Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 34. - ಮಹಾ ಘೋಷಣೆ

    ದೇವದೂತರು ಪರಲೋಕದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದುದನ್ನು ನಾನು ಕಂಡೆನು. ಅವರು ಭೂಲೋಕಕ್ಕೆ ಇಳಿಯುವುದೂ ಪರಲೋಕಕ್ಕೆ ಏರುವುದೂ ಮಾಡುತ್ತಾ ಯಾವುದೋ ಮುಖ್ಯಘಟನೆಯ ಪೂರೈಕೆಗಾಗಿ ಸಿದ್ದಗೊಳಿಸುತ್ತಿದ್ದರು. ಅನಂತರ ಒರ್ವ ಪ್ರಧಾನದೂತನಿಗೆ, ಭೂಲೋಕಕ್ಕೆ ಹೋಗಿ ಮೂರನೆಯ ದೂತನ ಕೂಗಿಗೆ ಜೊತೆಗೊಡಿಸಿ ಸಂದೇಶಕ್ಕೆ ಶಕ್ತಿಮತ್ತು ಪ್ರಭಾವ ತುಂಬಿಬೇಕು ಎಂದು ಆದೇಶ ನೀಡಿದ್ದನ್ನು ನಾನು ನೋಡಿದೆನು. ಮಹಾಬಲ ಪ್ರಭಾವವು ದೂತನಿಗೆ ಅನುಗ್ರಹಿಸಿದ ಕಾರಣ ಭೂಮಿಗೆ ಬಂದಾಗ ಅದು ಪ್ರಕಾಶಗೊಂಡಿತು. ಅವನು ಗಟ್ಟಿಯಾಗಿ — ಬಿದ್ದಳು, ಬಿದ್ದಳು ಬಾಬೆಲೆಂಬ ಮಹಾನಗರಿಯು ಬಿದ್ದಳು; ದೆವ್ವಗಳ ವಾಸಸ್ಥಾನವೂ ಅಶುದ್ಧತ್ಮಗಳ ಆಶ್ರಯವೂ, ಅಪವಿತ್ರವಾಗಿಯೂ ಅಸಹ್ಯವಾಗಿಯೂ ಇರುವ ಸಕಲ ವಿಧವಾದ ಪಕ್ಷಿಗಳ ಆಶ್ರಯವೂ ಆದಳು ಎಂದು ಹೇಳುವಾಗ ಪ್ರಕಾಶ ಮಾನವಾದ ಬೆಳಕು ಎಲ್ಲಾಕಡೆಯಲ್ಲೂ ಪಸರಿಸಿತು. ಈ ಎರಡನೆಯ ದೂತನ ಸಂದೇಶವು 1844 ರಿಂದ ಸಭೆಗಳಲ್ಲಿ ಪ್ರವೇಶಿಸಿ ಭ್ರಷ್ಟಾಚಾರವು ತಿಳಿಸಲ್ಪಟ್ಟತು. ಈ ಪ್ರಧಾನದೂತನ ಕೆಲಸವು ನಿಗದಿತ ಸಮಯಕ್ಕನುಸಾರವಾಗಿ ಬಂದು ಮೂರನೆಯ ದೂತನ ಕೊನೆಯ ಮಾಹಾ ಕಾರ್ಯದೊಂದಿಗೆ ಸಮ್ಮಿಳಿತವಾಗಿ ಮಹಾಘೋಷಣೆ ಹೊಮ್ಮಿತು. ದೇವಜನರು ಎದುರಿಸಬೇಕಾದ ಶೋಧನಾ ಸಮಯವು ಸಮೀಪಿಸಲು ಎದೆಗೊಟ್ಟು ಅಹರರಾಗಿ ನಿಲ್ಲಲು ಸಿದ್ದಪಡಿಸಲ್ಪಟ್ಟರು ಅವರ ಮೇಲೆ ಮಹಾ ತೇಜಸ್ಸು ತುಂಬಿರುವುದನ್ನು ನಾನು ಕಂಡೆನು .ಅವರೆಲ್ಲಾ ಒಗ್ಗಟ್ಟಾಗಿ ಮಹಾಬಲದಿಂದ ಮೂರನಯ ದೂತನ ಸಂದೇಶವನ್ನು ಭಯವಿಲ್ಲದೆ ಸಾರಿದರು.GCKn 263.1

    ಪರಲೋಕದೂತನಿಗೆ ಸಹಾಯಕಾರಾಗಿ ದೇವದೂತಗಣಗಳನ್ನು ಕಳುಹಿಸಲಾಯಿತು. ಅವರ ಕೂಗು ಎಲ್ಲಾ ಕಡೆಗಳಿಂದಲೂ ಧ್ವನಿಸುತ್ತಾ — ನನ್ನ ಪ್ರಜೆಗಳೇ, ಅವಳನ್ನು ಬಿಟ್ಟು ಬನ್ನಿರಿ; ನೀವು ಅವಳ ಪಾಪದಲ್ಲಿ ಪಾಲುಗಾರರಾಗಬಾರದು; ಅವಳಿಗಾಗಿರುವ ಉಪದ್ರವಗಳಿಗೆ ಗುರಿಯಾಗಬಾರದು. ಅವಳ ಪಾಪಗಳು ಬಂದರೆ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದವೆ ಎಂದು ಹೇಳುತ್ತಿದ್ದುದು ನನಗೆ ಕೇಳಿಸಿತು. ಈ ಸಂದೇಶವು ಮೂರನೆಯ ಸಂದೇಶಕ್ಕೂ ಪೂರಕವಾಗಿ ಸೇರಿಕೊಂಡತ್ತಿದ್ದು 1844ರಲ್ಲಿನ ದೂತನ ಸಂದೇಶದೊಂದಿಗೆ ಸೇರಿದ ‘ಮಹಾಕೂಗಿನಂತೆ’ ಇತ್ತು. ಬಹು ತಾಳ್ಮೆಯಿಂದ ಕಾದುಕೊಂಡಿದ್ದ ಭಕ್ತರ ಮೇಲೆ ದೇವರ ಮಹಿಮೆ ನೆಲೆಗೊಂಡಿದ್ದು ನಿರ್ಭಯವಾಗಿ ಗಂಭೀರವಾದ ಎಚ್ಚರಿಕೆಯನ್ನು ನೀಡುತ್ತಾ ಬಾಬಿಲೋನಿನ ನಾಶನವನ್ನು ತಿಳಿಸಿ; ಅವಳನ್ನು ಬಿಟ್ಟು ಬನ್ನಿರಿ; ಅವಳಿಗಾಗುವ ಭಯಂಕರ ಶಿಕ್ಷೆಯಿಂದ ಪಾರಾಗಬಹುದು ಎಂದು ಹೇಳಿದರು.GCKn 264.1

    ತಾಳ್ಮೆಯಿಂದ ಕಾದಿದ್ದವರ ಮೇಲೆ ಬಿದ್ದ ಬಳಕು ಎಲ್ಲಾ ಕಡೆಗೂ ತೂರಿಹೋಯಿತು. ಮತ್ತು ಸಭೆಗಳಲ್ಲಿ ಯಾರೆಲ್ಲಾ ಮೂರನಯ ದೂತನ ಸಂದೇಶವನ್ನು ಕೇಳದೆ ತಿರಸ್ಕರಿಸಿದರೋ ಅವರು ಈ ಕರೆಗೆ ಓಗೊಟ್ಟು ಬಿದ್ದುಹೋಗಿದ್ದ ಸಭೆಗಳಿಂದ ಹೊರಗೆ ಬಂದರು. ಬಹುವರ್ಷಗಳಿಂದ ಬಹುಜನರಿಗೆ ಈ ಸಂದೇಶವು ಕೊಡಲ್ಪಟ್ಟು, ಅದಕ್ಕೆ ಹೊಣೆಗಾರರಾಗಿದ್ದೂ ಬೆಳಕು ಅವರ ಮೇಲೆ ಪ್ರಕಾಶಿಸಿ ಜೀವ ಅಥವಾ ಮರಣವನ್ನು ಆಯ್ದುಕೊಳ್ಳುವ ಅವಕಾಶ ಅವರದಾಯಿತು. ಕೆಲವರು ಜೀವವನ್ನು ಆಯ್ಕೆಮಾಡಿಕೊಂಡು ಕರ್ತನಿಗಾಗಿ ಎದುರುನೋಡುತ್ತಿರುವವರ ಜೊತೆ ಸೇರಿಕೊಂಡು ಆತನ ಎಲ್ಲಾ ಆಜ್ಞೆಗಳನ್ನು ಪಾಲಿಸಿದರು. ಮೂರನೆಯ ಸಂದೇಶವು ಕಾರ್ಯರಂಭಮಾಡಿತು; ಇದರ ಆದಾರದ ಮೇಲೆ ಎಲ್ಲರೂ ಪರೀಕ್ಷಿಸಲ್ಪಡಬೇಕು. ಧಾರ್ಮಿಕ ಸಂಘಸಂಸ್ಥೆಗಳಿಂದ ಹೊರಗೆ ಅಮೂಲ್ಯರಾದವರು ಕರೆಯಲ್ಪಡಬೇಕು. ಪ್ರಭಾಲರಾದ ಶಕ್ತಿಯು ಪ್ರಾಮಣಿಕರಾದವರನ್ನು ಸಂಚನಗೊಳಿಸುತ್ತದೆ. ಆಗ ದೈವಶಕ್ತಿ ಪ್ರಕಟವಾಗಿ ಬಂಧುಬಾಂಧವರೂ ಗೆಳೆಯರನ್ನು ಭಯ ಮತ್ತು ಹತೋಟಿಯಲ್ಲಿಟ್ಟುಕೊಳ್ಳುವುದು. ತಮ್ಮಲ್ಲಿ ದೇವತ್ಮನ ಕಾರ್ಯಾನುಭವ ಹೊಂದಿದವರನ್ನು ಇವರು ಅಡ್ಡಿಪಡಿಸಲು ಧೈರ್ಯ ಮತ್ತು ಶಕ್ತಿ ಇಲ್ಲದಾಗುವರು. ಈ ಕೊನೆಯ ಕರೆಯು ಬಡದಾಸರಿಗೂ ನೀಡಲ್ಪಟ್ಟಿತು. ಅವರಲ್ಲಿ ಶ್ರಧಾಭಕ್ತಿಯುಳ್ಳವರು ಧೀನಭಾವದಿಂದ ತಮ್ಮ ವಿಮೋಚನೆಗೆ ಹರ್ಷಗಾನವನ್ನು ಮಾಡುವಾಗ ಅವರ ಯಜಮಾನರು ಅಡ್ಡಿಪಡಿಸಲಾಗಲಿಲ್ಲ; ಏಕೆಂದರೆ ಭಯಾಶ್ಚರ್ಯವು ಅವರನ್ನು ಮೌನವಹಿಸುವಂತೆ ಮಾಡಿತು. ಮಹಾ ಅದ್ಬುತಕಾರ್ಯಗಲು ಸಂಭವಿಸಿತು, ರೋಗಿಗಳು ಗುಣಹೊಂದಿದರು, ವಿಶ್ವಾಸಿಗಳಿಗೆ ಸೂಚಕ - ಅದ್ಬುತಕಾರ್ಯಗಳನ್ನು ಸಂಭವಿಸಿದವು. ದೇವರು ಈ ಕಾರ್ಯನಿರ್ವಹಿಸುತ್ತಿದ್ದು ಪ್ರತಿ ಭಕ್ತನೂ ತನ್ನ ನಿರ್ಭಯ ಆತ್ಮಸಾಕ್ಷಿಯಿಂದ ಮನವರಿಕೆ ಮಾಡಿಕೊಂಡು ಅತನ ಆಜ್ಞೆಗಳಿಗೆ ಬದ್ದರಾಗಿದ್ದವರ ಜೊತೆಗೂಡಿದರು; ಅವರೂ ಸಹ ಮೂರನೆಯ ಸಂದೇಶಕ್ಕೆ ಧ್ವನಿ ಸೇರಿಸಿ ಎಲ್ಲೆಡೆ ಸಾರಿದರು. ಮದ್ಯೆರಾತ್ರಿಯ ಕೂಗಿಗಿಂತ ಮೂರನೆಯ ಸಂದೇಶವು ಮಹಾಬಲದಿಂದ ಅಂತ್ಯಗೊಳ್ಳುವುದನ್ನು ನಾನು ಕಂಡೆನು .GCKn 264.2

    ದೇವರ ಸೇವಕರು ಪರಲೋಕದ ಅಧಿಕಾರ ತುಂಬಿದವರಾಗಿ ತಮ್ಮ ಮುಖವು ಪ್ರಜ್ವಲಿಸಿತ್ತಿರಲು, ಪವಿತ್ರ ಪ್ರತಿಷ್ಠೆಯಿಂದ ಹೊಳೆಯುತ್ತಾ, ಕೆಲಸವನ್ನು ಪೂರೈಸಲು ಮುನ್ಸಾಗುತ್ತಾ ,ಸಂದೇಶವನ್ನು ಸಾರಿದರು. ಲೋಟನು ನಾಶನಕ್ಕೊಳಗಾದ ಸೋದೋಮಿನಿಂದ ಹೊರಹೊರಟಂತೆ ಎಲ್ಲಾ ಧಾರ್ಮಿಕ ಸಭೆಗಳಲ್ಲಿ ಚದುರಿಹೋಗಿದ್ದ ಆತ್ಮಗಳು ಕರೆಗೆ ಓಗೊಟ್ಟು ಅಮೂಲ್ಯರೆನಿಸಿದವರು ನಾಶವಾಗುವ ಸಭೆಗಳಿಂದ ವೇಗವಾಗಿ ಹೊರಬಂದರು. ಶೋಧನಾಕಾಲವನ್ನು ಎಂದುರಿಸಿ ನಿಲ್ಲಲಾಗುವಂತೆ ದೇವರ ಮಕ್ಕಳಿಗೆ ಶಕ್ತಿಯನ್ನು ತುಂಬುತ್ತಾ ಮಹಾಪ್ರಭೆ ಸಂಪದ್ಭರಿತವಾಗಿ ಅವರ ಮೇಲೆ ಪ್ರಸಾದಿಸಲಾಯಿತು. ಆಗ ಎಲ್ಲಾ ಕಡೆಯಿಂದಲೂ ಅಸಂಖ್ಯಾತ ಧ್ವನಿಗಳು ; ಇದರಲ್ಲಿ ದೇವರ ಆಜ್ಞೆಗಳುನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ತೋರಿಬರುತ್ತದೆ ಎಂದು ಹೇಳುವುದನ್ನು ನಾನು ಕೇಳಿದೆನು. GCKn 266.1

    ಓದಿ; ಆದಿಕಾಂಡ ಅಧ್ಯಾಯ 19; ಪ್ರಕಟನೆ 14:12; 18:2-5GCKn 266.2