Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 13. - ಸ್ತೆಫೆನನ ಮರಣವು

    ಯೆರುಸಲೇಮಿನಲ್ಲಿ ಶಿಷ್ಯರ ಸಂಖ್ಯೆಯು ಬೆಳೆಯುತ್ತಾ ಹೋಯಿತು. ದೇವರ ವಾಕ್ಯವು ಪ್ರಬಲವಾಯಿತು. ಯಾಜಕರಲ್ಲಿ ಬಹುಜನರು ಕ್ರಿಸ್ತನಂಬಿಕೆಗೆ ವಿಧೇಯರಾದರು. ಸ್ತೆಫನನು ನಂಬಿಕೆಯಲ್ಲಿ ತುಂಬಿದವನಾಗಿ ಜನರ ಮದ್ಯೆದಲ್ಲಿ ಅದ್ಬುತಕಾರ್ಯ, ಸೂಚಾಕಕಾರ್ಯಗಳನ್ನು ಮಾಡುವವನಾದನು. ಯಾಜಕರು ಸಂಸ್ಕಾರಗಳನ್ನು, ಬಲಿ ಕಾಣಿಕೆಗಳನ್ನು ತೊರೆದು ಯೇಸುವೇ ಮಹಾಬಲಿ ಎಂದು ಅಂಗೀಕರಿಸುತ್ತಿದ್ದುದು ಬಹುಜನರಲ್ಲಿ ಕೋಪವನ್ನೆಬ್ಬಿಸಿ. ಸ್ತೆಫೆನನು ಪರಲೋಕ ಬಲವನ್ನು ಪಡೆದು ಯಾಜಕರನ್ನೂ ಹಿರಿಯರನ್ನೂ ಖಂಡಿಸುತ್ತಾ ಅವರ ಮುಂದೆ ಯೇಸುವನ್ನು ಮಹಿಮೆಗೊಳಿಸುತ್ತಿದ್ದನು. ಅವನು ಬೋಧಿಸುತ್ತಿದ್ದ ಜ್ಞಾನ ಮತ್ತು ಶಕ್ತಿಯನ್ನು ಅವರು ಸಹಿಸಲಿಲ್ಲ. ಅವನ ವಿರುದ್ದ ಹೇಳಲು ಯಾವ ಕಾರಣವೂ ಸಿಗದಿರಲು - ಇವನು ದೇವರಿಗೆ ವಿರೋಧವಾಗಿಯೂ ಮೋಶೆಗೆ ವಿರೋಧವಾಯೂ ದೂಷಣೆಯ ಮಾತುಗಳನ್ನಾಡುವುದನ್ನು ನಾವು ಕೇಳಿದ್ದೇವೆಂದು ಹೇಳಲು, ಸುಳ್ಳು ಪ್ರಮಾಣ ಮಾಡಲು ಜನರನ್ನು ಬಾಡಿಗೆಗೆ ಹಿಡಿದರು .ಅವರು ಜನರನ್ನು ಕೆರಳಿಸಿ ಸುಳ್ಳುಸಾಕ್ಷಿ ಸೃಷ್ಟಿಸಿ ಸ್ತೆಫೆನನನ್ನು ಹಿಡಿದು ದೇವಾಲಯಕ್ಕೂ ಧರ್ಮಶಾಸ್ತ್ರಕ್ಕೂ ವಿರೋದವಾಗಿ ಮಾತಾಡುವನು ಎಂದು ಹೇಳಿದರು. ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ, ಮೋಶೆ ನಮಗೆ ನೇಮಿಸಿರುವ ಆಚಾರವನ್ನು ಬೇರೆಮಾಡುವನೆಂಬುವುದಾಗಿ ಹೇಳುವುದನ್ನು ನಾವು ಕೇಳಿದ್ದೇವೆ ಅಂದರು.GCKn 115.1

    ಹಿರೀಸಭೆಯಲ್ಲಿ ಕೂತಿದ್ದವರೆಲ್ಲರೂ ಸ್ತೆಫೆನನ ರೂಪವು ದಿವ್ಯಪ್ರಕಾಶದಿಂದ ಹೊಳೆಯುತ್ತಿದ್ದುದನ್ನು ಕಂಡರು. ಅದು ದೇವದೂತನ ಮುಖದಂತೆ ಪ್ರಜ್ವಲಿಸುತ್ತಿತ್ತು. ಅವನು ಪೂರ್ಣನಂಬಿಕೆಯಿಂದಲೂ, ಪವಿತ್ರತ್ಮಾದಿಂದಲೂ ತುಂಬಿದವನಾಗಿ ಪ್ರವಾದಿಗಳಿಂದ ಮೊದಲುಗೊಂಡು ಯೇಸುವಿನ ಬರುವಣದವರೆಗೂ ಆತನ ಕ್ರೂಜಾಮರಣ, ಆತನ ಪುನರುತ್ಥಾನ, ಆತನ ಆರೋಹಣದ ಬಗ್ಗೆ ಹೇಳುತ್ತಾ ದೇವರು ಕೈಗಳಿಂದ ಕಟ್ಟಿದ ದೇವಾಲಯದಲ್ಲಿ ವಾಸಿಸುವುದಿಲ್ಲ ಎಂದು ಹೇಳಿದನು. ಅವರು ದೇವಾಲಯಗಳನ್ನು ಆರಾಧಿಸುತ್ತಿದ್ದರು. ದೇವರ ವಿರೋಧವಾಗಿ ಮಾತನಾಡುವುದಕ್ಕಿಂತಲೂ, ದೇವಾಲಯದ ವಿರುಧ್ದ ಹೆಚ್ಚಾಗಿ ಏನಾದರು ಮಾತನಾಡಿದರೆ ಅದು ಅವರಿಗೆ ರೋಷ ತಂದು ಕೆರಳಿಸುತ್ತಿತ್ತು. ಈ ಜನರು ದುಷ್ಟರಾಗಿದು ಹೃದಯ ಸುನ್ನತಿಯಿಲ್ಲದವರಾಗಿರುವುದರಿಂದ ಸ್ತೆಫೆನನು ಪರಲೋಕದ ಧರ್ಮರೋಷದಿಂದ ಘೋಷಿಸಿದನು ನೀವು ಯಾವಾಗಲೂ ಪವಿತ್ರತ್ಮಾನನ್ನು ಎದುರಿಸುವವರಾಗಿದ್ದೀರಿ ಎಂದನು. ಅವರ ಹೃದಯವು ಮಲಿನವಾಗಿ ಗಾಢ ದುಷ್ಟತನದಿಂದ ತುಂಬಿಕೊಂಡು ಬರೀ ತೋರಿಕೆಯ ಆಚಾರಗಳಲ್ಲಿ ತೊಡಗಿದ್ದರು. ಪ್ರವಾದಿಗಳನ್ನು ಹಿಂಸೆಪಡಿಸಿದ ಅವರ ಪೂರ್ವಿಕರ ವಿಚಾರವನ್ನು ಸ್ತೆಫೆನನು ನೆನಪುಮಾಡಿಸುತ್ತಾ ಹೇಳಿದ್ದೇನೆಂದರೆ, ನೀತಿಸ್ವರೂಪನ ಆಗಮನದ ವಿಷಯ ಮುಂತಿಳಿಸಿದವರನ್ನು ಅವರು ಕೊಂದರು, ನೀವು ಈಗ ಅತನನ್ನು ಹಿಡಿದು ಕೊಟ್ಟು ಕೊಲೆಗಾರರಾದಿರಿ ಎಂದನು.GCKn 116.1

    ಸರಳವಾಗಿದ್ದರೂ ತೀಕ್ಷ್ಣ ಸತ್ಯವು ನುಡಿಯಲ್ಪಡಲು ಮಹಾಯಾಜಕರು ಅಧಿಪತಿಗಳೂ ರೌದ್ರರಾದರು; ಅವರು ಸ್ತೆಫೆನನ ಮೇಲೆ ಬಿದ್ದರು. ಪರಲೋಕ ಪ್ರಭಾವವು ಅವನ ಮೇಲೆ ಸುರಿಯಿತು, ಆಕಾಶದ ಕಡೆಗೆ ದೃಷ್ಟಿಸಿ ನೋಡಿವಾಗ ದೇವರ ಪ್ರಭಾವವನ್ನು ಸ್ತಫನನು ಕಂಡನು. ಮತ್ತು ಅವನ ಸುತ್ತಲೂ ದೂತರು ಹಾರಾಡುತ್ತಿದ್ದರು . ಅದನ್ನು ನೋಡುತ್ತಾ — ಆಗೋ, ಆಕಾಶವು ತೆರೆದಿರುವುದನ್ನೂ, ಮನಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವುದನ್ನು ನೋಡುತ್ತೇನೆ ಎಂದು ಘೋಷಿಸಿದನು. ಜನರು ಮಾತಿಗೆ ಕಿವಿಗೊಡಲಿಲ್ಲ, ಅವರು ಮಹಾಶಬ್ದದಿಂದ ಕೂಗಿ ಕಿವಿಗಳನ್ನು ಮುಚ್ಚಿಕೊಂಡು ಒಟ್ಟಾಗಿ ಅವನ ಮೇಲೆ ಬಿದ್ದು ಊರಹೊರಗೆ ನೂಕಿಕೊಂಡು ಹೋಗಿ ಕಲ್ಲೆಸೆದರು, ಆಗ ಸ್ತೆಫನನು, ಮೊಣಕಾಲೂರಿ’ ಕರ್ತನೆ ಈ ಪಾಪವನ್ನು ಅವರಮೇಲೆ ಹೊರಿಸಬೇಡ’ ಎಂದು ಮಹಾಶಬ್ದದಿಂದ ಕೂಗಿದನು.GCKn 117.1

    ಸ್ತೆಫೆನನು ದೇವರ ಮಹಾಪ್ರಬಲ ಮನುಷ್ಯನಾಗಿದ್ದು ಸಭೆಯಲ್ಲಿ ಪ್ರಮುಖ ಸ್ಥಾನವನ್ನು ತುಂಬಿಲು ವಿಶೇಷವಾಗಿ ಆರಿಸಲ್ಪಟ್ಟಿದ್ದನ್ನು ನಾನು ಕಂಡೆನು. ಇವನು ಕಲ್ಲೆಸೆದು ಕೊಲ್ಲಲ್ಪಟ್ಟಾಗ ಸೈತಾನನು ಹಿಗ್ಗುತ್ತಾ ವಿಜೃಂಭಿಸಿದನು; ಏಕೆಂದರೆ ಅವನ ನಿರುಪಸ್ಥಿತಿಯು ಶಿಷ್ಯರಿಗೆ ನಷ್ಟವುಂಟುಮಾಡುವುದು ಎಂಬುವುದು ಸೈತಾನನಿಗೆ ತಿಳಿದಿತ್ತು. ಆದರೆ ಸೈತಾನನು ವಿಜಯವು ಕ್ಷಣಮಾತ್ರದ್ದು; ಆ ದೊಡ್ಡಗುಂಪಿನ ಮದ್ಯದಲ್ಲಿ ಸ್ತೆಫೆನನ ಮರಣಕ್ಕೆ ಸಾಕ್ಷಿಯಾಗಿ ನಿಂತಿದ್ದವನಿಗೆ ಯೇಸುವು ತನ್ನನ್ನೇ ಪ್ರಕಟಿಸುವವನಾಗಿದ್ದನು. ಅವನ ಕಲ್ಲೆಸೆಯುವುದರಲ್ಲಿ ಆ ಮನುಷ್ಯನ ಪಾತ್ರವಿಲ್ಲದಿದ್ದರೂ ಸ್ತೆಫೆನ ಮರಣಕ್ಕೆ ಸಮ್ಮತಿಸುವವನಾಗಿದ್ದನು. ಸೌಲನು ದೇವರಸಭೆಯನ್ನು ಹಿಂಸೆಸುವುದರಲ್ಲಿ ಛಲವಾದಿಯಾಗಿದ್ದನು, ಅವರನ್ನು ಬೇಟೆತಾಡುತ್ತಾ, ಮನೆಮನೆಗೆ ಹೊಕ್ಕು ಸೆರೆಹಿಡಿಯುತ್ತಾ, ಅವರನ್ನು ಕೊಲ್ಲುವವರ ಕೈಗೆ ಒಪ್ಪಿಸುತ್ತಾ ಇದ್ದನು.GCKn 117.2

    ಸೈತಾನನು ಸೌಲನನ್ನು ಕಾರ್ಯಸಾಧಕನನ್ನಾಗಿ ಉಪಯೋಗಿಸುತ್ತಿದ್ದನು. ಅವನಿಂದ ಸೆರೆಹಿಡಿಯಲ್ಪಟ್ಟವರನ್ನು ಬಿಡಿಸಿಕೊಳ್ಳಲು ದೇವರು ಸೈತಾನನ ಶಕ್ತಿಯನ್ನು ಹೊಡೆಯಬಲ್ಲನು. ಸೌಲನು ವಿದ್ಯಾವಂತನಾಗಿದ್ದನು, ಸೈತಾನನು ಅವನ ತಲಾಂತುಗಳನ್ನು ದೇವಕುಮಾರನ ಹಾಗೂ ಆತನನ್ನು ನಂಬಿದವರ ವಿರುದ್ದ ಪ್ರತಿಭಟಿಸಲು ಪರಮೋತ್ಸಾಹದಿಂದ ಉಪಯೋಗಿಸಿದನು ಆದರೆ ಯೇಸು ಸೌಲನನ್ನು ಆತನ ಹೆಸರಿನಲ್ಲಿ ಬೋಧಿಸಲು ಶಿಷ್ಯರ ಕೆಲಸದಲ್ಲಿ, ಬಲಶಕ್ತಿ ನೀಡಲು ಮತ್ತು ಸ್ತೆಫೆನನ ಸ್ಥಳವನ್ನು ಅವನಿಗಿಂತ ಹೆಚ್ಚಾಗಿ ತುಂಬಲು ಆರಿಸಿಕೊಂಡನು. ಸೌಲನು ಯಹೂದ್ಯರಿಂದ ಮಹಾ ಉನ್ನತಸ್ಥಾನದಲ್ಲಿ ಇಡಲ್ಪಟ್ಟವನಾಗಿದ್ದನು. ಅವನ ಉತ್ಸಾಹ, ಪಾಂಡಿತ್ಯವೂ ಹೆಚ್ಚಾಗಿದ್ದ ಪ್ರಯುಕ್ತ ಶಿಷ್ಯರಲ್ಲಿ ಬಹು ಜನರು ಭಯಪಟ್ಟರು.GCKn 118.1

    ನೋಡಿ: ಅಪೋಸ್ತಲಕೃತ್ಯ ಅಧ್ಯಾಯ 6 ಮತ್ತು 7GCKn 118.2

    Larger font
    Smaller font
    Copy
    Print
    Contents