Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಗವಿಗಳಿಂದ ಅಡಗುದಾಣಗಳಿಂದ ಹಾಗೂ ಸೆರೆಮನೆಯ ನೆಲಮಾಳಿಗೆಯಿಂದ

    ದುರ್ಗಮವಾದ ಪರ್ವತಗಳಲ್ಲಿ, ಲೋಕದ ಗುಹೆ ಹಾಗೂ ಬೆಟ್ಟಗಳ ಅಡಗುದಾಣಗಳಲ್ಲಿ ರಕ್ಷಕನು ತನ್ನ ಪ್ರಸನ್ನತೆ ಮತ್ತು ಮಹಿಮೆ ತೋರಿಸುವನು, ಇನ್ನು ಕೆಲವು ಸಮಯದಲ್ಲಿ ಬರುವಾತನು ಬರಲಿದ್ದಾನೆ. ತಡ ಮಾಡುವುದಿಲ್ಲ, ಯಜ್ಞದ ಕುರಿಯಾದಾತನ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಹೆಸರುಗಳು ಬರೆಯಲ್ಪಟ್ಟಿದೆಯೋ ಅವರು ಎಂತಹ ಸೆರೆಮನೆಯ ನೆಲಮಾಳಿಗೆಯಲ್ಲಿ ಬಂಧಿಸಲ್ಪಟ್ಟರೂ, ಬೆಂಕಿಯ ಜ್ವಾಲೆಯಂತಿರುವ ಕ್ರಿಸ್ತನ ಕಣ್ಣುಗಳು ಅವರನ್ನು ಕಾಣುವವು. ಆತನ ಕಣ್ಣುಗಳು ದೃಷ್ಟಿಸಲಾರದಂತ ಯಾವ ಸ್ಥಳವೂ ಈ ವಿಶ್ವದಲ್ಲಿಲ್ಲ. ತನ್ನ ಜನರು ಎಲ್ಲಿ ಕಷ್ಟಸಂಕಟ ಅನುಭವಿಸುತ್ತಿರಲಿ, ದೇವರ ಅನುಕಂಪವು ಅವರ ಮೇಲಿರುತ್ತದೆ.ಕೊಕಾಘ 162.2

    ಕ್ರಿಸ್ತನ ಬರೋಣದ ಮಹಾಮಹಿಮೆಯ ವೈಭವವನ್ನು ಮೊದಲ ಬಾರಿ ನೋಡಿದ ದೇವರ ಮಕ್ಕಳು ಭಯದಿಂದ ದಿಗ್ಭ್ರಮೆಗೊಳ್ಳುವರು. ಕ್ರಿಸ್ತನ ಪರಿಶುದ್ಧ ಸಾನ್ನಿಧ್ಯದಲ್ಲಿ ತಾವು ವಾಸಿಸಲಾಗದೆಂದು ಅವರು ತಿಳಿದುಕೊಳ್ಳುವರು. ಆದರೆ ಯೇಸುಸ್ವಾಮಿಯು ಅವರಿಗೆ ಭಯಪಡಬೇಡಿ’ ಎಂದು ಹೇಳಿ ಸಾಷ್ಟಾಂಗ ಬಿದ್ದಿರುವ ಅವರನ್ನು ಎಬ್ಬಿಸುವನು (ದಟ್ ಐ ಮೇ ನೋ ಹಿಮ್, 360, 361).ಕೊಕಾಘ 162.3

    ದೇವರ ರಾಜ್ಯಕ್ಕೆ ಬಾಧ್ಯಸ್ಥರಾದವರು ಹೊಲಸಾದ ಆಟ್ಟದ ಕೋಣೆಗಳಿಂದ, ಮುರುಕಲು ಗುಡಿಸಲುಗಳಿಂದ, ಕತ್ತಲಾದ ನೆಲಗವಿಗಳಿಂದ, ಸೆರೆಮನೆಯ ನೆಲಮಳಿಗೆಗಳಿಂದ ಮರಣದಂಡನೆ ನೀಡುವ ವಧಾಸ್ಥಾನದಿಂದ ಬೆಟ್ಟಗುಡ್ಡ ಪರ್ವತಗಳಿಂದ ಹಾಗೂ ಮರುಭೂಮಿಗಳಿಂದ ಬರುವರು (ಗ್ರೇಟ್ ಕಾಂಟ್ರವರ್ಸಿ, 650).ಕೊಕಾಘ 162.4