Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಅಧ್ಯಾಯ 35. - ಮುಕ್ತಾಯವಾದ ಮೂರನೆಯ ಸಂದೇಶವು

  ಮೂರನೆಯ ಸಂದೇಶವು ಅಂತ್ಯವಾಗುವ ಕಾಲಾವಧಿಯನ್ನು ನನ್ನ ಗಮನಕ್ಕೆ ತರಲಾಯಿತು. ದೇವಜನರ ಮೇಲೆ ಆತನ ಶಕ್ತಿಯು ನೆಲೆಗೊಂಡು ತಮ್ಮ ಕೆಲಸವನ್ನು ಸಾಧಿಸಿಕೊಂಡು ಮುಂದೆ ಬರುವ ಪರೀಕ್ಷಾಕಾಲಕ್ಕೆ ಅವರು ಸಿದ್ದರಾಗಿದ್ದರು. ಅವರು ಹಿಂಗಾರು ಮಳೆಯನ್ನು ಅಂಗೀಕರಿಸಿಕೊಂಡು ದೇವರ ಪ್ರಸನ್ನತೆಯಲ್ಲಿ ನವಚೈತನ್ಯಹೊಂದಿದ್ದು, ಸಜೀವಸಾಕ್ಷಿಗಳೆನಿಸಿ ಪುನರುಜ್ಜೀವಹೊಂದಿದ್ದರು. ಈ ಸಂದೇಶಗಳನ್ನು ಅಂಗೀಕರಿಸದಿದ್ದ ಭೂಲೋಕ ನಿವಾಸಿಗಳು ಕೊನೆಯ ಎಚ್ಚರಿಕೆಯ ತ್ತುತ್ತೂರಿಯು ಎಲ್ಲೆಡೆ ಕೇಳಿಸಿದಾಗ ಕೋಪಾವೇಶದಿಂದ ಕೂಗಾಡಿದರು.GCKn 267.1

  ಪರಲೋಕದಲ್ಲಿ ದೇವದೂತರು ಅತ್ತಿತ್ತ ವೇಗವಾಗಿ ಓಡಾಡುವುದನ್ನು ನಾನು ಕಂಡೆನು. ಆಗ ಭೂಲೋಕದದಿಂದ ಲೇಖಕನ ಶಾಯಿಕೊಂಬನ್ನು ಪಕ್ಕದಲ್ಲಿಟ್ಟುಕೊಂಡಿದ್ದ ಒರ್ವ ದೂತನು ಬಂದು ಯೇಸುವಿಗೆ, ನನ್ನ ಕೆಲಸವನ್ನು ಮುಗಿಸಿದ್ದೇನೆ, ಭಕ್ತರನ್ನೆಲ್ಲಾ ಎಣೆಸಿ ಮುದ್ರಿಸಿದ್ದೇನೆ ಎಂದನು. ಆನಂತರ ಹತ್ತು ಕಟ್ಟಳೆಗಳನ್ನೊಳಗೊಂಡ ಮಂಜೂಷದ ಮುಂದೆ ನಿಂತು ಸೇವೆಸಲ್ಲಿಸುತ್ತಿದ್ದ ಯೇಸು, ಧೂಪಾರತಿಯನ್ನು ಕೆಳಗಿಟ್ಟುದನ್ನು ನಾನು ಕಂಡೆನು. ಆತನು ತನ್ನ ಕೈಗಳನ್ನೆತ್ತಿ ಇನ್ನು ತೀರಿತು ಎಂದು ಮಹಾಧ್ವನಿಯಿಂದ ಕೂಗಿದನು. ಯೇಸುವು — ಅನ್ಯಾಯಮಾಡುವವನು ಇನ್ನೂ ಅನ್ಯಾಯಮಾಡಲಿ ; ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ ಎಂದು ಗಂಭೀರವಾಗಿ ಪ್ರಕಟಿಸಿದಾಗ ಇಡೀ ದೂತಗಣಗಳು ತಮ್ಮ ಕಿರೀಟಗಳನ್ನು ತೆಗೆದಿಟ್ಟರು.GCKn 267.2

  ಆಗ ಪ್ರತಿ ಮೊಕದ್ದಮೆಯು ಮರಣಕ್ಕೊ ಅಥವಾ ಜೀವಕ್ಕೊ ಎಂದು ತೀರ್ಮಾನವಾಗುವುದನ್ನು ನಾನು ಕಂಡೆನು. ಯೇಸು ಸಂಗ್ರಹಿಸಿದ್ದ ಆತನ ಜನರ ಪಾಪಗಳು ಅಳಿಸಲ್ಪಟ್ಟವು. ಆತನು ತನ್ನ ರಾಜ್ಯಾಂಗವನ್ನು ವಹಿಸಿಕೊಂಡನು ಆತನ ಪ್ರಜೆಗಳಿಗಾಗಿ ಶುದ್ಧೀಕರಣೆ ಮಾಡಲಾಯಿತು. ಆತನು ಪರ್ಣಶಾಲೆಯಲ್ಲಿ ಸೇವಾಕಾರ್ಯದಲ್ಲಿರುವಾಗ ಸತ್ತ ನೀತಿವಂತರಿಗೆ ನ್ಯಾಯತೀರ್ಪು ಮುಗಿದು ನಂತರ ಸಜೀವ ನೀತಿವಂತರ ತೀರ್ಪಾಯಿತು. ರಾಜ್ಯದ ಪ್ರಜೆಗಳ ನಿಷ್ಕರ್ಷೆಯಾಯಿತು. ಕುರಿಮರಿಯ ವಿವಾಹವು ಮುಗಿದು ಹೋಯಿತು, ಪರಲೋಕದ ಕೆಳಗಣ ಎಲ್ಲಾ ರಾಜ್ಯಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನ ಭಕ್ತಜನರಿಗೆ ಕೊಡೋಣವಾಗುವವು ಆಗ ಯೇಸು ರಾಜಾಧಿರಾಜನೂ ಕರ್ತರ ಕರ್ತನೂ ಆಗಿ ರಾಜ್ಯವಾಳುವನು.GCKn 268.1

  ಯೇಸುವು ಮಹಾಪರಿಶುದ್ಧ ಸ್ಥಳದಿಂದ ಹೊರಗೆ ಬರುವಾಗ ಆತನ ವಸ್ತ್ರದ ಗೆಜ್ಜೆಗಳ ನಾದವನ್ನು ನಾನು ಕೇಳಿದೆನು. ಆಗ ಕಾರ್ಗತ್ತಲ ಮೇಘವು ಭೂನಿವಾಸಿಗಳ ಮೇಲೆ ಆವರಿಸಿತು. ಕಳಂಕಿತ ಮಾನವನಿಗೂ ಮನನೊಂದ ದೇವನಿಗೂ ನಡುವೆ ಮದ್ಯಸ್ಥನಿರಲಿಲ್ಲ. ಯೇಸುವು, ದೇವರಿಗೂ ಪಾಪಿಗಳಾದ ಮನುಷ್ಯನಿಗೂ ನಡುವೆ ನಿಂತಿದ್ದಾಗ ಒಂದು ತಡೆ ಇತ್ತು; ಯಾವಾಗ ಯೇಸು ಅವರ ನಡುವಿನಿಂದ ಹೊರಟನೋ ಆಗ ತಡೆಯು ತೆಗೆದು ಹಾಕಲ್ಪಟ್ಟು ಸೈತಾನನು ಮಾನವರ ಮೇಲಿನ ಅಧಿಕಾರ ಪಡೆದನು. ಕ್ರಿಸ್ತನ ದೇವದರ್ಶನ ಗುಡಾರದಲ್ಲಿ ಸೇವಾಸಕ್ತನಾಗಿರುವವರೆವಿಗೂ ಉಪದ್ರವಗಳು ಸುರಿಸಲ್ಪಡುಲು ಅಸಾದ್ಯವಾಯಿತು. ಆದರೆ ಆತನ ಕೆಲಸ ಮುಗಿದ ನಂತರ ಮದ್ಯಸ್ಥಿಕೆ ಕಾರ್ಯವು ಅಂತ್ಯಗೊಂಡಿತು, ದೇವರ ರೌದ್ರಕ್ಕೆ ಇನ್ನೂ ತಡೆ ಯಾವುದೂ ಇರಲಿಲ್ಲ. ರಕ್ಷನೆಯನ್ನು ಹಗುರವಾಗಿ ಕಂಡು ಖಂಡನೆಯನ್ನು ಹಗೆಮಾಡಿದ ಕಳಂಕಿತ ಪಾಪಿಗಳ ನಿರಾಶ್ರಿತ ತಲೆಯ ಮೇಲೆ ಅದು ಉಗ್ರವಾಗಿ ಎಗರಿತು. ಈ ಉಗ್ರಕಾಲವಧಿಯಲ್ಲಿ ಭಕ್ತರು ದೇವರ ಪ್ರಸನ್ನತೆಯಲ್ಲಿ ಜೀವಿಸುವರು. ಪ್ರತಿಮೊಕದ್ದಮೆಗಳ ತೀರ್ಪಾಯಿತು. ದೇವರ ಅಮೂಲ್ಯ ಒಡವೆಗಳು ಲೆಕ್ಕಿಸಲ್ಪಟ್ಟವು ಯೇಸುವು ಪರ್ಣಶಾಲೆಯ ಮೊದಲ ಭಾಗದಲ್ಲಿ ಸ್ವಲ್ಪಕಾಲ ನಿಧಾನಿಸಿದನು; ಆತನು ಮಹಾಪರಿಶುದ್ಧ ಸ್ಥಳದಲ್ಲಿದ್ದಾಗ ಅರಿಕೆ ಮಾಡಲ್ಪಟ್ಟದ್ದ ಪಾಪಗಳನ್ನು, ಪಾಪದ ಮೂಲಪಿತೃವಾದ ಪಿಶಾಚನ ಮೇಲೆ ಹೊರಿಸಿದನು; ಎಲ್ಲಾ ಪಾಪಭಾರದ ಶಿಕ್ಷಿಯನ್ನು ಅವನೇ ಅನುಭವಿಸಬೇಕು.GCKn 268.2

  ತದನಂತರ ಯೇಸುವು ಮಹಾಯಾಜಕನ ವಸ್ತ್ರವನ್ನು ಕಳಚಿ ರಾಜೋಚಿತವಾದ ವಸ್ತ್ರವನ್ನು ಧರಿಸಿಕೊಂಡದನ್ನು ನಾನು ಕಂಡೆನು. ಆತನ ತಲೆಯ ಮೇಲೆ ಹಲವಾರು ಒಂದರ ಒಳಗೊಂಡು ಸೇರಿದಂತಿದ್ದ ಕಿರೀಟವು ಅಲಂಕರಿಸಿತು. ಸುತ್ತಾಲೂ ಪರಲೋಕಗಣಗಳು ಸುತ್ತುವರೆದವು. ಆತನು ಪರಲೋಕವನ್ನು ಬುಟ್ಟು ಹೊರಟನು. ಭೂನಿವಾಸಿಗಳಮೇಲೆ ಉಪದ್ರವಗಳು ಹೊಯ್ಯಲ್ಪಟ್ಟವು. ಕೆಲವರು ದೇವರನ್ನು ದೊಷಿಸುತ್ತಾ ಶಪಿಸುತ್ತಿದ್ದರು. ಮತ್ತೇ ಕೆಲವರು ದೇವಜನರ ಕಡೆಗೆ ಓಡಿಬರುತ್ತಾ ಆತನ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ನಮಗೂ ಕಲಿಸಿರಿ ಎಂದು ಕೂಗುತ್ತಿದ್ದರು. ಆದರೆ ಅವರಿಗೆ ಭಕ್ತರಲ್ಲಿ ಏನೂ ಇರಲಿಲ್ಲ. ಪಾಪಿಗಳಗಿ ಕೊನೆಗೆ ಕಣ್ಣೀರು ಹರಿಸಿ, ಸಂಕಟ ತುಂಬಿದ ಪ್ರಾರ್ಥನೆ ಮಾಡಲಾಗಿದ್ದು ಅಂತ್ಯಭಾರವೂ ಹೊತ್ತದ್ದು ಮುಗಿದಿತ್ತು. ಇನ್ನೂ ಮೇಲೆ ಅವರನ್ನು ಸ್ವಾಗತಿಸುವ ಮಧುರ ಕೃಪಾ ಧ್ವನಿ ಕೇಳದಾಯಿತು. ಅವರು ರಕ್ಷಣೆಗಾಗಿ ಕೊನೆಯ ಎಚ್ಚರಿಕೆಕೊಟ್ಟು ಎಲ್ಲಾ ಭಕ್ತರು ಇಡೀ ಪರಲೋಕವೂ ಆಸಕ್ತರಾಗಿದ್ದಾಗ ಅವರಿಗೇ ಆದರ ಬಗ್ಗೆ ಯಾವ ಆಸಕ್ತಿ ಇರಲಿಲ್ಲ. ಜೀವ ಮರಣ ಎರಡೂ ಮುಂದೆ ಇಡಲ್ಪಟ್ಟಿತ್ತು ಬಹಳ ಜನರು ಜೀವವನ್ನು ಅಪೇಕ್ಷಿಸಿದರು; ಆದರೆ ಶ್ರಮಪಡಲಿಲ್ಲ. ಜೀವದ ಆಯ್ಕೆ ಮಾಡದ ಅವರ ಪಾಪವನ್ನು ತೊಳೆಯುವ ಯಾವ ಶುದ್ಧರಕ್ತವೂ ಇಲ್ಲವಾಯಿತು. ಅವರಿಗಾಗಿ ಬೇಡುತ್ತಾ ಇನ್ನೂ ಸ್ವಲ್ಪಕಾಲ ಕಾಯ್ದು ಬಿಟ್ಟುಕೊಡು ಎಂದು ಅಂಗಾಲಾಚುವ ಅನುಕಂಪ ತುಂಬಿದ ರಕ್ಷಕನು ಪಾಲಿಗಿಲ್ಲ. ಇನ್ನು ಮುಗಿಯಿತು; ಇನ್ನು ತೀರಿತು ಎಂಬ ಭಯಂಕರ ವಾರ್ತಯು ಉಸುರಲ್ಪಟ್ಟಾಗ. ಪರಲೋಕವೆಲ್ಲಾ ಯೇಸುವನೊಂದಿಗೆ ಒಟ್ಟುಗೊಡಿತು. ರಕ್ಷಣಾಯೋಜನೆಯು ಅಂತ್ಯಗೊಂಡಿತು. ಆದರೆ ಯಾವಾಗ ಕೃಪೆಯ ಮಧುರಸ್ವರ ನಶಿಸಿತೋ ಭಯಂಕರ ಭೀತಿ ಅವರಲ್ಲಿ ತುಂಬಿತು. ಬಹುಸ್ಪಷ್ಟವಾಗಿ, ತಡವಾಯಿತು! ತಡವಾಯಿತು ಎಂಬ ಭಯಂಕರವಾದ ಮಾತು ಅವರಿಗೆ ಕೇಳಿಸಿತು.GCKn 269.1

  ಯಾರೆಲ್ಲಾ ದೇವರಮಾತಿಗೆ ಬೆಲೆಕೊಡಲಿಲ್ಲವೋ ಅವರು ತರಾತುರಿಯಿಂದ ಅತ್ತಿತ್ತ ಓಡಡುತ್ತಿದ್ದರು. ದೇವರ ವಾಕ್ಯವನ್ನು ಹುಡುಕುತ್ತಾ ಸಮುದ್ರದಿಂದ ಸಮುದ್ರದ ಕಡೆಗೆ, ಬಡಗಲಿಂದ ಮುಡಲಕ್ಕೆ ಬಳಳುತ್ತಾ ಅಲೆದಾಡುತ್ತಿದ್ದರು; ಅವರಿಗೆ ಸಿಗುವುದಿಲ್ಲ! ಎಂದು ದೂತನು ಹೇಳಿದನು. ದೇಶಕ್ಕೆ ಕ್ಷಾಮ ಉಂಟಾಗುತ್ತದೆ; ಅದು ಅನ್ನ ಕ್ಷಾಮವಲ್ಲ; ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯವನ್ನು ಕೇಳುವ ಕ್ಷಾಮವೇ! ದೇವರು ಅನುಮತಿಸಿದರೆ ಏನೆಲ್ಲಾ ಕೊಡಬಹುದು! ಅದರೆ ಇಲ್ಲ, ಅವರು ಹಸಿದು ಬಾಯಾರಬೇಕು. ದಿನದಿನವೂ ರಕ್ಷಣೆಯನ್ನು ತಿರಸ್ಕರಿಸುತ್ತಾ ಪರಲೋಕದ ಸಂಪತ್ತಿಗಿಂತಲೂ ಭೂಲೋಕದ ಲೋಲುಪ್ತತೆಗೆ ಹೆಚ್ಚಾಗಿ ಬೆಲೆಕೊಟ್ಟಿದ್ದಾರೆ . ಯೇಸುವನ್ನು ತಿರಸ್ಕರಿಸಿ ಭಕ್ತರನ್ನು ತಳ್ಳಿಬಿಟ್ಟಿದ್ದಾರೆ. ಅಶುದ್ಧರು ಅಶುದ್ಧರಾಗೇ ಉಳಿಯಬೇಕು.GCKn 271.1

  ಬಹು ದೊಡ್ಡ ದುಷ್ಟರಗುಂಪು ರೌದ್ರರಾಗಿದ್ದು ಉಪದ್ರವಗಳ ಪ್ರಭಾವಕ್ಕೆ ಒಳಗಾದರು. ಅದೊಂದು ಭೀತಿಭರಿತ ದೃಶ್ಯವಾಗಿತ್ತು. ತಂದೆ-ತಾಯಿಯರು ಮಕ್ಕಳನ್ನು, ಮಕ್ಕಳ ತಂದೆ-ತಾಯಿಯನ್ನು ಆಕ್ಷೇಪಿಸುತ್ತಿದ್ದರು, ಸಹೋದರ ಸಹೋದರಿಯರನ್ನು ಸಹೋದರಿಯರು ಸಹೋದರರನ್ನು ತೆಗಳುತ್ತಿದರರು. ಪ್ರತಿದಿಕ್ಕಿನಿಂದಲೂ ದೋಳಾದುವ ಶಬ್ದ; ಈ ಗಂಭೀರವಾದ ಸ್ಥ್ಜಿತಿಯಿಂದ ರಕ್ಷಿಸುವ ಸತ್ಯವಚನಗಳನ್ನು ಕೇಳುಲಾಗದಂತೆ ನೀನೆ ನನ್ನನ್ನು ತಡೆದೆ ಎಂಬ ದೂಷಣೆ ಕೇಳಿಸಿತು. ಜನರು ಹಗೆ ಉಗುಳುತ್ತಾ ಬೋಧಕರನ್ನು, ನೀವು ನಮ್ಮನ್ನು ಎಚ್ಚರಿಸಲಿಲ್ಲ ಎಂದು ಹಲುಬಿದರು ಭಯ ಎಲ್ಲೆಲ್ಲಾ ತುಂಬುಕೊಳ್ಳುತ್ತಿದ್ದಾಗ ಅದನ್ನು ನಂದಿಸಲು ನೀವು ಈ ಲೋಕವು ಮಾರ್ಪಾಡು ಹೊಂದುತ್ತದೆಂದು. ಶಾಂತಿ! ಶಾಂತಿ ಎಂದು ಕೂಗುತ್ತಿದ್ದಿರಿ, ಈ ವೇದಾನಾ ಕಾಲದ ಬಗೆಗೆ ನಮಗೆ ಅರಿವು ಮೂಡಿಸಲಿಲ್ಲ, ಇದರ ಬಗ್ಗೆ ಎಚ್ಚರಿಸಿದವರನ್ನು ಮತಭ್ರಾಂತರೆಂದೂ, ನಮ್ಮನ್ನು ನಾಶಪಡಿಸುವ ದುಷ್ಟಜನರೆಂದೂ ಹೇಳಿದಿರಿ ಎಂದು ದೂಷಿಸಿದರು . ಆದರೆ ಆ ಬೋಧಕರ ದೇವರ ಕೋಪದಿಂದ ತಪ್ಪಿಸಿಕೊಳ್ಳಲಾಗಲಿಲ್ಲ ಎಂಬುದನ್ನು ನಾನು ಕಂಡೆನು, ಅವರಿಗೆ ಇತರರಿಗಿಂತ ಹಿಂಸೆ ಯಾತನೆಗಳು ಹತ್ತು ಪಟ್ಟು ಹೆಚ್ಚಾಗಿದ್ದವು .GCKn 271.2

  ನೋಡಿರಿ; ಯೆಹೆಜ್ಕೆಲ 9:2-11; ದಾನಿಯೇಲ 7:27; ಹಿಶೇಯ 6:3; ಆಮೋಸ 8:11-13 ಪ್ರಕಟನೆ ಅಧ್ಯಾಯ 16, 17:14 GCKn 272.1

  Larger font
  Smaller font
  Copy
  Print
  Contents