Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 24. - ಎರಡನೇ ದೂತನ ಸಂದೇಶ

    ದೇವರ ಮೆಚ್ಚುಗೆಯಿಂದ ಬೀಳುತ್ತಿದ್ದ ಪರಲೋಕದ ಬೆಳಕನ್ನು ನಿರಾಕರಿಸಿದ ಕಾರಣ ಮೊದಲ ದೂತನ ಸಂದೇಶವನ್ನು ಸಭೆಗಳು ಅಂಗೀಕರಿಸಲಿಲ್ಲ. ಅವರು ತಮ್ಮ ಬಲವನ್ನೇ ಆಧಾರವಾಗಿಟ್ಟುಕೊಂಡು ಮೊದಲನೇಸಂದೇಶಕ್ಕೆ ವಿರುದ್ದ ಪಕ್ಷವಾದ ಕಾರಣ ಎರಡನೇ ದೂತನ ಸಂದೇಶದ ಬೆಳಕನ್ನು ನೋಡಲಾಗಲಿಲ್ಲ. ಆದರೆ ತುಳಿತಕೊಳ್ಳಗಾದ ದೇವರ ಮಕ್ಕಳು ಬಾಬೇಲು ಬಿದ್ದಿತು, ಎಂಬ ಸಂದೇಶಕ್ಕೆ ಉತ್ತರಕೊಟ್ಟು ಬಿದ್ದ ಸಭೆಗಳನ್ನು ತೊರೆದುಹೋದರು. GCKn 191.1

    ಎರಡನೇದೂತನ ಸಂದೇಶದ ಅಂತ್ಯದಲ್ಲಿ ದೇವರ ಮಹಾ ಬೆಳಕು ಪರಲೋಕದಿಂದ ದೇವರಮಕ್ಕಳ ಮೇಲೆ ಥಳಥಳನೆ ಹೊಳೆಯುತ್ತಿದ್ದುದನ್ನು ನಾನು ಕಂಡೆನು. ಇದು ಸೂರ್ಯನಂತೆ ಬಹು ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಬೆಳಕಿನ ಕಿರಣವಾಗಿತ್ತು. ದೇವದೂತರು — ಇಗೋ ಮದಲಿಂಗನು, ಅವನನ್ನು ಎದುರುಗೊಳ್ಳುವುದಕ್ಕೆ ಹೊರಡಿರಿ ಎನ್ನುವ ಕೂಗನ್ನು ನಾನು ಕೇಳಿದೆನು.GCKn 191.2

    ಈ ಅರ್ಧರಾತ್ರಿಯ ಕೂಗು ಎರಡನೆಯ ಸಂದೇಶಕ್ಕೆ ಬಲಕೊಡುವ ಕೂಗಾಗಿತ್ತು . ನಿರಾಶೆಗೊಂಡಿದ್ದ ಭಕ್ತರನ್ನೆಲ್ಲಾ ಎಬ್ಬಿಸಲು ಮತ್ತು ಅವರ ಮುಂದಿನ ಕಾರ್ಯವನ್ನು ಸಿದ್ದಪಡಿಸಲು ಪರಲೋಕದಿಂದ ದೂತರನ್ನು ಕಳುಹಿಸಲಾಯಿತು ಬಹು ಪ್ರತಿಭೆಯುಳ್ಳ ಈ ವ್ಯಕ್ತಿಗಳು ಈ ಸಂದೇಶವನ್ನು ಅಂಗೀಕರಿಸುವುದರಲ್ಲಿ ಮೊದಲನೆಯವರಾಗಲಿಲ್ಲ. ದೇವದೂತರನ್ನು, ಧೀನವ್ಯಕ್ತಿಗಳು ಹಾಗೂ ಭಕ್ತರ ಬಳಿಗೂ ಕಳುಹಿಸಲ್ಪಟ್ಟು, ಅವರು ಇಗೋ ಮದಲಿಂಗನು ಬರುತ್ತಾನೆ, ಅವನನ್ನು ಎದುರುಗೊಳ್ಳುವುದಕ್ಕೆ ಹೊರಡಿರಿ ಎಂಬ ಕೂಗುನ್ನು ಹತ್ತಿಕ್ಕಲಾರದೆ ಹೋದರು. ಈ ಕೂಗನ್ನು ಹೊಂದಿದವರು ಆತುರದಿಂದ ಪವಿತ್ರಾತ್ಮನ ಬಲದಿಂದ ಹಬ್ಬಿಸಿದರು ಮತ್ತು ನಿರಾಶೆಹೊಂದಿದ ಸಹೋದರರನ್ನು ಎಬ್ಬಿಸಿದರು. ಈ ಕೂಗು ಮಾನವನ ತಿಳುವಳಿಕೆ ಮತ್ತು ವಿವೇಕದ ಮೇಲೆ ಆತುಕೊಳ್ಳದೆ ದೈವಬಲದ ಮೇಲೆ ಆತುಕೊಂಡಿತು, ಕೂಗನ್ನು ಕೇಳಿದ ಆತನು ಭಕ್ತರು ಇನ್ನು ತಾಳಿಕೊಳ್ಳಲಾಲಿಲ್ಲ. ಬಹು ಭಕ್ತಯಿಂದಿದ್ದವರು ಈ ಸಂದೇಶವನ್ನು ಮೊದಲು ಅಂಗೀಕರಿಸಿದರು ಮತ್ತು ಈ ಮೊದಲೇ ಕಾರ್ಯೋನ್ಮುಖರಾದವರು ಕೊನೆಯವರಾಗಿದ್ದು ಇಗೋ ಮದಲಿಂಗನು, ಅವನನ್ನು ಎದುರುಗೊಳ್ಳಲು ಹೊರಡಿರಿ ಎಂದು ಆರ್ಭಟಿಸುವುದರಲ್ಲಿ ಸಹಾಯಕರಾದರು.GCKn 191.3

    ಪ್ರದೇಶದ ಪ್ರತಿಭಾಗದಲ್ಲೂ ಎರಡನೇ ದೂತನ ಸಂದೇಶದ ಮೇಲೆ ಬೆಳಕು ಬೀರಲಾಯಿತು. ಈ ಕೂಗು ಸಾವಿರಾರು ಜನರನ್ನು ಕರಗಿಸಿತು. ದೇವರಿಗಾಗಿ ಕಾದುಕೊಡಿದ್ದ ಜನರೆಲ್ಲಾ ಎಚ್ಚೆತ್ತುಕೊಳ್ಳಲು ಈ ಸಂದೇಶವು ನಗರದಿಂದ ನಗರಕ್ಕೆ, ಹಳ್ಳಿಯಿಂದ ಹಳ್ಳಿಗೆ ಹಬ್ಬುತ್ತಾ ಬಂತು.GCKn 192.1

    ಈ ಸಂದೇಶವು ಸಭೆಯನ್ನು ಮುಟ್ಟಭಾರದೆಂದು ಅನೇಕರು ಅಡ್ಡಗಟ್ಟಿದರು ಆದರೆ ಸಭೆಯಲ್ಲಿ ಅಗಾಧ ಸಂಖ್ಯೆಯಲ್ಲಿದ್ದ ಸಜೀವಸಾಕ್ಷಿಗಳು ಬಿದ್ದುಹೋದ ಸಭೆಗಳನ್ನು ತೊರೆದರು. ಈ ಅರ್ಧರಾತ್ರಿಯ ಕೂಗಿನಿಂದ ಅವರು ಘನವಾದ ಕಾರ್ಯವನ್ನು ಸಾಧಿಸಿದರು. ಈ ಸಂದೇಶವು ಹೃದಯ ಪರೀಕ್ಷೆಹುಟ್ಟಿಸಿ ವಿಶ್ವಾಸಿಗಳನ್ನು ತಾವಾಗಿಯೇ ಸ್ವತಃ ಸಜೀವ ಅನುಭವವನ್ನು ಪಡೆದುಕೊಳ್ಳಲು ನಡೆಯಿಸಿತು. ಅವರು ಒಬ್ಬರಿನ್ನೊಬ್ಬರ ಮೇಲೆ ಆತುಕೊಳ್ಳಬಾರದೆಂದು ಅವರಿಗೆ ತಿಳಿದಿತ್ತು. ಭಕ್ತರ ಉಪವಾಸದಿಂದಿದ್ದು ಎಚ್ಚರಿಕೆಯಿಂದ ಬಹು ಮಟ್ಟಿಗೆ ಸತತವಾಗಿ ಪ್ರಾರ್ಥನೆ ಮಾಡುತ್ತಾ ಕರ್ತನಿಗಾಗಿ ಕಾತುರದಿಂದ ಕಾದ್ದಿದರು. ಕೆಲವು ಪಾಪಿಗಳೂ ಸಹ ಬರುವಣದ ಗಳಿಗೆಯನ್ನು ಭಯದಿಂದ ಕಾಯುತ್ತಿದ್ದರು ಈ ಸಂದೇಶದಿಂದ ಮಹಾಸಮೂಹವು ಗಲಬಿಲಿಗೊಡಂತಾಗಿ ಸೈತಾನನ ಆತ್ಮವು ಪ್ರಕಟಿಸಿತು. ಅವರು ಎಲ್ಲಾ ಕಡೆಗೆ ಕೇಳಿಸುವಂತೆ ಅವಹೇಳನಮಾಡುತ್ತಾ ಹಿಯ್ಯಾಳಿಸುತ್ತಾ, ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ಯಾವ ಮನುಷ್ಯನಿಗೂ ತಿಳಿದಿಲ್ಲ ಎನ್ನುತ್ತಿದ್ದರು. ದುಷ್ಟದೂತರು ಅವರ ಸುತ್ತಲೂ ವಿಜೃಂಭಿಸಿದರು ಮತ್ತು ಪರಲೋಕದಿಂದ ಬರುವ ಪ್ರತಿ ಕಿರಣವನ್ನು ತಿರಸ್ಕರಿಸಲು ಅವರು ಹೃದಯಗಳನ್ನು ಕಠಿಣಮಾಡಿಕೊಳ್ಳುವಂತೆ ಒತ್ತಾಯಿಸಿದರು. ಜನರನ್ನು ತಮ್ಮಬಲೆಯಲ್ಲಿ ಬಂದಿಸಬಹುದೆಂದು ಭಾವಿಸಿದರು. ಕರ್ತನಿಗಾಗಿ ಎದುರುನೋಡುತ್ತಿದ್ದೇವೆ ಎನ್ನುತ್ತಿದ್ದ ತೋರ್ವಿಕೆಯ ಕ್ರೈಸ್ತರು ಈ ವಿಷಯದಲ್ಲಿ ಇತ್ತ ಕಡೆಗೂ ಅಲ್ಲದೆ ಅತ್ತ ಕಡೆಗೂ ಅಲ್ಲದೆ ನಿಂತಿದ್ದರು. ಇವರು ದೇವರ ಮಹಿಮೆಗೆ ಸಾಕ್ಷಿಗಳಾಗಿದ್ದರು, ಕಾದಿದ್ದವರ ಸಾಧುತ್ವ, ಆಳವಾದ ಭಕ್ತಿಮತ್ತು ತುಂಬಿತುಳುಕುತ್ತಿದ್ದ ಪುರಾವೆಗಳ ಪ್ರಮಾಣವು ಅವರಿಗೆ ಸತ್ಯವನ್ನು ಅಂಗೀಕರಿಸಲು ಸಹಾಯಮಾಡಿತ್ತಾದರೂ ಮನಃಪರಿವರ್ತನೆ ಹೊಂದಲಿಲ್ಲ; ಅವರು ಸಿದ್ದರಾಗಿರಲಿಲ್ಲ. ಭಕ್ತರು ಎಲ್ಲಾಕಡೆಗಳಲ್ಲಿ ಗಂಭೀರ ಮತ್ತು ಮನಃಪೂರ್ವಕವಾಗಿ ಪ್ರಾರ್ಥನಾ ಆತ್ಮವನ್ನು ಸ್ಪರ್ಶಿಸಿದರು. ಪವಿತ್ರಗಂಭೀರತೆ ಅವರ ಮೇಲೆ ನೆಲೆಗೊಂಡಿತು. ದೇವದೂತರು ಬಹು ಆಸಕ್ತಿಯಿಂದ ಫಲಿತಾಂಶವನ್ನು ಎದುರು ನೋಡುತ್ತಿದ್ದರು ಪರಲೋಕ ಸಂದೇಶ ಅಂಗೀಕರಿಸಿದವರನ್ನು ಎತ್ತಿ ಹಿಡಿಯುತ್ತಿದ್ದರು. ಮಾತ್ರವಲ್ಲದೆ ರಕ್ಷಣೆಯ ಚಿಲುಮೆಯಿಂದ ಮಹಾ ಸರಾಬರಾಜು ಪಡೆಯಲು ಐಹಿಕ ವಿಷಯಗಳಿಂದ ಅವರನ್ನು ತಮ್ಮಡೆಗೆ ಸೆಳೆದುಕೊಳ್ಳುತ್ತಿದ್ದರು. ಆತನೊಂದಿಗೆ ದೇವರ ಮಕ್ಕಳೂ ಅಂಗೀಕರಿಸಲ್ಪಟ್ಟರು. ಯೇಸುವು ಅವರನ್ನು ಬಹು ಮೆಚ್ಚಿಕೆಯಿಂದ ದೃಷ್ಟಿಸಿದನು. ಅವರಲ್ಲಿ ಅತನ ಬಿಂಬವು ಪ್ರತಿಫಲನಗೊಂಡಿತು .ಅವರು ಸಂಪೂರ್ಣ ತ್ಯಾಗಮಾಡಿ, ಪರಿಪೂರ್ಣ ಶುದ್ಧಿಹೊಂದಿ ಅಮರತ್ವ ಹೊಂದಿಕೊಳ್ಳುವ ಸಲುವಾಗಿ ಮಾರ್ಪಡಲು ಅಪೇಕ್ಷಿಸಿದರು. ಆದರೆ ಅವರು ಮತ್ತೆ ಬಹು ದುಃಖದಿಂದ ನಿರಾಶೆಗೊಳಗಾಗುವಂತೆ ಗೊತ್ತುಮಾಡಲ್ಪಟ್ಟಿತು ಅವರು ಬಿಟ್ಟ ಕಣ್ಣಿನಿಂದ ಕಾಯುತ್ತಿದ್ದ ಬಿಡುಗಡೆಯ ಗಳಿಗೆಯು ಕಳೆದುಹೋಯಿತು. ಅವರು ಇನ್ನೂ ಭೂಮಿಯ ಮೇಲೆ ಇದ್ದರು. ಶಾಪದ ಪರಿಣಾಮ ಸರಿಯಾಗಿ ಪ್ರತ್ಯಕ್ಷವಾಗದಂತಾಯಿತು .ಅವರು ಪರಲೋಕದ ಮೇಲೆ ಬಹು ಒಲವನ್ನು ಇಟ್ಟಿದ್ದರು, ಮತ್ತು ನಿರಂತರ ಬಿಡುಗಡೆಯನ್ನು ಅನುಭವಿಸುವ ಮಧುರ ನಿರೀಕ್ಷೆಯಲ್ಲಿದ್ದರು; ಆದರೆ ಅವರ ನಿರೀಕ್ಷೆಯು ಕೈಗೊಡಲಿಲ್ಲ.GCKn 192.2

    ಬಹುಜನರ ಮೇಲೆ ಎರಗಿದ ಭಯವು ತತ್ ಕ್ಷಣಕ್ಕೆ ಮಾಯವಾಗಲಿಲ್ಲ. ಅವರು ನಿರಾಶೆಗೊಂಡವರ ಮೇಲೆ ಜಯಸಾಧಿಸಲಾಗಲಿಲ್ಲ. ದೇವರ ಕ್ರೊಧದ ಅನುಭವ ಅವರಿಗಾಗದಿದ್ದಾಗ, ಅವರಲ್ಲಡಗಿದ್ದ ಭಯವು ಹೊರಟುಹೋಯಿತು. ಅದ್ದರಿಂದ ಅವರ ಅವಹೇಳನ, ಹೀಯ್ಯಾಳಿಕೆ, ಹಂಗಿಸುವಿಕೆಯ ಪ್ರಾರಂಭವಾಯಿತು, ದೇವರ ಮಕ್ಕಳೂ ಪುನಃಪರೀಕ್ಷೆಗೊಳಗಾಗಿ ಪ್ರಮಾಣೀಕರಿಸಲ್ಪಟ್ಟರು. ಲೋಕವು ಅವರನ್ನು ಹಂಗಿಸಿ, ಖಂಡಿಸಿ , ಅಟ್ಟಹಾಸದಿಂದ ನಕ್ಕಿತು ಆದರೆ ಯಾವುದೇ ಅನುಮಾನವಿಲ್ಲದೆ ಯೇಸುವು ಬರುವನು, ಸತ್ತವರನ್ನು ಎಬ್ಬಿಸಿ, ಬದುಕಿರುವ ಭಕ್ತರನ್ನು ಮಾರ್ಪಡಿಸಿ ಪರಲೋಕಕ್ಕೆ ಕರೆದು ಕೊಂಡು ಹೋಗಿ ನಿರಂತರವಾಗಿ ನೆಲೆಸುವೆವೆಂದು ನಂಬಿಕೊಂಡ ಕ್ರಿಸ್ತನ ಶಿಷ್ಯರಂತೆ ಅವರು ನನ್ನ ಸ್ವಾಮಿಯನ್ನು ಎತ್ತಿಕೊಂಡು ಹೋಗಿದ್ದಾರೆ .; ಎಲ್ಲಿಟ್ಟಿದ್ದಾರೋ ತಿಳಿಯದು ಎಂದು ಭಾವಿಸಿಕೊಂಡರು.GCKn 195.1

    ಓದಿ: ಮತ್ತಾಯ 24:36, 25:6; ಯೋಹಾನ 20:13; ಪ್ರಕಟನೆ 14:8 GCKn 195.2