Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭೂಲೋಕದ ವ್ಯವಹಾರಗಳ ಬಗ್ಗೆ ಪರಲೋಕದ ಆಸಕ್ತಿ

    ಮೊದಲನೆ ಕೊಲೆಗಾರನಾದ ಕಾಯಿನನ ಪ್ರಾಣ ಉಳಿಸುವುದರ ಮೂಲಕ ದೇವರು ಸಮಸ್ತ ವಿಶ್ವದ ಮುಂದೆ ಮಹಾಹೋರಾಟಕ್ಕೆ ಸಂಬಂಧಪಟ್ಟಂತೆ ತನ್ನ ಯೋಜನೆಯನ್ನು ಪ್ರಕಟಪಡಿಸಿದನು. ದಂಗೆಯನ್ನು ಅಡಗಿಸುವುದು ಮಾತ್ರವಲ್ಲ, ದಂಗೆಯ ಸ್ವರೂಪವನ್ನು ವಿಶ್ವದ ಮುಂದೆ ತಿಳಿಯಪಡಿಸುವುದೇ ಆತನ ಉದ್ದೇಶವಾಗಿತ್ತು. ಇತರ ಲೋಕಗಳಲ್ಲಿರುವ ಪರಿಶುದ್ಧರಾದ ಜನರು ನಮ್ಮ ಲೋಕದಲ್ಲಿ ನಡೆಯುತ್ತಿರುವ ಘಟನೆಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಮನುಷ್ಯನ ರಕ್ಷಣೆಗಾಗಿ ಕ್ರಿಸ್ತನು ತನ್ನ ಪ್ರಾಣ ಕೊಟ್ಟ ಕಾರ್ಯವು, ನಮಗೆ ಪರಲೋಕಕ್ಕೆ ಮಾರ್ಗಮಾಡಿಕೊಟ್ಟದಲ್ಲದೆ, ಸಮಸ್ತ ವಿಶ್ವದ ಮುಂದೆ ಸೈತಾನನ ದಂಗೆಯೊಂದಿಗೆ ವ್ಯವಹರಿಸುವುದರಲ್ಲಿ ದೇವರು ಹಾಗೂ ಆತನ ಮಗನು ನ್ಯಾಯಮಂತನೆಂದು ಸಮರ್ಥಿಸಲ್ಪಟ್ಟಿತು (ಪೇಟ್ರಿಯಾರ್ಕ್ಸ್ ಅಂಡ್ ಪ್ರಾಫೆಟ್ಸ್ ಪುಟ 68, 69 (1890). ಒಳ್ಳೆಯದು ಮತ್ತು ಕೆಟ್ಟದ್ದರ ನಡುವಣ ಈ ಮಹಾಹೋರಾಟದ ಮುಕ್ತಾಯದ ದೃಶ್ಯಗಳನ್ನು ಸಮಸ್ತ ವಿಶ್ವವೇ ಅಪಾರವಾದ ಆಸಕ್ತಿಯಿಂದ ವೀಕ್ಷಿಸುತ್ತಿದೆ (ಪೇಟ್ರಿಯಾರ್ಕ್ಸ್ ಅಂಡ್ ಕಿಂಗ್ಸ್, ಪುಟ 148 (1914).ಕೊಕಾಘ 17.1

    ನಮ್ಮ ಈ ಕಿರಿಯ ಲೋಕವು ಸಮಸ್ತ ವಿಶ್ವದ ಪಠ್ಯಪುಸ್ತಕವಾಗಿದೆ ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ (ಡಿಸೈರ್ ಆಫ್ ಏಜಸ್, ಪುಟ 19 (1898). ಅಲ್ಲದೆ ಕ್ರಿಸ್ತನು ಗೆತ್ಸೇಮನೆ ತೋಟದಲ್ಲಿ ಅನುಭವಿಸುತ್ತಿದ್ದ ಮಹಾಹೋರಾಟವನ್ನು ಪಾಪಮಾಡದ ಇವರ ಲೋಕಗಳು ಮತ್ತು ಪರಲೋಕದ ದೇವದೂತರು ಅಪಾರವಾದ ಆಸಕ್ತಿಯಿಂದ ಗಮನಿಸುತ್ತಿದ್ದರು (ಡಿಸೈರ್ ಆಫ್ ಏಜಸ್, ಪುಟ 693), ಸೈತಾನನೊಂದಿಗಿನ ಕ್ರಿಸ್ತನ ನಾಲ್ಕು ಸಾವಿರ ವರ್ಷಗಳ ಹೋರಾಟ ಹಾಗೂ ಶಿಲುಬೆಯಲ್ಲಿ ಆತನ ಜಯ ಇವುಗಳ ಬಗ್ಗೆ ಶ್ರೀಮತಿ ವೈಟಮ್ಮನವರು ತಿಳಿಸುವಾಗ, “ಪರಲೋಕವು ದೃಷ್ಟಿಸಿ ನೋಡಿತು’, ‘ಸಮಸ್ತ ಪರಲೋಕ ಮತ್ತು ಪಾಪಮಾಡದ ಲೋಕಗಳು ಸಾಕ್ಷಿಗಳಾಗಿದ್ದವು “ಪರಲೋಕದ ದೇವದೂತರಿಗೆ ಎಂತಹ ಒಂದು ದೃಶ್ಯ’ ಎಂಬ ನುಡಿಗಟ್ಟುಗಳನ್ನು ಉಪಯೋಗಿಸಿದ್ದಾರೆ (ಡಿಸೈರ್ ಆಫ್ ಏಜಸ್, ಪುಟಗಳು 693, 759, 760).ಕೊಕಾಘ 17.2

    *****