Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ 17. - ಮಹಾ ಧರ್ಮಭ್ರಷ್ಟತೆ

  ಆ ನಂತರ ನನ್ನನ್ನು, ವಿಗ್ರಹಾರಾಧಕರಾದ ಅನ್ಯಜನರು ಕ್ರೆಸ್ತರನ್ನು ಹಿಂಸಿಸಿ ಕೊಲ್ಲಲ್ಪಟ್ಟ ಕಾಲಘಟ್ಟಕ್ಕೆ ಕರೆದೊಯ್ಯಲಾಯಿತು. ಕುಲೀನರು, ಕಲಿತವರು, ಸಾಮನ್ಯವ್ಯಕ್ತಿಗಳೆಂದು ನೋಡದೆ ಎಲ್ಲರೂ ದಯತೋರಿಸದೆ ಕೊಲ್ಲಲ್ಪಟ್ಟರು. ರಕ್ತವು ದಾರಾಕಾರವಾಗಿ ಸುರಿಯಿತು. ಅವರ ಧರ್ಮಕ್ಕೆ ಒಳಗಾಗದಿರಲು, ಸಿರಿವಂತ ಕುಂಟುಂಬಗಳನ್ನೆಲ್ಲಾ ಬಡತನಕ್ಕೆ ಎಳೆಯಲಾಯಿತು. ಕ್ರೈಸ್ತರು ಆ ಘನಹಿಂಸೆ ಸಂಕಟ ಬಂದಾಗ್ಯ ಅದನ್ನುಸಹಿಸಿ ತಮ್ಮ ಸ್ಥಾನವನ್ನು ತಗ್ಗಿಸಿಕೊಳ್ಳಲಿಲ್ಲ. ತಮ್ಮ ಧರ್ಮವನ್ನು ಶುದ್ದವಾಗಿಯೇ ಇರುವಂತೆ ನೋಡಿಕೊಂಡರು. ದೇವಜನರು ಮಹಾಹಿಂಸೆಯಲ್ಲಿ ಸೈತಾನನು ವಿಜಯೋತ್ಸಾಹ ಪಡುತ್ತಿದ್ದುದನು ನಾನು ಕಂಡೆನು. ಆದರೆ ದೇವರು ಆ ಧರ್ಮಬಲಿಗಳನ್ನು ಬಹು ಮೆಚ್ಚಿಕೆಯಿಂದ ನೋಡಿದನು. ಆ ಭಯಂಕರ ಕಾಲದಲ್ಲಿದ್ದ ಕ್ರೈಸ್ತರು ಆತನ ಪ್ರೀತಿಗೆ ಪಾತ್ರರಾದರು; ಏಕೆಂದರೆ ಅವರು ಆತನಿಗಾಗಿ ಹಿಂಸೆಗೊಳಗಾಗಲು ಇಚ್ಚಿಸಿದರು. ಅವರು ಅನುಭವಿಸಿದ ಪ್ರತಿಹಿಂಸೆಯು ಪರಲೋಕದಲ್ಲಿ ಪ್ರತಿಫಲವನ್ನು ಹೆಚ್ಚಿಸಿತು. ಭಕ್ತರೆಲ್ಲಾ ಬಹು ಹಿಂಸೆಪಟ್ಟಾಗ್ಯೂ ಸೈತಾನನಿಗೆ ತೃಪ್ತಿಯಾಗಲಿಲ್ಲ. ಅವರ ತನು ಮನಗಳೆಲ್ಲದರ ಮೇಲಿನ ಹತೋಟಿಯನ್ನು ಅವನು ಅಪೇಕ್ಷಿದನು. ಕ್ರೈಸ್ತರ ಸಂಕಟ ಸಹಿಷ್ಣುತೆಯು ಅವರನ್ನು ದೇವರು ಸನ್ನಿಧಾನಕ್ಕೆ ಎಳೆದು, ಒಬ್ಬರನ್ನೊಬ್ಬರು ಪ್ರೀತಿಸುವಂತೆ ಮಾಡಿತು. ದೇವರನ್ನು ಉಲ್ಲಂಘಿಸದೆ ಇನ್ನೋ ಹೆಚ್ಚಾಗಿ ಭಯಭಕ್ತಿಯಿಂದಿರಲು ಪ್ರೇರಿಸಿತು. ಅವರು ದೇವರನ್ನು ಮೆಚ್ಚಿಕೊಳ್ಳದಂತೆ ನಡೆಸಲು ಸೈತಾನನು ಇಚ್ಚಿಸಿದನು; ಆಗ ಅವರು ಬಲ ದೃಢತೆ ಕಳೆದುಕೊಂಡು ದೃತಿಗೆಡುವರು ಅಂದುಕೊಂಡನು. ಅವರಲ್ಲಿ ಸಾವಿರಾರು ಮಂದಿ ಕೊಲ್ಲಲ್ಪಟ್ಟರು. ಈ ಕೊಲ್ಲಲ್ಪಟ್ಟವರ ಸ್ಥಳವನ್ನು ತುಂಬಲು ಇತರರು ಎದ್ದು ಬಂದರು. ಸೈತಾನನು, ತನ್ನ ಪ್ರಜೆಗಳನ್ನೆಲ್ಲಾ ಕಳೆದುಕೊಳ್ಳುತ್ತಿರುವುದನ್ನು ಕಂಡನು, ಅವರು ಹಿಂಸೆ ಮರಣವನ್ನು ಹೊಂದಿದಾಗ್ಯೂ ಕ್ರಿಸ್ತಯೇಸುವಿನಲ್ಲಿ ಭದ್ರವಾಗಿ ಆತನ ರಾಜ್ಯದ ಪ್ರಜೆಗಳಾದರು. ಸೈತಾನನು ಇನ್ನೂ ದೇವರರಾಜ್ಯದ ಎದುರಾಗಿ ಹೋರಾಡಿ ವಿಜಯಿಯಾಗಲು ಪ್ರಮುಖವಾದ ಯೋಜನೆ ಹಾಕಿಕೊಂಡು ಸಭೆಯನ್ನು ಛಿದ್ರಗೊಳಿಸಬೇಕೆಂದಿದ್ದನು.ಆದರಿಂದ ಆ ವಿಗ್ರಹಾರಾಧಾಕ ಅನ್ಯಜನರು ಕ್ರೈಸ್ತ ನಂಬಿಕೆಯ ಒಂದು ಭಾಗವನ್ನು ಅಂಗೀಕರಿಸುವಂತೆ ಅವನು ಪ್ರೇರೇಪಿಸಿದನು. ಹೃದಯ ಪರಿವರ್ತನೆಮಾಡಿಕೊಳ್ಳದೆ ಕ್ರಿಸ್ತನ ಕ್ರೂಜಾಮರಣವನ್ನೂ ಮತ್ತು ಪುನರುತ್ಥಾನವನ್ನೂ ನಂಬುತ್ತೇವೆ ಎಂಬ ಹೊರತೋರಿಕೆಯಿಂದ ಯೇಸುವಿನ ಅನುಯಾಯಿಗಳೂಂದಿಗೆ ಸೇರಿಕೊಂಡರು. ಓಹ! ಇದು ಸಭೆಗೆ ಭಯಾನಕವಾದ ಅಪಾಯ! ಇದು ಮಾನಸಿಕ ಅತಂಕದ ಸಮಯವಾಯಿತು ಕೆಲವರು ಇಂತಹ ಭಾಗಷಃ ಕ್ರೈಸ್ತರಾದ ವಿಗ್ರಹಾರಾಧಕರ ನಂಬಿಕೆಯೊಂದಿಗೆ ಐಕ್ಯವಾದರೆ, ಅದು ತಮ್ಮ ಪರಿವರ್ತನೆಗೆ ಸಾಧನವಾಗುತ್ತದೆಂದುಕೊಂಡುರು. ಸೈತಾನನು, ಸತ್ಯವೇದದ ತತ್ವಗಳನ್ನು ಮಲಿನಗೊಳಿಸಲು ನೋಡಿದನು. ಕೊನೆಗೆ ನಾನು, ಕ್ರೈಸ್ತೀಯ ಸ್ಥಿತಿಗತಿಯು ಮಟ್ಟವಾದುದ್ದನ್ನೂ, ಅನ್ಯರು ಕ್ರೈಸ್ತರೊಂದಿಗೆ ಬೆರೆತುಕೊಂಡುದನ್ನು ನಾನು ಕಂಡೆನು. ಈ ಜನರು ಕ್ರೈಸ್ತರೆಂದು ಸಾಧಿಸಿದರೂ ವಿಗ್ರಹಾರಾಧಕರಾಗಿದ್ದವರಾದ ಕಾರಣ ವಿಗ್ರಹಾರಾಧನೆಯನ್ನು ತಮ್ಮೊಂದಿಗೆ ತಗೆದುಕೊಂಡು ಬಂದರು. ತಮ್ಮ ಆರಾಧನೆಯ ಜ್ಞೇಯವಸ್ತುವನ್ನು ಮಾತ್ರ ಬದಲಿಸಿದರು. ಸಂತರ ವಿಗ್ರಹಗಳಿಗೆ, ಯೇಸುವಿನ ವಿಗ್ರಹಕ್ಕೆ ಮತ್ತು ಮಾತೆ ಮರಿಯಳಿಗೆ ಬದಲಾಯಿಸಿದರು. ಕ್ರೈಸ್ತರು ಬರೂಬರುತ್ತಾ ಅವರೊಂದಿಗೆ ಮಿಳಿತವಾದರು, ಕ್ರೈಸ್ತದರ್ಮವು ಕಲುಷಿತವಾಯಿತು. ಸಭೆಯು ತನ್ನೆಲ್ಲಾ ಪರಿಶುದ್ದತೆ ಮತ್ತು ಪ್ರಭಾವವನ್ನು ಕಳೆದು ಕೊಂಡಿತು. ಕೆಲವರು ಮಾತ್ರ ಅವರೊಂದಿಗೆ ಸೇರಿಕೊಳ್ಳಲು ನಿರಾಕರಿಸಿ ತಮ್ಮ ಪವಿತ್ರತೆಯನ್ನು ಉಳಿಸಿಕೊಂಡು ದೇವರನ್ನು ಮಾತ್ರ ಆರಾಧಿಸಿದರು. ಪರಲೋಕದ ಅಥವಾ ಭೂಲೋಕದಲ್ಲಿರುವ ಯಾವ ವಿಗ್ರಹಗಳಿಗೂ ಅವರು ತಲೆಬಾಗಲಿಲ್ಲ .GCKn 137.1

  ಈ ಬದಲಾಣೆಯಲ್ಲಿ ಸೈತಾನನು ಹರ್ಷಗೊಂಡನು; ಬಿದ್ದುಹೋದ ಸಭೆಯನ್ನು, ಧಾರ್ಮಿಕ ಪಾವಿತ್ರತೆಯನ್ನು ಕಾಪಡಿಕೊಂಡವರ ಮೇಲೆ ಇತರರನ್ನು ಹುರಿದುಂಬಿಸಿದನು; ಅವರು ತಮ್ಮ ಆಚರಣೆಗಳನ್ನು ಅಂಗೀಕರಿಸಿ ವಿಗ್ರಹಾರಾಧನೆಗೆ ಒಳಗಾಗಬೇಕು ಇಲ್ಲವೇ ಸಾವಿಗೆ ಶರಣಾಗಬೇಕಾಯಿತು. ಯೇಸುಕ್ರಿಸ್ತನ ಸಭೆಯ ಮೇಲೆ ಹಿಂಸೆಯ ದಳ್ಳುರಿ ಎಬ್ಬಿಸಲ್ಪಟ್ಟು ಕೋಟ್ಯಾನುಕೋಟಿ ಜನರನ್ನು ಕರುಣೆಯಿಲ್ಲದೆ ಕೊಚ್ಚಿಹಾಕಲಾಯಿತು. ಈ ಕೆಳಕಂಡಂತೆ ನನ್ನ ಮುಂದೆ ತೋರಿಸಲಾಯಿತು; ವಿಗ್ರಹಾರಾಧಕರಾಗಿದ್ದ ಬಹು ಜನರು, ಸೂರ್ಯ, ಚಂದ್ರ ಮತ್ತು ನಕ್ಷತ್ರದ ಚಿತ್ರವನ್ನು ಹೊಂದಿದ್ದ ಕಪ್ಪು ದ್ವಜವನ್ನು ಹಿಡಿದಿದ್ದರು. ಆ ಗುಂಪು ಉಗ್ರಕೋಪದಿಂದ ಕೊಡಿತ್ತು. ಮತ್ತೊಂದು ಜನರ ಗುಂಪನ್ನು ನನಗೆ ತೋರಿಸಲಾಯಿತು ಅದು ಬಿಳಿಧ್ವಜವನ್ನು ಹೊಂದಿದ್ದು, ಅದರಲ್ಲಿ ಕರ್ತನಿಗೆ ಪವಿತ್ರತೆ ಹಾಗೂ ಪರಿಶುದ್ದತೆ ಎಂದು ಬರೆಯಲಾಯಿತು. ಆಜನರ ಮುಖದಲ್ಲಿ ದೃಡತೆಯಿದ್ದು ಪರಲೋಕದ ಒಪ್ಪಿಗೆಯ ಗುರುತು ಕಂಡುಬಂದಿತು. ವಿಗ್ರಹಾರಾಧಕ ಅನ್ಯಜನರು ಇವರ ಹತ್ತಿರ ಬಂದರು ಮತ್ತು ಮಹಾ ಸಂಹಾರಬಲಿ ನಡೆದದ್ದನು ನಾನು ಕಂಡೆನು. ಅವರು ಮುಂದೆ ಕ್ರೈಸ್ತರು ಕರಗಿ ಹೋದರು. ಅದರೂ ಸಹ ಅವರ ಗುಂಪು ಒತ್ತಾಗಿ ಕೂಡಿಕೊಂಡು ತಮ್ಮ ಧ್ವಜವನ್ನು ದೃಡವಾಗಿ ಹಿಡಿದರು. ಬಹು ಜನರು ಬೀಳುತ್ತಿದ್ದರೂ, ಇತರರು ಅವರ ಸುತ್ತುವರಿದು ಧ್ವಜದೂಂದಿಗೆ ಆ ಸ್ಥಳವನ್ನು ಆಕ್ರಮಿಸಿಕೊಂಡರು.GCKn 139.1

  ವಿಗ್ರಹಾರಾಧಕರ ಗುಂಪು ತಮ್ಮತಮ್ಮೊಳಗೆ ವಿಚಾರಣೆ ನಡೆಸುತ್ತಿದ್ದುದನ್ನು ನಾನು ಕಂಡೆನು, ಕ್ರೈಸ್ತರು ತಲೆಬಾಗುವಂತೆ ಮಾಡುವುದರಲ್ಲಿ ಅವರು ಸೋತುಹೋದರು, ಮತ್ತೊಂದು ಯೋಜನೆಯನ್ನು ಕಾರ್ಯಗತಗೊಳ್ಳಿಸಲು ಯೋಚಿಸಿದರು. ಅವರು ತಮ್ಮ ಧ್ವಜಪಟ್ಟಿಯನ್ನು ಕೆಳಗಿಳಿಸಿ ದೃಡವಾದ ಕ್ರೈಸ್ತಗುಂಪಿನವರು ಬಳಿಸಾರಿ ಪರ್ಯಾಲೋಚನೆಯನ್ನು ಮುಂದಿಟ್ಟರು. ಮೊಟ್ಟಮೊದಲು ಪ್ರಸ್ತಾಪವು ಬಹುವಾಗಿ ತಿರಸ್ಕರಿಸಲ್ಪಟ್ಟಿತು, ಮತ್ತೆ ನಾನು ಶುದ್ದ ಕ್ರೈಸ್ತರ ತಂಡವು ತಮ್ಮೊಳಗೆ ಪ್ರಸ್ತಾಪಿಸಿಕೊಳ್ಳುವುದನ್ನು ಕಂಡೆನು. ಕೆಲವರು ತಮ್ಮ ಧ್ವಜವನ್ನು ಇಳಿಸಿ, ಅವರ ಯೋಚನೆಗೆ ಒಡಂಬಟ್ಟು, ಪ್ರಾಣವನ್ನು ಉಳಿಸಿಕೊಳ್ಳೋಣ ಎಂದರು. ಆದರೆ ಕೊನೆಗೆ ಶಕ್ತಿಯನ್ನು ಕೂಡಿಸಿಕೊಂಡು ವಿಗ್ರಹಾರಾಧಕರ ಮದ್ಯೆ ಧ್ವಜವನ್ನು ಎತ್ತಿ ಹಿಡಿಯೋಣ ಎಂದುಕೊಂಡರು ಮತ್ತೆ ಕೆಲವರು ಈ ಯೋಜನೆಗೆ ಸ್ವಲ್ಪವು ಒಳಗಾಗದೆ ತಮ್ಮ ಧ್ವಜವನ್ನು ಎತ್ತಿ ಹಿಡಿದಂತೆಯೇ ಸಾಯಲು ನಿರ್ಧರಿಸಿದರು. ಆ ನಂತರ ಕೆಲವು ಕ್ರೈಸ್ತರ ತಂಡವು ತಮ್ಮ ಧ್ವಜವನ್ನಿಳಿಸಿ ಅವರೊಂದಿಗೆ ಒಂದಾಗುವುದನ್ನು ನಾನು ಕಂಡೆನು; ಆ ಸಮಯದಲ್ಲಿ ಗಟ್ಟಿಯಾಗಿ ದೃಡಮನಸ್ಸಿನಿಂದಿದ್ದವರು ಅವರ ಧ್ವಜವನ್ನು ಸೆಳೆದು ಎಟ್ಟಿಹಿಡಿದುಕೊಡರು. ಪರಿಶುದ್ದ ಧ್ವಜಹಿಡಿದ ಕ್ರೈಸ್ತ ತಂಡದ ಪಕ್ಷದಿಂದ ಜನರು ಒಬ್ಬೊಬ್ಬರಾಗಿ ಹೊರಬರುತ್ತಾ ಕಪ್ಪು ಧ್ವಜ ಹಿಡಿದವರೊಂದಿಗೆ ಒಂದಾಗಿ ಬಿಳಿಧ್ವಜದವರನ್ನು ಹಿಂಸಿಸಿದರು. ಬಹುಮಂದಿಯನ್ನು ಸಂಹಾರ ಮಾಡಿದರು; ಆದರೂ ಸಹ ಬಿಳಿಧ್ವಜವು ಎತ್ತಿಹಿಡಿಯಲ್ಪಟ್ಟು ಜನರು ಪುನಃವ್ಯೂಹ ರಚಿಸಿ ಎದ್ದು ನಿಂತಿದ್ದನ್ನು ನಾನು ದರ್ಶಿಸಿದೆನು.GCKn 140.1

  ಯೇಸುವಿನ ವಿರುದ್ಧ ಅನ್ಯಜನರನ್ನು ಪ್ರಥಮವಾಗಿ ರೊಚ್ಚಿಗೆಬ್ಬಿಸಿದ ಯಹೂದ್ಯರು ತಪ್ಪಿಸಿಕೊಳ್ಳಲಾಗಲಿಲ್ಲ. ನ್ಯಾಯಸಭೆಯಲ್ಲಿ ಕೋಪಗೊಂಡ ಯಹೂದ್ಯರು ಕೂಗುತ್ತಾ ಪಿಲಾತನು ಯೇಸುವನ್ನು ದೋಷಾರೋಪಣೆ ಹೊರಿಸಲು ಹಿಂದಾದಾಗ, ಆತನ ರಕ್ತವು ನಮ್ಮ ಮೇಲೆಯೂ, ನಮ್ಮ ಮಕ್ಕಳ ಮೇಲೆಯೂ ಇರಲಿ ಎಂದು ಘೋಷಿಸಿದ್ದರು. ಈ ಶಾಪವು ತಮ್ಮತಲೆಯ ಮೇಲೆ ಎರಗುವುದನ್ನು ಯಹೂದ್ಯ ಜನಾಂಗವು ಅನುಭವಿಸಿತು ಅನ್ಯಜನರೂ, ಕ್ರೈಸ್ತರೆನಿಸಿಕೊಂಡವರೂ ಯಹೂದ್ಯರಂತೆ ಶತೃಗಳೆ ಆದರು. ಯಹೂದ್ಯರು ಯೇಸುವನ್ನು ಕ್ರೂಜೆಗೆ ಹಾಕಿದರು. ತೋರಿಕೆ ಕ್ರೈಸ್ತರು ಕ್ರಿಸ್ತನ ಶಿಲುಬೆಯಲ್ಲಿ ಶ್ರದ್ದೆ ಹೊಂದಿದವರಾಗಿ ಯೋಚಿಸಿದ್ದೇನೆಂದರೆ, ಹೆಚ್ಚು ಹೆಚ್ಚು ಸಂಕಟವನ್ನು ತಮ್ಮ ಮೇಲೆ ತಂದುಕೊಂಡರೆ ಹೆಚ್ಚುಹೆಚ್ಚಾಗಿ ದೇವರನ್ನು ಮೆಚ್ಚಿಸಬಹುದು ಎಂದುಕೊಂಡರು. ಆದರೆ ಅಪನಂಬಿಕೆಯುಳ್ಳ ಬಹು ಜನ ಯಹೂದ್ಯರು ಸಂಹರಿಸಲ್ಪಟ್ಟರು. ಕೆಲವರು ಸ್ಥಳದಿಂದ ಸ್ಥಳಕ್ಕೆ ಅಟ್ಟಾಡಿಸಲ್ಪಟ್ಟರು. ಅಲ್ಲದೆ ಎಲ್ಲಾ ವಿಧದಲ್ಲಿಯೂ ಶಿಕ್ಷಿಸಲ್ಪಟ್ಟರು.GCKn 141.1

  ಕೊಲ್ಲಲ್ಪಟ್ಟ ಕ್ರಿಸ್ತನ ಹಾಗೂ ಶಿಷ್ಯರ ರಕ್ತವು ಅವರ ಮೇಲಿತ್ತು, ಅವರು ಭಯಂಕರವಾದ ನ್ಯಾಯವಿಚಾರಣೆಗೆ ಒಪ್ಪಿಸಲ್ಪಟ್ಟರು. ಅವರನ್ನು ದೇವರ ಶಾಪವು ಹಿಂಬಾಲಿಸಿ ಅನ್ಯಜನರು ಹಾಗೂ ಕ್ರೈಸ್ತರ ಗಾದೆಮಾತಿಗೆ ಮತ್ತು ಅಪಹಾಸ್ಯಕ್ಕೆ ಒಳಗಾದರು. ಕಾಯಿನನ ಮುದ್ರೆಮೇಲಿದೆಯೇನೋ ಎಂಬಂತೆ ಅವರು ಬಹಿಷ್ಕರಿಸಲ್ಪಟ್ಟು, ಹೀನೈಕೆಗೊಳ್ಳಗಾಗಿ ಅಸಹ್ಯಪಡುವಂತಾದರು ಆದರೂ ದೇವರು ಅವರನ್ನು ಅದ್ಬುತವಾಗಿ ರಕ್ಷಿಸಿ ಇಡೀ ಲೋಕದಲ್ಲಿ ಚದುರಿಸಿ ದೇವರಿಂದ ಶಾಪಗ್ರಸ್ತರಾದವರೆಂದು ವಿಶೇಷವಾಗಿ ಕಾಣುವಂತೆ ಮಾಡಿದುದನ್ನು ನಾನು ಕಂಡೆನು. ಜನಾಂಗವಾಗಿ ದೇವರು ಯಹೂದ್ಯರನ್ನು ತ್ಯಜಿಸಿದುದನ್ನು ನಾನು ಕಂಡೆನು; ಆದರೂ ಅವರಲ್ಲಿ ಕೆಲವರು ತಮ್ಮ ಹೃದಯದ ತೆರೆಯ ಕೆಲವು ಭಾಗವನ್ನು ಹರಿದುಕೊಂಡುರು. ಅವರನ್ನು ಸಂಬಂಧಿಸಿದಂತೆ ಪ್ರವಾದನೆ ನೆರವೇರಿರುವುದನ್ನು ಇನ್ನೂ ಕಂಡುಕೊಳ್ಳುವವರು ಅವರಲ್ಲಿದ್ದಾರೆ. ಯೇಸುವನ್ನು ಲೋಕರಕ್ಷಕನನ್ನಾಗಿ ಅಂಗೀಕರಿಸುತ್ತಾರೆ, ಯೇಸುವನ್ನು ತಿರಸ್ಕರಿಸಿ, ಕ್ರೂಜೆಗೆ ಜಡಿಸಿದ ತಮ್ಮೆಜನರ ಪಾಪವನ್ನು ಕಾಣುವವರಿದ್ದಾರೆ. ಯಹೂದ್ಯರಲ್ಲಿ ವ್ಯಕ್ತಿಗಳು ಪರಿವರ್ತನೆ ಹೊಂದುತ್ತಾರಾದರೂ ಜನಾಂಗವಾಗಿ ದೇವರಿಂದ ಎಂದೆಂದಿಗೂ ತ್ಯಜಿಸಲ್ಪಟ್ಟಿದ್ದಾರೆ.GCKn 142.1