Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 27. - ದೇವದರ್ಶನ ಗುಡಾರ

    ಆ ನಂತರ ನನಗೆ ದೇವಜನರ ತೀವ್ರ ನಿರಶೆಯನ್ನು ತೋರಿಸಲಾಯಿತು. ಅವರು ನಿರೀಕ್ಷಿಸಿದ ಸಮಯಕ್ಕೆ ಯೇಸು ಬರಲಿಲ್ಲ. ಅವರು ರಕ್ಷಕನು ಏಕೆ ಬರಲಿಲ್ಲವೆಂದೂ ತಿಲಿಯಲಿಲ್ಲ, ಪ್ರವಾದನಾ ಕಾಲ ಏಕೆ ಕೊನೆಗೊಳ್ಳಲಿಲ್ಲ ಎಂಬುದಕ್ಕೆ ಯಾವ ಗುರುತೂ ಕಾಣಲಿಲ್ಲ. ಆಗ ದೂತನು ಬಂದು ,ಎಂದಾದರೂ ದೇವರು ಮಾತುಗಳು ಸುಳ್ಳಾಯಿತೇ? ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದಲ್ಲಿ ತಪ್ಪಿದ್ದಾರೋ? ಎಂದು ಕೇಳಿದನು. ಇಲ್ಲ ;ಅತನು ತನ್ನ ಎಲ್ಲಾ ವಾಗ್ದಾನಗಳನ್ನು ನೆರವೇರಿಸಿದ್ದಾನೆ. ಯೇಸುವು ಮರಣದಿಂದ ಎದ್ದು ಪರಲೋಕದ ದೇವದರ್ಶನ ಗುಡಾರದ ಪರಿಶುದ್ದ ಸ್ಥಳದಲ್ಲಿನ ಬಾಗಿಲನ್ನು ಮುಚ್ಚಿದನು, ಮಹಾಪರಿಶುದ್ಧ ಸ್ಥಳದ ಬಾಗಿಲನ್ನು ತೆರೆದನು ಮತ್ತು ಪರ್ಣಶಾಲೆಯನ್ನು ಶುದ್ದಮಾಡಲು ಪ್ರವೇಸಿದ್ದಾನೆ. ಯಾರಲ್ಲ ತಾಳ್ಮೆಯಿಂದ ಕಾದಿರುವರೋ ಅವರು ಈ ರಹಸ್ಯವನ್ನು ಅರ್ಥಮಾಡಿಕೊಳ್ಳುವರು, ಎಂದು ದೂತನು ಹೇಳಿದನು. ಮಾನವನು ತಪ್ಪು ಮಾಡಿದ್ದಾನೆ; ಆದರೆ ದೇವರ ಕಡೆ ಎಂದೂ ತಪ್ಪಿರುವುದಿಲ್ಲ. ದೇವರು ವಾಗ್ದಾನಮಾಡಿದ್ದೆಲ್ಲವೂ ನೆರವೇರಿದೆ; ಆದರೆ ಮಾನವನು, ಭೂಮಿಯನ್ನೇ ಪರ್ಣಶಾಲೆ ಎಂದು ತಪ್ಪಾಗಿ ನೋಡಿ, ಪ್ರವಾದನಾ ಕಾಲದ ಅಂತ್ಯದಲ್ಲಿ ಇದು ಶುದ್ಧಗೊಳಿಸಲ್ಪಡುವುದು ಎಂದು ಭಾವಿಸಿದನು .ಮಾನವನ ನಿರೀಕ್ಷೆಯು ಸುಳ್ಳಾಯಿತು; ದೇವರ ವಾಗ್ದಾನವಲ್ಲ. ನಿರಾಶೆಗೊಂಡವರನ್ನು ಸರಿಯಾದ ಮಾರ್ಗದಲ್ಲಿ ನಡೆಸಿ, ಯೇಸುವು ಪರ್ಣಶಾಲೆಯ ಶುದ್ಧೀಕರಣೆಗಾಗಿ ಮಹಾಪರಿಶುದ್ಧ ಸ್ಥಳಕ್ಕೆ ಪ್ರವೇಶಿಸಿ ಇಸ್ರಾಯೇಲ್ಯರಿಗಾಗಿ ವಿಶೇಷ ಪ್ರಾಯಶ್ಚಿತ್ತ ಮಾಡುವನೆಂದು ಗ್ರಹಿಸಿಕೊಡುವಂತೆ ಯೇಸು ದೇವದೂತನನ್ನು ಕಳುಹಿಸಿದನು. ಯೇಸುವು ಆತನ ದೂತರಿಗೆ, ಯಾರು ಆತನನ್ನು ಕಂಡುಕೊಂಡರೋ ಅವರೆಲ್ಲಾ ಆತನ ಕಾರ್ಯವನ್ನು ಅರ್ಥೈಸಿಕೊಳ್ಳುವರೆಂದು ತಿಳಿಸಿದನು. ಯೇಸುವು ಮಹಾಪರಿಶುದ್ದ ಸ್ಥಳದಲ್ಲಿ ಇರುವಾಗ ಆತನು ಹೊಸ ಯೆರುಸಲೇಮಿನೊಂದಿಗೆ ವಿವಾಹವಾಗಿ, ಮಹಾಪರಿಶುದ್ಧ ಸ್ಥಳದ ಕೆಲಸವನ್ನು ಮುಗಿಸಿಕೊಂಡು, ರಾಜಾಧಿರಾಜನಂತೆ ಪ್ರಬಲನಾಗಿ ಭೂಮಿಗೆ ಇಳಿದು ಬಂದು, ಆತನ ಬರುವಣಕ್ಕಾಗಿ ಸಮಾದಾನದಿಂದ ಕಾಯುತ್ತಿರುವ ಅಮೂಲ್ಯರನ್ನು ತನಗಾಗಿ ಕರೆದುಕೊಂಡು ಹೋಗಲು ಬರುವನು.GCKn 215.1

    1844 ರಲ್ಲಿ ಪ್ರವಾದನಾ ಕಾಲವಧಿಯು ಕೊನೆಗೊಳ್ಳುತ್ತಿದಂತೆ ಪರಲೋಕದಲ್ಲಿ ಸಂಭವಿಸಿದ್ದೇನೆಂದು ನನಗೆ ತೋರಿಸಲಾಯಿತು. ಪರಿಶುದ್ಧ ಸ್ಥಳದಲ್ಲಿ ಯೇಸುವಿನ ಸೇವೆ ಮುಗಿಯಲು ಆತನು ಆ ಕೋಣೆಯ ಬಾಗಿಲನ್ನು ಮುಚ್ಚಿದನು. ಕ್ರಿಸ್ತನ ಪುನರಾಗಮನ ಸಂದೇಶವನ್ನು ಕೇಳಿ ಅದನ್ನು ತಿರಸ್ಕರಿಸಿದವರ ಮೇಲೆ ಮಹಾಕತ್ತಲೆಯು ಆವರಿಸಿತು, ಅತನನ್ನು ಅವರು ಕಾಣದಾದರು ಎಂಬುದನ್ನು ನನಗೆ ತೋರಿಸಲಾಯಿತು. ಅನಂತರ ಯೇಸುವು ತನ್ನ ಅಮೂಲ್ಯವಸ್ತ್ರವನ್ನು ಧರಿಸಿಕೊಂಡನು ಆ ವಸ್ತ್ರದ ತಳಭಾಗದಲ್ಲಿ ಗೆಜ್ಜೆ ಮತ್ತು ದಾಳಿಂಬೆಹಣ್ಣಿನಂತ ಚಂಡುಗಳು ಅಂಚಿನ ಸುತ್ತಲೂ ಕಂಡು ಬಂದವು. ಆತನ ಭುಜದಿಂದ ಕುತೂಹಲ ಕಾರ್ಯವೆಂಬ ಎದೆಕವಚವು ತೂಗುತ್ತಿತ್ತು. ಆತನು ಅತ್ತಿಂದಿದಿತ್ತ ನಡೆದಾಡುವಾಗ ಅದು ವಜ್ರದಂತೆ ಹೊಳೆದು, ಕವಚದ ಮೇಲೆ ಹೆಸರು ಬರೆದಿಂತಿರುವುದೋ ಅಥವಾ ಕೆತ್ತಲ್ಪಟ್ಟಿರುವಂತೆ ಅಕ್ಷರಗಳು ಸ್ಪಷ್ಟವಾಗಿ ಕಂಡವು. ಆತನು ಪರಿಪೂರ್ಣವಾಗಿ ಉಡುಗೆತೊಡುಗೆಯಿಂದ ಸುಸಜ್ಜಿತನಾದ ಮೇಲೆ ಕಿರೀಟದಂತೆರುವ ಒಂದನ್ನು ಶಿರದಲ್ಲಿ ಇಡಲಾಯಿತು. ದೇವದೂತರು ಆತನ ಸುತ್ತಲೂ ಕೊಡಿಬಂದರು, ಜ್ವಲಿಸುತ್ತಿರುವ ರಥವನ್ನೇರಿ ಆತನು ಎರಡನೆ ಪರದೆಯ ಒಳಗೆ ಹೋದನು. ಆಗ ನನಗೆ ಪರ್ಣಶಾಲೆ ಅಥವಾ ದೇವದರ್ಶನ ಗುಡಾರದ ಎರಡನೆ ಭಾಗವನ್ನು ಗಮನಿಸಲು ಹೇಳಿದರು. ಪರದೆಯು ತೆರೆಯಲ್ಪಟ್ಟಿತು, ನಾನು ಒಳಗೆ ಪ್ರವೇಶಿಸಿದೆನು, ಮೊದಲನೇ ಭಾಗದಲ್ಲಿ [ಪರಿಶುದ್ಧ ಸ್ಥಳ] ಏಳುದೀಪಗಳನ್ನೊಳಗೊಂಡ ದೀಪಸ್ಥಂಭವು ಇದು, ಬಹು ಸಂಪದ್ಭರಿತವಾಗಿಯೂ ಅಲಂಕಾರಿಕಾವಾಗಿಯೂ ಇತ್ತು; ಒಂದು ಮೇಜು ಅದರ ಮೇಲೆ ಸಮರ್ಪಿಸಿದ ರೊಟ್ಟಿ, ದೊಪಾರತ್ತಿ, ದೊಪಸ್ಥಂಭ ಇದ್ದವು ಈ ಭಾಗದ ಎಲ್ಲಾ ಪೀರೋಪಕರಣಗಳು ಶುದ್ಧ ಚಿನ್ನದಿಂದ ಮಾಡಲ್ಪಟ್ಟು ಆ ಭಾಗಕ್ಕೆ ಪ್ರವೇಶಿಸಿದವರನ್ನು ಪ್ರತಿಬಿಂಬಿಸುತ್ತಿತ್ತು. ಈ ಎರಡು ಭಾಗವನ್ನು ಬೇರ್ಪಡಿಸಿದ್ದ ತೆರೆಯು ಶೋಭಾಯಮಾನವಾಗಿ ಕಂಡುಬಂತು. ಅದು ವಿವಿದ ವರ್ಣಗಳಿಂದಲೂ ನೇಯ್ದು ವಸ್ತುವಿನಿಂದ ಮಾಡಲ್ಪಟ್ಟಿದು ಸುಂದರವಾದ ಅಂಚಿನಿಂದ ಕೂಂಡಿತ್ತು ದೂತರನ್ನು ಹೋಲುವ ಕಾಸೂತಿಯನ್ನು ಚಿನ್ನದ ದಾರದಿಂದ ಹೊಲಿಯಲಾಗಿತ್ತು. ತೆರೆಯ ಮೇಲೆ ಎತ್ತಲ್ಪಟ್ಟು ನಾನು ಎರಡನೆ ಭಾಗವನ್ನು ಕಂಡನು. ಒಳಗೆ ಮಂಜೂಷವಿದ್ದು ಅದು ಶುದ್ಧ ಚಿನ್ನದಿಂದ ಮಾಡಿರುವುದನ್ನು ಕಂಡೆನು. ಅದರ ಮೇಲೆ ಕಿರೀಟವನ್ನು ಪ್ರತಿನಿಧಿಸುವ ಗೋಟುಗಳಿದ್ದು ಬಹು ಅಲಂಕಾರಿಕವಾಗಿ ಮಾಡಲ್ಪಟ್ಟಿತು. ಅದು ಸಹ ಶುದ್ಧ ಬಂಗಾರದ್ದೇ. ಮಂಜೂಷದ ಒಳಗೆ ಹತ್ತು ಕಟ್ಟಳೆಗಳನ್ನು ಬರೆದ್ದಿದ ಕಲ್ಲಿನ ಹಲಗೆಗಳಿದ್ದವು. ಮಂಜೂಷದ ಎರಡೂ ಕಡೆ ಸುಂದರವಾದ ಕೆರೂಬಿಯರು ತಮ್ಮ ರೆಕ್ಕೆಗಳನ್ನು ಆದರ ಮೇಲೆ ಹರಡಿಕೊಂಡಿದ್ದರು. ಯೇಸುವು ಮಂಜೂಷದ ಪಕ್ಕದಲ್ಲಿ ನಿಲ್ಲಲು ಅವರ ಎರಡೂ ರೆಕ್ಕೆಗಳು ಮೇಲೆ ಎತ್ತಿಲ್ಪಟ್ಟು ಒಂದಕ್ಕೊಂದು ತಾಗಿಕೊಂಡಿದ್ದು ಆತನ ತಲೆಯ ಮೇಲೆ ಆಚ್ಥಾದಿಸಿಕೊಂಡವು ಅವರ ಮುಖಗಳು ಎದುರುಬದುರಾಗಿದ್ದು ಮಂಜೂಷದ ಕಡೆಗೆ ಕೆಳಗೆ ನೋಡುತ್ತಿದ್ದರು ಇದು ದೇವರ ಆಜ್ಞೆಗಳನ್ನು ಬಹು ಆಸಕ್ತಿಯಿಂದಲೂ ಭಕ್ತಿಭಾವದಿಂದಲೂ ನೋಡುತ್ತಿರುವ ಪರಲೋಕದಗಣಗಳನ್ನು ಪ್ರತಿನಿಧಿಸುತ್ತಿತ್ತು ಇಬ್ಬರು ಕೆರೂಬಿಯರ ನಡುವೆ ಚಿನ್ನದ ದೂಪಾರತಿ ಇತ್ತು. ಭಕ್ತರ ನಂಬುಗೆಯ ಪ್ರಾರ್ಥನೆಗಳು ಯೇಸುವಿನೆಡೆಗೆ ಬರಲು, ಆತನು ಆದನ್ನು ತಂದೆಗೆ ಅರ್ಪಿಸಿದನು, ದೊಪಾರತಿಯಿಂದ ಸುವಾಸನೆ ಹೊರಡಿತು ಅದು ಬಹು ವರ್ಣಗಳಿಂದ ಕೂಡಿದ ಹೊಗೆಯೋಪಾಧಿಯಲ್ಲಿ ಕಂಡು ಬಂದಿತು. ಮಂಜೂಷದ ಮುಂದೆ ಯೇಸುವು ನಿಂತಿದ್ದ ಸ್ಥಳದ ಮೇಲೆ ಪ್ರಜ್ವಲಿಸುವ ಮಹಾಪ್ರಭೆಯು ಕಂಡುಬಂತು. ಆದರೆ ಅದನ್ನು ನಾನು ನೋಡಲಾಗಲಿಲ್ಲ ಅದು ದೇವರು ಕುಳಿತಿರುವ ಸಿಂಹಾಸನದಂತೆ ಕಂಡಿತು. ಧೂಪದ ಹೊಗೆ ತಂದೆಯ ಬಳಿಗೆ ಏರಿಹೋಗಲು ಅದ್ಬುತವಾದ ಮಹಾಪ್ರಭೆ ತಂದೆಯ ಸಿಂಹಾಸನದಿಂದ ಯೇಸುವಿನ ಮೇಲೆ ಇಳಿದು ಬಂತು, ಮತ್ತು ಯೇಸುವಿನ ಮೂಲಕ ಬಕ್ತರ ಪ್ರಾರ್ಥನೆಗಳು ಸುವಾಸುತ ಧೂಪದಂತೆ ಏರಿತೋ ಅವರ ಮೇಲೆ ಇಳಿದು ಬಂತು. ಯೇಸುವಿನ ಮೇಲೆ ಉಜ್ವಲ ಬೆಳಕು ಹಾಗೂ ಪ್ರಭೆಯು ಬಹು ಶೋಭಾಯಮಾನವಾಗಿ ಸುರಿಸಲ್ಪಟ್ಟು ಕೃಪಾಸನದ ಮೇಲೆ ಆಚ್ಛಾದಿಸಿತು, ಆನಂತರ ಪ್ರಭೆಯು ಹಂತಹಂತವಾಗಿ ದೇವಾಲಾಯದಲ್ಲೆಲ್ಲಾ ತುಂಬಿಕೊಂಡಿತು. ಈ ಪ್ರಕಾಶವನ್ನು ಹೆಚ್ಚುಹೊತ್ತು ನಾನು ನೋಡಲಾಗಲಿಲ್ಲ. ಯಾವ ಭಾಷೆಯೂ ಬೆಳಕಿನ ತೀವ್ರತೆಯನ್ನು ವರ್ಣಿಸಲಾಗದು. ನಾನು ಹಿಗ್ಗಿನಿಂದ ತುಂಬಿದವಳಾಗಿ ಈ ದೃಶ್ಯದ ಮಹಾಪ್ರಭೆ ಹಾಗೂ ಘನತೆಯಿಂದ ವಿಮುಖಳಾದೆನು.GCKn 216.1

    ಭೂಲೋಕದ ಪರ್ಣಶಾಲೆ ಎರಡು ಭಾಗಗಳನ್ನು ನನಗೆ ತೋರಿಸಲಾಯಿತು ಪರಲೋಕದಲ್ಲಿದ್ದಂತೆಯೇ ಇತ್ತು. ಇದು ಪರಲೋಕದ ಗುಡಾರವನ್ನು ಪ್ರತಿನಿಧಿಸುವ ಭೂಲೋಕದ ಗುಡಾರ ಎಂದು ನನಗೆ ತಿಳಿಸಲಾಯಿತು. ಮೊದಲ ಭಾಗದ ಪೀಠೋಪಕರಣಗಳು ಪರಲೋಕದ ಪರ್ಣಶಾಲೆಯ ಮೊದಲ ಭಾಗದಲ್ಲಿದ್ದಂತೆಯೇ ಯಥಾವತ್ತಾಗಿತ್ತು ತೆರೆಯು ಮೇಲೆತ್ತಲ್ಪಡಲು ನಾನು ಮಹಾಪರಿಶುದ್ಧಸ್ಥಳವನ್ನು ಕಂಡೆನು, ಅದೂ ಸಹ ಪರಲೋಕದ ಮಹಾಪರಿಶುದ್ದಸ್ಥಳದಲ್ಲಿಂತಹ ಪೀಠೋಪಕರಣಗಳೇ ಆಗಿದ್ದವು ಯಾಜಕರು ಭೂಲೋಕದ ಎರಡೂ ಭಾಗಗಳಲ್ಲಿ ಸೇವೆ ಮಾಡುತ್ತಿದ್ದರು. ಮೊದಲ ಭಾಗದಲ್ಲಿ ವರ್ಷದ ಪ್ರತಿದಿನವೂ ಸೇವೆಸಲ್ಲಿಸುತ್ತಿದ್ದರೆ ವರ್ಷಕ್ಕೆ ಒಂದಾವರ್ತಿ ಮಾತ್ರ ಮಹಾಪರಿಶುದ್ದ ಸ್ಥಳದ ಸೇವೆ ನಡೆಯುತ್ತಿತು. ವರ್ಷವೆಲ್ಲಾ ಅರಕೆ ಮಾಡಲ್ಪಟ್ಟ ಪಾಪಗಳು ಶುದ್ಧೀಕರಣೆ ಇಲ್ಲಿ ನಡೆಯುತ್ತಿತ್ತು ಯೇಸು ಪರಲೋಕದ ಪರ್ಣಶಾಲೆಯ ಎರಡೂ ಭಾಗದಲ್ಲಿ ಸೇವೆಸಲ್ಲಿಸುತ್ತಿದ್ದುದನ್ನು ನಾನು ಕಂಡೆನು - ಆತನು ತನ್ನ ರಕ್ತದಾರೆ ಎರೆದು ಪರಲೋಕದ ಪರ್ಣಶಾಲೆಗೆ ಪ್ರವೇಶಿಸಿದನು ಭೂಲೋಕದ ಯಾಜಕರೆಲ್ಲ ಸತ್ತುಹೋಗುತ್ತಿದ್ದುದರಿಂದ ಬಹುಕಾಲದವರೆಗೆ ಅವರು ಸೇವೆಮಾಡಲಾಗುತ್ತಿರಲಿಲ್ಲ; ಆದರೆ ಯೇಸು ನಿರಂತರ ಮಹಾಯಾಜಕನಾಗಿರುವುದನ್ನು ನಾನು ಕಂಡೆನು. ಇಸ್ರಾಯೇಲರು ಭೂಲೋಕದ ಪರ್ಣಶಾಲೆಗೆ ತಮ್ಮ ಬಲಿ ಮತ್ತು ಕಾಣಿಕೆ ತರುವುದರ ಮೂಲಕ ಬರಲಿರುವ ರಕ್ಷಕನ ಶ್ರೇಷ್ಟತೆಯನ್ನು ಎತ್ತಿಹಿಡಿಯುತ್ತಿದ್ದರು ದೇವರ ವಿವೇಕದಲ್ಲಿ, ಈ ಮಹಾಕಾರ್ಯದ ಎಲ್ಲಾ ಸೂಕ್ಷ್ಮವಿಚಾರಗಳು ತಿಳಿಸಲ್ಪಟ್ಟಿದ್ದು ನಾವು ಪರಲೋಕದ ಪರ್ಣಶಾಲೆಯಲ್ಲಿನ ಯೇಸುವಿನ ಸೇವೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.GCKn 219.1

    ಕ್ರೂಜಾಮರಣದ ಸಂದರ್ಭದಲ್ಲಿ, ಯೇಸುವು ಕಲ್ವಾರಿಯಲ್ಲಿ ಮರನಿಸುವಾಗ ‘ಎಲ್ಲಾ ತೀರಿತು’ ಎಂದು ಕೂಗಿದನು ದೇವಲಾಯದ ತೆರೆ ಮೇಲಿನಿಂದ ಕೆಳಗೆ ಇಬ್ಭಾಗವಾಯಿತು. ಇದು ಭೂಲೋಕದ ದೇವದರ್ಶನ ಗುಡಾರದ ಸೇವಾಕಾರ್ಯ ನಿರಂತರವಾಗಿ ಅಂತ್ಯವಾಯಿತೆಂದು ಸೂಚಿಸುತ್ತದೆ. ಇನ್ನೂ ಮುಂದೆ ದೇವರು ಬಹು ಜನರನ್ನು ಭೂಲೋಕದ ಪರ್ಣಶಾಲೆಯಲ್ಲಿ ಬೇಟೆಮಾಡುವುದಿಲ್ಲ ಮತ್ತು ಬಲಿಯನ್ನು ಅಂಗೀಕರಿಸುವುದಿಲ್ಲ ಎಂದು ತೋರಿಸಿತು. ಆಗ ಯೇಸುವಿನ ರಕ್ತವು ಸುರಿಸಲ್ಪಟ್ಟಿತು. ಪರಲೋಕಪರ್ಣಶಾಲೆಯಲ್ಲಿ ಆತನೇ ಸೇವೆಸಲ್ಲಿಸುವ ಯಾಜಕನೆಂದು ತಿಳಿಸುತ್ತದೆ. ವರ್ಷಕೊಂದಾವರ್ತಿ ಮಹಾಯಾಜಕನು ಮಹಾಪರಿಶುದ್ದಸ್ಥಳಕ್ಕೆ ಶುದ್ಧೀಕಾರಣಕ್ಕಾಗಿ ದಾನಿಯೇಲ 8ನೇ ಅಧ್ಯಾಯದ 2300 ವರ್ಷಗಳ ಅಂತ್ಯದಲ್ಲಿ ಅಂದರೆ 1844ರಲ್ಲಿ ಯೇಸುವು ಪರಲೋಕದ ಮಹಾಪರಿಶುದ್ದ ಸ್ಥಳಕ್ಕೆ ಪ್ರವೇಶಿಸಿ ಮದ್ಯೆಸ್ಥಿಕೆಯಿಂದ ಎಲ್ಲರ ಒಳಿತಿಗಾಗಿ ಹಾಗೂ ಪರ್ಣಶಾಲೆಯನ್ನು ಶುದ್ಧೀಕರಿಸಲು ಪ್ರವೇಶಿಸಿದನು.GCKn 220.1

    ಓದಿ: ವಿಮೋಚನಕಾಂಡ ಅಧ್ಯಾಯ 25-28; ಯಾಜಕಕಾಂಡ ಅಧ್ಯಾಯ 16; 2 ಅರಸು 2:11; ದಾನಿಯೇಲ8:14; ಮತ್ತಾಯ27:50-51; ಇಬ್ರಿಯರಿಗೆ 9; ಪ್ರಕಟನೆ ಅಧ್ಯಾಯ 21GCKn 221.1

    Larger font
    Smaller font
    Copy
    Print
    Contents