Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 05. - ಕ್ರಿಸ್ತನ ಸುವಾರ್ತಾಸೇವೆ

    ಸೈತಾನನ ಶೋಧನೆಗಳು ಕೊನೆಗೊಂಡ ಮೇಲೆ ಕೆಲುವುಕಾಲದ ಮಟ್ಟಿಗೆ ಅವನು ಯೇಸುವನ್ನು ಬಿಟ್ಟುಹೋದನು. ದೇವದೂತರು ಯೇಸುವಿಗಾಗಿ ಅಡವಿಯಲ್ಲಿ ಆಹಾರವನ್ನು ಸಿದ್ದಪಡಿಸಿದರು, ಬಲಗೊಳಿಸಿದರು, ಮತ್ತು ದೇವರ ಆಶೀರ್ವಾದವು ಆತನ ಮೇಲೆ ನೆಲೆಗೊಂಡಿತು. ಸೈತಾನನು ಶೋಧಿಸುವುದರಲ್ಲಿ ಸೋತುಹೋದನು, ಆದರೂ ಯೇಸುವಿನ ಸುವಾರ್ತಾಸೇವಾ ಅವಧಿಯನ್ನು ಎದುರುನೋಡುತ್ತಾ ಆತನ ವಿರುಧ್ದ ಕುತಂತ್ರವನ್ನು ವಿವಿಧ ಕಾಲಗಳಲ್ಲಿ ಕಾರ್ಯಗತಗೊಳಿಸಲು ಕಾಯ್ದುಕೊಂಡಿದ್ದನು. ಯೇಸುವನ್ನು ಅಂಗೀಕರಿಸದವರನ್ನು ಎತ್ತಿಕಟ್ಟಿ ಅವರು ಆತನನ್ನು ಹಗೆಮಾಡಿ, ನಾಶಗೊಳಿಸಿ ಜಯಸಾಧಿಸಲು ಹೊಂಚುಹಾಕುತ್ತಿದ್ದನು. ಅದಕ್ಕಾಗಿ ತನ್ನ ದೂತರ ಕೂಟ ಒಂದನ್ನು ಏರ್ಪಡಿಸಿದನು. ದೇವಕುಮಾರನ ವಿರುದ್ದ ಜಯಗಳಸಲಾಗಲಿಲ್ಲವಲ್ಲ ಎಂದು ಅವರು ನಿರಾಶರಾದುದಲ್ಲದೆ ಕ್ರೋಧಗೊಂಡುರು. ಲೋಕರಕ್ಷಕನಾಗಿದ್ದಾಗ್ಯೂ ಆತನ ಜನಾಂಗದವರ ಮನಸ್ಸಿನಲ್ಲಿಯೇ ಅಪನಂಬಿಕೆ ಉದ್ಭವಿಸುವಂತೆ ಮಾಡುವುದರಲ್ಲಿ ತೀವ್ರ ಕುತಂತ್ರದಿಂದ ಹೆಚ್ಚಿನ ಬಲ ಉಪಯೋಗಿಸಬೇಕೆಂದು ಅವರು ತಿರ್ಮಾನಿಸಿಕೊಂಡರು. ಯಹೋದ್ಯರು ತಮ್ಮ ಬಲಿ ಆಚಾರಗಳಲ್ಲಿ ಎಷ್ಟೇ ನಿಖರವಾದರೂ ಪ್ರವಾದನೆಗಳಿಗೆ ಕುರುಡಾಗಿರುವಂತೆ ಪ್ರಬಲನಾದ ಒರ್ವ ಲೌಕಿಕ ರಾಜನು ಪ್ರವಾದನೆಯನ್ನು ಈಡೇರಿಸುವನು ಎಂದು ನಂಬಿದರೆ ಅವರ ಮನಸ್ಸಿನಲ್ಲಿ ಮೆಸ್ಸೀಯನು ಬರುವನು ಎಂದು ಸದಾ ಕಾಯುವಂತೆ ಆಗುವುದು.GCKn 46.1

    ಕ್ರಿಸ್ತನ ಸುವಾರ್ತಾಸೇವಾ ಕಾಲದಲ್ಲಿ ಸೈತಾನನೂ ಮತ್ತು ದೂತರು ಜನರಲ್ಲಿ ಅಪನಂಬಿಕೆ, ಹಗೆತನ ಮತ್ತು ಅಪಹಾಸ್ಯ ಮಾಡುವಂತೆ ಪ್ರಚೋದಿಸುವುದರಲ್ಲಿ ಕಾರ್ಯಮಗ್ನರಾಗಿರುವುದನ್ನು ನನಗೆ ತೋರಿಸಲಾಯಿತು. ಯೇಸುವು ಆಗಾಗ್ಗೆ ಪಾಪವನ್ನು ಆಕ್ಷೇಪಿಸುವ ಕಡುಸತ್ಯವನ್ನು ನುಡಿವಾಗ ಜನರು ಕ್ರೋಧಗೊಳ್ಳುತ್ತಿದ್ದರು. ಸೈತಾನನೂ ಅವನ ದೂತರು ಅತನನ್ನು ಕೊಲ್ಲುವಂತೆ ಪ್ರಚೋದಿಸುತ್ತಿದ್ದರು. ಒಮ್ಮೆ ಕಲ್ಲಿನಿಂದ ಹೊಡೆದೋಡಿಸಲು ಯತ್ನಿಸಿದಾಗ, ದೇವದೂತರು ಯೇಸುವನ್ನು ಅಲ್ಲಿಂದ ಸಂರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋದರು. ಮತ್ತೊಮ್ಮೆ ಆತನ ಪವಿತ್ರ ತುಟಿಗಳಿಂದ ಸರಳಸತ್ಯಗಳು ಹೊರ ಬೀಳುತ್ತಿದ್ದಾಗ ಜನರ ಗುಂಪು ಆತನನ್ನು ಹಿಡಿದು ಬೆಟ್ಟದ ಮೇಲೆ ಕರೆದುಕೊಂಡು ಹೋಗಿ ಅಲ್ಲಿಂದ ತಳ್ಳಿಬಿಡಲು ಹವಣಿಸಿದರು. ಈತನನ್ನು ಏನುಮಾಡುವುದು ಎಂಬುವುದರ ಬಗ್ಗೆ ತಮ್ಮತಮ್ಮಲ್ಲೆ ವ್ಯಾಜ್ಯ ಜಗಳಗಳು ಪ್ರಾರಂಭವಾದವು. ದೇವದೂತರು ಮತೋಮ್ಮೆ ಯೇಸುವನ್ನು ಕುಪಿತ ಜನರ ಗುಂಪಿನಿಂದ ಬಚ್ಚಿಡಲು, ಆತನು ಅವರ ಮದ್ಯದಲ್ಲೆ ಸಾಗಿ ತನ್ನ ದಾರಿ ಹಿಡಿದನು. ಮಹಾರಕ್ಷಣಾಯೋಜನೆಯು ವಿಫಲಗೊಳ್ಳುವುದನ್ನು ಸೈತಾನನು ಇನ್ನೂ ನಿರೀಕ್ಷಿಸಿದನು. ಜನರ ಮನಸ್ಸನ್ನು ಕಠಿಣಗೊಳಿಸಿ ಯೇಸುವಿನೆಡೆಗೆ ಕಠಿಣಭಾವ ಹೊಂದುವಂತೆ ತನ್ನಲ್ಲಾ ಶಕ್ತಿಯನ್ನು ಪ್ರಯೋಗಿಸಿದನು. ಮಾತ್ರವಲ್ಲದೆ ದೇವಕುಮಾರನನ್ನು ಅಂಗೀಕರಿಸಿಕೊಳ್ಳುವವರ ಸಂಖ್ಯೆ ಅಲ್ಪವಾಗಿದ್ದು, ಇವರಿಗಾಗಿ ತಾನು ಅನುಭವಿಸುವ ಶ್ರಮೆ ತ್ಯಾಗವು ಅಧಿಕವಾದದ್ದು ಎಂಬುದಾಗಿ ಯೇಸು ಭಾವಿಸಬಹುದೆಂದು ನಿರೀಕ್ಷಿಸಿದನು. ಆದರೆ, ನಾನು ಕಂಡದ್ದೇನೆಂದರೆ ಯೇಸುವನ್ನು ದೇವಕುಮಾರನೆಂದು ನಂಬಿ ತಮ್ಮ ಆತ್ಮವನ್ನು ರಕ್ಷಿಸಿಕೊಳ್ಳುವ ಒಂದಿಬ್ಬರಾದರೂ ಸರಿ ಆತನು ತನ್ನ ಯೋಜನೆಯನ್ನು ಜಾರಿಗೊಳಿಸುತ್ತಿದ್ದನು. ಸೈತಾನನು ಜನರನ್ನು ತನ್ನ ಬಲದಿಂದ ನರಳಿಸುತ್ತಿದ್ದನು.ಈ ಸೈತಾನನ ಬಲವನು ಛಿದ್ರಗೊಳ್ಳಿಸುವ ಮೂಲಕ ಯೇಸುವು ತನ್ನ ಕೆಲಸವನ್ನು ಪ್ರಾರಂಭಿಸಿದನು ದುಷ್ಟಶಕ್ತಿಯಿಂದ ನರಳುತ್ತಿದ್ದವರನ್ನು ಗುಣಪಡಿಸಿದನು. ರೋಗಗಳನ್ನು ವಾಸಿಮಾಡಿದನು, ಕುಂಟರನ್ನು ನಡಿಸಿ, ದೇವರನಾಮವನ್ನು ಮಹಿಮೆಪಡಿಸುತ್ತಾ ಕುಣಿದಾಡುವಂತೆ ಮಾಡಿದನು. ಕುರುಡರಿಗೆ ಕಣ್ಣು ಕೊಟ್ಟನು. ಹಲವಾರು ವರ್ಷಗಳಿಂದ ದೆವ್ವಹಿಡಿದವರಾಗಿದ್ದು ಸೈತಾನನ ಕ್ರೂರ ಶಕ್ತಿಯಿಂದ ನರಳುತ್ತಿದ್ದವರನ್ನು ಬಿಡಿಸಿದನು. ಬಲಹೀನರನ್ನು, ತರತರನೆ ನಡುಗುತ್ತಿದ್ದವರನ್ನು, ವಿಷಣ್ಣರಾಗಿ ಎದೆಗುಂದಿದವರನ್ನು ತನ್ನ ದಯಪೂರಿತ ಮಾತುಗಳಿಂದ ಸಮಾಧಾನ ಪಡಿಸಿದನು. ಸತ್ತವರನ್ನು ಎಬ್ಬಿಸಿದನು ಮತ್ತು ಅವರು ದೇವರ ಮಹಾಶಕ್ತಿಯ ಪ್ರದರ್ಶನವನ್ನು ಕೊಂಡಾಡಿದರು. ಆತನನ್ನು ನಂಬಿದವರಿಗಾಗಿ ಯೇಸು ಪ್ರಬಲವಾಗಿ ದುಡಿದನು. ಸೈತಾನನು ಆವರಿಸಿ ವಿಜೃಂಭಿಸುತ್ತಿದ್ದ ಬಲಹೀನರನ್ನು ಆತನ ಹಿಡಿತದಿಂದ ಬಿಡಿಸಿ ತನ್ನ ಪ್ರಬಲ ಶಕ್ತಿಯಿಂದ ದೇಹಾರೋಗ್ಯವನ್ನು ತಂದು,, ಮಹಾಉಲ್ಲಾಸ ಸಂತೋಷವನ್ನು ಕೊಟ್ಟನು. ಕ್ರಿಸ್ತನ ಜೀವತವು ದಯೆ ಕರುಣೆ ಮತ್ತು ಪ್ರೀತಿಯಿಂದ ತುಂಬಿತ್ತು. ಆತನು ತನ್ನ ಬಳಿಗೆ ಬರುವವರ ಅಳಲನ್ನು ಬಹು ಆಸಕ್ತಿಯಿಂದ ಆಲಿಸುತ್ತಿದ್ದನು. ಅತನ ದಿವ್ಯಶಕ್ತಿಯನ್ನು ಜನಸಮೂಹವು ವೈಯಕ್ತಿಕವಾಗಿ ಗುರುತಿಸಿದವು. ಆದರೆ ತಮ್ಮ ಕೆಲಸವಾದ ತಕ್ಷಣ ವಿನಮ್ರನಾರದರೂ ಈ ಮಹಾಬೋಧಕನ ಬಗ್ಗೆ ಹೀನಾಯವಾಗಿ ಭಾವಿಸಿದರು. ಏಕೆಂದರೆ ಅಧಿಕಾರಿಗಳು ಆತನನ್ನ ನಂಬಲಿಲ್ಲ ಆತನೊಂದಿಗೆ ಕಷ್ಟದಲ್ಲಿ ಪಾತ್ರವಹಿಸಲು ಇಚ್ಛಿಸಲಿಲ್ಲ. ಯೇಸುವು ಶೋಕತಪ್ತನೂ ಮತ್ತು ದುಃಖಪೂರಿತನಾಗಿದ್ದನು. ಆದರೆ ಕೆಲವು ಜನರು ಮಾತ್ರ ಈತನ ಶಾಂತ ,ಸ್ವತ್ಯಾಗದ ಜೀವನಕ್ಕೆ ಅಧೀನದಲ್ಲಿರಲು ಸಮ್ಮತಿಸಿದರು, ಇತರರು ಈ ಲೋಕ ಕೊಡುವ ಘನತೆಗೌರವಗಳನ್ನು ಅನುಭವಿಸಲು ಆಶಿಸಿದರು. ಬಹುಜನರು ದೇವಕುಮಾರನನ್ನು ಹಿಂಬಾಲಿಸುತ್ತಾ ಆತನ ಬೋಧನೆಗೆ ಕುವಿಗೊಡಲು, ಆತನ ಕೃಪಾಪೂರಿತ ತುಟಿಗಳಿಂದ ಸುರಿಯುವ ವಾಕ್ಯಗಳಲ್ಲಿ ಉಲ್ಲಾಸಗೊಂಡರು. ಆತನ ವಾಕ್ಯಗಳು, ಸಾಧಾರಣ ವ್ಯಕ್ತಿಗಳೂ ಅರ್ಥಮಾಡಿಕೊಳ್ಳುವಷ್ಟು ಸರಳವೂ ಅರ್ಥಪೂರಿತವೂ ಆಗಿತ್ತು.GCKn 47.1

    ಸೈತಾನನೂ ಆತನ ದೂತರು ಅವಿಶ್ರಾಂತವಾಗಿ ದುಡಿಯುತ್ತಿದರು. ಯಹೊದ್ಯರನ್ನು ಕುರುಡಾಗಿಸಿ ಆತನನ್ನು ಅರ್ಥಮಾಡಿಕೊಳ್ಳಲಾಗದಂತೆ ಅಂಧಕಾರದಲ್ಲಿಟ್ಟರು. ಜನರು ಅಧಿಪತಿಗಳನ್ನೂ ರಾಜರನ್ನೂ ಯೇಸುವಿನ ಪ್ರಾಣತೆಗೆಯಲು ಪ್ರಚೋಧಿಸಿದರು. ಅವರು ಯೇಸುವನ್ನು ತಮ್ಮಬಳಿಗೆ ಕರೆತರಲು ಅಧಿಕಾರಿಗಳನು ನಿಯೋಜಿಸಿದರು. ಅವರು ಆತನ ಹತ್ತಿರ ಬಂದಾಗ ದಿಗ್ಭ್ರಮೆಗೊಳಗಾದರು, ಮಾನವರ ಸಂಕಟ ಹಿಂಸೆಗೆ ಯೇಸುವು ಅನುಕಂಪಗೊಳ್ಳುವುದನ್ನು ಕಂಡರು. ಶಕ್ತಿಹೀನರೂ ಮತ್ತು ವ್ಯಥೆ ತುಂಬಿದವರಿಗೂ ತನ್ನೆಲ್ಲಾ ಪ್ರೀತಿಯಿಂದ ಉತೇಜಿಸಿ ಮಾತನಾಡುವ ಯೇಸುವನ್ನು ಅವರು ಕಂಡರು. ಆತನು ಅಧಿಕಾರಯುತವಾಗಿ ಸೈತಾನನ ಶಕ್ತಿಯನ್ನು ಗದರಿಸುವುದನ್ನೂ, ಅವನ ಹಿಡಿತದಲ್ಲಿದ್ದವರನ್ನು ಬಿಡಿಸುತ್ತಿರುವ ಮಹಾದ್ವನಿಯನ್ನು ಕೇಳಿದರು. ವಿವೇಕ ತುಂಬಿದ ಆತನ ವಾಕ್ಯಗಳಿಗೆ ಬಂಧಿಸಲ್ಪಟ್ಟರು. ಆತನ ಮೇಲೆ ಕೈ ಎತ್ತಲಾಗಲಿಲ್ಲ. ಅವರಲ್ಲಿ ಬರಿಗೈಯಲ್ಲಿ ಯೇಸುವಿಲ್ಲದೆ ಯಾಜಕರ, ಹಿರಿಯರ ಸಮಕ್ಷಮಕ್ಕೆ ಹಿಂತಿರುಗಿದರು “ನೀವೇಕೆ ಅವನನ್ನು ಕರೆತರೇಲ್ಲ?” ಎಂದಾಗ, ತಾವು ಕಂಡ ಅದ್ಭತಗಳನ್ನೂ, ಕೇಳಿದ ವಿವೇಕಯುತ ಪ್ರೀತಿ ಮತ್ತು ಜ್ಞಾನತಂಬಿದ ಪವಿತ್ರ ಮಾತುಗಳನ್ನು ತಿಳಿಸಿಹೇಳುತ್ತಾ -ಯಾವ ಮನುಷ್ಯರು ಆತನಂತೆ ನುಡಿಯಲಿಲ್ಲ ಎಂದರು ಮಹಾಯಾಜಕರು, ಅವರೂ ಮೋಸಹೋದರೆಂದು ಜರಿದರು. ಕೆಲವರು ಆತನನ್ನು ಹಿಡಿದು ತರಲಿಲ್ಲವಲ್ಲಾ ಎಂದು ನಾಚಿಕೊಂಡರು. ಇತರ ರಾಜ್ಯಾಧಿಕಾರಿಗಳು ಯಾರಾದರೂ ಆತನನ್ನು ನಂಬಿದರೋ ಎಂದು ಮಹಾಯಾಜಕರು ವ್ಯಂಗ್ಯವಡಿದರು. ಬಹಳ ಮಂದಿ ನ್ಯಾಯಧಿಪತಿಗಳು ಮತ್ತು ಹಿರಿಯರು ಆತನಲ್ಲಿ ನಂಬಿಕೆಯಿಟ್ಟಿದನ್ನು ನಾನು ಕಂಡೆನು. ಆದರೆ ಸೈತಾನನು ಅದನ್ನು ಅಂಗೀಕರಿಸದಂತೆ ಮಾಡಿದನು ಅವರು ದೇವರಿಗಿಂತ ಹೆಚ್ಚಾಗಿ ಮಾನವರ ಖಂಡನೆಗೆ ಭಯಪಟ್ಟರು.GCKn 49.1

    ಈ ಮಟ್ಟಿಗೆ ಸೈಐತಾನನು ದ್ವೇಷ, ಕುತಂತ್ರ ಬುದ್ದಿಯು ರಕ್ಷಮಾಯೋಜನೆಯನ್ನು ಛಿದ್ರಗೊಳಿಸಲಾಗಲಿಲ್ಲ. ಯೇಸು ಈ ಲೋಕಕ್ಕೆ ಬಂದ ಕಾರ್ಯಾರ್ಥವು ತನ್ನ ಗುರಿಮುಟ್ಟುವಲ್ಲಿ ಮುಂದೆ ಸಾಗಿತು. ಸೈತಾನನೂ ಆತನ ದೂತರೂ ತಮ್ಮೊಳಗೆ ಸಮಾಲೋಚಿಸಿದರು. ಯೇಸುವಿನ ರಕ್ತಪಾತಕ್ಕಾಗಿ ಕೊಗುತ್ತಾ ಕ್ರೂರತ್ವಹಾಗೂ ಧಿಕ್ಕಾರವನ್ನು ಅತನ ಮೇಲೆ ಪೇರಿಸಲು ಕ್ರಿಸ್ತನ ಜನಾಂಗವನ್ನು ಎತ್ತಿಕಟ್ಟಲು ತೀರ್ಮಾನಿಸಿದರು. ಇಂಥಹ ಸಮಯದಲ್ಲಿ ಯೇಸು ಕೋಪದಿಂದ ಕೆರಳಿ ತನ್ನ ಧೀನ ಹಾಗೂ ಸಾಧುಸ್ವಭಾವವನ್ನು ತೊರೆಯಬಹುದೆಂಬುದು ಸೈತಾನನ ನಿರೀಕ್ಷೆಯಾಗಿತ್ತು.GCKn 51.1

    ಸೈತಾನನು ಈ ಹವಣಿಕೆಯಲ್ಲಿರುವಾಗ ಯೇಸುವು ಆತನಿಗೆ ಸಂಭವಿಸಬುಹುದಾದ ಹಿಂಸೆಯ ಬಗೆಗೆ ಸೂಕ್ಷ್ಮವಾಗಿ ಶಿಷ್ಯರಿಗೆ ತಿಳಿಸುತ್ತಿದ್ದನು. ಅದಾವುದೆಂದರೆ, ತಾನು ಕ್ರೂಜಾಮರಣಕ್ಕೆ ಒಪ್ಪಿಸಲ್ಪಡುವುದು, ಮೂರನೆಯ ದಿನ ಸತ್ತವರೊಳಗಿಂದ ಎದ್ದುಬರುವುದೇ ಆಗಿತ್ತು. ಆದರೆ ಶಿಷ್ಯರ ತಿಳುವಳಿಕೆ ಮಂದವಾಗಿದ್ದು ಅತನ ಮಾತುಗಳ ಅಂತಾರಾರ್ಥ ಅವರಿಗೆ ಗೋಚರಿಸಲಿಲ್ಲ.GCKn 51.2

    ನೋಡಿರಿ; ಲೂಕ 4;29; ಯೋಹಾನ 7;45-48: 8;59GCKn 51.3