರನ್ನು ತಂದೆಯೋಪಾದಿಯಲ್ಲಿ ಭಾವಿಸಿ ಆತನ ಬಳಿಗೆ ಬರುವಾಗ, ನೀವು ಆತನ ಮಗುವೆಂದು ಒಪ್ಪಿಕೊಳ್ಳುತ್ತೀರೆಂಬುದನ್ನು ಮರೆಯದಿರ್ರಿ. ನೀವು ಆತನ ಸೌಜನ್ಯದಲ್ಲಿ ಭರವಸೆಯಿಡುವುದಲ್ಲದೆ, ಆತನ ಪ್ರೀತಿಯು ಎಂದೆಂದೂ ಮಾರ್ಪಡದಂಥಾದ್ದೆಂದು ಅರಿತು, ನೀವು ಸಕಲವನ್ನೂ ಆತನ ಚಿತ್ತಕ್ಕೆ ಒಪ್ಪಿಸಿಕೊಡಿರಿ. ಆತನ ಸೇವೆಗೆ ನಿಮ್ಮನ್ನು ಒಪ್ಪಿಸಿಕೊಡುವಿರಿ. ಮೊದಲು ದೇವರ ರಾಜ್ಯವನ್ನೂ ಆತನ ನೀತಿಯನ್ನೂಹುಡುಕಿರಿ ಎಂದು ಆತನು ಯಾರಿಗೆ ಹೇಳಿದನೋ ಅವರಿಗೆ “ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು” ಎಂದು ವಾಗ್ದಾನ ಮಾಡಿದನು.MBK 134.1
ಇಹಪರಗಳೆರಡರಲ್ಲೂ ಎಲ್ಲಾ ಶಕ್ತಿಯನ್ನೂ ಹೊಂದಿರುವಾತನ ವರದಾನಗಳೆಲ್ಲಾ ದೇವರ ಮಕ್ಕಳಿಗಾಗಿ ಸಂಗ್ರಹಿಸಲ್ಪಟ್ಟಿವೆ. ಅಮೂಲ್ಯವಾದ ಆ ವರಗಳು ನಮ್ಮ ರಕ್ಷಕನ ಅಮೂಲ್ಯ ರಕ್ತದ ಮೂಲಕವೇ ನಮಗೆ ದೊರೆಯುತ್ತವೆ; ಈ ವರಧಾನಗಳು ಹೃದಯದ ಅಗಾಧ ಹಂಬಲಿಕೆಗಳನ್ನೂ ತೃಪ್ತಿಪಡಿಸಲು ಶಕ್ತಿಯುಳ್ಳವಾಗಿವೆ. ಚಿಕ್ಕಮಕ್ಕಳೋಪಾದಿಯಲ್ಲಿ ದೇವರ ಬಳಿಗೆ ಬರುವವರೆಲ್ಲರೂ ಹೊಂದಿ ಆನಂದಿಸುವ ನಿತ್ಯವಾದ ವರದಾನಗಳು. ದೇವರ ವಾಗ್ದಾನಗಳನ್ನು ನಿಮ್ಮ ಸ್ವಂತವಾಗಿ ತೆಗೆದುಕೊಂಡು, ಆತನ ಬಳಿಯಲ್ಲಿ ವಾಸಿಸಿರಿ, ಆಗ ನೀವು ಸಂತೋಷದ ಪರಿಪೂರ್ಣತೆಯನ್ನು ಹೊಂದುವಿರಿ.MBK 134.2
“ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” MBK 134.3
ನಮಗೆ ದೊರೆತ ದೇವರ ಪ್ರೀತಿಯ ಭರವಸೆಯ ಮೇಲೆ ನಾವೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಯೇಸುವು ಆಜ್ಞಾಪಿಸುತ್ತಾನೆ. ಈ ಒಂದು ಗ್ರಾಹಕ ತತ್ವದಲ್ಲಿ ಮಾನವರ ಸಹಭಾಗಿತ್ವದ ಸಂಬಂಧವು ಅಡಗಿದೆ.MBK 134.4
ಯೆಹೂದ್ಯರು ಯಾವಾಗಲೂ ತಮಗೆ ಬರಬೇಕಾದ್ದರಲ್ಲೇ ಆಸಕ್ತರಾಗಿದ್ದರು; ಅವರ ಊಹೆಯಂತೆ ಪ್ರಭಾವ, ಮಾನ ಮರ್ಯಾದೆ ಮತ್ತು ಸೇವೆಗಳೆಲ್ಲಾ ಅವರಿಗೆ ಸೇರಬೇಕೆಂಬುದೇ ಅವರ ಹಂಬಲಿಕೆಯ ಹೊರಯಾಗಿತ್ತು. ಆದರೆ ನಾವು ಎಷ್ಟನ್ನು ಹೊಂದಬೇಕು? ಎಂಬುದು ನಮ್ಮ ಉದ್ದೇಶವಾಗಿರಬಾರದೆಂದು ಯೇಸುವು ಬೋಧಿಸುತ್ತಾನೆ. ನಾವು ಎಷ್ಟು ಕೊಡಲಾದೀತು? ಎಂಬುದೇ ನಮ್ಮ ಹಂಬ ಲಿಕೆಯಾಗಿರಬೇಕು. ನಾವು ಇತರರಿಗೆ ಉಪಕಾರ ಮಾಡಬೇಕಾದ ಹಂಗಿನಲ್ಲಿದ್ದೇವೆ ಎಂದು ಗ್ರಹಿಸುವುದರಲ್ಲೇ ಇತರರು ನಮಗೆ ಉಪಕಾರ ಮಾಡಬೇಕಾದ ಹಂಗಿನವರಾಗಿದ್ದಾರೆಂಬುದು ಆಧಾರಗೊಂಡಿದೆ.MBK 134.5
ನೀವು ಇತರರೊಡನೆ ಒಡನಾಡುವಾಗ, ನಿಮ್ಮನ್ನು ಅವರ ಸ್ಥಾನದಲ್ಲಿರಿಸಿ ಕೊಳ್ಳಿರಿ. ಅವರ ಯೋಚನೆ, ಅವರ ಕಷ್ಟ, ಅವರ ಆಶಾಭಂಗ, ಅವರ ಸಂತೋಷ, ಮತ್ತು ಅವರ ವ್ಯಥೆಗಳಲ್ಲಿ ಪ್ರವೇಶಿಸಿರಿ. ಆಗ ಅವರೊಡನೆ ನಿಮ್ಮನ್ನು ತೋರ್ಪಡಿಸಿಕೊಂಡು, ನೀವು ಅವರ ಸ್ಥಾನದಲ್ಲಿದ್ದರೆ ಅವರು ನಿಮಗೆ ಏನೇನು ಮಾಡಬೇಕೆಂದು ಅಕ್ಷಿಸುತ್ತೀರೋ ಅದನ್ನೇ ಅವರಿಗೆ ಮಾಡಿರಿ. ಇದೇ ಪ್ರಾಮಾಣಿಕತೆಯ ಯಥಾರ್ಥವಾದ ಕಟ್ಟಳೆ. “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂಬ ಆಜ್ಞೆಯ ಮತ್ತೊಂದು ರೀತಿ ಇದು ಪ್ರವಾದಿಗಳ ಬೋಧನೆಯ ತಿರುಳು. ಇದು ಪರಲೋಕದ ಮೂಲತತ್ವ, ಪರಲೋಕದ ಪರಿಶುದ್ಧ ಸಹವಾಸಕ್ಕೆ ಸೇರಲು ಯೋಗ್ಯರಾದವರಲ್ಲೆಲ್ಲಾ ಇದು ವೃದ್ಧಿಗೊಳ್ಳುವುದು. MBK 135.1
ಯಥಾರ್ಥವಾದ ಸೌಶೀಲ್ಯವೇ ಸ್ವರ್ಣಸೂತ್ರ (ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು) ದ ಮೂಲವಾಗಿದೆ. ಇದರ ನಿಜವಾದ ಉದಾಹರಣೆಯು ಯೇಸುಕ್ರಿಸ್ತನ ಗುಣಗಳಲ್ಲಿ ಕಂಡುಬರುತ್ತದೆ. ಓ! ನಮ್ಮ ರಕ್ಷಕನ ಅನುದಿನದ ಜೀವನದಲ್ಲಿ ಎಂಥಾ ಕೋಮಲವೂ ಮತ್ತು ಶುಭಾಶಯಮಾನವೂ ಆದ ಕಿರಣಗಳು ಜ್ವಲಿಸಿದುವು! ಆತನ ಸತ್ಪ್ರಸನ್ನತೆಯಿಂದ ಎಂಥಾ ಮಾಧುರ್ಯವು ಪ್ರವಹಿಸಿತು! ಇಂಥಾ ಆತ್ಮವೇ ಆತನ ಮಕ್ಕಳಲ್ಲಿಯೂ ಪ್ರಕಟವಾಗುವುದು. ಕ್ರಿಸ್ತನು ಯಾರೊಡನೆ ವಾಸಿಸುತ್ತಾನೋ ಅವರ ಸುತ್ತಲೂ ದೈವಿಕ ಸನ್ನಿವೇಶವು ಆವರಿಸಿರುವುದು. ಅವರ ಪರಿಶುದ್ಧತೆಯ ಬಿಳೀ ವಸ್ತ್ರಗಳು ಕರ್ತನ ಉದ್ಯಾನದ ಪರಿಮಳ ದ್ರವ್ಯದಿಂದ ಸೌರಭವನ್ನು ಸೂಸುವುವು. ಅವರ ಮುಖಗಳಲ್ಲಿ ಆತನ ಕಾಂತಿಯು ಪ್ರತಿಬಿಂಬಿಸಲ್ಪಡುವುದು, ಎಡುವುವ ಮತ್ತು ಆಯಾಸಗೊಂಡ ಪಾದಗಳ ಮಾರ್ಗವನ್ನು ಬೆಳಗುವುದು.MBK 135.2
ಲೋಪದೋಷಗಳಿಲ್ಲದ ಗುಣಗಳೆಂದರೇನೆಂಬುದರ ಉದಾತ್ತಭಾವನೆಯುಳ್ಳ ಮನುಷ್ಯನು ಕ್ರಿಸ್ತನ ಮರುಕವನ್ನೂ ಮತ್ತು ಸೌಮ್ಯತೆಯನ್ನೂ ಪ್ರಕಟಿಸದಿರಲಾರನು. ಹೃದಯವನ್ನು ಮೃದುಮಾಡುವುದೂ, ಆಲೋಚನೆಗಳನ್ನು ಶುದ್ಧೀಕರಿಸುವುದೂ ಮತ್ತು ಪರಲೋಕ ಸಂಭವವಾದ ವಿನಯ ಮತ್ತು ನಡವಳಿಕೆಯ ನೇರ್ಪನ್ನು ಕೊಡುವುದು, ಇವೇ ಮರ್ಯಾದೆಯ ಪರಿಣಾಮವಾಗಿದೆ.MBK 135.3
ಆದರೆ ಸ್ವರ್ಣ ಆಜ್ಞೆಗೆ ಇದಕ್ಕಿಂತಲೂ ಅಗಾಧ ಮಹತ್ವವಿದೆ. ದೇವರ ನಾನಾ ಬಗೆಯ ಕೃಪೆಗಳಿಗೆ ಮನೆವಾರ್ತೆಯವನಾಗಿ ನೇಮಿಸಲ್ಪಟ್ಟಿರುವ ಪ್ರತಿಯೊಬ್ಬನೂ, ಅಜ್ಞಾನದಲ್ಲಿಯೂ ಮತ್ತು ಅಂಧಕಾರದಲ್ಲಿಯೂ ಇರುವ ಆತ್ಮಗಳಿಗೆ, ಅವರು ತನಗೆ ಏನೇನು ಮಾಡಬೇಕೆಂದು ಇಚ್ಛಿಸುತ್ತಾನೋ ಅದನ್ನೇ ಅವರಿಗೆ ಮಾಡಬೇಕೆಂದು ಕರೆಯಲ್ಪಟ್ಟಿದ್ದಾನೆ. ಅಪೋಸ್ತಲನಾದ ಪೌಲನು ಹೇಳಿದ್ದೇನಂದರೆ, “ಗ್ರೀಕರಿಗೂ ಇತರ ಜನಗಳಿಗೂ ಜ್ಞಾನಿಗಳಿಗೂ ಮೂಢರಿಗೂ ತೀರಿಸಬೇಕಾದ ಒಂದು ಋಣ ನನ್ನ ಮೇಲೆ ಅದೆ.” ರೊಮಾಯ 1: 14.MBK 136.1
ನೀನು ದೇವರ ಪ್ರೀತಿಯನ್ನು ಸಂಪಾದಿಸಿರುವುದರಲ್ಲೂ, ಆತನ ಕೃಪೆಯ ಪುಷ್ಕಲ ವರದಾನಗಳನ್ನು ಹೊಂದಿರುವುದರಲ್ಲೂ, ಭೂಮಿಯ ಮೇಲಿರುವ ಅತಿ ಬುದ್ಧಿಶೂನ್ಯವೂ ಮತ್ತುನೀತಿಭ್ರಷ್ಟವೂ ಆದ ಆತ್ಮಕ್ಕೆ, ನೀನು ದೇವರಿಂದ ಹೊಂದಿರುವ ವರದಾನಗಳನ್ನು ಹಂಚಿಕೊಡಲು ಋಣಿಯಾಗಿದ್ದೀ.MBK 136.2
ಈ ಜೀವ್ಯದ ವರದಾನ ಮತ್ತು ಆಶೀರ್ವಾದಗಳಲ್ಲಿಯೂ ಹಾಗೆಯೇ; ನಿನ್ನ ನೆರೆಯವನಿಗಿಂತ ಅಧಿಕವಾಗಿ ನೀನು ಹೊಂದಿರುವ ಯಾವುದನ್ನಾದರೂ ಸರಿಯೇ, ಅಲ್ಪ ಅನುಗ್ರಹಿತನಾದವನಿಗೆ, ನಿನ್ನದರಿಂದ ಕೊಡಲು ಋಣಿಯಾಗಿದ್ದೀ. ನಾವು ಐಶ್ವರ್ಯವಂತರೂ, ಅಥವಾ ಈ ಜೀವ್ಯದಲ್ಲಿ ಅನುಕೂಲತೆಯುಳ್ಳವರೂ ಆಗಿದ್ದರೆ, ವ್ಯಾಧಿಪೀಡಿತರನ್ನು ಉಪಚರಿಸಲೂ ವಿಧವೆಯನ್ನೂ ತಂದೆ ತಾಯಿ ಇಲ್ಲದ ಅನಾಥ ಮಕ್ಕಳನ್ನೂ, ನಾವು ಅವರ ಥಿತಿಯಲ್ಲಿದ್ದರೆ ಅವರು ನಮಗೆ ಏನನ್ನು ಮಾಡಬೇಕೆಮ್ದು ಅಪೇಕ್ಷಿಸುತ್ತೇವೋ ಅದನ್ನೇ ಅವರಿಗೆ ಮಾಡಬೇಕಾದ ಗಂಭೀರ ಋಣಬದ್ಧರಾಗಿದ್ದೇವೆ.MBK 136.3
“ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು” ಎಂಬದಾಗಿ ಪರ್ವತಪ್ರಸಂಗದಲ್ಲಿ (ಲೂಕ 7: 38) ಸ್ವರ್ಣ ಆಜ್ಞೆಯನ್ನು ಕುರಿತು ಹೇಳಲ್ಪಟ್ಟಿದೆ. ನಾವು ಇತರರಿಗೆ ಮಾಡುವ ಒಳ್ಳೆಯದಾಗಲೀ ಕೆಟ್ಟದ್ದಾಗಲೀ, ನಿಶ್ಚಯವಾಗಿಯೂ ಆಶೀರ್ವಾದ ಅಥವಾ ಶಪರೂಪದಲ್ಲಿ ನಮಗೆ ಹಿಂದಿರುಗುವುದು. ನಾವು ಯಾವುದನ್ನು ಕೊಡುತ್ತೇವೋ ಅದನ್ನೇ ಮರಳಿ ಹೊಂದುವೆವು, ನಾವು ಇತರರಿಗೆ ಕೊಡುವ ಐಹಿಕ ಆಶೀರ್ವಾದಗಳು ಒಂದು ವೇಳೆ, ಕೆಲವು ಸಮಯಗಳಲ್ಲಿ ಅದೇ ರೂಪದಲ್ಲಿ ನಮಗೆ ಕೊಡಲ್ಪಡುವವು. ನಾವು ಕೊಡುವಂಥಾದ್ದು, ನಮ್ಮ ಅವಶ್ಯಕತೆಯೊದಗುವಾಗ ನಾಲ್ಮಡಿಯಾಗಿ ಸಾಮ್ರಾಜ್ಯದ ನಾಣ್ಯ ರೂಪದಲ್ಲಿ ನಮಗೆ ಕೊಡಲ್ಪಡುವುದು. ಆದರೆ, ಇದನ್ನುಳಿದು ಈ ಜೀವ್ಯದಲ್ಲೇ ಎಲ್ಲಾ ವರದಾನಗಳೂ, ಪರಲೋಕದ ಮಹಿಮೆಯೂ ಮತ್ತೂ ಐಶ್ವರ್ಯವೂ ಆದ ಆತನ ಪ್ರೀತಿಯ ಪರಿಪೂರ್ಣತೆಯ ವರಗಳು ನಮಗೆ ಹಿಂದಕ್ಕೆ ಕೊಡಲ್ಪಡುವವು. ಇತರರಿಗೆ ಮಾ ಡಿದ ಕೆಟ್ಟ ಕಾರ್ಯವೂ ನಮಗೆ ಹಿಂದಿರುಗಿ ಬರುವುದು. ಇತರರನ್ನು ದೂಷಿಸಿ, ಅಧೈರ್ಯಪಡಿಸಿದ ಪ್ರತಿಯೊಬ್ಬನೂ, ತಾನೇ ತನ್ನ ಅನುಭವದಲ್ಲಿ ಇತರರನ್ನು ತಾನು ನಡಿಸಿದ ಮಾರ್ಗದಲ್ಲೇ ನಡಿಸಲ್ಪಡುವುದನ್ನು ಕಾಣುವನು; ಅವನ ಮರುಕ ಹೀನ ಮತ್ತು ಸೌಮ್ಯಹೀನ ನಡತೆಯಿಂದ ಇತರರು ಅನುಭವಿಸಿದ ಸಂಕಟಗಳನ್ನೇ ಇವನೂ ಅನುಭವಿಸುವನು.MBK 136.4
ದೇವರಿಗೆ ನಮ್ಮ ಮೇಲಿರುವ ಪ್ರೀತಿಯೇ ಇದನ್ನು ನಿಯಮಿಸಿದೆ. ನಮ್ಮ ಹೃದಯದ ಕಾಠಿಣ್ಯವನ್ನು ವರ್ಜಿಸಿ, ಯೇಸುವು ಬಂದು ನಿವಾಸಿಸುವಂತೆ ನಮ್ಮ ಹೃದಯಗಳನ್ನು ತೆರೆಯುವಂತೆ ನಡಿಸುತ್ತಾನೆ. ಹೀಗೆ ಕೆಟ್ಟದ್ದರಿಮ್ದ ಒಳ್ಳೆಯದೇ ಸಂಪ್ರಾಪ್ತಿಸಿ, ಶಾಪವಾಗಿ ತೋರಿದ್ದು ಆಶೀರ್ವಾದವಾಗಿ ಪರಿಣಮಿಸುವುದು.MBK 137.1
ಸ್ವರ್ಣ ಆಜ್ಞೆಯ ಅಳತೆಯ ಪ್ರಮಾಣವೇ ಕ್ರೈಸ್ತಮತದ ನಿಜವಾದ ಪ್ರಮಾಣವಾಗಿದೆ; ಇದಕ್ಕೆ ಕಡಿಮೆಯಾದದ್ದು ಕೃತ್ರಿಮವಾಗಿದೆ. ಕ್ರಿಸ್ತನು ಅತ್ಯಮೂಲ್ಯವಾದದ್ದೆಂದು ತನ್ನ ಪ್ರಾಣವನ್ನು ಕೊಟ್ಟ ಮಾನವಸೃಷ್ಟಿಯನ್ನು ಮನುಷ್ಯರು ತೃಣವಾಗೆಣಿಸುವಂತೆ ಪ್ರೇರಿಸುವ ಮತವೂ, ಮತ್ತು ಮಾನವರ ಕುಂದುಕೊರತೆಗಳನ್ನು, ಸಂಕಟಗಳನ್ನು ಮತ್ತು ಅವರ ಹಕ್ಕುಬಾಧ್ಯತೆಗಳನ್ನು ಅಲ್ಪವಾಗೆಣಿಸುವಂತೆ ಉದಾಸೀನ ಭಾವವನ್ನು ಕಲ್ಪಿಸುವ ಮತವೂ, ಸುಳ್ಳಾದ ಮತವಾಗಿದೆ. ದೀನದರಿದ್ರರ ಮೊರೆಯನ್ನೂ, ಸಂಕಷ್ಟಗಳಿಂದ ಪೀಡಿತರಾದವರನ್ನೂ ಮತ್ತು ಪಾಪಭರಿತರಾದವರನ್ನೂ ತಾತ್ಸಾರ ಮಾಡಿದರೆ, ನಾವು ಕ್ರಿಸ್ತನಿಗೆ ವಿಶ್ವಾಸಘಾತುಕರೆಂದು ತೋರ್ಪಡಿಸಿಕೊಳ್ಳುವೆವು. ಮನುಷ್ಯರು ಕ್ರಿಸ್ತನ ಹೆಸರನ್ನು ಧರಿಸಿ, ತಮ್ಮ ಜೀವ್ಯದಲ್ಲಿ ಆತನ ಸೌಜನ್ಯವನ್ನು ಅಲ್ಲಗಳೆಯುವುದರಿಂದಲೇ, ಲೋಕದಲ್ಲಿ ಕ್ರೈಸ್ತಮತದ ಪ್ರಭಾವವು ಬಹಳ ಸ್ವಲ್ಪವಾಗಿದೆ. ಈ ಕಾರ್ಯಗಳಿಂದ ಕರ್ತನ ಹೆಸರು ದೂಷಿಸಲ್ಪಡುತ್ತದೆ.MBK 137.2
ಕ್ರಿಸ್ತನು ಜೀವಿತನಾಗಿ ಎದ್ದು ಆತನ ಮಹಿಮೆಯು ಅಪೋಸ್ತಲರ ಸಭೆಯಮೇಲೆ ಬೆಳಗಿದ ಕಾಲದಲ್ಲಿ ಅದರ ವಿಷಯದಲ್ಲಿ ಬರೆದಿರುವುದೇನಂದರೆ, “ಇದಲ್ಲದೆ ಒಬ್ಬನಾದರೂ ತನಗಿದ್ದ ಆಸ್ತಿಯಲ್ಲಿ ಯಾವುದೊಂದನ್ನೂ ಸ್ವಂತವಾದದ್ದೆಂದು ಹೇಳಲಿಲ್ಲ.” “ಅವರಲ್ಲಿ ಕೊರತೆ ಪಡುವವನು ಒಬ್ಬನೂ ಇರಲಿಲ್ಲ.” “ಮತ್ತು ಕರ್ತನಾದ ಯೇಸು ಜೀವಂತನಾಗಿ ಎದ್ದುಬಂದನೆಂಬದಕ್ಕೆ ಅಪೋಸ್ತಲರು ಬಹುಬಲವಾಗಿ ಸಾಕ್ಷಿ ಹೇಳುತ್ತಿದ್ದರು.” “ಅವರು ದಿನಾಲೂ ಏಕಮನಸ್ಸಿನಿಂದ ದೇವಾಲಯದಲ್ಲಿ ಕೂಡುತ್ತಾ ಮನೆಮನೆಗಳಲ್ಲಿ ರೊಟ್ಟಿಮುರಿದು ಉಲ್ಲಾಸದಿಂದಲೂ ಸರಳ ಹೃದಯದಿಂದಲೂ ಊಟಮಾಡುತ್ತಾ ಇದ್ದರು: ದೇವರನ್ನು ಕೊಂಡಾಡುವ ವರಾಗಿಯೂ ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು. ಕರ್ತನು ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲೂ ಅವರ ಮಂಡಲಿಗೆ ಸೇರಿಸುತ್ತಿದ್ದನು.” ಅ. ಕೃ. 4: 32, 34; 2: 46, 47.MBK 137.3
ಭೂಪರಲೋಕಗಳನ್ನು ಹುಡುಕಿ ಶೋಧಿಸಿದರೂ, ನಮ್ಮ ಸಹಾನುಭೂತಿಯನ್ನೂ ಮತ್ತು ಬೆಂಬಲವನ್ನೂ ಅಪೇಕ್ಷಿಸುವವರಿಗೆ ನಾವು ಮಾಡುವ ಕೃಪಾಪೂರಿತ ಕ್ರಿಯೆಗಳಲ್ಲಿ ಪ್ರಕಟವಾಗುವ ಸತ್ಯಕ್ಕಿಂತಲೂ ಅಧಿಕ ಶಕ್ತಿಯುತವಾದ ಬೇರಾವ ಸತ್ಯವೂ ಇಲ್ಲ. ಕ್ರಿಸ್ತನಲ್ಲಿರುವ ಸತ್ಯವೇ ಇದು. ಕ್ರೈಸ್ತರೆನಿಸಿಕೊಂಡು ಕ್ರಿಸ್ತನ ಹೆಸರನ್ನು ಧರಿಸುವವರು ಸ್ವರ್ಣ ಆಜ್ಞೆಯಲ್ಲಿ ಹೇಳಲ್ಪಟ್ಟಿರುವ ಮೂಲತತ್ವಗಳನ್ನು ಅಭ್ಯಾಸಿಸಿ ಅನುಸರಿಸಿದರೆ, ಅಪೋಸ್ತಲರ ಕಾಲದಲ್ಲಿದ್ದಂತೆ ಈಗಲೂ ಸುವಾರ್ತೆಗೆ ಅಂಥಾ ಮಹಾ ಶಕ್ತಿಯುಂಟಾಗುವುದು.MBK 138.1