Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಮಸ್ತ ಲೋಕವೇ ನಾಶದಲ್ಲಿ ತೊಡಗಿರುವುದು

    ಮುಂದೆ ಬರಲಿರುವ ನಾಶದ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡುವವರೆಗೆ ಹೋರಾಟ, ಸಂಘರ್ಷಗಳು ಉಂಟಾಗದಂತೆ ದೇವದೂತರು ಈಗ ತಡೆಹಿಡಿದುಕೊಂಡಿದ್ದಾರೆ. ಆದರೆ ಲೋಕದ ಮೇಲೆ ಚಂಡಮಾರುತವು ಇನ್ನೇನು ಬೀಸಲಿದೆ. ದೇವದೂತರು ಯುದ್ಧ ಹೋರಾಟಗಳೆಂಬ ಗಾಳಿಬೀಸದಂತೆ ನಾಲ್ಕುದಿಕ್ಕುಗಳ ಗಾಳಿಯನ್ನು ಹಿಡಿದುಕೊಂಡಿರುವುದನ್ನು ಬಿಡುವಂತೆ ದೇವರು ಆಜ್ಞಾಪಿಸಿದಾಗ, ಯಾವ ಕವಿಯೂ ವರ್ಣಿಸಲಾಗದಂತ ಭಯಾನಕವಾದ ಘಟನೆಗಳು ಸಂಭವಿಸುವವು (ಎಜುಕೇಷನ್ ಪುಟಗಳು 179, 180) (ಪ್ರವಾದನೆಯಲ್ಲಿ ಕೆಲವು ಸಂಕೇತಗಳನ್ನು ಉಪಯೋಗಿಸಲಾಗಿದೆ. ಉದಾಹರಣೆಗೆ ಸ್ತ್ರೀ ಎಂಬುದು ಸಭೆಯನ್ನು ಸೂಚಿಸುತ್ತದೆ. ಅದೇ ರೀತಿ ಗಾಳಿ ಎಂಬುದು ಹೋರಾಟ, ಯುದ್ಧ, ಸಂಘರ್ಷವನ್ನು ಸೂಚಿಸುತ್ತದೆ (ಪ್ರಕಟನೆ 7:1-20)ಕೊಕಾಘ 139.4

    ರಕ್ಷಕನಾದ ಕ್ರಿಸ್ತನು ಯೆರೂಸಲೇಮಿನ ನಾಶದ ಬಗ್ಗೆ ನುಡಿದ ಪ್ರವಾದನೆಯು (ಮತ್ತಾಯ 24ನೇ ಅಧ್ಯಾಯ) ಕ್ರಿ.ಶ. 70 ರಲ್ಲಿ ನೆರವೇರಿತು. ಯೆಹೂದ್ಯರಿಗೆ ಬಂದಂತ ಮಹಾಹಿಂಸೆಯಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ಕೊಲ್ಲಲಟರು. ಆದರೆ ನಾಲ್ಕುದಿಕ್ಕುಗಳಲ್ಲಿ ಹಿಡಿದುಕೊಂಡಿರುವ ಗಾಳಿಯನ್ನು ಬಿಟ್ಟಾಗ, ಈ ಲೋಕದಲ್ಲಿ ಸಂಭವಿಸುವ ಭಯಂಕರ ಘಟನೆಗಳನ್ನು ಯಾರೂ ಸಹ ವರ್ಣಿಸಲಾಗದು. ಇದರ ಮುಂದೆ ಹೋಲಿಸಿದಾಗ, ಯೆರೂಸಲೇಮಿನ ನಾಶವು ಏನೇನೂ ಅಲ್ಲ. ದೇವರು ಆರಿಸಿಕೊಂಡ ಯೆರೂಸಲೇಮಿಗೆ ಉಂಟಾದ ವಿಪತ್ತು, ದೇವರ ಕರುಣೆಯನ್ನು ನಿರಾಕರಿಸಿ, ಆತನ ಆಜ್ಞೆಗಳನ್ನು ಧಿಕ್ಕರಿಸಿದ ಈ ಜಗತ್ತಿಗೆ ಬರಲಿರುವ ಮಹಾನಾಶದ ಮುನ್ಸೂಚನೆಯಾಗಿದೆ ಎಂದು ತಿಳಿಯಬಹುದು (ಗ್ರೇಟ್ ಕಾಂಟ್ರೊವರ್ಸಿ, ಪುಟ 36).ಕೊಕಾಘ 140.1

    ಸೈತಾನನು ಈ ಲೋಕದ ಜನರನ್ನು ಕೊನೆಯದಾದ ಒಂದು ಮಹಾಸಂಕಟದ ಸಮಯಕ್ಕೆ ಪ್ರೇರೇಪಿಸುವನು. ದೇವದೂತರು ನಾಲ್ಕುದಿಕ್ಕುಗಳ ಗಾಳಿಯನ್ನು ಬಿಟ್ಟಾಗ, ಎಲ್ಲಾ ರೀತಿಯ ಹೋರಾಟ, ಸಂಘರ್ಷ, ಯುದ್ಧಗಳು ಸಂಭವಿಸುವವು. ಸಮಸ್ತ ಜಗತ್ತೇ ಮೊದಲನೆ ಶತಮಾನದಲ್ಲಿ ಯೆರೂಸಲೇಮಿನ ಮೇಲೆ ಬಂದಂತ ವಿಪತ್ತಿಗಿಂತಲೂ ಅತ್ಯಂತ ಭಯಂಕರವಾದ ನಾಶದಲ್ಲಿ ತೊಡಗಿಸಿಕೊಳ್ಳುವುದು (ಗ್ರೇಟ್ ಕಾಂಟ್ರೊವರ್ಸಿ, ಪುಟ (614)ಕೊಕಾಘ 140.2

    ದೇವರು ಕರುಣೆಯುಳ್ಳವನೂ ಹಾಗೂ ನ್ಯಾಯವಂತನೂ ಆಗಿದ್ದಾನೆಕೊಕಾಘ 140.3

    ದೇವರು ಒಳ್ಳತನದಿಂದ ಕೂಡಿದವನೂ, ಸತ್ಯವೂ, ತಾಳೆಯೂ, ದಯ ಹಾಗೂ ಕರುಣೆಯುಳ್ಳವನೂ ಆಗಿರುವುದು ಆತನ ಮಹಿಮೆಯಾಗಿದೆ. ಆದರೆ ತನ್ನ ಮಹಿಮೆಯನ್ನು ಕರುಣೆಯಿಂದ ಪ್ರಕಟಿಸುವಂತೆಯೇ, ಪಾಪಿಗಳನ್ನು ಶಿಕ್ಷಿಸುವುದರ ಮೂಲಕ ನ್ಯಾಯ ತೋರಿಸುವುದೂ ಸಹ ದೇವರ ಮಹಿಮೆಯಾಗಿದೆ (ರಿವ್ಯೂ ಅಂಡ್ ಹೆರಾಲ್ಡ್, ಮಾರ್ಚ್ 10, 1904), ಇಸ್ರಾಯೇಲಿನ ಕರ್ತನಾದ ದೇವರು ಐಗುಪ್ತ ದೇಶದ ದೇವತೆಗಳನ್ನು ದಂಡಿಸಿದಂತೆಯೇ, ಈ ಲೋಕದ ದೇವತೆಗಳಿಗೆ ತೀರ್ಪು ಮಾಡುವನು, ಬೆಂಕಿ, ಪ್ರವಾಹ, ಉಪದ್ರವಗಳು ಹಾಗೂ ಭೂಕಂಪದಿಂದ ಆತನು ಸಂಪೂರ್ಣವಾಗಿ ಲೋಕವನ್ನು ನಾಶಮಾಡುವನು. ಆಗ ವಿಮೋಚಿಸಲ್ಪಟ್ಟ ದೇವರ ಜನರು ಆತನ ನಾಮವನ್ನು ಉನ್ನತಸ್ಥಾನಕ್ಕೇರಿಸಿ ಲೋಕದಲ್ಲಿ ಮಹಿಮೆ ಪಡಿಸುವರು. ಜಗತ್ತಿನ ಇತಿಹಾಸದ ಮುಕ್ತಾಯದಲ್ಲಿ ಜೀವಿಸುತ್ತಿರುವವರು ದೇವರು ಕಲಿಸಲಿರುವ ಪಾಠಗಳ ಬಗ್ಗೆ ಬುದ್ದಿವಂತರಾಗಬೇಕಲ್ಲವೇ?ಕೊಕಾಘ 140.4

    ನಮಗೆ ಮಧ್ಯಸ್ಥನಾಗಿರುವಾತನು, ನಮ್ಮ ಪಶ್ಚಾತ್ತಾಪದ ಪ್ರಾರ್ಥನೆಗಳನ್ನು ಕೇಳುವಾತನು, ಮುಗಿಲ ಬಿಲ್ಲನ್ನು ಧರಿಸಿಕೊಂಡು ವಾಗ್ದಾನಗಳನ್ನು ನೆರವೇರಿಸುವಾತನೂ ಹಾಗೂ ಕೃಪೆಯೂ, ಪ್ರೀತಿಸ್ವರೂಪನೂ ಆಗಿರುವ ದೇವರು ಶೀಘ್ರದಲ್ಲಿಯೇ ಪರಲೋಕದ ದೇವದರ್ಶನದ ಗುಡಾರದಲ್ಲಿ ತನ್ನ ಯಾಜಕ ಸೇವೆಯನ್ನು ನಿಲ್ಲಿಸುವನು. ಆಗ ಕೃಪೆಯೂ, ಕನಿಕರವೂ, ದಯೆಯೂ ಉಳ್ಳ ದೇವರಾಗಿರುವ ನಮ್ಮ ಕರ್ತನು ಅವುಗಳಿಗೆ ಬದಲಾಗಿ ನ್ಯಾಯಾಧೀಶನ ಸ್ಥಾನವನ್ನು ತೆಗೆದುಕೊಳ್ಳುವನು. ಶ್ರೇಷ್ಠ ನ್ಯಾಯಾಧಿಪತಿಯಾಗಿ ತನ್ನ ಯೋಗ್ಯವಾದ ಸ್ಥಾನವನ್ನು ಆತನು ಪಡೆದುಕೊಳ್ಳವನು (ರಿ ಅಂಡ್ ಹೆರಾಲ್ಡ್, ಜನವರಿ 1, 1889).ಕೊಕಾಘ 140.5

    ಸತ್ಯವೇದದಾದ್ಯಂತ ದೇವರು ಕರುಣೆಯೂ, ಔದಾರ್ಯವುಳ್ಳವನೂ ಎಂದು ತಿಳಿಸಿರುವುದು ಮಾತ್ರವಲ್ಲ, ಆತನು ಶಿಸ್ತುಬದ್ಧತೆಯುಳ್ಳ, ನಿಷ್ಪಕ್ಷಪಾತಿಯಾದ ನ್ಯಾಯಾಧಿಪತಿಯೂ ಆಗಿದ್ದಾನೆಂದು ತಿಳಿಸಲ್ಪಟ್ಟಿದೆ (ದಿ ಸೈನ್ಸ್ ಆಫ್ ದಿ ಟೈಮ್ಸ್, ಮಾರ್ಚ್ 24, 1881).ಕೊಕಾಘ 140.6