Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಶ್ರೀಮತಿ ವೈಟಮ್ಮನವರು ತಮ್ಮ ಕಾಲದಲ್ಲಿಯೇ ಕ್ರಿಸ್ತನ ಬರೋಣವನ್ನು ನಿರೀಕ್ಷಿಸಿದ್ದರು

    ಶ್ರೀಮತಿ ವೈಟಮ್ಮನವರು ಒಂದು ಸಮಾವೇಶದಲ್ಲಿ ಭಾಗವಹಿಸಿದರು. ಅಲ್ಲಿನ ಜನರ ಬಗ್ಗೆ ದೇವದೂತನು ಅವರಿಗೆ ದರ್ಶನದಲ್ಲಿ ಕಾಣಿಸಿಕೊಂಡು ಇಲ್ಲಿರುವ ಕೆಲವರು ಹುಳುಗಳಿಗೆ ಆಹಾರವಾಗುವರು. ಕೆಲವರು ಕೊನೆಯ ಏಳು ಉಪದ್ರವಗಳಿಂದ ಬಾಧೆ ಪಡುವರು. ಲೋಕದಲ್ಲಿ ಉಳಿದವರು ಕ್ರಿಸ್ತನ ಬರೋಣದಲ್ಲಿ ಮರಣವನ್ನು ಕಾಣದೆ ಪರಲೋಕಕ್ಕೆ ಒಯ್ಯಲ್ಪಡುವರು ಎಂದು ಹೇಳಿದನು (ಟೆಸ್ಟಿಮೊನೀಸ್, ಸಂಪುಟ 1, ಪುಟಗಳು 131, 132 (1856). ಸಮಯವು ಬಹಳ ಕಡಿಮೆ ಇರುವುದರಿಂದ ನಾವು ಶ್ರದ್ದೆಯಿಂದಲೂ, ಹೆಚ್ಚಾದ ಉತ್ಸಾಹದಿಂದಲೂ ಸುವಾರ್ತಾ ಸೇವೆ ಮಾಡಬೇಕು. ನಮ್ಮ ಮಕ್ಕಳು ಒಂದು ವೇಳೆ ಕಾಲೇಜಿಗೆ ಹೋಗಲಾರರೆನೋ ಎಂದೇ ಶ್ರೀಮತಿ ವೈಟಮ್ಮನವರು 1872 ರಲ್ಲಿ ಹೇಳಿದರು (ಅಂದರೆ ಅಷ್ಟರೊಳಗೆ ಕ್ರಿಸ್ತನು ಬರುತ್ತಾನೆಂದು ಅವರು ನಿರೀಕ್ಷಿಸಿದ್ದ ಕಾರಣದಿಂದ ಹಾಗೆ ಹೇಳಿದರು). (ಟೆಸ್ಟಿಮೊನೀಸ್‌ ಸಂಪುಟ 3, ಪುಟ 159).ಕೊಕಾಘ 20.4

    ಮದುವೆಯಾಗಿರುವವರು ಈಗ ಮಕ್ಕಳನ್ನು ಪಡೆದುಕೊಳ್ಳದಿರುವುದು ನಿಜವಾಗಿಯೂ ವಿವೇಕದ ಕಾರ್ಯವಾಗಿದೆ. ಸಮಯವು ಬಹಳ ಕಡಿಮೆಯಿದೆ. ಕೊನೆಯ ದಿನಗಳಲ್ಲಿ ಕಷ್ಟಸಂಕಟಗಳು ನಮ್ಮ ಮೇಲೆ ಬರಲಿವೆ. ಇದಕ್ಕೆ ಮೊದಲೇ ಚಿಕ್ಕಮಕ್ಕಳು ಗುಡಿಸಿ ಹಾಕಲ್ಪಡುತ್ತಾರೆ (Swept off). ಜಗತ್ತಿನ ಇತಿಹಾಸವು ಇನ್ನೇನು ಮುಕ್ತಾಯವಾಗುವ ಈ ಸಮಯದಲ್ಲಿ ಹಿಂದೆಂದೂ ಕಾಣದಿದ್ದಂತ ಸಂಕಟದ ಸಮಯ ಬರುತ್ತಿರುವಾಗ ಸ್ತ್ರೀಪುರುಷರು ಮದುವೆ ಮಾಡಿಕೊಳ್ಳದಿರುವುದು ಒಳ್ಳೆಯದು ಎಂದು ಶ್ರೀಮತಿ ವೈಟಮ್ಮನವರು 1885ನೇ ಇಸವಿಯಲ್ಲಿ ಹೇಳಿದರು (ಇದು ಈಗಿನ ಕಾಲಕ್ಕೆ ಅನ್ವಯವಾಗುತ್ತದೆಂದು ತಿಳಿಯಬಾರದು. ಶ್ರೀಮತಿ ವೈಟಮ್ಮನವರು ತಮ್ಮ ಕಾಲದಲ್ಲಿಯೇ ಕ್ರಿಸ್ತನು ಬರುತ್ತಾನೆಂದು ನಿರೀಕ್ಷೆ ಇಟ್ಟುಕೊಂಡಿದ್ದರಿಂದ, ಆಗ ಈ ಮಾತು ಹೇಳಿದ್ದರು). (ಟೆಸ್ಟಿಮೊನೀಸ್‌ ಸಂಪುಟ 5, ಪುಟ 366).ಕೊಕಾಘ 21.1

    ಸಮಯವು ಬರುವುದು, ಅದು ಬಹಳ ದೂರದಲ್ಲಿಲ್ಲ. ವಿಶ್ವಾಸಿಗಳಾದ ನಮ್ಮಲ್ಲಿ ಕೆಲವರು ಆಗ ಲೋಕದಲ್ಲಿ ಜೀವಿಸಿರುತ್ತೇವೆ, ಪ್ರವಾದನೆಯು ನೆರವೇರುವುದನ್ನು ಕಾಣುತ್ತೇವೆ. ಪ್ರಧಾನ ದೂತನ ಶಬ್ದ ಹಾಗೂ ದೇವರ ತುತ್ತೂರಿ ಧ್ವನಿಯು ಬೆಟ್ಟಗುಡ್ಡಗಳಿಂದ ಬಯಲು ಪ್ರದೇಶಗಳವರೆಗೆ, ಸಮುದ್ರದಿಂದ ಜಗತ್ತಿನ ಎಲ್ಲಾ ಭಾಗಗಳಲ್ಲಿ ಪ್ರತಿಧ್ವನಿಸುವುದನ್ನು ಕೇಳುತ್ತೇವೆ. (ರಿವ್ಯೂ ಅಂಡ್ ಹೆರಾಲ್ಡ್, ಜುಲೈ 31, 1888). ಶೋಧನೆಯ ಸಮಯವು ಇನ್ನೇನು ಬರಲಿದೆ. ಮೂರನೇ ದೂತನ ವರ್ತಮಾನದ ಮಹಾಶಬ್ದವು ಆಗಲೇ ಆರಂಭವಾಗಿದೆ (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 1, ಪುಟ 363 (1892).ಕೊಕಾಘ 21.2

    ದೀರ್ಘವಾದ ರಾತ್ತಿಯ ಕತ್ತಲೆಯು ಸಹಿಸಲು ಕಷ್ಟಕರವಾಗಿದೆ. ಆದರೆ ಕರ್ತನು ಕರುಣೆಯಿಂದಲೇ ಉದಯವಾಗುವುದನ್ನು ಉದ್ದೇಶಪೂರ್ವಕವಾಗಿ ಮುಂದೂಡಿದ್ದಾನೆ. ಯಾಕೆಂದರೆ ಕ್ರಿಸ್ತನು ಈಗ ಬಂದಲ್ಲಿ ಅನೇಕರು ಅದಕ್ಕೆ ಸಿದ್ದರಾಗಿಲ್ಲ (ಟೆಸ್ಟಿಮೊನೀಸ್‌ ಸಂಪುಟ 2, ಪುಟ 194 (1868), 1844ನೇ ಇಸವಿಯಲ್ಲಿ ಉಂಟಾದ ಮಹಾನಿರಾಶೆಯ ನಂತರ ಅಡ್ವೆಂಟಿಸ್ಟರು ತಮ್ಮ ನಂಬಿಕೆಯಲ್ಲಿ ದೃಢವಾಗಿದ್ದು, ಐಕ್ಯತೆಯಿಂದ ಮೂರನೇ ದೂತನ ವರ್ತಮಾನವನ್ನು ಸ್ವೀಕರಿಸಿ, ಪವಿತ್ರಾತ್ಮನ ಬಲದಿಂದ ಜಗತ್ತಿಗೆ ಅದನ್ನು ಸಾರಿದ್ದಲ್ಲಿ ಅವರು ದೇವರ ರಕ್ಷಣೆಯನ್ನು ಕಾಣಬಹುದಾಗಿತ್ತು. ಅವರ ಪ್ರಯತ್ನಗಳಿಗೆ ದೇವರು ಬಲವಾದ ಸಾಮರ್ಥ್ಯದಿಂದ ಕಾರ್ಯಮಾಡಿ, ಸುವಾರ್ತಾ ಸೇವೆಯು ಮುಕ್ತಾಯವಾಗುತ್ತಿತ್ತು ಹಾಗೂ ಕ್ರಿಸ್ತನು ಆಗಲೇ ಎರಡನೇ ಸಾರಿ ಈ ಲೋಕಕ್ಕೆ ತನ್ನ ಜನರಿಗೆ ಪ್ರತಿಫಲ ಕೊಡುವುದಕ್ಕೆ ಬಂದಿರುತ್ತಿದ್ದನು. ಆತನ ಬರೋಣವು ಈ ರೀತಿಯಲ್ಲಿ ತಡವಾಗಬೇಕೆನ್ನುವುದು ದೇವರ ಚಿತ್ತವಲ್ಲ.ಕೊಕಾಘ 21.3

    ಇಸ್ರಾಯೇಲ್ಯರು ಅಪನಂಬಿಕೆ, ಗುಣಗುಟ್ಟುವಿಕೆ ಮತ್ತು ದೇವರ ವಿರುದ್ದ ದಂಗೆಯೆದ್ದ ಕಾರಣದಿಂದ ನಾಲ್ವತ್ತು ವರ್ಷಗಳ ತನಕ ಕಾನಾನ್ ದೇಶಕ್ಕೆ ಹೋಗಲಾಗಲಿಲ್ಲ. ಅವರು ಮಾಡಿದಂತ ಪಾಪವನ್ನೇ ಆಧುನಿಕ ಇಸ್ರಾಯೇಲ್ಯರಾದ ನಾವು ಮಾಡುತ್ತಿರುವುದರಿಂದ, ಪರಲೋಕದ ಕಾನಾನ್ ರಾಜ್ಯಕ್ಕೆ ಹೋಗಲು ತಡವಾಗುತ್ತಿದೆ. ಈ ಎರಡು ಉದಾಹರಣೆಗಳಲ್ಲಿ ದೇವರ ತಪ್ಪೇನೂ ಇಲ್ಲ. ದೇವರ ಮಕ್ಕಳಾದ ನಮ್ಮಲ್ಲಿರುವ ಅಪನಂಬಿಕೆ, ಪ್ರಾಪಂಚಿಕತೆ ಅಂದರೆ ಲೋಕದ ಮೇಲಿನ ಮೋಹ, ಅಪವಿತ್ರತೆ ಹಾಗೂ ನಮ್ಮಲ್ಲಿರುವ ಜಗಳದ ಕಾರಣದಿಂದ ಪಾಪ ಮತ್ತು ದುಃಖ ತುಂಬಿರುವ ಈ ಲೋಕದಲ್ಲಿ ನಾವು ಇನ್ನೂ ಇದ್ದೇವೆ (ಎವಾಂಜಲಿಸಮ್, ಪುಟ 695, 696 (1883).ಕೊಕಾಘ 21.4

    ದೇವರು ಪ್ರತಿಷ್ಠಿಸಿ ನೇಮಿಸಿದ ಕಾರ್ಯವನ್ನು ಸಭೆಯು ಮಾಡಿದ್ದಲ್ಲಿ, ಇದಕ್ಕೆ ಮೊದಲೇ ಸಮಸ್ತ ಜಗತ್ತಿಗೆ ಎಚ್ಚರಿಕೆ ನೀಡಲ್ಪಟ್ಟಿರುತ್ತಿತ್ತು ಹಾಗೂ ಕ್ರಿಸ್ತನು ಬಲದಿಂದಲೂ ಹಾಗೂ ಮಹಾಮಹಿಮೆಯಿಂದಲೂ ನಮ್ಮಲೋಕಕ್ಕೆ ಬಂದಿರುತ್ತಿದನು (ಡಿಸೈರ್ ಆಫ್ ಏಜಸ್, ಪುಟಗಳು 633, 634 (1898).ಕೊಕಾಘ 21.5