Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 07. - ಕ್ರಿಸ್ತನನ್ನು ಹಿಡಿದುಕೊಟ್ಟದ್ದು

    ಆನಂತರ ನನ್ನನ್ನು,ಯೇಸುವು ತನ್ನ ಶಿಷ್ಯರೊಂದಿಗೆ ಪಸ್ಕದ ಭೋಜನಮಾಡಿದ ಕಾಲಕ್ಕೆ ತೆಗೆದುಕೊಂಡು ಹೋಗಲಾಯಿತು. ಸೈತಾನನು ಯೂದನನ್ನು ವಂಚಿಸಿ, ತಾನೊಬ್ಬ ಕ್ರಿಸ್ತನ ನಂಬಿಗಸ್ಥ ಶಿಷ್ಯನು ಎಂದು ಯೋಚಿಸುವಂತೆ ಮಾಡಿದನು. ಆದರೆ ಅವನ ಹೃದಯವು ಐಹಿಕವಾಗಿಯೇ ಇತ್ತು. ಯೇಸುವಿನ ಅದ್ಬುತ ಕಾರ್ಯಗಳನ್ನೆಲ್ಲಾ ಕಂಡಿದ್ದನು, ಅವನ ಸುವಾರ್ತಾಸೇವೆಯ ಕಾಲದಲ್ಲೆಲ್ಲಾ ಜೊತೆಗಿದ್ದನು. ಆತನೇ ಮೆಸ್ಸೀಯನು ಎಂಬ ಪ್ರಬಲ ಸಾಕ್ಷಿಗೆ ತನ್ನನ್ನು ಒಪ್ಪಿಸಿಕೊಟ್ಟಿದ್ದನು; ಆದರೆ ಅವನು ಹತ್ತಿರದಲ್ಲೇ ಇದ್ದ ಲೋಭಿಯಾಗಿದ್ದನು. ಧನದಾಶೆಯುಳ್ಳವನಾಗಿದ್ದನು. ಅಂತೆಯೇ ಯೇಸುವಿನ ಮೇಲೆ ಸುರಿಸಿದ್ದ ಬಹುಬೆಲೆಯುಳ್ಳ ತೈಲದ ಬಗ್ಗೆ ಕೋಪದಿಂದ ಆಕ್ಷೇಪಿಸಿದನು, ಮರಿಯಳು ಕರ್ತನನ್ನು ಪ್ರೀತಿಸಿದಳು. ಅವಳ ಅಸಂಖ್ಯಾತ ಪಾಪಗಳನ್ನು ಯೇಸು ಕ್ಷಮಿಸಿದ್ದನು, ಅವಳ ಪ್ರೀತಿಪಾತ್ರ ತಮ್ಮನನ್ನು ಮರಣದಿಂದ ಎಬ್ಬಿಸಿದ್ದನು, ಯೇಸುವಿಗಾಗಿ ಅರ್ಪಿಸಿದ ಯಾವೂದೂ ಹೆಚ್ಕಿನದಲ್ಲ ಎಂಬುದು ಅವಳ ಭಾವನೆಯಾಗಿತ್ತು. ಅತಿ ಹೆಚ್ಚು ಬೆಲೆಯೂ, ಅಮೂಲ್ಯವೂ ಆದ ತೈಲವಾಗಿದ್ದಷ್ಟೂ ಅದನ್ನು ಆತನಿಗೆ ನಿವೇದಿಸುವುದು ಅವಳಿಗಿದ್ದ ಹೆಚ್ಚು ಧನ್ಯತೆಯನ್ನು ಪ್ರಕಟಿಸುವುದು. ಯೂದನು, ತನ್ನ ದುರಾಸೆಯನ್ನು ಮುಚ್ಚಿಕೊಳ್ಳಲು ತೈಲವನ್ನು ಮಾರಿ ಬಡವರಿಗೆ ಕೊಡಬಹುದಾಗಿತ್ತು ಎಂದನು. ಇದು ಯೂದನಿಗೆ ಬಡವರ ಪರವಾಗಿ ಇದ್ದ ಕಾಳಜಿಯಿಂದಲ್ಲ: ಅವನು ಸ್ವಾರ್ಥಿ, ಬಡವರ ಸಹಾಯಕ್ಕಾಗಿ ಅವನಿಗೆ ವಹಿಸಲ್ಪಟ್ಟ ಹಣವನ್ನು ಆಗಾಗ್ಗೆ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿದ್ದನು. ಯೂದನು ಯೇಸುವಿನ ಕೊರತೆ ಅಥವಾ ಸೌಕರ್ಯದ ಬಗೆಗೆ ಗಮನ ಕೂಡುತ್ತಿರಲಿಲ್ಲ. ಬಡವರನೆಪದಿಂದ ದುರಾಸೆಯನ್ನು ಸಾಧಿಸಿಕೊಳ್ಳುತ್ತಿದ್ದನು. ಮರಿಯಳ ಈ ಔದಾರ್ಯತೆ, ದೊಡ್ಡಮನಸ್ಸು ಅವನ ದುರಾಶಾ ಪ್ರವೃತ್ತಿಯನ್ನು ಸೀಳುವ ಖಂಡನೆಯಾಯಿತು.GCKn 58.1

    ಯೂದನ ಹೃದಯವು ಸೈತಾನನ ಶೋಧನೆಯ ಅಂಗೀಕಾರಕ್ಕೆ ಸಿದ್ದವಾಯಿತು. ಯಹೋದ್ಯರು ಯೇಸುವನ್ನು ಹಗೆಮಾಡಿದರು; ಆದರೆ ಆತನ ವಿವೇಕ ತುಂಬಿದ ಮಾತುಗಗನ್ನು ಕೇಳಲು ಜನರ ಗುಂಪು ನೆರೆದು ಆತನ ಅದ್ಬುತಕಾರ್ಯಗಳನ್ನು ಕಾಣಲು ಬರುತ್ತಿತ್ತು. ಈ ಅದ್ಬತವಾದ ಬೋದಕನ ಪ್ರಬೋಧನೆ ಕೇಳುವುದರಲ್ಲಿ ಹೆಚ್ಚಾದ ಆಸಕ್ತಿ ವಹಿಸುತ್ತಾ ಮಹಾಯಾಜಕರು ಮತ್ತು ಹಿರಿಯರನ್ನು ಬಿಟ್ಟು ಯೇಸುವಿನೆಡೆಗೆ ಹಿಂಬಾಲಿಸಲಾರಂಭಿಸಿದರು.GCKn 59.1

    ಅಧಿಕಾರಸ್ಥರಲ್ಲಿ ಕೆಲವರು ಯೇಸುವನ್ನು ನಂಬಿದರೂ ತಮ್ಮನ್ನು ಹಿರೀಸಭೆಯಿಂದ ಹೊರಹಾಕುವರೇನೋ ಎಂಬ ಭಯದಿಂದ ಆತನನ್ನು ಒಪ್ಪಿಕೊಳ್ಳಲು ಭಯಪಟ್ಟರು. ಏನಾದರೂ ಮಾಡಿ ಜನರು ಯೇಸುವನ್ನು ಹಿಂಬಾಲಿಸುವುದನ್ನು ತಡೆಗಟ್ಟಬೇಕೆಂದು ಯಾಜಕರೂ ಹಿರಿಯರೂ ತೀರ್ಮಾನಿಸಿದರು. ಎಲ್ಲ ಜನರೂ ಆತನನ್ನು ನಂಬುವರೆಂದು ಭಯಗೊಂಡರು. ತಮಗೆ ಸುರಕ್ಷೆ ಇಲ್ಲದಿರುವುದನ್ನು ಮನಗಂಡರು. ಒಂದೋ ತಮ್ಮ ಸ್ಥಾನವನ್ನು ಬಿಡಬೇಕು ಇಲ್ಲವೇ ಯೇಸುವನ್ನು ಕೊಲ್ಲಬೇಕು. ಆದರೆ ಆತನನ್ನು ಕೊಂದರೂ ಆತನ ಶಕ್ತಿಯನ್ನು ಸಮರ್ಥಿಸುವ ಸಜೀವ ಸ್ಮಾರಕಗಳು ಇದ್ದವು. ಯೇಸುವು ಲಾಜರಸನನ್ನು ಮರಣದಿಂದ ಎಬ್ಬಿಸಿದ್ದನು. ಒಂದುವೇಳೆ ಯೇಸುವನ್ನು ಕೊಂದರೆ ಲಾಜರಸನು ಆತನ ಶಕ್ತಿಗೆ ಸಾಕ್ಷಿಯಾಗಿ ಇದ್ದನು. ಜನರು ಮರಣದಿಂದ ಎಬ್ಬಿಸಲ್ಪಟ್ಟ ಲಾಜರಸನನ್ನು ಕಾಣಲು ಕೂಡಿಬರುತ್ತಿದ್ದ ಕಾರಣ ಅವನನ್ನೂ ಕೊಂದು ಜನರ ಉದ್ರೇಕವನ್ನು ತಣ್ಣಗಾಗಿಸಬೇಕು ಎಂದುಕೊಂಡರು. ಅನಂತರ ಸಂಪ್ರದಾಯ, ತತ್ವಗಳ ಕಡೆಗೆ ಜನರನು ಸೆಳೆದು ಸೋಂಪು ಜೀರಿಗೆಯಲ್ಲಿ ಹತ್ತರಲ್ಲೊಂದು ಭಾಗವನ್ನು ಪಡೆಯುವಂತೆ ತಮ್ಮ ಕಡೆಗೆ ಸೆಳೆಯಬಹುದು ಎಂದು ಯೋಚಿಸಿದರು. ಯೇಸುವನ್ನು ಏಕಾಂಗಿಯಾಗಿದ್ದಾಗ ಹಿಡಿಯಬೇಕು ಎಂದುಕೊಂಡರು; ಒಂದುವೇಳೆ ಗುಂಪಿನ ಮದ್ಯದಲ್ಲಿ ಹಿಡಿದರೆ ಆತನ ಮೇಲೆ ಆಸಕ್ತರಾದ ಜನರು ಹುಚ್ಚೆದ್ದು ತಮ್ಮನ್ನು ಕಲ್ಲೆಸೆದು ಹೊಡೆದಾರು ಎಂದು ಭಯಗೊಂಡರು.GCKn 59.2

    ಮಹಾಯಾಜಕರೂ ಹಿರಿಯಾರೂ ಯೇಸುವನ್ನು ಹಿಡಿಯಲು ಎಷ್ಟು ಕಾತುರರಾಗಿದ್ದಾರೆ ಎಂಬುದು ಯೂದನಿಗೆ ತಿಳಿದಿತ್ತು. ಕೆಲವು ಬೆಳ್ಳಿಯ ಕಾಸುಗಳಿಗಾಗಿ ಆತನನ್ನು ಹಿಡಿದುಕೊಡಲು ಒಪ್ಪಿಕೊಂಡನು. ಹಣದ ದುರಾಶೆಯೇ ಯೇಸುವನ್ನು ಕಡುಶತೃಗಳ ಕೈಗೆ ಹಿಡಿದು ಕೊಂಡುವಂತೆ ಪ್ರೇರೆಪಿಸಿತು. ಸೈತಾನನು ಯೂದನ ಮೂಲಕ ಕಾರ್ಯ ಮಾಡುತ್ತಿದ್ದನು. ರಾತ್ರಿಬೋಜನದ ಪ್ರಭಾವಭರಿತ ಸಂದರ್ಭದ ಮದ್ಯೆ ಯೇಸುವನ್ನು ಹಿಡಿದುಕೊಡಲು ಹೊಂಚುಹಾಕಿದನು. ಈತನಿಂದಾಗಿ ಎಲ್ಲಾ ಶಿಷ್ಯರು ಆ ರಾತ್ರಿ ಮನನೋಯುವರೆಂದು ಬಹುದುಃಖದಿಂದ ಯೇಸು ಹೇಳಿದನು. ಆದರೆ ಪೇತ್ರನು, ಎಲ್ಲರೂ ಹಿಂಜರಿದರೂ ನಾನು ನಿನ್ನನ್ನು ಬಿಟ್ಟು ಹಿಂಜರಿಯನು ಎಂದು ದೃಡವಾಗಿ ಹೇಳಿದನು. ಯೇಸುವು, ಸೈತಾನನು ನಿನ್ನನ್ನು ಸೆಳೆದುಕೊಳಲು ಇಚ್ಚಿಸಿ, ನಿನ್ನನ್ನು ಗೋಧಿ ಒನೆಯುವಂತೆ ಒನೆಯಲು ಕಾದಿದ್ದಾನೆ ಆದರೆ ನಿನ್ನ ನಂಬಿಕೆ ಹಾಳಾಗಬಾರದೆಂದು ನಾನು ಪ್ರಾರ್ಥಿಸಿದ್ದೇನೆ. ನೀನು ಪರಿವರ್ತನೆಗೊಂಡಾಗ ಸಹೋದರರನ್ನು ದೃಡಪಡಿಸು ಎಂದನು.GCKn 60.1

    ಆನಂತರ ನಾನು, ಯೇಸು ಶಿಷ್ಯರೊಂದಿಗೆ ತೋಟದಲ್ಲಿರುವುದನ್ನು ಕಂಡೆನು. ಶೋಧನೆಗೆ ಒಳಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ ಎಂದು ಆತನು ಶಿಷ್ಯರಲ್ಲಿ ಆಳವಾದ ವೇದನೆಯಿಂದ ಬೇಡಿಕೊಂಡನು. ಇವರ ನಂಬಿಕೆಯು ಪರಿಶೋಧಿಸಲ್ಪಟ್ಟು ನಿರೀಕ್ಷೆಗಳೆಲ್ಲಾ ನಿರಾಶೆಹೊಂದುವುದೆಂದೂ ಎಚ್ಚರವಾಗಿದ್ದು ಪ್ರಾರ್ಥನೆಯಲ್ಲಿ ನಿರತರಾಗುವುದರ ಮೂಲಕ ಬಲಹೊಂದಿಕೊಳ್ಳಬಹುದೆಂದು ಯೇಸುವಿಗೆ ತಿಳಿದಿತ್ತು. ಯೇಸುವು ಜೋರಾಗಿ ಆಳುತ್ತಾ ‘ನನ್ನ ತಂದೆಯೇ ಸಾದ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಹೇಗೂ ನನ್ನ ಚಿತ್ತದಂತಾದೆ ನಿನ್ನ ಚಿತ್ತದಂತೆಯೇ ಆಗಲಿ’ ಎಂದು ಪ್ರಾರ್ಥಿಸಿದನು. ದೇವಕುಮಾರನು ಬಹು ಯಾತನೆಯಿಂದ ಪ್ರಾರ್ಥಿಸಿದನು. ಆತನ ಮುಖದಿಂದ ಬೆವರಿನ ದೊಡ್ಡಹನಿಗಳು ರಕ್ತದಂತೆ ಸುರಿದವು. ದೂತರ ಗುಂಪು ಈದೃಶ್ಯವನ್ನು ನೋಡುತ್ತಾ ಹಾರಡುತ್ತಿದ್ದಾಗ, ಒಬ್ಬ ದೂತನು ಮಾತ್ರ ಆತನ ಬಳಿಗೆ ಹೋಗಿ ಬಲಗೊಳಿಸಲು ಅನುಮತಿಸಲ್ಪಟ್ಟನು. ಪರಲೋಕದಲ್ಲಿದ್ದ ದೂತರೆಲ್ಲಾ ತಮ್ಮ ಮುಕುಟ ಹಾಗೂ ವಾದ್ಯಗಳನ್ನು ಕೈಬಿಟ್ಟು ಬಹು ಶ್ರದ್ಧೆಯಿಂದ ದೃಷ್ಟಿಸುತ್ತಿದ್ದರು.ಪರಲೋಕದಲ್ಲಿ ಉಲ್ಲಾಸವಿರಲಿಲ್ಲ. ದೂತರೆಲ್ಲಾ ದೇವಪುತ್ರನನ್ನು ಸುತ್ತುವರೆಯಲು ಇಚ್ಚಿಸಿದರು. ಪ್ರದಾನ ದೂತರು ಅದಕ್ಕೆ ಅವಕಾಶ ಗೊಡಲಿಲ್ಲ. ಏಕೆಂದರೆ ಈ ಹಿಡುಕೊಡುವಿಕೆಯನ್ನು ಅವರು ಕಂಡು ಯೇಸುವನ್ನು ಬಿಡಿಸಿಕೊಳ್ಳುವರು , ಅದರೆ ದೇವಯೋಜನೆಯು ನಿರ್ಧರಿಸಲ್ಪಟ್ಟಿದ್ದು ಅದು ಸಫಲಗೊಳ್ಳಲೇಬೇಕಾಗಿತ್ತು.GCKn 61.1

    ಯೇಸು ಪ್ರಾರ್ಥಿಸಿದ ಮೇಲೆ ಶಿಷ್ಯರನ್ನು ನೋಡಲು ಬಂದನು , ಅವರು ನಿದ್ದೆಮಾಡುತ್ತಿದ್ದರು. ಈ ಬೀಕರ ಗಳಿಗೆಯಲ್ಲಿ ಶಿಷ್ಯರ ಪ್ರಾರ್ಥನೆಯ ಸಂತೈಸುವಿಕೆಯೂ ಆತನಿಗಿರಲಿಲ್ಲ. ಕಲವು ಕ್ಷಣಗಳ ಮುಂದೆ ಬಹು ಪುಟಿಯುತ್ತಿದ್ದ ಪೇತ್ರನ ಕಣ್ಣುಗಳೂ ನಿದ್ದೆಯಿಂದ ಭಾರವಾಗಿದ್ದವು,ಯೇಸು ಆತನ ಸಕಾರಾತ್ಮಕ ಹೇಳಿಕೆಯನ್ನು ನೆನಪಿಸಿ, ಏನು! ಒಂದು ಗಂಟೆಮಾತ್ರವೂ ನನಗಾಗಿ ಎಚ್ಚರವಾಗಿರಲಾರೆಯಾ? ಎಂದು ಪ್ರಶ್ನಿಸುದನು. ಯೂದನು ಜನರಗುಂಪನ್ನು ಸೇರಿಸಿಕೊಂಡು ಹತ್ತಿರ ಬರುವುದರಲ್ಲಿ ದೇವಪುತ್ರನು ಮೂರಿಬಾರಿ ಯಾತನೆಯಿಂದ ಪ್ರಾರ್ಥಿಸಿದನು. ಯೂದನು ಯಥಾಪ್ರಕಾರ ವಂದಸುವಂತೆ ಯೇಸುವಿನ ಬಳಿಗೆ ಬಂದನು. ಗುಂಪು ಯೇಸುವನ್ನು ಆವರಿಸಿಕೊಂಡುರು: ಆಗ ತನ್ನ ದೈವಶಕ್ತಿಯನ್ನು ಪ್ರಕಟಿಸುತ್ತಾ, ಯಾರನ್ನು ಹುಡುಕುತ್ತಿದ್ದೀರಿ? ನಾನೇ ಅವನು ಎಂದನು. ಆ ಜನರೆಲ್ಲಾ ಹಿಂದೆ ಸರಿದು ನೆಲದ ಮೇಲೆ ಬಿದ್ದರು. ಇವರು ಆತನ ಶಕ್ತಿಯನ್ನು ಕಾಣಲೆಂದೂ ಹಾಗೂ ತಾನೇ ಇಚ್ಚಿಪಟ್ಟರೆ ಅವರಿಂದ ಬಿಡಿಸಿಕೊಳ್ಳಲಾಗುವುದೆಂದು ಸಾಬೀತು ಪಡಿಸಲು ಯೇಸು ಅವರನ್ನು ವಿಚಾರಿಸಿದನು.GCKn 62.1

    ಜನಸಮೂಹವು ಕತ್ತಿ ದೊಣ್ಣೆಗಳೊಡನೆ ಕೆಳಗೆ ಬಿದ್ದಾಗ ಶಿಷ್ಯರು ಭರವಸೆ ಹೊಂದಲಾರಂಭಿಸಿದರು. ಅವರೆದ್ದು ದೇವಪುತ್ರನನ್ನು ಮುತ್ತಿಕೊಳ್ಳುವಾಗ ಪೇತ್ರನು ಕತ್ತಿಯನ್ನು ಸೆಳೆದು ಒರ್ವನ ಕಿವಿಯನ್ನು ಕತ್ತರಿಸಿದನು. ಆಗ ಯೇಸು ಕತ್ತಿಯನ್ನು ಒರೆಯಲ್ಲಿ ಹಾಕು ಎಂದು ಹೇಳಿ ನಾನು ನನ್ನು ತಂದೆಯನ್ನು ಬೇಡಿಕೊಳ್ಳಲಾರೆನೆಂದೂ, ಬೇಡಿಕೊಡರೆ ಆತನು ನನಗೆ ಇದೀಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚಾಗಿ ದೇವದೂತರನ್ನು ಕಳುಹಿಸಿಕೊಡುವುದಿಲ್ಲವೆಂದು ನೆನೆಸುತ್ತೀಯಾ? ಎಂದನು. ಈ ಮಾತನ್ನಾಡುತ್ತಿರುವಾಗ ದೂತರೆಲ್ಲರ ಮುಖಭಾವವು ಸಂಚಲನೆಗೊಂಡುದನ್ನು ನಾನು ಕಂಡೆನು. ತತ್ ಕ್ಷಣವೇ ತಮ್ಮ ಅಧಿಪತಿಯನ್ನು ಸುತ್ತುವರಿದು ಕ್ರೋಧಿತ ಜನರ ಹಿಂಡನ್ನು ಚದುರಿಸಲು ಇಚ್ಚಿಸಿದರು; ಕಳುಹಿಸಿಕೊಟ್ಟರೆ ನನಗೆ ಇಂಥಿಂಥದ್ದು ಆಗಬೇಕೆಂಬುವುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ ?ಎಂದು ಯೇಸು ಹೇಳಿದಾಗ ದೂತರ ಮುಖವು ಸಪ್ಪಗಾದವು. ಯೇಸುವು ಇದೆಲ್ಲಾ ಸಂಭವಿಸಲು ಅನುಮತಿ ನೀಡಿದಾಗ ಶಿಷ್ಯರ ಹೃದಯವು ನಿರಾಶೆಯಿಂದ ಕುಂದಿಹೋಯಿತು.GCKn 63.1

    ಶಿಷ್ಯರು ಪ್ರಾಣಭಯದಿಂದ ಒಬ್ಬೊಬ್ಬರೂ ಅತ್ತಿತ್ತ ಚದುರಿ ಹೋದರು. ಯೇಸು ಒಂಟಿಯಾದನು. ಓಹ! ಆಗ ಸೈತಾನನ ವಿಜಯೋತ್ಸಾಹವೇನು! ದೇವದೂತರಲ್ಲಿ ದುಃಖ ತುಮುಲ ಉಂಟಾಯಿತು. ಹಲವಾರು ದೇವದೂತಗಣಗಳು ಗಣಕ್ಕೊಬ್ಬ ಎತ್ತರವಾದ ಪ್ರಧಾನದೂತರೊಡನೆ ಈ ದೃಶ್ಯವನ್ನು ವೀಕ್ಷಿಸಲು ಕಳುಹಿಸಲಾಯಿತು. ದೇವಕುಮಾರನ ಮೇಲಾಗುವ ಪ್ರತಿಕ್ರಿಯೆ, ಅಪಮಾನ, ಮತ್ತು ಕ್ರೂರತ್ವವನ್ನು ಅವರು ದಾಖಲಿಸಬೇಕಾಗಿತ್ತು, ಯೇಸು ಅನುಭವಿಸುವ ಪ್ರತಿ ಆತಂಕದ ಕ್ಷಣವನ್ನು ನಮೂದಿಸಬೇಕಾಗಿತ್ತು, ಏಕೆಂದರೆ ಮನುಷ್ಯರು ಇದೆಲ್ಲವನ್ನು ಜೀವಪಾತ್ರರಲ್ಲಿ ಮತ್ತೊಮ್ಮ ಕಾಣಬೇಕಾಗಿತ್ತು.GCKn 63.2

    ಓದಿ: ಮತ್ತಾಯ 26:1-56; ಮಾರ್ಕ 14:1-52 ; ಲೂಕ 22:1-46 ; ಯೋಹಾನ ಅಧ್ಯಾಯ 11, 12:1-11, 18:1-12GCKn 64.1

    Larger font
    Smaller font
    Copy
    Print
    Contents