Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಒಂದು ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರು

    144000 ಜನರು ದೇವರ ಸಿಂಹಾಸನದ ಮುಂದೆ ಮೋಶೆಯ ಹಾಡನ್ನೂ, ಯಜ್ಞದ ಕುರಿಯಾದಾತನ ಹಾಡನ್ನೂ ಹಾಡುವರು, ಅದು ವಿಮೋಚನೆಯ ಹಾಡಾಗಿದ್ದು, ಅವರ ಹೊರತು ಬೇರೆ ಯಾರೂ ಸಹ ಆ ಹಾಡನ್ನು ಕಲಿಯಲಾರರು. ಅದು ಅವರ ಅನುಭವದ ಹಾಡಾಗಿದ್ದು, ಬೇರೆ ಯಾರೂ ಸಹ ಅಂತಹ ಅನುಭವವನ್ನು ಎಂದೂ ಹೊಂದಿಲ್ಲ. ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು (ಪ್ರಕಟನೆ 15:2, 3;14:1-5), ಅವರು ಮಹಾ ಹಿಂಸೆಯನ್ನು ಅನುಭವಿಸಿ ಬಂದವರು (ಪ್ರಕಟನೆ 7:14). ಜನಾಂಗವು ಉಂಟಾದಂದಿನಿಂದ ಸಂಭವಿಸದಂತ ಹಿಂಸೆಯನ್ನು ಅವರು ಎದುರಿಸಿದವರು, ಅಲ್ಲದೆ ಯಾಕೋಬನ ಸಂಕಟದ ಸಮಯದ ಮಾನಸಿಕ ವೇದನೆಯನ್ನು ತಾಳಿಕೊಂಡವರು, ದೇವರ ದಂಡನೆಯು ಅಂತಿಮವಾಗಿ ಸುರಿಸಲ್ಪಡುವಾಗ, ಮಧ್ಯನಿಲ್ಲದೆ ಪರಿಶುದ್ಧ ದೇವರ ಮುಂದೆ ನಿಂತವರು (ಗ್ರೇಟ್ ಕಾಂಟ್ರೊವರ್ಸಿ 648, 649)ಕೊಕಾಘ 157.1

    ಈ ಒಂದು ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರು ಯಾರು? ಎಂಬುವ ಆತ್ಮಿಕವಾಗಿ ಪ್ರಯೋಜನವಿಲ್ಲದ ಪ್ರಶ್ನೆಯ ಬಗ್ಗೆ ವಾದವಿವಾದ ಮಾಡುವುದು ದೇವರ ಚಿತ್ತವಲ್ಲ. ದೇವಜನರು ಶೀಘ್ರದಲ್ಲಿಯೇ ನಿಸ್ಸಂದೇಹವಾಗಿ ಇವರು ಯಾರೆಂದು ತಿಳಿದುಕೊಳ್ಳುವರು (ಸೆಲೆಕ್ಟಡ್ ಮೆಸೇಜಸ್, ಸಂಪುಟ 1, ಪುಟ 174).ಕೊಕಾಘ 157.2