Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಕ್ತರು ಪ್ರಾಣ ಕಳೆದುಕೊಳ್ಳುವುದಿಲ್ಲ

    ಮೃಗಕ್ಕೆ ನಮಸ್ಕರಿಸದೆ ಅಥವಾ ಅದರ ಗುರುತನ್ನು ಹೊಂದದೆ, ಕ್ರಿಸ್ತನ ಬರೋಣದಲ್ಲಿ ಪರಲೋಕಕ್ಕೆ ಹೋಗುವುದನ್ನು ನಿರೀಕ್ಷಿಸುತ್ತಿರುವ ಭಕ್ತರು, ದುಷ್ಟರಿಂದ ನಾಶವಾಗುವುದಕ್ಕೆ ದೇವರು ಬಿಡುವುದಿಲ್ಲ. ಒಂದು ವೇಳೆ ದುಷ್ಟರು ದೇವಜನರನ್ನು ಕೊಲ್ಲಲು ಅನುಮತಿ ಪಡೆದುಕೊಂಡಲ್ಲಿ, ಸೈತಾನನು, ಅವನ ದುಷ್ಟದೂತನು ಮತ್ತು ದೇವರನ್ನು ದ್ವೇಷಿಸುವವರೆಲ್ಲರೂ ತೃಪ್ತಿ ಹೊಂದುವರು. ಕರ್ತನ ಬರೋಣವನ್ನು ಕಣ್ಣಾರೆ ಕಾಣಬೇಕೆಂದು ಬಹಳ ಕಾಲದಿಂದ ಕಾದುಕೊಂಡಿರುವವರ ಮೇಲೆ ಸೈತಾನನಿಗೆ ಎಂತಹ ಅಧಿಕಾರವಿರುತ್ತಿತ್ತು. ಭಕ್ತರು ಮರಣ ಕಾಣದೆ ಪರಲೋಕಕ್ಕೆ ಎತ್ತಲ್ಪಡುತ್ತಾರೆಂಬ ಸತ್ಯವನ್ನು ಅಪಹಾಸ್ಯ ಮಾಡಿದವರು ದೇವರು ತನ್ನ ಮಕ್ಕಳ ಮೇಲೆ ಎಂತಹ ಪ್ರೀತಿಯಿಟ್ಟಿದ್ದಾನೆಂದು ತಿಳಿದುಕೊಳ್ಳುವರು ಹಾಗೂ ಅವರ ಅದ್ಭುತವಾದ ಬಿಡುಗಡೆಯನ್ನು ಕಣ್ಣಾರೆ ಕಾಣುವರು (ಅರ್ಲಿ ರೈಟಿಂಗ್ಸ್, ಪುಟ 284).ಕೊಕಾಘ 154.4

    ದೇವರ ಮಕ್ಕಳು ಕಷ್ಟಸಂಕಟ ಅನುಭವಿಸುತ್ತಾರೆ; ಆದರೆ ಅವರು ಹಿಂಸೆಗೊಳಗಾಗಿ ಕೊರತೆ ತಾಳಿಕೊಂಡಿರುವಾಗ, ಆಹಾರಕ್ಕೆ ತೊಂದರೆಯಿದ್ದಾಗಲೂ ಅವರು ನಾಶವಾಗುವುದಿಲ್ಲ (ಗ್ರೇಟ್ ಕಾಂಟ್ರೊವರ್ಸಿ, 634).ಕೊಕಾಘ 155.1