Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 21. - ಸಭೆ ಮತ್ತು ಲೋಕವು ಐಕ್ಯಗೊಂಡದ್ದು

    ಸೈತಾನನು ತನ್ನ ದೂತರೊಂದಿಗೆ, ತಾವು ಪಡೆದುಕೊಂಡ ಲಾಭದ ವಿಷಯವಾಗಿ ಪರ್ಯಾಲೋಚಿಸಿದನು. ಅವರು ಕೆಲವು ಮೃದು ಸ್ವಭಾವದ ಪುಕ್ಕಲರು ಸತ್ಯವನ್ನು ಅಪ್ಪಿಕೊಳ್ಳದಂತೆ ಮರಣ ಭಯಹುಟಿಸಿದ್ದು ನಿಜ; ಆದರೆ ಹಲವರು ಅದರಲ್ಲಿ ಅತಂತ್ಯ ಮೃದು ಸ್ವಭಾವದವರು ಸತ್ಯವನ್ನು ಅಂಗೀಕರಿಸಿದರು. ಇಂಥವರು ಸಹೋದರರ ಮರಣಕ್ಕೆ ಸಾಕ್ಷಿಗಳಾದಾಗ ಅವರ ಪುಕ್ಕಲುತನ, ಭಯ ಮಾಯವಾಯಿತು. ಸಹೋದರರ ದೃಢತೆ ಹಾಗೂ ತಾಳ್ಮೆಯನ್ನು ಕಂಡಾಗ, ದೇವರು ಮತ್ತು ದೂತರು ಆ ಸಂಕಟಗಳನ್ನು ತಾಳಿಕೊಳ್ಳಲು ಅವರಿಗೆ ಸಹಕರಿಸಿದ್ದನ್ನು ತಿಳಿದುಕೊಂಡಾಗ, ಪುಕ್ಕಲು ಸ್ವಭಾವದರು ನಿರ್ಭಯರೂ ಧೈರ್ಯಶಾಲಿಗಳೂ ಆದರು. ಇವರು ತಮ್ಮ ಸ್ವಂತ ಜೀವಕ್ಕೆ ಎರವಾಗುವ ಸಮಯ ಬಂದಾಗ ತಮ್ಮ ನಂಬಿಕೆಯಲ್ಲಿ ಸ್ಥಿರವಾಗಿದ್ದು ಸಹನೆ, ದೃಡತೆ ಉಳಿಸಿಕೊಂಡಿದ್ದನ್ನು ಕಂಡು ಕೊಲೆಗಾರರು ಕೂಡ ನಡುಗಿದರು. ಸೈತಾನನು ಮತ್ತು ಅವನ ದೂತರು, ಆತ್ಮಗಳನ್ನು ನಾಶಮಾಡಲು ಮತ್ತೊಂದು ಜಯಶಾಲಿ ಮರ್ಗವನ್ನು ಯೋಚಿಸಿ ಅದರ ಅಂತ್ಯ ದಿಟ್ಟವಾಗಿರಬೇಕೆಂದು ತೀರ್ಮಾನಿಸಿದರು. ಅವರು ಕ್ರೈಸ್ತರನ್ನು ಎಷ್ಟ್ಟೇ ಹಿಂಸೆ ಪಡಿಸಿದರೂ ದೃಡತೆ, ನಿಚ್ಚಳ ನಿರೀಕ್ಷೆಯು ಅವರನ್ನು ಗೆಲುವಾಗಿರಿಸಿತು. ಬಲಹೀನರನ್ನು ಬಲಿಷ್ಠರನ್ನಾಗಿಸಿತ್ತು. ವಿಚಿತ್ರ ಹಿಂಸೆ ದಳ್ಲುರಿಯು ಅವರನ್ನು ಕಿಂಚಿತ್ತೂ ಹೆದರಿಸದಿರುವುದನ್ನು ಕಂಡರು. ಕೊಲೆಗಾರರ ಮುಂದೆ ಕ್ರಿಸ್ತನ ಉದಾತ್ತ ತಾಳ್ಮೆ ಅನುಕರಿಸಿದರು, ಇವರು ನಿಶ್ಚಲತೆಯನ್ನು ಕಣ್ಣಾರೆ ಕಂಡು ಸತ್ಯವನ್ನು ಮಂದಟ್ಟುಮಾಡಿಕೊಳ್ಳುವಾಗ ದೇವರ ಪ್ರಭಾವವು ಅವರ ಮೇಲೆ ನೆಲೆಗೊಂಡಿತು. ಇದೀಗ ಸೈತಾನನು ಸೌಮ್ಯರೂಪದಿಂದ ಕಾಣಿಸಿಕೊಳ್ಳಲು ತೀರ್ಮಾನಿಸಿ ಸತ್ಯವೇದ ತತ್ವಗಳನ್ನು ಕಲುಷಿತಗೊಳಿಸಿದನು; ಕೋಟ್ಯಾನುಕೋಟಿ ಜನರನ್ನು ನಾಶಪಡಿಸುತ್ತಿದ್ದ ಸಂಪ್ರದಾಯ ಪದ್ಧತಿಗಳು ಬೇರೂರಿಕೊಡವು. ಅವನು ತನ್ನ ಹಗೆಯನ್ನು ತೆಡೆಹಿಡಿದು ಅಂಥಹ ಚಿತ್ರಹಿಂಸೆಯನ್ನು ಜನರಲ್ಲಿ ಜಾರಿಗೊಳ್ಳಿಸಭಾರದೆಂದು ತೀರ್ಮಾನಿಸಿದನು; ಆದರೆ ಈಗಾಗಲೇ ಸಂತರಿಗೆ ಕೊಡಲ್ಪಟ್ಟ ನಂಬಿಕೆಯನ್ನು ಬಿಟ್ಟು ವಿವಿಧ ಇತರ ಪಧತಿಗಳೆಡೆಗೆ ಸಭೆಯನ್ನು ಮುನ್ನಡೆಸಬೇಕೆಂದುಕೊಂಡನು. ತಮಗೆ ಪ್ರಯೋಜನವಾಗುವ ಸುಳ್ಳುಸೋಗಿನಿಂದ ಸಭೆಯು ಈ ಲೋಕದ ಗೌರವ ಮಚ್ಚಿಕೆಯ ಕಡೆಗೆ ಅವನಿಂದ ನಡೆಸಲ್ಪಟ್ಟಾಗ ಅದು ದೇವರ ಮೆಚ್ಚಿಕೆಯಿಂದ ದೂರವಾಯಿತು. ಈ ಲೋಕದ ಗೆಳೆಯರನ್ನೂ, ಸುಖಾನುಭವದಲ್ಲಿ ಆನಂದಿಸುವವರನ್ನು ದೂರವಿಡುವ ಅಪ್ಪಟ ಸತ್ಯ ಪ್ರಕಟಿಸುವುದನ್ನು ತಳ್ಳಿಹಾಕಿದಾಗ ಸಭೆಯು ಬರುಬರುತ್ತಾ ಶಕ್ತಿಯನ್ನು ಕಳೆದುಕೊಂಡಿತ್ತು. ಚಿತ್ರಹಿಂಸೆ, ದಳ್ಳುರಿಗೆ ಗುರಿಯಾಗುತ್ತಿದ್ದಾಗ ಅದು ವಿಶಿಷ್ಠ ಜನರಿಂದಾದ ಸಭೆಯಾಗಿತ್ತು. ಈಗ ಅದೆಲ್ಲವನ್ನೂ ಕಳೆದುಕೊಂಡಿತು.GCKn 169.1

    ಚಿನ್ನವು ಮಂಕಾಗಿದ್ದು ಹೇಗೆ? ಅತ್ಯುತ್ತಮ ಅಪರಂಜಿಯು ಬದಲಾದದ್ದು ಹೇಗೆ? ಒಂದುವೇಳೆ ಸಭೆಯು ತನ್ನ ಪವಿತ್ರ ವಿಶೇಷ ಗುಣಗಳನ್ನು ಉಳಿಸಿಕೊಂಡಿದ್ದ ಪಕ್ಷದಲ್ಲಿ ಶಿಷ್ಯರಿಗೆ ಅನುಗ್ರಹಿಸಲ್ಪಟ್ಟ ಪವಿತ್ರಾತ್ಮ ಬಲವು ಅವಳೊಂದಿಗೂ [ಸಭೆ] ಇರುತ್ತಿತ್ತು ಎಂಬುದನ್ನು ನಾನು ಕಂಡೆನು. ರೋಗಿಗಳು ಗುಣವಾಗುತ್ತಿದ್ದರು, ದೆವ್ವಗಳು ಖಂಡಿಸಲ್ಪಟ್ಟು ಓಡಿಹೋಗುತ್ತಿದ್ದವು ಮತ್ತು ಅವಳು ಶತೃಗಳಿಗೆ ಭಯಂಕರಳೂ ಆಧಿಕ ಬಲಶಾಲಿಯೂ ಆಗಿರುತ್ತಿದ್ದಳು.GCKn 170.1

    ಕ್ರಿಸ್ತನ ಹೆಸರನ್ನು ತಮ್ಮದಾಗಿಸಿಕೊಂಡ ಬಹು ದೊಡ್ದ ಗುಂಪನ್ನು ನಾನು ನೋಡಿದೆನು, ಆದರೆ ದೇವರು ಅವರನ್ನು ತನ್ನವರೆಂದು ಗುರುತಿಸಲಿಲ್ಲ. ಅವರಲ್ಲಿ ಯಾವ ಸಂತೋಷವನ್ನೂ ಪಡಲಿಲ್ಲ, ಧಾರ್ಮಿಕ ಸ್ವಭಾವವನ್ನು ಹೊಂದಿದವರಂತೆ ಭಾವಿಸಿಕೊಂಡ ಜನರು, ತಾವು ಕ್ರೈಸ್ತರೆಂದು ಕರೆಸಿಕೊಳ್ಳುವುದರಲ್ಲಿ ಸೈತಾನನಿಗೆ ಯಾವ ಅಭ್ಯಂತರವೂ ಇರಲಿಲ್ಲ. ಅವರು ಕ್ರಿಸ್ತನನ್ನು, ಆತನ ಶಿಲುಬೆಯ ಮರಣ ಹಾಗೂ ಪುನರುತ್ಥಾನವನ್ನು ನಂಬುವುದರಲ್ಲಿ ಅವನಿ ಯಾವ ಅಭ್ಯಂತರವು ವಿರಲಿಲ್ಲ. ಸೈತಾನನೂ ಅವನ ದೂತರು ಸಹ ಇವೆಲ್ಲವನ್ನೂ ಪರಿಪೂರ್ಣವಾಗಿ ನಂಬಿದರು, ಮತ್ತು ಕಂಪಿಸಿದರು. ಈ ನಂಬಿಕೆಯು ಒಳೆಯ ಕ್ರಿಯೆಗಳನ್ನು ಪ್ರಚೋದಿಸದೆ, ಕ್ರಿಸ್ತನ ಸ್ವತ್ಯಾಗದ ಜೀವಿತವನ್ನು ಅನುಕರಿಸುವಂತೆ ನಡೆಸದ್ದಿದರೆ ಅವನು ವಿಚಲಿತವನಾಗುವುದಿಲ್ಲ; ಏಕೆಂದರೆ ಹೆಸರಿಗೆ ಮಾತ್ರ ಅವರು ಕ್ರೈಸ್ತರಾಗಿದ್ದು ಅವರ ಹೃದಯಯು ಪ್ರಾಪಂಚಿಕವಾದದ್ದಾಗಿದೆ; ಇಂಥವರು ತಾವು ಕ್ರೈಸ್ತರೆಂದು ಹೇಳಿಕೊಂಡಾಗ ಸೈತಾನನು ತನ್ನ ಕಾರ್ಯಸಾಧನೆಯಲ್ಲಿ ಉತ್ತಮವಾಗಿ ಅವರನ್ನು ಬಳಸಿ ಕೊಳ್ಳುವಂತಾಯಿತು. ಇವರು ಕ್ರೈಸ್ತರು ಎಂಬ ಹೆಸರಿನಲ್ಲಿ ತಮ್ಮ ಡೊಂಕನ್ನು ಮುಚ್ಚಿಕೊಂಡರು .ಅಪವಿತ್ರ ಸ್ವಭಾವದಿಂದ ನಡೆದರು ಮತ್ತು ದುಷ್ಟ ಮನೋವಿಕಾರಗಳು ನಿಗ್ರಹಕ್ಕೆ ಬಗ್ಗಲಿಲ್ಲ. ಇವು ಅವಿಶ್ವಾವಿಗಳಿಗೆ ಸಂದರ್ಭ ಒಂದನ್ನು ನೀಡಿ ತಮ್ಮ ಅಪೂರ್ಣತೆಯನ್ನು ಯೇಸುಕ್ರಿಸ್ತನ ಮುಖದ ಮೇಲೆ ಬಿಸಾಡಲು ಆತನನ್ನು ತೆಗೆಳುವಾಗ ಪರಿಶುದ್ದವೂ ಅಕಳಂಕ ಧರ್ಮವನ್ನು ಹೊಂದಿದವರಿಗೆ ಅಪಕಿರ್ತಿ ತರುವಂತೆ ಮಾಡಿತು .GCKn 171.1

    ಪಾದ್ರಿಗಳು ಲೌಕಿಕ ಪಂಡಿತರಿಗೆ ಮೆಚ್ಚುಗೆಯಾಗುವಂತೆ ನಯವಾಗಿ ಬೋಧಿಸಿದರು. ಇದು ಸೈತಾನನಿಗೆ ತಕ್ಕುದಾಗಿತ್ತು. ಅವರು ಯೇಸು ಮತ್ತು ಶುದ್ದ ಸತ್ಯವನ್ನು ಬೋಧಿಸಲು ಅದೈರ್ಯಗೊಂಡರು. ಒಂದುವೇಳೆ ಬೋಧಿಸಿದರೂ ಈ ಲೌಕಿಕ ಉಪನ್ಯಸಕರು ಕೇಳುತ್ತಿರಲಿಲ್ಲ ಇವರೆಲ್ಲಾ ಸೈತಾನ ಹಾಗೂ ಅವನ ದೂತರಿಗೂ ತಕ್ಕವರಂತಿದ್ದರೂ ಬಹು ಧನಿಕರಾಗಿದ್ದುದರಿಂದ ಇವರನ್ನು ಸಭೆಯಲ್ಲಿಯೇ ಹಿಡಿದಿಟ್ಟುಕೊಳ್ಳಬೇಕಾಗುತ್ತಿತ್ತು. ಲೋಕದ ಕಣ್ಣಿನಲ್ಲಿ ಯೇಸುವಿನ ಧರ್ಮವನ್ನು ಪ್ರಸಿದ್ದ ಹಾಗೂ ಗೌರವಾನ್ವಿತವಾಗಿ ಮಾಡಲಾಯಿತು. ಯಾರು ಈ ಧರ್ಮವನ್ನು ಒಪ್ಪಿಕೊಳ್ಳುತ್ತಾರೋ ಅವರು ಲೋಕದ ಮಾನ್ಯತೆ ಪಡೆಯುವರೆಂದು ಜನರಿಗೆ ಹೇಳಲಾಯಿತು. ಈಬೋಧನೆಯು ಕ್ರಿಸ್ತನ ಬೋಧನೆಗಿಂತ ಅಪಾರ ಬಿನ್ನವಾಗಿತ್ತು. ಆತನ ತತ್ವ ಹಾಗೂ ಈ ಲೋಕವು ಸಮಾದಾನ ದಿಂದಿರಲಾಲಿಲ್ಲ. ಯಾರು ಆತನನ್ನು ಹಿಂಭಾಲಿಸುತ್ತಾರೋ ಅವರು ಲೋಕವನ್ನು ತ್ಯಜಿಸಬೇಕಾಯಿತು. ಈ ನಯಗಾರಿಕೆಯು ಸೈತಾನನು ಮತ್ತು ಅತನ ದೂತರಿಂದ ಉದ್ಭವಿಸಿತು. ಇವರು ಯೋಜನೆ ಹಾಕಿದರೆ ಅದನ್ನು ಮಹೋಪಾಧ್ಯಾಯರು ಜಾರಿಗೆ ತಂದರು. ಕಪಟಿಗಳೂ ಪಾಪಿಗಳೂ ಸಭೆಯೊಂದಿಗೆ ಐಕ್ಯವಾದರು. ಮನಸ್ಸಿಗೆ ಸಂತಸ ತರುವ ಕಟ್ಟುಕತೆಗಳನ್ನು ಬೋಧಿಸಲಾಯಿತು. ಅದು ಒಡೆಯನೇ ಅಂಗೀಕರಿಸಲ್ಪಟ್ಟವು. ಆದರೆ ಸತ್ಯವನ್ನು ಶುದ್ದವಾಗಿ ಪ್ರಸಂಗಿಸಿದುದ್ದಾದರೆ ಅದು ಕಪಟಿಗಳನ್ನೂ ಪಾಪಿಗಳನ್ನೂ ಓಡಿಸುತ್ತಿದ್ದತು. ಆದರೆ ಈ ಲೋಕಕ್ಕೂ ಕ್ರಿಸ್ತನ ಹಿಂಬಾಲಕರೆಂದು ತಮ್ಮನ್ನು ಕರೆದುಕೊಂಡವರಿಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಒಂದುವೇಳೆ ಸುಳ್ಳು ಮುಖವಾಡವು ಸಭಿಕರಿಂದ ಕಿತ್ತುಹಾಕಲ್ಪಟ್ಟರೆ, ಅವರ ಪಾಪಗಳು, ನೀಚತನ ,ಭ್ರಷ್ಟಾಚಾರಗಳು ಪ್ರಕಟಗೊಂಡು ಸಂಕೋಚವುಳ್ಳ ದೇವರ ಮಕ್ಕಳೂ ಸಹ ಯಾವ ಹಿಂಜರಿಕೆಯಿಲ್ಲದೆ, ಇವರು ಆ ತಂದೆ ಸೈತಾನನು ಮಕ್ಕಳೆ ಎಂದು ಘೋಷಿಸುವರು; ಏಕೆಂದರೆ ಆತನ ಕೆಲಸವನೇ ಇವರೂ ಮಾಡುವರು ಎಂಬುದನ್ನು ನಾನು ಕಂಡೆನು. ಈ ದೃಶ್ಯವನ್ನು ಯೇಸು ಮತ್ತು ಪರಲೋಕದ ಗಣಗಳು ಬೇಸರಿಕೆಯಿಂದ ನೋಡಿದರು; ಆದರೂ ಸಭೆಗಾಗಿ ಪವಿತ್ರವೂ ಪ್ರಾಮುಖ್ಯವೂ ಆದ ಸಂದೇಶವು ದೇವರಿಗಿತ್ತು. ಒಂದುವೇಳೆ ಅಂಗೀಕರಿಸಿದ್ದಾದರೆ ಸಭೆಯಲ್ಲಿ ಪರಿಷ್ಕಾರವಾದ ಸುಧಾರಣೆಯನ್ನು ಅದು ತಂದುಕೊಟ್ಟು, ಸಜೀವ ಸಾಕ್ಷಿಗಳನ್ನು ಪುನರುಜ್ಜೀವನಗೊಳಿಸಿ, ಕಪಟಿಗಳನ್ನೂ ಪಾಪಿಗಳನ್ನೂ ತೊಳೆದು ಶುದ್ದ ಮಾಡುವುದು ಅಲ್ಲದೆ ಸಭೆಯನ್ನು ಮತ್ತೊಮ್ಮೆ ದೇವರ ಮೆಚ್ಚಿಕೆಗೆ ಪುನರ್ ಸ್ಥಾಪಿಸುತ್ತದೆ.GCKn 172.1

    ಓದಿ: ಯೆಶಾಯ ; 30:8-21; ಯಾಕೋಬ 2:19; ಪ್ರಕಟಣೆ ಅಧ್ಯಾಯ 3.GCKn 173.1

    Larger font
    Smaller font
    Copy
    Print
    Contents