Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 18. - ಪಾಪದ ರಹಸ್ಯ

    ಜನರ ಮನಸ್ಸನ್ನು ಯೇಸುವಿನಿಂದ ಮನುಷ್ಯನ ಕಡೆಗೆ ಸೆಳೆಯುವುದು ಹಾಗೂ ವೈಯಕ್ತಿಕ ಹೊಣೆಯನ್ನು ನಾಶಪಡಿಸುವುದು ಸೈತಾನನ ಸಂಕಲ್ಪವಾಗಿತ್ತು. ಅವನು ದೇವಕುಮಾರನನ್ನು ಶೋಧನೆಗೆ ಒಳಪಡಿಸಿದಾಗ ಆತನ ಸಂಕಲ್ಪಕ್ಕೆ ಸೋಲಾಯಿತು. ಅವನು ಜಾರಿಬಿದ್ದ ಮನುಷ್ಯನೆಡೆಗೆ ಬಂದಾಗ ಜಯಗಳಿಸಿದನು. ಕ್ರೈಸ್ತೀಯ ತತ್ವವು ಕಲುಷಿತವಾದವು. ಪೋಪನೂ ಪಾದ್ರಿಗಳು ಆ ಮಹಿಮಾ ಸ್ಥಾನವನ್ನು ಆಕ್ರಮಿಸಿಕೊಂಡರು. ತಮಗಾಗಿ, ತಮ್ಮ ಪಾಪ ಕ್ಷಮಾಪಣೆಗಾಗಿ ಕ್ರಿಸ್ತನೆಡೆಗೆ ನೋಡುವುದರ ಬದಲು ತಮ್ಮಡೆಗೆ ಬರಬೇಕೆಂದು ಜನರಿಗೆ ಬೋಧಿಸಿದರು. ಅವರನ್ನು ಖಂಡಿಸುವ ಸತ್ಯವನ್ನು ಮುಚ್ಚಿಡಲು ಸತ್ಯವೇದವನ್ನು ಅವರಿಂದ ದೂರವಿಟ್ಟರು.GCKn 144.1

    ಜನರು ಪರಿಪೂರ್ಣವಾಗಿ ವಂಚಿಸಲ್ಪಟ್ಟರು. ಪೋಪನೂ ಪಾದ್ರಿಗಳು ಕ್ರಿಸ್ತನ ಪ್ರತಿನಿಧಿಗಳೆಂಬುದಾಗಿ ಭೋಧಿಸಲಾಯಿತು, ಆದರೆ ಸತ್ಯವೆಂದರೆ ಅವರೆಲ್ಲಾ ಸೈತಾನನಪ್ರತಿನಿಧಿಗಳು; ಮತ್ತು ಅವರಿಗೆ ತಲೆಬಾಗಿದಾಗ, ಸೈತಾನನನ್ನು ಆರಾಧಿಸಿದರು, ಜನರು ಪವಿತ್ರವೇದವನ್ನು ಅಪೇಕ್ಷಿಸಿದರು; ಅದರೆ ಅವರು, ದೇವವಾಕ್ಯವನ್ನು ಜನರು ತಾವಾಗಿಯೇ ಓದಿ ಅರ್ಥಮಾಡಿಕೊಳ್ಳುವುದು ಅಪಾಯಕರವೆಂದು ಪಾದ್ರಿಗಳು ಯೋಚಿಸಿದರು, ಏಕೆಂದರೆ ಅವರಿಗೆ ಜ್ಞಾನೋದಯವಾಗಿ ತಮ್ಮ ಪಾಪಗಳು ಗೋಚರಿಸಲ್ಪಡುವುದು. ಜನರು ಈ ವಂಚಕರ ಕಡೆಗೆ ನೋಡುವವರಾಗಿ, ತಮ್ಮ ಬಾಯಿಂದ ಬರುವ ಮಾತುಗಳು ದೇವರ ಮಾತುಗಳೆಂದು ಅವರಿಗೆ ಬೋಧಿಸಿದರು. ದೇವರು ಮಾತ್ರವೇ ಮನಸ್ಸಿನ ಹತೋಟಿಯನ್ನು ತೆಗೆದುಕೊಳ್ಳಬೇಕಾದುದನ್ನು ಬಿಟ್ಟು ತಮ್ಮ ಕೈಗೆ ತೆಗೆದುಕೊಂಡರು. ಒಂದುವೇಳೆ ಜನರು ತಮ್ಮ ಮನಸಾಕ್ಷಿಗೆ ಒಳಪಡಲು ಧೈರ್ಯವಹಿಸಿದರೆ, ಸೈತಾನನು ಮತ್ತು ಯಹೂದ್ಯರು ಯೇಸುವಿಗೆ ತೋರಿಸಿದ ಅದೇ ಕಡುದ್ವೇಷವನ್ನು ಇವರೆಡೆಗೂ ತೋರಿಸಿಲಾಗುತ್ತಿತ್ತು. ಅಧಿಕಾರ ವರ್ಗದಲ್ಲಿರುವವರು ಇವರು ರಕ್ತ ದಾಹಗೊಂಡವರಾದರು. ಸೈತಾನನು ವಿಶೇಷವಾಗಿ ಜಯಗಳಿಸಿದ ಕಾಲಘಟ್ಟವನ್ನು ನನಗೆ ತೋರಿಸಲಾಯಿತು. ತಮ್ಮ ಧರ್ಮದ ಪರಿಶುದ್ದತೆಯನ್ನು ಜೋಪಾನ ಮಾಡಿಕೊಂಡ ಕ್ರೈಸ್ತೀಯ ಜನಸಮುದಾಯವು ಬಹು ಭಯಂಕರವಾಗಿ ಸಂಹರಿಸಲ್ಪಟ್ಟಿತು.GCKn 144.2

    ಸತ್ಯವೇದವು ದ್ವೇಷಿಸಲ್ಪಟ್ಟಿತು. ಭೂಲೋಕದಿಂದ ಅಮೂಲ್ಯ ದೇವರ ವಾಕ್ಯವನ್ನು ನಿರ್ಮೂಲಮಾಡಲು ಬೇಕಾದ ಎಲ್ಲಾ ಪ್ರಯತ್ನವನ್ನು ಮಾಡಲಾಯಿತು. ಮರಣಕವಾದ ನೋವಿನಿಂದ ಸತ್ಯವೇದ ಪಠಣವನ್ನು ನಿಷೇದಿಸಲಾಯಿತು. ಕೈಗೆಸಿಕ್ಕ ಎಲ್ಲಾ ಸತ್ಯವೇದಗಳನ್ನು ಸುಟ್ಟುಹಾಕಿದರು. ಆದರೆ ದೇವರು ತನ್ನ ವಾಕ್ಯಕ್ಕೆ ವಿಶೇಷ ಕಳಕಳಿ ಹೊಂದಿದ್ದು ಅದನ್ನು ರಕ್ಷಿಸಿದ್ದನ್ನು ನಾನು ಕಂಡೆನು, ವಿವಿಧ ಕಾಲಾವಧಿಯಲ್ಲಿ ಸತ್ಯವೇದದ ಕೆಲವು ಪ್ರತಿಗಳು ಮಾತ್ರ ಲಭ್ಯವಿದ್ದು ಆತನ ವಾಕ್ಯವು ನಾಶವಾಗದಂತೆ ದೇವರು ರಕ್ಷಿಸಿದರು. ಆದರೆ ಅಂತ್ಯಕಾಲದಲ್ಲಿ, ಪ್ರತಿ ಕುಂಟುಂಬವು ಹೊಂದಿರುವಂತೆ ಸತ್ಯವೇದದ ಪ್ರತಿಗಳು ಅಸಂಖ್ಯಾತವಾಗಿ ದೊರಕುವಂತದ್ದಾಗಿದೆ. ಆದರೆ ಸತ್ಯವೇದದ ಕೆಲವು ಪ್ರತಿಗಳು ಮಾತ್ರ ದೊರಕುತ್ತಿದ್ದಾಗ ಹಿಂಸೆಗೊಳಗಾದ ಯೇಸುವಿನ ಹಿಂಬಾಲಕರಿಗೆ ಅಮೂಲ್ಯವಾದದ್ದೂ ಸಮಾದಾನಕರವಾದದ್ದೂ ಆಗಿತ್ತು ಎಂಬುವುದನ್ನು ನಾನು ಕಂಡೆನು. ಅದನ್ನು ಬಹು ರಹಸ್ಯವಾಗಿ ಓದಲಾಗುತಿತ್ತು. ಈ ಮಹಾ ಅವಕಾಶ ಹೊಂದಿದವರು, ತಾವು ದೇವರೊಂದಿಗೂ, ಆತನ ಮಗನಾದ ಯೇಸುವಿನೊಂದಿಗೂ ಮತ್ತು ಆತನ ಶಿಷ್ಯರೊಂದಿಗೂ ಸಂದರ್ಶನ ಪಡೆದುಕೊಂಡು ಅನುಭೂತಿ ಹೊಂದಿದರು. ಆದರೆ ಈ ಧನ್ಯ ಅವಕಾಶವು ಬಹು ಜನರ ಜೀವ ತೆಗೆಯಿತು. ಒಂದುವೇಳೆ ಪವಿತ್ರವಾಕ್ಯಗಳುನ್ನು ಓದುತ್ತಿರುವುದು, ತಿಳಿದುಬಂದರೆ, ಅವರನ್ನು ತಡೆಗಟ್ಟಿ ಕೊಚ್ಚಿಹಾಕುವುದು, ಅಡಿಕೊರಡಿಗೆ, ಸುಡುಕಂಬಗಳಿಗೆ ಕಟ್ಟುವುದು ಅಥವಾ ಗವಿಗೆ ನೂಕಿ, ಹಸಿವಿನಿಂದ ಸಾಯಲು ಕರೆದುಕೊಂಡು ಹೋಗುತ್ತಿದ್ದರು.GCKn 145.1

    ಸೈತಾನನು ರಕ್ಷಣಾಯೋಜನೆಯನ್ನು ತಡೆಗಟ್ಟಲಾಗಲಿಲ್ಲ. ಯೇಸು ಶಿಲುಬೆಗೆ ಹಾಕಲ್ಪಟ್ಟು ಮೂರನೆದಿನ ಪುನರುತ್ಥಾನ ಹೊಂದಿದನು. ಅವನು ತನ್ನ ದೂತರಿಗೆ, ಈ ಶಿಲುಬೆಯ ಮರಣ ಹಾಗೂ ಪುನರುತ್ಥಾನವನ್ನು ತನಗೆ ಸಾಧಕವನ್ನಾಗಿ ಬಳಸಿಕೊಳ್ಳುತೇನೆ ಎಂದು ಹೇಳಿದನು. ಯೇಸುವಿನಲ್ಲಿ ಗಾಢ ನಂಬಿಕೆ ಹೊಂದಿದವರು ಯಹೂದ್ಯರ ಆಚಾರಗಳು, ಬಲಿ ಮತ್ತು ಕಾಣೆಕೆಗಳು ಕ್ರಿಸ್ತನ ಮರಣದಲ್ಲಿ ಕೊನೆಗೊಂಡಿತು ಎಂದು ನಂಬುವುದು ಮಾತ್ರವಲ್ಲದೆ ಮತ್ತೂ ಒಂದು ಹೆಚ್ಚೆ ಮುಂದೂಡಿ ಹತ್ತು ಆಜ್ಞೆಗಳು ಸಹ ಕ್ರಿಸ್ತನ ಮರಣದಲ್ಲಿ ಅವಾಸನ ಗಂಡಿತು ಎಂದು ನಂಬಿಸಲು ಸೈತಾನನು ಹವಣಿಸಿದನು.GCKn 146.1

    ಬಹುಮಂದಿ ಸೈತಾನನ ಈ ತಂತ್ರಕ್ಕೆ ಒಳಗಾದವನ್ನು ನಾನು ನೋಡಿದೆನು. ದೇವರ ಪವಿತ್ರ ಆಜ್ಞೆಗಳು ಕಾಲಿನಡಿ ತುಳಿಯಲ್ಪಟ್ಟುದನ್ನು ಕಂಡು ಇಡೀ ಪರಲೋಕವೇ ಧರ್ಮಕ್ರೋಧಕ್ಕೊಳಗಾಯಿತು. ಯೇಸು ಹಾಗೂ ಇಡೀ ಪರಲೋಕದವರು ದೇವರ ಆಜ್ಞೆಗಳ ಸ್ವರೂಪಕ್ಕೆ ಪರಿಚಯಸ್ಥರಾಗಿದ್ದರು; ಅದು ದೇವರಿಂದ ಎಂದಿಗೂ ಬದಲಾಗುವುದಾಗಲೀ ಅಥವಾ ರದ್ದುಮಾಡಲ್ಪಡಲಾಗಲೀ ಆಗದು ಎಂಬುದರು ಅರಿವು ಅವರಿಗಿತ್ತು. ಮನುಷ್ಯನ ಧೀನಾವಸ್ಥೆಯು ಪರಲೋಕದಲ್ಲಿ ದುಃಖವನ್ನುಂಟು ಮಾಡಿತು. ದೈವಕಟ್ಲೆಯ ಮೀರುವಿಕೆಯು, ಯೇಸು ತನ್ನ ಪ್ರಾಣ ತ್ಯಾಗ ಮಾಡುವಂತೆ ಪ್ರೇರೇಪಿಸಿತು . ಆಜ್ಞೆಗಳನ್ನು ರದ್ದುಪಡಿಸಲು ಆಗುವಂತಿದ್ದರೆ ಮಾನವನು ಯೇಸುವಿನ ಮರಣವಿಲ್ಲದೆ ರಕ್ಷಿಸಲ್ಪಡಬಹುದಾಗಿತ್ತು. ಕ್ರಿಸ್ತನ ಮರಣವು ತಂದೆಯಅಜ್ಞೆಗಳನ್ನು ನಾಶಮಾಡಲಿಲ್ಲ; ಆದರೆ ಅದು ವರ್ಧಿಸಲ್ಪಟ್ಟು ಮಾನ್ಯತೆಗೆ ಒಳಗಾಯಿತು. ಅದರ ಪವಿತ್ರ ನೀತಿಬೋಧೆಗೆ ವಿಧೇಯರಾಗಲು ನಿರ್ಭಂಧಿಸಿತು. ಒಂದುವೇಳೆ ಸಭೆಯು ಶುದ್ದವಾಗಿ ದೃಡವಾಗಿದ್ದಿದರೆ, ಸೈತಾನನು ವಂಚಿಸಲಾಗುತ್ತಿರಲಿಲ್ಲ, ದೇವರ ಆಜ್ಞೆಗಳನ್ನು ತುಳಿಯುವಂತೆ ನಡೆಸಲಾಗುತ್ತಿರಲಿಲ್ಲ. ಸೈತಾನನು, ತನ್ನ ದಿಟ್ಟ ಯೋಜನೆಯಿಂದ ಪರಲೋಕ ಮತ್ತು ಭೂಲೋಕದಲ್ಲಿ ದೇವರ ರಾಜ್ಯದ ಬುನಾದಿಯ ವಿರುದ್ದ ಪ್ರತ್ಯಕ್ಷವಾಗಿ ಸೆಟೆದನು, ಅವನು ಪ್ರತಿಭಟನೆಯೇ ಅವನನ್ನು ಪರಲೋಕದಿಂದ ದೊಬ್ಬಲ್ಪಡುವಂತೆ ಮಾಡಿತು. ಪ್ರತಿಭಟನೆಯ ನಂತರ ತನ್ನನ್ನು ರಕ್ಷಿಸಿಕೊಳ್ಳಲೋಸುಗ, ದೇವರ ಆಜ್ಞೆಗಳನ್ನು ಬದಲಾವಣೆ ಮಾಡಲು ಬಯಸಿದನು; ಆದರೆ ಪರಲೋಕದ ಪ್ರಜೆಗಳೆಲ್ಲರ ಮುಂದೆ ದೇವರು ಸೈತಾನನಿಗೆ, ಅತನ ಆಜ್ಞೆಗಳು ಪಲ್ಲಟಿಸಲಾಗದ್ದು ಎಂದು ಹೇಳಿಕೆ ನೀಡಿದರು. ಇತರರು ದೇವರ ಆಜ್ಞೆಗಳನ್ನು ಉಲ್ಲಂಘಿಸುವಂತೆ ಮಾಡಿದರೆ ಅವರೆಲ್ಲರೂ ಸಾಯಬೇಕಾಗುವುದು ಎಂದು ಸೈತಾನನಿಗೆ ತಿಳಿದಿತ್ತು.GCKn 147.1

    ಸೈತಾನನು ಇನ್ನೂ ಮುಂದೆ ಸಾಗಲು ತೀರ್ಮಾನಿಸಿದನು; ಅವನು ತನ್ನ ದೂತರಿಗೆ, ಇನ್ನೂ ಕೆಲವರು ದೇವರ ಆಜ್ಞೆಗೆ ಬದ್ದರಾಗಿದ್ದು ಈ ಬಲೆಯಲ್ಲಿ ಬೀಳಲಾರರು, ಹತ್ತು ಆಜ್ಞೆಗಳು ಸರಳವಾಗಿದ್ದು ಬಹುಜನರು ಇನ್ನೂ ಅದರ ಜೊತೆ ಬಂಧಿಸಲ್ಪಟ್ಟಿದ್ದೇವೆಂದು ನಂಬುವವರಾಗಿದ್ದಾರೆ ಎಂದು ಹೇಳಿದನು; ಅದ್ದರಿಂದ ದೇವರನ್ನು ವೀಕ್ಷಿಸಲು ಸಾಧ್ಯವಾಗುವ ನಾಲ್ಕನೆಯ ಆಜ್ಞೆಯನ್ನು ಕಲುಷಿತಗೊಳಿಸಲು ಗುರಿಯಿಟ್ಟನು. ಆತನು ತನ್ನ ಪ್ರತಿನಿಧಿಗಳಿಗೆ ಸಬ್ಬತ್ತನ್ನು ಮಾರ್ಪಡಿಸಲು ತಿಳಿಸಿದನು. ಪರಲೋಕ ಭೂಲೋಕಗಳ ಸೃಷ್ಟಿಕರ್ತನಾದ ಸತ್ಯದೇವರನ್ನು ಅವಲೋಕಿಸಲು ಸಾದ್ಯವಾದ ಹತ್ತರಲ್ಲಿ ಒಂದೇ ಆಜ್ಞೆಯನ್ನು ಬದಲಾಯಿಸಲು ಒತ್ತಾಯಿಸಿದನು ಸೈತಾನನು ಅವರ ಮುಂದೆ ಯೇಸುವಿನ ಮಹಿಮೋನ್ನತ ಪುನರುತ್ಥಾನವನ್ನು ಪ್ರಸ್ತಾಪಿಸುತ್ತಾ, ವಾರದ ಮೊದಲ ದಿನದಲ್ಲಿ ಎದ್ದುಬರುವ ಮೂಲಕ, ಸಬ್ಬತ್ತನ್ನು ಏಳನೇಯ ದಿನದಿಂದ ವಾರದ ಮೊದಲನೆಯ ದಿನಕ್ಕೆ ವರ್ಗಾಯಿಸಿದ್ದಾನೆಂದು ಹೇಳಿದನು ಆತನ ಉದ್ದೇಶದ ನೆರವೇರಿಕೆಗೆ ಪುನರುತ್ಥಾನದ ದಿನವನ್ನು ಉಪಯೋಗಿಸಿದನು. ಕ್ರೈಸ್ತರೆಂದು ತಮ್ಮನ್ನು ಕರೆದುಕೊಂಡು ಕ್ರಿಸ್ತನ ಗೆಳೆಯರ ಮೇಲೆ ತಾವು ಉದ್ಭವ ಮಾಡಿದ ಈ ತಪ್ಪು ಬಹು ಚೆನ್ನಾಗಿ ಪ್ರಭಾವಗೊಂಡದ್ದನ್ನು ಕಂಡು ಸೈತಾನ ಹಾಗೂ ದೂತರು ಹರ್ಷಗೊಂಡರ. ಒಬ್ಬರಿಗೆ ಧಾರ್ಮಿಕ ಭಯಂಕರತೆಯ ಹಾಗೆ ಕಂಡರೆ, ಮತ್ತೊಬ್ಬರಿಂದ ಅಂಗೀಕರಿಸಲಾಯಿತು. ವಿವಿಧ ತಪ್ಪು ಅಭಿಪ್ರಾಯಗಳು ಅಂಗೀಕರಿಸಲ್ಪಟ್ಟು, ಆಸಕ್ತಿಯಿಂದು ಕಾಪಿಡುವಂತಾಯಿತು. ದೇವವಾಕ್ಯಗಳಲ್ಲಿ ಆತನ ಚಿತ್ತವು ಪ್ರಕಟಿಸಲ್ಪಟಿದೆ ಎಂದು ಬೋಧಿಸಲಾಗಿದ್ದು; ಅದನ್ನು ದೋಷ ಮತ್ತು ಆಚರಣೆಗಳಿಂದ ಮರೆಮಾಡಿ ಅದನ್ನೇ ದೇವರ ಆಜ್ಞೆ ಎಂದು ಬೋಧಿಸಲಾಯಿತು. ಆದರೆ ಪರಲೋಕ ವಂಚತ ಕಾರ್ಯವು ಯೇಸುವಿನ ಎರಡನೆಯ ಬರುವಣದ ಕಾಲಾವಧಿಯವರೆಗೂ ಮುಂದುವರಿಯಲು ಬಿಡಲಾಗಿದೆಯಾದರೂ ಈ ದೋಷ ವಂಚಿತ ಕಾಲಾವಧಿಯಲ್ಲೂ ದೇವರು ಸಾಕ್ಷಿಗಳಿಲ್ಲದೆ ಬಿಟ್ಟಿಲ್ಲ. ಸಭೆಯ ಅಂಧಕಾರ ಮತ್ತು ಹಿಂಸಾಕಾಲದಲ್ಲೂ ನಂಬುಗೆಯ ಸತ್ಯ ಸಾಕ್ಷಿಗಳು ಅಸ್ತಿತ್ವದಲ್ಲಿದ್ದಾರೆ.GCKn 148.1

    ಮಹಿಮೆ ರಾಜನ ಹಿಂಸೆ ಮರಣವನ್ನು ವೀಕ್ಷಿಸುತ್ತಿದ ದೇವದೂತರು ದಿಗ್ಬ್ರಮೆಯಿಂದ ತುಂಬಿದ್ದುದನ್ನು ನಾನು ಕಂಡೆನು. ಪರಲೋಕವನ್ನು ಸಂತೋಷ ಸಂಭ್ರಮಗಳಿಂದ ತುಂಬಿದ್ದ ಜೀವದಾಯಕನ್ನೂ, ಭೂಷಿತನಾದ ಕರ್ತನು, ಮರಣದ ಬಂಧನ ಬಿಡಿಸಿಕೊಂಡು ಆತನ ಸೆರೆಯಿಂದ ವಿಜಯೋತ್ಸಾವದಿಂದ ನಡೆದುಬಂದದ್ದು ದೂತಗಣಗಳಿಗ ಬೆರಗುಗೊಳಿಸುವಂಥದ್ದು ಆಗಿರಲ್ಲವೆಂದು ನಾನು ಕಂಡೆನು. ಒಂದುವೇಳೆ ವಿಶ್ರಾಂತಿದಿನವೆಂದು ಇವುಗಳಲ್ಲಿ ಯಾವುದಾದರು ಒಂದು ಘಟನೆಯ ಸ್ಮರಣಾರ್ಥವಾಗಬೇಕಾದರೆ, ಅದು ಶಿಲುಬೆಯ ಮರಣದ ದಿನವೇ, ಆದರೆ ಈ ಯಾವ ಘಟನೆಗಳು ದೇವರ ಆಜ್ಞೆಯನ್ನು ಬದಲಾಸುವುದಕ್ಕೊ ಅಥವಾ ರದ್ದುಮಾಡುವುದಕ್ಕೊ ರಚಿಸಲ್ಪಡಲಿಲ್ಲ; ಆದರೆ ಅವು ಬದಲಾವಣೆಗೆ ಅವಕಾಶವಿಲ್ಲದಕ್ಕೆ ಬಲವಾದ ಸಿದ್ದಾಂತವಾಗಿದೆ.GCKn 149.1

    ಈ ಎರಡು ಪ್ರಮುಖ ಘಟನೆಗಳು ಸ್ಮಾರಕಾರ್ಥವನ್ನು ಹೊಂದಿವೆ. ಮುರಿದ ರೊಟ್ಟಿಯಲ್ಲಿ, ದ್ರಾಕ್ಷಾರಸ ತೆಗೆದುಕೊಳ್ಳುವ ರಾತ್ರಿಬೋಜನದಲ್ಲಿ ಭಾಗವಹಿಸುವುದು ಆತನ ಮತ್ತೆ ಬರುವವರೆಗೂ ಕರ್ತನ ಮರಣವನ್ನು ಸೂಚಿಸುತ್ತದೆ. ಈ ಸಂಸ್ಕಾರದಲ್ಲಿ ಬಾಗವಹಿಸುವಾಗ ಆತನ ಶ್ರಮ ಮರಣದ ದೃಶ್ಯವು ಹೊಚ್ಚಹೊಸದಾಗಿ ಮನಸ್ಸಿನಲ್ಲಿ ಮೂಡುತ್ತದೆ. ಕ್ರಿಸ್ತನ ಪುನರುತ್ಥಾನವು, ಧೀಕ್ಷಾಸ್ನಾನ ಹೊಂದಿ ಎದ್ದುಬರುವುದು ನೀರಿನ ಗೋರಿಯಿಂದ ಎದ್ದುಬಂದ ಸ್ಮರಣಾರ್ಥವಾಗಿ ಹೊಸಜೀವನ ಜೀವಿಸುವುದಾಗಿದೆ.GCKn 150.1

    ದೇವರ ಆಜ್ಞೆಗಳು ದೃಡವಾಗಿ ಸದಾ ಅಸ್ತಿತ್ವದಲ್ಲಿದ್ದು ನೂತನ ಭೂಮಂಡಲದಲ್ಲಿ ನಿರಂತರವಾಗಿರುವುದನ್ನು ನನಗೆ ತೋರಿಸಲಾಯಿತು. ಸೃಷ್ಟಿಕಾರ್ಯದಲ್ಲಿ ಭೂಮಿಗೆ ತಳಹದಿ ಹಾಕುವಾಗ ಸೃಷ್ಟಿಕರ್ತನ ಕೆಲಸವನ್ನು ದೇವಕುಮಾರರು ಮೆಚ್ಚಿಕೆಯಿಂದ ವೀಕ್ಷಿಸುತ್ತಿದರು. ಮತ್ತು ಪರಲೋಕಗಣಗಳು ಸಂತೋಷದಿಂದ ಉಧ್ವರಿಸಿದರು. ಆಗಲೇ ಸಬ್ಬತ್ತಿಗೂ ತಳಹದಿ ಹಾಕಲಾಯಿತು ಆರು ದಿನಗಳ ಸೃಷ್ಟಿಕಾರ್ಯವು ಅಂತ್ಯಗೊಂಡಾಗ ತನ್ನೆಲ್ಲಾ ಕೆಲಸದಿಂದ ಏಳನೆಯ ದಿನ ದೇವರು ವಿಶ್ರಮಿಸಿಕೊಂಡನು; ಅತನು ಏಳನೆಯ ದಿನವನ್ನು ಆಶೀರ್ವದಿಸಿ ಪರಿಶುದ್ದಗೊಳಿಸಿದನು, ಏಕೆಂದರೆ ಅದು ಅತನ ವಿಶ್ರಾಂತಿ ದಿನವಾಗಿದೆ. ಮಾನವನ ಬೀಳುವಿಕೆಗೆ ಮೊದಲೇ ಏದೆನ್ ತೋಟದಲ್ಲಿ ಸಬ್ಬತ್ತಿನ ಉದಯವಾಯಿತು, ಆದಾಮ ಹವ್ವಳು ಮೊದಲ್ಗೊಂಡು ಎಲ್ಲಾ ಪರಲೋಕಗಣಗಳು ಅದನ್ನು ಕೈಗೊಂಡವು. ದೇವರು ಏಳನೆಯ ದಿನದಲ್ಲಿ ವಿಶ್ರಾಂತಿ ಪದೆದು, ಆಶೀರ್ವದಿಸಿ, ಪವಿತ್ರಗೊಳಿಸಿದನು; ಈ ಸಬ್ಬತ್ ಎಂದಿಗೂ ಬಿದ್ದು ಹೋಗದು ಎಂಬುದನು ನಾನು ಕಂಡೆನು; ಆದರೆ ಎಲ್ಲಾ ವಿಮೋಚನೆಗೊಂಡ ಸಂತರೂ, ಪರಲೋಕ ಗಣಗಳೂ, ಅನಂತ ಮಹಾಸೃಷ್ಟಿಕರ್ತನಿಗೆ ಘನಮಾನ ಸಲ್ಲಿಸಲು ಸಬ್ಬತ್ತನ್ನು ಎಂದೆಂದಿಗೂ ಆಚರಿಸುವರು.GCKn 150.2

    ಓದಿ: ದಾನಿಯೇಲನು ಅಧ್ಯಾಯ 7; 2ಥೆಸಲೋನಿಕ ಅಧ್ಯಾಯ 2GCKn 151.1