Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 31. - ದುರಾಶೆ

    ಸೈತಾನನು ಅವನ ದೂತರು ಸಮಾಲೋಚಿಸುವುದನ್ನು ನಾನು ಕಂಡೆನು. ಅವನು ದೂತರಿಗೆ ಯೇಸುವಿನ ಎರಡನೇ ಬರುವಣಕ್ಕಾಗಿ ಎದುರುನೋಡುತ್ತಾ ,ದೇವರ ಎಲ್ಲಾ ಆಜ್ಞೆಗಳಿಗೆ ಬದ್ದರಾಗಿರುವವರ ಮೇಲೆ ವಿಶೇಷವಾಗಿ ಬಲೆಬೀಸಬೇಕು ಎಂದನು. ಇತರ ಸಭೆಗಳು ಗಾಢನಿದ್ರೆಯಲ್ಲಿವೆ, ನಾವು ಶಕ್ತಿಯನ್ನು ಸೂಚಕ ಕಾರ್ಯಗಳನ್ನೂ ಹೆಚ್ಚಿಸಿ ಹಿಡಿತದಲ್ಲಿಟ್ಟುಕೊಳ್ಳಬಹುದು ಆದರೆ ಸಬ್ಬತ್ ಆಚಾರಕರು ನಮಗೆ ವಿರುದ್ಧವಾಗಿ ಕೆಲಸ ಮಾಡುತ್ತಾ ನಮ್ಮ ಪ್ರಜೆಗಳನ್ನು ಸೆಳೆದುಕೊಳ್ಳುತ್ತಾ, ನಾವುದ್ವೇಷಿಸುವ ಆ ದೇವರ ಆಜ್ಞೆಗಳನ್ನು ಆಚರಿಸುವಂತೆ ಮಾಡುತ್ತಿದ್ದಾರೆ. ಈ ಗುಂಪನ್ನು ಹಗೆಮಾಡುವೆನು ಎಂದನು.GCKn 244.1

    ನೀವು ಎಲ್ಲೆಡೆಹೋಗಿ ಆಸ್ತಿವಂತರೂ ಮತ್ತು ಧನವಂತರನ್ನು ದ್ರವ್ಯಾಶೆಯ ಪ್ರಲೋಭನೆಗೆ ಸಿಲುಕಿಸಿ ಅದನ್ನು ಹೆಚ್ಚಾಗಿ ಆಶಿಸುವಂತೆ ಮಾಡಿದ್ದಾದರೆ ಅವರು ನಮ್ಮ ಹಿಡಿತದಲ್ಲಿ ಇರುವರು. ಅವರ ಹೊರೆ ತೋರ್ವಿಕೆ ಹೇಗಾದರೂ ಇರಲಿ, ಕ್ರಿಸ್ತನ ರಾಜ್ಯಕ್ಕಿಂತಲೂ ಅಥವ ನಾವು ದ್ವೇಷಿಸುವ ಸತ್ಯವನ್ನು ಹರಡುವುದಕ್ಕಿಂತಲೂ ಹೆಚ್ಚಾಗಿ ಹಣಕ್ಕೆ ಪ್ರಾಧಾನ್ಯತೆ ಕೊಡುವಂತೆ ಮಾಡಿರಿ. ಅವರ ಕಣ್ಣಮುಂದಿರುವ ಲೋಕವು ಪ್ರಜ್ವಲಿಸುವಂತೆ ಆಕರ್ಷಿಸಿ ಅದನ್ನೇ ಪೂಜಿಸುವ ಮೂರ್ತಿಯನ್ನಾಗಿಸಿರಿ. ಅವರ ಸೇವಾಸಾಧನಗಳನ್ನೂ ಆದಷ್ಟು ನಮ್ಮ ಅಧಿಕಾರದಲ್ಲಿ ಇಟ್ಟುಕೊಳ್ಳಬೇಕು.ಏಕೆಂದರೆ ಅವರಲ್ಲಿ ಹೆಚ್ಚು ಸಾಧನಗಳು ಇದ್ದಷ್ಟು ನಮ್ಮ ಪ್ರಜೆಗಳನ್ನು ಹೆಚ್ಚು ತಮ್ಮೆಡೆಗೆ ಸೆಳೆಯುವರಲ್ಲದೆ ನಮ್ಮ ರಾಜ್ಯಕ್ಕೆ ಧಕ್ಕೆ ತರುತ್ತಾರೆ. ಹಲವಾರು ಸ್ಥಳಗಳಲ್ಲಿ ಅವರು ಸಭೆ ಸೇರುವುದಾದರೆ ನಾವು ಅಪಾಯದಲ್ಲಿದ್ದೇವೆ. ನೀವು ಬಹಳ ಎಚ್ಕರಿಕೆಯಿಂದಿದ್ದು, ನಿಮ್ಮ ಕೈಲಾದಷ್ಟು ಮನ ಒಲಿಸಿ ಅವರಲ್ಲಿರುವ ಪ್ರೀತಿಭಾಂಧವ್ಯವನ್ನು ನಾಶಗೊಳಿಸಿರಿ. ಅವರ ಸಿವಾರ್ತೆ ಸೇವಕರನ್ನು ನಿರಾಶೆಗೊಳ್ಳಿಸಿ ಅದೈರ್ಯಪಡುವಂತೆ ಮಾಡಿರಿ; ಏಕೆಂದರೆ ನಾವು ಅವರನ್ನು ದ್ವೇಷಿಸುತ್ತೇವೆ. ಸೇವಾಸಾಧನಗಳನ್ನು ಹೊಂದಿರುವವರು. ಮನಸ್ಸನ್ನು ಕೆಡಿಸಿ ಅವುಗಳನ್ನು ಸೇವೆಗೆ ಕೊಡದಂತೆ ಸಂಭವನೀಯ ನೆವಗಳನ್ನು ಹುಟ್ಟಿಸಿ ಕೊಡದ ಹಾಗೆ ಮಾಡಿರಿ. ಸಾಧ್ಯವಾದರೆ ಹಣದ ವಿಚಾರಗಳನ್ನೂ ಹತೋಟ್ಟಿಯಲ್ಲಿಟ್ಟುಕೊಂಡು ಸುವಾರ್ತಾಸೇವಕರು ಬವಣೆ ಪಡುವಂತೆ ತೊಂದರೆಯುಂಟು ಮಾಡಿರಿ. ಆಗ ಅವರ ಉತ್ಸಾಹ, ಆಸಕ್ತಿ ಕೊಂದಿಹೋಗುತ್ತದೆ. ಪ್ರತಿ ಹೆಜ್ಜೆಹೆಜ್ಜೆಗೂ ಹೋರಾಡಿರಿ. ದುರಾಶೆ ಹಾಗೂ ಇಹಲೋಕ ಸಂಪತ್ತಿನ ಮೇಲಿನ ಪ್ರೀತಿಯು ಅವರ ಗುಣಸ್ವಾಭಾವಗಳಲ್ಲಿ ಹೆಚ್ಚಾಗಿ ಆಳುವ ಸ್ವಭಾವವಾಗುವಂತೆ ಪ್ರೇರೇಪಿಸಿರಿ ಆಗ ರಕ್ಷಣೆ ಹಾಗೂ ಕೃಪೆಯು ಹಿಂದೆಬೀಳುತ್ತದೆ. ನೀವೆಲ್ಲರೂ ಹಿಂಡಾಗಿ ಅವರ ಸುತ್ತಲೂ ನೆರೆದು ಆಕರ್ಷಿಸಿದರೆ ಅವರೆಲ್ಲಾ ನಮ್ಮವರಾಗುತ್ತಾರೆ. ಅಲ್ಲದೆ ಇತರರನ್ನು ದೇವರರಾಜ್ಯಕ್ಕೆ ಸೆಳೆಯುವುದಿಲ್ಲ. ದಾನಿಗಳಿಗೆ ಮನಸ್ಸಿದ್ದರೂ ಕೊಸರಿಕೂಳ್ಳುತ್ತಾ ಸೇವಾಕಾರ್ಯಕ್ಕೆ ಕೈಬಿಗಿ ಹಿಡಿಯುವಂತೆ ಮಾಡಿರಿ ಎಂದನು.GCKn 244.2

    ಸೈತಾನನು, ತನ್ನ ಯೋಜನೆಗಳಲ್ಲಿ ಸಫಲಗೊಂಡುದನ್ನು ನಾನು ಕಂಡೆನು. ದೇವರ ಸೇವಕರು ಸುವಾರ್ತಕೂಟ ಏರ್ಪಡಿಸಿದಾಗ ಸೈತಾನನೂ, ದೂತರು ಕರ್ತವ್ಯದಲ್ಲಿ ಎಚ್ಚೆತ್ತುಕೊಂಡು ಅಡ್ಡಿತರುವ ಪ್ರಯತ್ನಮಾಡುತ್ತಾ ದೇವರ ಜನರ ಮನಸ್ಸಿನಲ್ಲಿ ಎಡಬಿಡದ ಸಲಹೆಗಳನ್ನು ತುಂಬಲಾರಂಭಿಸಿದರು. ಒಬ್ಬರನ್ನು ಒಂದುಕಡೆ ಮತ್ತೊಬ್ಬರನ್ನು ಮತ್ತೊಂದು ಕಡೆ ಚದುರಿಸಿ ಸಹೋದರ ಸಹೋದರಿಯರಲ್ಲಿರುವ ದುಷ್ಟತನವನ್ನು ಉಪಯೋಗಿಸಿ, ಪಾಪದ ಹಿಡಿತದಲ್ಲಿರುವ ಸ್ವಾಭಾವಿಕತನವನ್ನು ಉದ್ರೇಕಿಸಿದನು. ಒಂದುವೇಳೆ ಅವರು ಸ್ವಾರ್ಥ., ದುರಾಶೆಯನ್ನು ಹೊರಪಡಿಸಿದರೆ ಸೈತಾನನು ಅವರೊಂದಿಗಿದ್ದು ತನ್ನೆಲ್ಲಾ ಶಕ್ತಿಯಿಂದ ಆಕ್ರಮಣಕಾರಿ ಸ್ವಭಾವವನ್ನು ಪ್ರಯೋಗಿಸುವಂತೆ ಮಾಡುತ್ತಾ ಮೆಚ್ಚಿಕೆಯಿಂದ ದೃಷ್ಟಿಸುವನು. ಒಂದುವೇಳೆ ದೇವರ ಕೃಪೆ, ಸತ್ಯದ ಬೆಳಕು ದುರಾಶೆ ಸ್ವಾರ್ಥತೆಯನ್ನು ಕರಗಿಸಿದರೂ ರಕ್ಷಣೆಯ ಪ್ರಭಾವ ಅವರ ಮೇಲಿರದ ಕಾರಣ ಪೂರ್ಣ ಜಯವನ್ನು ಹೊಂದಲಾರರು. ಇಂತಹ ವ್ಯಕ್ತಿಗಳ ಮದ್ಯೆ ಸೈತಾನನು ಬಂದು ಕೊಡುಗೈ ದಾನಿಗಳ ಉದಾತ್ತ ತತ್ವಗಳನ್ನು ಕುಂದಿಸುವನು ಆಗ ಅವರು ಎಷ್ಟೊಂದು ಕೊಡಬೇಕಾಲ್ಲಾ! ಎನ್ನುವ ಭಾವ ಹೊಂದುರು. ತಮ್ಮ ಇದುವರೆಗಿನ ಸದ್ವರ್ತನೆಯ ಬಗ್ಗೆ ಆಯಾಸಗೊಂಡು, ಯೇಸು ಅವರಿಗಾಗಿ ತ್ಯಾಗಮಾಡಿ ಹತಾಶಯ ಸಂಕಟದಿಂದ ಬಿಡಿಸಿ ವಿಮೋಚಿಸಿದ್ದನ್ನು ಮರೆತು ಹೋಗುವರು.GCKn 245.1

    ಸೈತಾನನು ಯೂದನ ದುರಾಶೆ ಹಾಗೂ ಸ್ವಾರ್ಥತೆ ಮೇಲೆ ಮೇಲ್ಮೆಸಾಧಿಸಿ, ಮರಿಯಳು ಯೇಸುವಿಗೆ ಅರ್ಪಿಸಿದ ಸುಗಂಧ ತೈಲದ ಬಗೆಗೆ ಗುಣಗುಟ್ಟುವಂತೆ ಮಾಡಿದನು. ಅದನ್ನು ಬಹು ವ್ಯರ್ಥವಂದು ನೋಡಿದನು; ಅದನ್ನು ಮಾರಿ ಬಡವರಿಗೆ ಹಂಚಬಹುದಿತ್ತು ಎಂದನು. ಆದರೆ ಅವನಿಗೆ ಬಡವರ ಬಗ್ಗೆ ಯಾವ ಅಸಕ್ತಿಯೂ ಇರಲಿಲ್ಲ. ಆ ಕಾಣಿಕೆಯು ಪೋಲಾಯಿತು ಎಂದು ಕೊಂಡನು. ಕೇವಲ ಕೆಲವು ಬೆಳ್ಳಿ ನಾಣ್ಯಗಳಿಗೆ ಕರ್ತನನ್ನು ಬೆಲೆಗಟ್ಟಿದನು. ಕರ್ತನ ಬರುವಣಕ್ಕಾಗಿ ಕಾದಿರುವ ಕೆಲವರು ಈ ಯೂದನಂತಿರುವುದನ್ನು ನಾನು ಕಂಡೆನು . ಅವರು ಸೈತಾನನ ಹಿಡಿತದಲ್ಲಿದ್ದಾರೆಂದು ಅವರಿಗೇ ತಿಳಿಯದು .ದೇವರು ದುರಾಶೆ, ಸ್ವಾರ್ಥತೆಯ ಒಂದು ಕಣವನ್ನೂ ಮೆಚ್ಚುವುದಿಲ್ಲ, ದ್ವೇಷಿಸುತ್ತಾನೆ. ಈ ಸ್ವಭಾವ ಹೊಂದಿರುವರ ಪ್ರಾರ್ಥನೆ ಪ್ರಬೋಧನೆಯನ್ನು ಉಪೇಕ್ಷಿಸುತ್ತಾನೆ. ಸೈತಾನನು ತನ್ನ ಸಮಯವು ಕ್ಲುಪ್ತವಾಗಿದೆ ಎಂದು ಅರಿತು ಇಂಥವರನ್ನು ಮತ್ತು ಹೆಚ್ಚಾಗಿ ದುರಾಶೆ ದೂಡಿ ಅದರಲ್ಲೇ ಆಳವಾಗಿ ಮುಳುಗಿ ಕಾರ್ಪಣ್ಯದಲ್ಲಿ ನರಳುವಂತೆ ಮಾಡಿ ಉಲ್ಲಾಸಿಸುತ್ತಾನೆ. ಒಂದುವೇಳೆ ಇವರ ಕಣ್ಣುಗಳು ತೆರೆಯಲ್ಪಟ್ಟರೆ ಆತನು ಪೈಶಾಚಿಕ ಜಯೋತ್ಸವದಲ್ಲಿದ್ದು ಆತನ ಸಲಹೆ ಅಂಗೀಕರಿಸಿ ಪಾಶದಲ್ಲಿ ಬಿದ್ದು ಸ್ವಾರ್ಥಿಗಳು ಹೊರಳಾಡುವುದನ್ನು ಕಂಡು ವಿಕಟ ಅಟ್ಟಹಾಸ ಗೈಯುತ್ತಿರುವುದನ್ನು ದರ್ಶಿಸುವರು.GCKn 246.1

    ನಂತರ ಸೈತಾನನು ಅವನ ದೂತರು ಸ್ವಾರ್ಥಿಗಳ ಸಾಧನವಸ್ತುಗಳನ್ನು ದುರಾಶೆಯ ಕಾರ್ಯಗಳನ್ನು ಯೇಸುವಿನ ಹಾಗೂ ಪರಿಶುದ್ಧ ದೂತರ ಮುಂದೆ ಇಡುತ್ತಾ ಇವರೆಲ್ಲಾ ಕ್ರಿಸ್ತನ ಹಿಂಬಾಲಿಕರು! ರೂಪಂತರ ಹೊಂದಲು ಸಿದ್ದರಾಗಿದ್ದಾರೆ ಎಂದು ಖಂಡನೆಯೊಂದಿಗೆ ಪ್ರತಿಪಾಧಿಸುವನು. ಅವರು ಮಾರ್ಗತಪ್ಪಿದ ಕ್ಷಣವನ್ನು ಗುರುತಿಸಿ ಅದನ್ನು ಸತ್ಯವೇದದೊಂದಿಗೆ ಹೋಲಿಸುತ್ತಾ, ಇಂತಹ ವರ್ತನೆಯನ್ನು ಖಂಡಿಸುವ ವಚನಾಧಾರಗಳನ್ನು ತೋರಿಸಿ ಪರಲೋಕದ ದೂತರು ಬೇಸರಗೊಳ್ಳುವಂತೆ ಮಾಡುವನು. ಇವರೆಲ್ಲಾ ಕ್ರಿಸ್ತನ ಮತ್ತು ಆತನ ವಾಕ್ಯದ ಹಿಂಬಾಲಕರು! ಆತನ ತ್ಯಾಗ ಮತ್ತು ವಿಮೋಚನೆಯ ಫಲಗಳು! ಎನ್ನುವಾಗ ದೂತರು ನಿರಾಶೆಯಿಂದ ಮುಖ ತಿರುಗಿಸಿಕೊಳ್ಳುವರು. ತನ್ನ ಜನರೆಲ್ಲಾ ಕಾರ್ಯಮಗ್ನರಾಗಬೇಕೆಂದು ದೇವರು ಇಚ್ಛಿಸುತ್ತಾರೆ. ಆದರೆ ಅವರ ದಾನಧರ್ಮಗಳು ಆಯಾಸಗೊಂಡಾಗ ಆತನೂ ಅವರ ಬಗ್ಗೆ ಆಯಾಸಗೊಳ್ಳುವನು.GCKn 247.1

    ಯಾವ ಹೊರತೋರ್ವಿಕೆಯ ಕ್ರೈಸ್ತರಿಗಾಗಿಯೂ ಯೇಸು ತನ್ನ ಅಮೂಲ್ಯ ಜೀವನವನ್ನು ತ್ಯಾಗಮಾಡುವುದರಲ್ಲಿ ಹಿಂಜರಿಯ ಲಿಲ್ಲವೋ ಅಂಥಹ ಜನರ ಕನಿಷ್ಠ ಸ್ವಾರ್ಥತೆಯ ಪ್ರಧರ್ಶನವನ್ನು ಕಂಡು ದೇವರು ತೀರ್ವವಾಗಿ ಬೇಸರಗೊಂಡದನ್ನು ನಾನು ಕಂಡೆನು. ಪ್ರತಿದುರಾಶೆಯ ಸ್ವಾರ್ಥಿಗಳು ಜಾರಿಬೀಳುವರು ಕರ್ತನನ್ನು ಮಾರಿಕೊಂಡ ಯೂದನಂತೆ ಅವರು ಇಹಲೋಕದ ಕಿಂಚಿತ್ ಲಾಭಕ್ಕಾಗಿ ತಮ್ಮ ಒಳ್ಳೆಯ ತತ್ವಗಳೂ. ಉತ್ತಮ ಧಾರಾಳತನವನ್ನೂ ಮಾರಿಕೊಳ್ಳುವರು .ಇಂಥವರು ದೇವಜನರ ಮದ್ಯೆದಿಂದ ತೂರಲ್ಪಡುವರು, ಯಾರಿಗೆ ಪರಲೋಕವು ಬೇಕಿದೆಯೋ ಅವರು ತಮ್ಮಲ್ಲಿರುವ ಎಲ್ಲಾ ಶಕ್ತಿಯಿಂದ ಆ ಲೋಕದ ತತ್ವಗಳನ್ನು ಉತೇಜಿಸಬೇಕು. ತಮ್ಮ ಆತ್ಮವು ಸ್ವಾರ್ಥಸ್ವಭಾವದಿಂದ ಬಾಡಿ ಉದುರಲು ಬಿಡದೆ ದಯಾಪರತೆಯಿಂದ ವಿಸ್ತಾರಗೊಳಿಸಿಕೊಳ್ಳಬೇಕು. ಮತ್ತು ಒಬ್ಬರಿನ್ನೊಬ್ಬರಿಗೆ ಉತ್ತಮವಾದ್ದುದನೇ ಮಾಡುವ ಅವಕಾಶದಿಂದ ವಂಚಿತರಾಗಭಾರದು. ಪರಲೋಕ ತತ್ವಾನುಸಾರ ಹೆಚ್ಚಾಗಿ ಬೆಳೆದು ಸಂವೃದ್ದಿಗೊಳ್ಳಬೇಕು. ಯೇಸುವೇ ಪರಿಪೂರ್ಣ ಆದರ್ಶವಾಗಿ ನಮ್ಮ ಮುಂದೆ ಇಡಲ್ಪಟ್ಟಿದ್ದಾರೆ. ಆತನ ಜೀವಿತವು ನಿಸ್ವಾರ್ಥತೆಯಿಂದ ತುಂಬಿ ಅಸೀಮಿತ ಧಾರಳತನದಿಂದ ಗುರುತಿಸಲ್ಪಟ್ಟಿದೆ.GCKn 248.1

    ಓದಿ; ಮಾರ್ಕ 14:3-11 ; ಲೂಕ 12:15-40 ; ಕೊಲೊಸ್ಸೆ3:5-16 ; 1ಯೋಹಾನ 2:15-17GCKn 249.1

    Larger font
    Smaller font
    Copy
    Print
    Contents