Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಒಳ್ಳೇದರ ಮತ್ತು ಕೆಟ್ಟದ್ದರ ನಡುವಣ ಕೊನೆಯ ಮಹಾಹೋರಾಟ

    ಕೊನೆಯ ಮಹಾಹೋರಾಟದಲ್ಲಿ ಪರಸ್ಪರ ವಿರೋಧಿಯಾಗಿರುವ ಎರಡು ಮಹಾಶಕ್ತಿಗಳು ಕಂಡುಬರುವವು. ಒಂದು ಕಡೆ ಭೂಮ್ಯಾಕಾಶಗಳ ಸೃಷ್ಟಿಕರ್ತನು ಇರುವನು. ಆತನ ಕಡೆಯಲ್ಲಿರುವವರೆಲ್ಲರೂ ಆತನ ಮುದ್ರೆ ಹೊಂದಿರುವರು. ಅವರು ಆತನ ಆಜ್ಞೆಗಳಿಗೆ ವಿಧೇಯರಾಗಿದ್ದಾರೆ. ಮತ್ತೊಂದು ಕಡೆಯಲ್ಲಿ ಅಂಧಕಾರದ ಅಧಿಪತಿಯರುವನು. ಅವನೊಂದಿಗೆ ದೇವರಿಗೆ ವಿರುದ್ಧವಾಗಿ ದಂಗೆ ಎದ್ದವರು ಮತ್ತು ಧರ್ಮಭ್ರಷ್ಟರಾದವರು ಇರುವರು (ಸತ್ಯವೇದ ವ್ಯಾಖ್ಯಾನ, ಸಂಪುಟ 1, ಪುಟಗಳು 982, 983).ಕೊಕಾಘ 146.2

    ಒಂದು ಭಯಂಕರವಾದ ಯುದ್ಧವು ನಮ್ಮ ಮುಂದಿದೆ. ಸರ್ವಶಕ್ತನ ಮಹಾದಿನದಲ್ಲಾಗುವ ಆ ಯುದ್ಧವನ್ನು ನಾವು ಸಮೀಪಿಸುತ್ತಿದ್ದೇವೆ. ದೇವರ ನಿಯಂತ್ರಣದಲ್ಲಿದ್ದ ಎಲ್ಲವನ್ನೂ ಬಿಡುಗಡೆಗೊಳಿಸಲಾಗುವುದು. ಲೋಕವು ಸೈತಾನನ ವಶಕ್ಕೆ ಕೊಡಲ್ಪಡುವುದು. ರಾಜ ಮಹಾರಾಜರು, ದೇಶಗಳು ಪರಲೋಕದ ದೇವರ ವಿರುದ್ಧವಾಗಿ ತಿರುಗಿ ಬೀಳುವವು, ದೇವರನ್ನು ಆರಾಧಿಸುವವರ ವಿರುದ್ಧ ಈ ಶಕ್ತಿಗಳು ಬಹಳ ದ್ವೇಷ ಹೊಂದಿರುವವು. ಶೀಘ್ರದಲ್ಲಿ ಅತಿ ಶೀಘ್ರದಲ್ಲಿಯೇ ಒಳ್ಳೇದರ ಮತ್ತು ಕೆಟ್ಟದರ ನಡುವೆ ಒಂದು ಮಹಾಹೋರಾಟ ನಡೆಯುವುದು. ಈ ಲೋಕವು ಕೋನೆಯ ಹೋರಾಟ ಹಾಗೂ ಕೊನೆಯ ಜಯದ ದೃಶ್ಯಗಳ ಯುದ್ಧಭೂಮಿಯಾಗಿದೆ. ಇಲ್ಲಿ ಸೈತಾನನ ದೀರ್ಘಕಾಲದ ದಂಗೆಯು ಶಾಶ್ವತವಾಗಿ ಕೊನೆಯಾಗುವುದು (ರಿವ್ಯೂ ಅಂಡ್ ಹೆರಾಲ್ಡ್, ಮೇ 13, 1902).ಕೊಕಾಘ 146.3

    ಒಳ್ಳೇದರ ಮತ್ತು ಕೆಟ್ಟದ್ದರ ನಡುವಣ ಸೈನ್ಯಗಳ ಯುದ್ದವು, ಈ ಲೋಕದ ಸೈನ್ಯಗಳ ನಡುವೆ ನಡೆದಿರುವ ಯುದ್ಧಗಳಂತೆಯೇ ವಾಸ್ತವವಾಗಿರುತ್ತದೆ (ಪೇಟ್ರಿಯಾರ್ಕ್ ಅಂಡ್ ಕಿಂಗ್ಸ್, ಪುಟ 176).ಕೊಕಾಘ 146.4