Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದುಷ್ಟರು ಕೊಲ್ಲಲ್ಪಡುವರು

    ಏನೂಬೆರಸದ ದೇವರ ಉಗ್ರಕೋಪವು ಭಯಂಕರವಾಗಿ ಸುರಿಸಲ್ಪಟ್ಟಾಗ, ಲೋಕದಲ್ಲಿರುವ ಯಾಜಕರು, ಬೋಧಕರು, ಜನರು, ಬಡವ ಶ್ರೀಮಂತರು, ಉನ್ನತರು, ಕನಿಷ್ಟರು ಇವರೆಲ್ಲರೂ ಸತ್ತುಬೀಳುವರು. ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ, ಇನ್ನೊಂದು ಕಡೆಯವರೆಗೂ ಬಿದ್ದಿರುವರು, ಅವರಿಗಾಗಿ ಯಾರು ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣಿಡರು, ಭೂಮಿಯ ಮೇಲೆ ಗೊಬ್ಬರವಾಗುವರು’ (ಯೆರೆಮಿಯ 25:33).ಕೊಕಾಘ 163.3

    ಕ್ರಿಸ್ತನು ಎರಡನೇ ಸಾರಿ ಬರುವಾಗ ದುಷ್ಟರು ಆತನ ಮಹಿಮೆಯ ಪ್ರಕಾಶದಿಂದ ನಾಶವಾಗಿ ಭೂಮಿಯಿಂದ ಅವರು ಸಂಪೂರ್ಣವಾಗಿ ಅಳಿದು ಹೋಗುವರು, ಕ್ರಿಸ್ತನು ತನ್ನ ಜನರನ್ನು ಹೊಸ ಯೆರೂಸಲೇಮಿಗೆ ಕರೆದೊಯ್ಯುವನು ಮತ್ತು ಈ ಲೋಕವು ನಿರ್ಜನವಾಗುವುದು (ಗ್ರೇಟ್ ಕಾಂಟ್ರೊವರ್ಸಿ, 657).ಕೊಕಾಘ 163.4

    ಪಾಪವು ಎಲ್ಲಿ ಕಂಡುಬಂದರೂ, ‘ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ’ (ಇಬ್ರಿಯ 12:29). ಆತನಿಗೆ ಸಂಪೂರ್ಣವಾಗಿ ತಮ್ಮನ್ನು ಒಪ್ಪಿಸಿಕೊಟ್ಟವರಿಗೆ, ದೇವರಾತ್ಮನು ಪಾಪವನ್ನು ದಹಿಸುವವನಾಗಿದ್ದಾನೆ. ಆದರೆ ಮನುಷ್ಯರು ಪಾಪಕ್ಕೆ ದಾಸರಾಗಿದ್ದಲ್ಲಿ, ದೇವರ ಮಹಿಮೆಯು ಪಾಪವನ್ನು ಮಾತ್ರವಲ್ಲ, ಅವರನ್ನೂ ಸಹ ನಾಶಮಾಡುತ್ತದೆ (ಡಿಸೈರ್ ಆಫ್ ಏಜಸ್, 107).ಕೊಕಾಘ 163.5

    ದೇವರ ಮುಖದ ಮಹಿಮೆಯು ನೀತಿವಂತರಿಗೆ ಜೀವವಾಗಿದ್ದಲ್ಲಿ, ದುಷ್ಟರಿಗೆ ಸುಡುವ ಬೆಂಕಿಯಾಗಿದೆ (ಡಿಸೈರ್ ಆಫ್ ಏಜಸ್, 600).ಕೊಕಾಘ 163.6