Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 33. - ಬಾಬಿಲೋನಿನ ಪಾಪಗಳು

    ಎರಡನೆಯ ದೂತನು ಪ್ರಕಟಿಸಿದ, ಸಭೆಯ ಬೀಳುವಿಕೆಯ ನಂತರ ಅದರ ಸ್ಥಿತಿಯನ್ನು ನಾನು ಅವಲೋಕಿಸಿದೆನು. ಜನರು ಕ್ರಿಸ್ತನ ಅನುಯಾಯಿಗಳೆಂಬ ಹೆಸರಿದ್ದರೂ ಹೆಚ್ಚೆಚ್ಚಾಗಿ ಭ್ರಷ್ಟರಾಗುತ್ತಿದ್ದರು. ಈ ಲೋಕದಿಂದ ಬೇರೆಯಾದವರಾಗಿ ಅವರನ್ನು ಗುರುತಿಸಲಾಗಲಿಲ್ಲ. ಅವರ ಸುವಾರ್ತಾ ಸೇವಕರು ಸತ್ಯವೇದದಿಂದ ವಚನಗಳನ್ನು ಆರಿಸಿಕೊಂಡರು ಸರಳವಾಗಿ ಅಥವಾ ಮೃದವಾಗಿ ಬೋಧಿಸುತ್ತಿದ್ದರು. ಇದರಿಂದ ನೈಜಹೃದಯಗಳಿಗೆ ಯಾವ ಆಕ್ಷೇಪಣೆಯೂ ಇರಲಿಲ್ಲ ಸತ್ಯದ ಆತ್ಮ, ಬಲ ಮತ್ತು ರಕ್ಷಣೆಯ ವಿಷಯಗಳು ಅವರಿಗೆ ಹಗೆತುಂಬಿದವುಗಳಾಗಿದ್ದವು. ಜನಪ್ರಿಯವಾದ ಸುವಾರ್ತಾಸೇವೆಯ ಬೇರಾವ ವಿಷಯವೂ ಸೈತಾನನ ಕೋಪವನ್ನು ಕೆಣಕುತ್ತಿರಲಿಲ್ಲ. ಪಾಪಿಗಳನ್ನು ನಡುಗಿಸಿ ಹೃದಯಕ್ಕೂಆತ್ಮಸಾಕ್ಷಿಗೂ ಅನ್ವಯಿಸಲಿಲ್ಲ. ನಿಜದೈವಭಕ್ತಿಯಿಲ್ಲದ ಯಾವುದೇ ವೇಷವನ್ನು ದುಷ್ಟರು ಸಂತೋಷಿಸುತ್ತಿದ್ದರು, ಅಧರ್ಮಕ್ಕೆ ತಮ್ಮ ಸಹಾಯವನ್ನು ನೀಡುತ್ತಿದ್ದರು. ಅಂಧಕಾರದ ಶಕ್ತಿಯ ಮೇಲೆ ಜಯಸಾಧಿಸಲು ನೀತಿಯುಳ್ಳ ಸರ್ವಾಯುಧಗಳನ್ನು ಬಿಟ್ಟರೆ ಬೇರೆ ಯಾವುದೂ ಸಹಾಯಕ್ಕೆ ಬರದು ಎಂದು ದೂತರು ಹೇಳಿದನು. ಇಡೀ ಸಭೆಗಳನ್ನೆಲ್ಲಾ ಒಂದು ಶರೀರವಾಗಿ ಸೈತಾನನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದ್ದಾನೆ. ದೇವರ ವಾಕ್ಯದ ಸತ್ಯವನ್ನು ಸರಳವಾಗಿ ತಿಳಿಸಿ ಹೇಳುವುದನ್ನು ಬಿಟ್ಟು ಜನರು ಮಿಕ್ಕಲ್ಲಾ ಹೇಳಿಕೆ ಮತ್ತು ಕ್ರಿಯೆಗಳಲ್ಲಿ ನೆಲೆಗೊಂಡಿದ್ದಾರೆ. ಈ ಲೋಕದ ಆತ್ಮಮತ್ತು ಗೆಳೆತನವು ದೇವರಿಗೆ ಶತೃವಾಗಿದೆ ಎಂದು ದೂತನು ನನಗೆ ತಿಳಿಸಿದನು. ವಾಕ್ಯದ ಸತ್ಯವನ್ನು ಪ್ರಬಲತೆಯಿಂದ ಈ ಲೋಕದ ಸ್ವರೂಪಕ್ಕೆ ವಿರುದ್ಧವಾಗಿ ತೆರೆದಿಟ್ಟುದಾದರೆ ಅದು ಹಿಂಸಾಶಕ್ತಿಯ ಚೈತನ್ಯವನ್ನು ತಟ್ಟನೆ ಉದ್ದೀಪನಗೊಳಿಸುತ್ತದೆ. ಕ್ರೈಸ್ತರೆನಿಸಿಕೊಳ್ಳುವ ಬಹುಮಂದಿಗೆ ದೇವರು ಯಾರೆಂಬುದು ಗೊತ್ತಿಲ್ಲ ಆದ್ದರಿಂದ ಅವರ ಗುಣಸ್ವಭಾವಗಳು ಬದಲಾಗಿಲ್ಲ. ಐಹಿಕ ಮನಸ್ಸು ದೇವರ ಶತೃವಾಗಿಯೇ ಉಳಿಯುತ್ತದೆ. ಕ್ರೈಸ್ತರೆಂಬ ಹೆಸರನ್ನು ಧರಿಸಿದರೂ ಸೈತಾನನ ನಿಷ್ಟಾವಂತ ಸೇವಕರಾಗಿ ಉಳಿಯುತ್ತಾರೆ.GCKn 257.1

    ನಾನು ನೋಡಿದ್ದೇನೆಂದರೆ, ಯೇಸು ದೇವದರ್ಶನ ಗುಡಾರದ ಪರಿಶುದ್ಧಸ್ಥಲವನ್ನು ಬಿಟ್ಟು ಎರಡನೆಯ ತೆರೆಯನ್ನು ಸರಿಸಿ ಪ್ರವೇಸಿದಾಗಲೂ ಯಹೂದ್ಯರ ಸಭೆಗಳು ಹಾಗೆಯೇ ಉಳಿದುಕೊಂಡವು. ಸಭೆಗಳು ಸರ್ವ ಅಶುದ್ದ ಹಾಗೂ ಅಸಹ್ಯವಾದ ಸಕಲವಿಧವಾದ ಪಕ್ಷಿಗಳ ಆಶ್ರಯವಾಯಿತು [ಪ್ರಕಟನೆ18:2] ಸಭೆಗಳಲ್ಲಿ ಮಹಾಪಾಪವು, ದೊಷಣೆಯೂ, ತುಂಬಿರುವುದನ್ನು ನಾನು ಕಂಡೆನು; ಆದರೂ ಅವರು ತಮನು ಕ್ರೈಸ್ತರೆಂದು ಹೇಳಿಕೊಂಡರು. ಅವರು ವೃತಿ, ವಿಜ್ಞಾಪನೆ ಮತ್ತು ಪ್ರಬೋಧನೆಗಳು ದೇವರ ದೃಷ್ಟಿಯಲ್ಲಿ ದೂಷಣೆಗಳಾಗಿವೆ. ಇಂಥವರ ಸಭೆಗಳುನ್ನು ದೇವರು ಗಣಿಸುವುದೂ ಇಲ್ಲ ಎಂದು ದೂತನು ಹೇಳಿದನು. ಮನಃಸಾಕ್ಷಿಯನ್ನು ತಿದ್ದಿಕೊಳದೆ ಅವರ ಸ್ವಾರ್ಥ. ಮೋಸ, ವಂಚನೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದಲ್ಲಾಕ್ಕಿಂತ ಹೆಚ್ಚಾಗಿ ತಮ್ಮ ದುಷ್ಟತನದ ಮೇಲೆ ಧರ್ಮ ಹೊದಿಕೆಯನ್ನು ಹರವುತ್ತಾರೆ. ಹೆಸರಿಗೆ ಮಾತ್ರ ಸಭೆ ಎನಿಸಿಕೊಂಡವರ ಅಹಂ ಅಥವಾ ಸೊಕ್ಕನ್ನು ನನಗೆ ತೋರಿಸಲಾಯಿತು. ಅವರ ಮನಸ್ಸಿನಲ್ಲಿ ದೇವರಿಗೆ ಸ್ಥಳವಿರಲಿಲ್ಲ; ತಮ್ಮ ಲೌಕಿಕ ಮನಸ್ಸಿನ ತುಂಬ ಅವರೇ ತುಂಬಿಕೊಂಡಿದ್ದರು. ನಶಿಸಿಹೋಗುವ ತುಚ್ಛ ಶರೀರಗಳನ್ನು ಅಲಂಕಾರಿಸಿಕೊಂಡು ಬಹು ತೃಪ್ತಿ ಮತ್ತು ಸಂಭ್ರಮದಿಂದ ತಮ್ಮನ್ನೇ ನೋಡಿಕೊಳ್ಳುತ್ತಿದ್ದರು.GCKn 258.1

    ಯೇಸು ಮತ್ತು ಆತನು ದೂತರು ಕೋಪದಿಂದ ಇವರನ್ನು ನೋಡಿದರು, ಆಗ ದೂತನು, ಅವ್ರ ಪಾಪ ಅಹಂಕಾರಗಳು ಪರಲೋಕವನ್ನು ಮುಟ್ಟಿದೆ, ಅವರಿಗೆ ಸ್ಥಳವು ಸಿದ್ದವಾಗಿದೆ ಅಲ್ಲದೆ ನಾಯ್ಯ ಮತ್ತು ವಿಚಾರಣೆಗಳು ನಿಧಾನಿಸದೆ ಬಹುಬೇಗ ಎಚ್ಚೆತ್ತುಕೊಳ್ಳುತ್ತದೆ ಎಂದನು. ಮುಯ್ಯಿಗೆ ಮುಯ್ಯಿತೀರಿಸುವುದು ನನ ಕೆಲಸ ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ. ಮೂರನೆಯ ದೂತನ ಭಯಂಕರ ಎಚ್ಚರಿಕೆಯನ್ನು ಅರ್ಥಮಾಡಿಕೊಳ್ಳಬೇಕು, ಅವರು ದೇವರ ಕೋಪವನ್ನು ಕುಡಿಯುವರು. ಇಡೀ ಭೂಮಿಯ ಮೇಲೆ ಅಸಂಖ್ಯಾತ ದುಷ್ಟ ದೂತಗಣಗಳು ಹರಡಿಕೊಂಡಿದ್ದಾರೆ. ಸಭೆಗಳು, ಧಾರ್ಮಿಕ ಕೇಂದ್ರಗಳು ಅವರಿಂದ ತುಂಬಿಕೊಂಡಿವೆ ಅದನ್ನು ಜಯೋನ್ಮತ್ತರಾಗಿ ಅವರ ದೃಷ್ಟಿಸುತ್ತಾರೆ; ಏಕೆಂದರೆ ಅವರ ಭ್ರಷ್ಟತೆ ಮತ್ತು ಪಾಪಗಳು ಧರ್ಮದ ಮೇಲುಹೊದಿಕೆ ಹೊದ್ದಿವೆ.GCKn 259.1

    ದೇವರ ಕೈ ಸೃಷ್ಟಿಗಳಾದ ಮಾನವ ಜನಾಂಗವು ಆಳವಾದ ಅವನಿತೆಗೆ ಇಳಿಸಲ್ಪಟ್ಟು ತಮ್ಮಸಂಗಡಿಗರಿಂದಲೇ ಉಂಟಾದ ಪಶುಪ್ರಾಯ ಸೃಷ್ಯಿಗೆ ಸಮನಾಗಿರುವುದನ್ನು ಕಂಡು ಇಡೀ ಪರಲೋಕಗಣವು ಕ್ರೋಧಗೊಂಡಿತು. ಮಾನವ ತೀವ್ರ ವ್ಯಥೆ ನೋಡಿ ರಕ್ಷಕ ಅನುಕಂಪವು ಸಂಚಲನಗೊಳ್ಳುತ್ತಿದ್ದರೆ ಈ ತೋರ್ವಿಕೆಯ ಕ್ರೈಸ್ತರು ಜನರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾ ಅಪರಿಮಿತ ಮತ್ತು ದುರ್ಭರ ಪಾಪಕಾರ್ಯಗಳಲ್ಲಿ ಹೃದಯಪೂರ್ವಕವಾಗಿ ತೊಡಗಿದ್ದರು. ಇವೆಲ್ಲವನ್ನೂ ದೂತರು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಧರ್ಮಶ್ರದ್ಧೆಯುಳ್ಳ ಬಂಧಿತ ಸ್ರೀ ಪುರುಷರ, ತಂದೆ, ತಾಯಿ, ಮಕ್ಕಳು, ಸಹೋದರ - ಸಹೋದರಿಯರ ಕಣ್ಣೇರೆಲ್ಲಾ ಪರಲೋಕದಲ್ಲಿ ಶೇಖರಿಸಲ್ಪಟ್ಟಿವೆ. ಮಾನವರ ಸಂಕಟ, ವ್ಯಥೆಗಳೆಲ್ಲಾ ಸ್ಥಳದಿಂದ ಸ್ಥಳಕ್ಕೆ ಸಾಗಿಸಲ್ಪಟ್ಟು ಕೊಡುಕೊಳುವಿಕೆಗೆ ಒಳಗಾಗಿದೆ ದೇವರು ಕೋಪವನ್ನು. ತಡೆಹಿಡಿದಿದ್ದಾರಾದರೂ ಅದು ಅಲ್ಪಕಾಲ ಮಾತ್ರವೇ! ಈತನ ರೌದ್ರವು ಜನಾಂಗಗಳ ವಿರುದ್ಧ ಮುಖ್ಯವಾಗಿ ಈ ಭಯಂಕರ ವ್ಯಾಪಾರದಲ್ಲಿ ತಮ್ಮನ್ನೇ ತೊಡಗಿಸಿಕೊಂಡವರು ಮತ್ತು ನಿಯಮೋಲ್ಲಂಘನೆ ಮಾಡುವ ಧಾರ್ಮಿಕ ವ್ಯಕ್ತಿಸಮೂಹದವರ ಮೇಲೆ ಉರಿದು ಬೀಳುತ್ತದೆ. ಧೀನದಯಾಳುವಾದ ಯೇಸುವಿನ ಅನುಯಾಯಿಗಳೆಂದು ತೋರಿಸಿಕೊಂಡವರು ನಿರ್ದಯತಟಸ್ಥಭಾವದಿಂದ ಇಂತಹ ಅನ್ಯಾಯ ಸಂಕತಕ್ಕೂ ಮತ್ತು ಪೀಡನೆಗೆ ಸಾಕ್ಷಿಗಳಾಗುಗಿರುವರು. ಇವರು ಧೈರ್ಯದಿಂದ ಆರಾಧಿಸುವರು ಇದು ಗಂಭೀರ ಹಿಯ್ಯಾಳಿಕೆಯಾಗಿದೆ. ಸೈತಾನನು ವಿಜೃಂಭಿಸುತ್ತಾ, ಯೇಸು ಮತ್ತು ಆತನ ದೂತರನ್ನು ಅಸಂಬದ್ಧವಾಗಿ ಖಂಡಿಸುತ್ತಾ ಅಧೋಲೋಕದ ಜಯದಿಂದ ಕ್ರಿಸ್ತನ ಹಿಂಬಾಲಕರು ಹೀಗಿದ್ದಾರೆ! ಎಂದು ಹಾಸ್ಯಮಾಡುವರು.GCKn 259.2

    ಈ ತೋರಿಕೆಯ ಕ್ರೈಸ್ತರು, ಧರ್ಮಬಲಿಯಾದರ ಸಂಕಟಗಳು ಬಗೆಗೆ ಓದಿ ತಮ್ಮ ಕಪೋಲಗಳ ಮೇಲೆ ಕಣ್ಣೇರನ್ನು ಹರಿಸಿದವರೇ! ಮನುಷ್ಯರಾದವರು ಇಷ್ಟು ಕಠಿಣ ಹೃದಯಗಳಾಗಿ ತಮ್ಮ ಸಂಗಡಿಗರಿಗೆ ಅಮಾನಿಷ ಕ್ರೂರವರ್ತನೆ ತೋರುವುದು ಸಾಧ್ಯವೇ? ಎಂದು ಆಶ್ಚರ್ಯಪಡುವ ಇವರೇ, ತಮ್ಮ ಜೊತೆಗಿರುವವರನ್ನು ಗುಲಾಮರಾಗಿ ನಡೆಸಿಕೊಳ್ಳಿವರು. ಇಷ್ಟು ಮಾತ್ರವಲ್ಲ ದಿನೇದಿನೇ ಕ್ರೂರವಾಗಿ ತುಳಿಯುತ್ತಾ ನೈಜಬಂಧನಗಳನ್ನೆಲ್ಲಾ ಕಿತ್ತುಹಾಕುವರು. ಅಮಾನವೀಯ ಹಿಂಸೆಯ ಭಾರವನ್ನು ಹೇರುವರು. ಅದು ಕ್ರಿಸ್ತನ ಪ್ರಿಯಹಿಂಬಾಲಕರ ಮೇಲೆ ಪೋಪರೂ, ಅನ್ಯರೂ ಪ್ರಯೋಗಿಸಿದ ಹಿಂಸೆಗೆ ಹೋಲಿಕೆಯಾಗುತ್ತದೆ. ಇಂಥವರ ಮೇಲೆ ಬರುವ ನ್ಯಾಯತಿರ್ಪು ಪೋಪರಿಗೂ ಅನ್ಯರಿಗಿಂತ ಅತಿ ಉಗ್ರವಾಗಿರುತ್ತದೆ ಎಂದು ದೂತನು ಹೇಳಿದನು. ಧಮನಕ್ಕೆ ಒಳಗಾದವರ ಸಂಕಟಗಳು ಪರಲೋಕಕ್ಕೆ ಮುಟ್ಟಿವೆ. ದೇವರು ತನ್ನ ಸ್ವರೂಪದಲ್ಲೆ ಉಂಟುಮಾಡಿ ಈ ಜನರು ಒಬ್ಬರು ಮತ್ತೊಬ್ಬರ ಮೇಲೆ ಕರುಣೆಯಿಲ್ಲದೆ ವಿವರಿಸಲಸಾಧ್ಯವಾದ ಹಿಂಸೆ ಸಂಕಟಗಳಿಗೆ ಗುರಿಯಾಗಿಸುವುದನ್ನು ದೂತರು ಕಂಡು ದಿಗ್ಭ್ರಮೆಗೊಳ್ಳುವರು. ಇಂತಹ ಕ್ರೂರಿಗಳ ಹೆಸರುಗಳು ರಕ್ತದಿಂದ ಬರೆಯಲ್ಪಟ್ಟು. ಕೆಂಪುಗಿಟ್ಟುಗಳಿಂದ ಒಡೆದು ಹಾಕಿ, ಹಿಂಸೆಗೊಳಗಾದವರ ಕಣ್ಣೀರ ಪ್ರವಾಹದಿಂದ ಆಳಿಸಲಾಗುವುದು, ಎಂದು ದೂತನು ಹೇಳಿದನು. ದೇವರು ರೌದ್ರವೆಂಬ ಪಾತ್ರೆಯಲ್ಲಿನ ಗಸಿಯನ್ನೂ ಬಿಡದೆ ತನ್ನ ಬೆಳಕಿನ ರಾಜ್ಯವು ಕುಡಿಯುವವರೆಗೂ ಬಿಡುವುದಿಲ್ಲ, ಮತ್ತು ಬಾಬಿಲೋನಿನ ಎರಡರಷ್ಟು ಪ್ರತಿಫಲವನ್ನು ಅದಕ್ಕೆ ಕೊಡದಿರಲಾರನು. ಅವಳು ನಡೆಸಿದ ಕಾರ್ಯಗಳಿಗೆ ಎರಡರಷ್ಟು ಪ್ರತಿಫಲವು ಸಿಗುತ್ತದೆ; ಅವಳೇ ತುಂಬಿದ ಪಾತ್ರೆಯಲ್ಲಿ ಒಂದುಕ್ಕೆ ಎರಡರಷ್ಟು ತುಂಬಿಸಿ ಕೊಡಲಾಗುತ್ತದೆ.GCKn 261.1

    ಗುಲಾಮರ ಯಾಜಮಾನನು ತಾನು ಹಿಡಿತದಲ್ಲಿಟ್ಟುಕೊಂಡು ದಾಸರನ್ನು ಅಜ್ಞಾನದಲ್ಲಿಟ್ಟುದಕ್ಕಾಗಿ ಉತ್ತರಿಸಬೇಕಾಗುತ್ತದೆಂಬುದನ್ನು ನಾನು ಕಂಡೆನು; ಗುಲಾಮರ ಪಾಪಗಳೆಲ್ಲ ಯಜಮಾನನ ಮೇಲೆ ಹೊರೆಸಲ್ಪಡುವುದು. ಅಜ್ಞಾನದಲ್ಲಿದ್ದು ಹೀನೈಸಲ್ಪಟ್ಟವರು ದೇವರನ್ನು ಮತ್ತು ಸತ್ಯವೇದವನ್ನು ತಿಳಿದುಕೊಳ್ಳಲಾಗದೆ ಯಾಜಮಾನನ ಛಡಿಏಟಿಗೆ ಭಯಪಡುತ್ತಾ ಪಶುಗಳಂತಿದ್ದವರನ್ನು ದೇವರು ಪರಲೋಕಕ್ಕೆ ಕರೆದುಕೊಂಡು ಹೋಗಲಾರನು. ಆದರೆ ದಯಮಾಯಿಯಾಗಿ ತನಗೆ ಉತ್ತಮವಾಗಿ ತೋರಿದಂತೆ ಮಾಡುವನು. ಅವರು ಇದ್ದರೂ ಇಲ್ಲದಂತೆ ಗಣಿಸಲ್ಪಡುತ್ತಾರೆ. ಆದರೆ ಯಾಜಮಾನನು ಕಡೆಯ ಏಳು ಉಪದ್ರವಗಳಿಗೆ ಸಿಲುಕಿ ಸಂಕಟ ಪಡುವನು ಮತ್ತು ಎರಡನೆಯ ಪುನರುತ್ಥಾನದಲ್ಲಿ ಎದ್ದು ಬಂದು ಬಹು ಭಯಂಕರವಾದ ಎರಡನೇ ಮರಣಕ್ಕೆ ತುತ್ತಾಗುವನು .ದೇವರ ಕೋಪವೋ ಶಮನಗೊಳ್ಳುವುದು. GCKn 262.1

    ಓದಿ; ಆಮೋಸ 5:21; ರೋಮಾಯ 12:19; ಪ್ರಕಟನೆ 14 :9-10, 18:6 GCKn 262.2

    Larger font
    Smaller font
    Copy
    Print
    Contents